NEWSನಮ್ಮರಾಜ್ಯ

ವಿಜಯಪಥ ವರದಿ ಪರಿಣಾಮ: ವರದಿ ಬಂದ ಅರ್ಥಗಂಟೆಯಲ್ಲಿ ಹಣ ಪಾವತಿ ಸಂಬಂಧ ಲೆಕ್ಕಾಧಿಕಾರಿಗೆ ಟಿಪ್ಪಣಿ ಬರೆದ ಡಿಸಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: KKRTC ವಿಜಯಪುರ: ನಿವೃತ್ತ ನೌಕರನಿಗೆ 29ಲಕ್ಷ ಕೊಡುವಂತೆ ಹೈ ಕೋರ್ಟ್‌ ತೀರ್ಪು- ಈ ಆದೇಶವನ್ನೇ ಉಲ್ಲಂಘಿಸುತ್ತಿರುವ ಡಿಸಿ! ಎಂಬ ಶೀರ್ಷಿಕೆಯಡಿ ವಿಜಯಪಥ ದಲ್ಲಿ ವರದಿ ಬಂದ ಕೇವಲ ಅರ್ಧಗಂಟೆಯಲ್ಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಿವೃತ್ತ ಚಾಲಕ ಹುಂಡೆಕಾರ ಅವರಿಗೆ ಬರಬೇಕಿರುವ ಹಣವನ್ನು ಜಮಾ ಮಾಡುವಂತೆ ವಿಭಾಗದ ಲೆಕ್ಕಾಧಿಕಾರಿಗೆ ತಿಳಿಸಿದ್ದಾರೆ.

ಈ ಬಗ್ಗೆ ಲೆಕ್ಕಾಧಿಕಾರಿಗೆ ಟಿಪ್ಪಣಿ ಬರೆದಿರುವ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅವರು ನ್ಯಾಯಾಲಯದ ಆದೇಶಗಳಂತೆ ನ್ಯಾಯಾಲಯಕ್ಕೆ ಹಣ ಜಮಾ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ.

ಸಂಸ್ಥೆಯ ವಿಜಯಪುರ ವಿಭಾಗದಲ್ಲಿ ಅವಶ್ಯಕ ಬೇಡಿಕೆಗಳಿಗೆ ಸಂಬಂಧಿಸಿದಂತೆ, ಹಣವನ್ನು ಕೇಂದ್ರ ಕಚೇರಿಯ ಸೂಚನೆಗಳಂತೆ ಪಾವತಿ ಮಾಡಲಾಗುತ್ತಿದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಕಾನೂನು ಅಧಿಕಾರಿಗಳ ಸಹಯೋಗದಲ್ಲಿ ಜಪ್ತಿ ಆದೇಶ ಆದ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಣ ಜಮಾ ಮಾಡುತ್ತಿದ್ದು, ಉಳಿದಂತೆ, ಜೇಷ್ಠತೆ ಪ್ರಕಾರ ಯಾವುದೇ ತಾರತಮ್ಯವಿಲ್ಲದೆ ನ್ಯಾಯಾಲಯಗಳಿಗೆ ಹಣ ಜಮೆ ಮಾಡತಕ್ಕದ್ದು, ವಿಭಾಗದಲ್ಲಿ ಹಣ ಕೊರತೆ ಇದ್ದಾಗ ಕೇಂದ್ರ ಕಚೇರಿಗೆ ಪಾವತಿ ಕುರಿತು ಪತ್ರ ಬರೆಯಬೇಕು ಹಾಗೂ ತುರ್ತು ಖರ್ಚಿನ ಸಂಬಂಧ ಕೇಂದ್ರ ಕಚೇರಿಗೆ ವಿವರಿಸಿ ಹಣವನ್ನು ಒದಗಿಸಲು ಕ್ರಮ ತೆಗೆದುಕೊಳ್ಳುವುದು ಎಂದು ವಿವರಿಸಿದ್ದಾರೆ.

ಇದರ ಜತೆಗೆ ಈ ದಿನ ನನಗೆ ಬಿ.ಎನ್‌.ಹುಂಡೆಕಾರ ಅವರಿಗೆ ಸಂಬಂಧಿಸಿದಂತೆ, WP203353/2019 ಪ್ರಕರಣದಲ್ಲಿ ಹಣ ಜಮಾ ಮಾಡಿಲ್ಲವೆಂದು ಮತ್ತು ಕೂಡಲೇ ಹಣ ಪಾವತಿಯ ಕುರಿತು ಕ್ರಮ ತೆಗೆದುಕೊಳ್ಳಲು ಮಾಧ್ಯಮದವರು ದೂರವಾಣಿ ಮೂಲಕ ತಿಳಿಸಿದ್ದಾರೆ.

ವಿಭಾಗದ ಖರ್ಚಿನ ಬಾಬುಗಳ ಬೇಡಿಕೆಗಳ ಕುರಿತು ತಾವು, ವಿಭಾಗೀಯ ತಾಂತ್ರಿಕ ಶಿಲ್ಪಿ ಮತ್ತು ಸಹಾಯಕ ಉಗ್ರಾಣ ಅಧಿಕಾರಿಗಳ ಸಹಯೋಗದೊಂದಿಗೆ ಪಾರದರ್ಶಕವಾಗಿ ಹಣ ಪಾವತಿ ಮಾಡಲಾಗುತ್ತಿದೆ. ಅದೇ ರೀತಿ ನ್ಯಾಯಾಲಯದ ಪ್ರಕರಣಗಳಲ್ಲಿಯೂ ಸಹ ಜೇಷ್ಠತೆ ಆಧಾರದಲ್ಲಿ ಕಾನೂನು ಅಧಿಕಾರಿಗಳ ಸಹಯೋಗದೊಂದಿಗೆ ಯಾವುದೇ ದೂರುಗಳಿಗೆ ಆಸ್ಪದ ನೀಡದೆ ನ್ಯಾಯಾಲಯಗಳಿಗೆ ಹಣ ಜಮಾ ಮಾಡಲು ಕ್ರಮ ತೆಗೆದುಕೊಳ್ಳಬೇಕು.

ಒಂದು ವೇಳೆ ಹಣದ ಕೊರತೆ ಇದಲ್ಲಿ ಕೇಂದ್ರ ಕಚೇರಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಬೇಕು ಎಂದು ವಿಜಯಪುರ ವಿಭಾಗ ವಿಭಾಗೀಯ ಕಚೇರಿ ಲೆಕ್ಕಾಧಿಕಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

 

Megha
the authorMegha

Leave a Reply

error: Content is protected !!