CRIMENEWSಕೃಷಿದೇಶ-ವಿದೇಶ

ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ ಜಾಲಪತ್ತೆ: 1.17 ಕೋಟಿ ರೂ.ಮೌಲ್ಯದ 4,108 ಕ್ವಿಂಟಾಲ್ ಅಕ್ಕಿ ಜಪ್ತಿ- ಇಬ್ಬರ ವಿರುದ್ಧ FIR ದಾಖಲು

ವಿಜಯಪಥ ಸಮಗ್ರ ಸುದ್ದಿ

ಯಾದಗಿರಿ: ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಪಾಲಿಶ್‌ ಮಾಡಿ ಮಾರಾಟ ಮಾಡುತ್ತಿದ್ದ ಅಪ್ಪ ಮಕ್ಕಳಿಗೆ ಸೇರಿದ ಎರಡು ರೈಸ್ ಮಿಲ್‌ಗಳ ಮೇಲೆ ಆಹಾರ ಪೊರೈಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 1.17 ಕೋಟಿ ರೂಪಾಯಿ ಮೌಲ್ಯದ 4,108 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ಆಹಾರ ಇಲಾಖೆ ಉಪನಿರ್ದೇಶಕ ಅನೀಲಕುಮಾರ್ ಅವರು ಅನ್ನಭಾಗ್ಯ ಅಕ್ಕಿಯನ್ನು ಪಾಲಿಶ್‌ ಮಾಡಿಸಿ, ವಿವಿಧ ಬ್ರ್ಯಾಂಡ್‌ ಹೆಸರಿನಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗುರಮಠಕಲ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆಹಾರ ಪೊರೈಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಹಾಯ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಗುರಮಠಕಲ್ ಪಟ್ಟಣದ ಹೊರವಲಯದ ಉದ್ಯಮಿ ನರೇಂದ್ರ ರಾಠೋಡ ಹಾಗೂ ಅವರ ಪುತ್ರ ಅಯ್ಯಪ್ಪ ರಾಠೋಡಗೆ ಸೇರಿದ ಲಕ್ಷ್ಮೀ ವೆಂಕಟೇಶ್ವರ ಹಾಗೂ ಲಕ್ಷ್ಮೀ ಬಾಲಾಜಿ ರೈಸ್ ಮಿಲ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಗೋದಾಮಿನಲ್ಲಿ ಸಾವಿರಾರು ಅಕ್ಕಿ ಚೀಲಗಳ ಸಂಗ್ರಹ ಪತ್ತೆಯಾಗಿದೆ.

ಆ ಎಲ್ಲ ಅಕ್ಕಿ ಚೀಲಗಳನ್ನು ಸತತ ಮೂರು ದಿನಗಳು ಲೆಕ್ಕಹಾಕಿದ ಬಳಿಕ ಸದ್ಯ ಆ ಲೆಕ್ಕ ಕಾರ್ಯ ಮುಕ್ತಾಯವಾಗಿದ್ದು, 1.17 ಕೋಟಿ ರೂ.ಗೂ ಅಧಿಕ ಮೌಲ್ಯದ 4,108 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ಇನ್ನು ರೈಸ್‌ಮಿಲ್‌ಗೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ನಕಲಿ ಬ್ರ್ಯಾಂಡ್‌ನಡಿ ರೈಸ್ ಪಾಲಿಶ್‌ ಮಾಡಿ ಮಾರಾಟ ಮಾಡಿರುವುದು ತಿಳಿದುಬಂದಿದೆ.

ಡೈನೆಸ್ಟಿ, ದಾರಾ ಡಬಲ್, ವೋಲ್ಗಾ ಸೇರಿದಂತೆ ವಿವಿಧ ಬ್ರ್ಯಾಂಡ್‌ಗಳ ಹೆಸರಿನ ಚೀಲದಲ್ಲಿ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಜತೆಗೆ ಕಡಿಮೆ ದರಕ್ಕೆ ಅಕ್ಕಿ ಖರೀದಿ ಮಾಡಿ, ದುಬಾರಿ ಬೆಲೆಗೆ ಮಾರಾಟ ಮಾಡಿ ಅಕ್ರಮ ದಂಧೆ ನಡೆಸಿರುವುದಲ್ಲದೇ ಸಿಂಗಾಪುರ, ದುಬೈ ಸೇರಿದಂತೆ ವಿವಿಧ ದೇಶದ ಬ್ರ್ಯಾಂಡ್‌ನಲ್ಲಿ ರಫ್ತು ಮಾಡಿರುವ ಶಂಕೆ ವ್ಯಕ್ತವಾಗಿದೆ.

Advertisement

ಅಲ್ಲದೆ ಪಂಜಾಬ್, ಹರಿಯಾಣ, ತೆಲಂಗಾಣ ಸರ್ಕಾರದ ಹೆಸರಿನಲ್ಲಿಯೂ ಪಡಿತರ ಅಕ್ಕಿ ಚೀಲಗಳು ಪತ್ತೆಯಾಗಿದ್ದು, ಈ ಬಗ್ಗೆ ತನಿಖೆಯಾದರೆ ಮತ್ತಷ್ಟು ಅಕ್ಕಿ ಮಾರಾಟ ಜಾಲ ಭೇದಿಸಬಹುದಾಗಿದೆ. ಸದ್ಯ ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ಅರೆಸ್ಟ್‌ ಮಾಡಲು ಮುಂದಾಗಿದ್ದಾರೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!