CRIMENEWSಬೆಂಗಳೂರು

ಕೇವಲ 30 ಸೆಕೆಂಡ್‌ಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಖದೀಮರು ಎಸ್ಕೇಪ್‌

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಚಿನ್ನದಂಗಡಿ ಮುಚ್ಚುವ ವೇಳೆ ಗನ್ ಹಿಡಿದು ಒಳಬಂದ ಮೂವರು ಮುಸುಕುಧಾರಿ ಖದೀಮರು ಕೇವಲ 30 ಸೆಕೆಂಡ್‌ಗಳಲ್ಲೇ ಸಿಕ್ಕಿದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಗಳನ್ನು ದೋಚಿ ಪರಾರಿಯಾದ ಘಟನೆ ನಗರದ ಮಾಚೋಹಳ್ಳಿ ಗೇಟ್‌ ಬಳಿ ನಡೆದಿದೆ.

ಮಾಚೋಹಳ್ಳಿ ಗೇಟ್‌ನ ರಾಮ್ ಜ್ಯುವೆಲರ್ಸ್‌ನಲ್ಲಿ ಗುರುವಾರ ರಾತ್ರಿ 8:30ರ ಸುಮಾರಿಗೆ ಈ ಘಟನೆ ನಡೆದಿದೆ. ಮೂವರು ಮುಸುಕುಧಾರಿಗಳು ಗನ್ ಹಿಡಿದು ಬಂದು ಕೃತ್ಯವೆಸಗಿದ್ದಾರೆ.

ಜ್ಯುವೆಲ್ಲರಿ ಮಾಲೀಕ ಕನ್ನಯ್ಯಲಾಲ್ ಅಂಗಡಿ ಕ್ಲೋಸ್ ಮಾಡಿಕೊಂಡು ಮನೆಗೆ ಹೋಗುದಕ್ಕೆ ರೆಡಿಯಾಗುತ್ತಿದ್ದ ವೇಳೆ ಗನ್ ಹಿಡಿದು ಮೂವರು ಅಂಗಡಿಗೆ ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಹೆದರಿಸಿ ಟೇಬಲ್ ಮೇಲಿದ್ದ ಚಿನ್ನವನ್ನು ಬಾಚಿಕೊಂಡಿದ್ದಾರೆ.

ಆಗ ಮಾಲೀಕ ಕನ್ನಯ್ಯಲಾಲ್ ಕೂಗಾಡಿದರು ಆದರೂ ಹೆದರದ ಖದೀಮರು ಅವರನ್ನು ಮತ್ತು ಸಿಬ್ಬಂದಿಯನ್ನು ತಳ್ಳಿ ಚಿನ್ನಾಭರಣ ದೂಚಿ 30 ಸೆಕೆಂಡ್‌ಗಳಲ್ಲಿ ಪರಾರಿಯಾದರು. ಈ ಕೃತ್ಯ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇನ್ನು ಕೂಗಾಟ ಕೇಳಿ ಪಕ್ಕದ ಅಂಗಡಿಯ ಹುಡುಗ ಬಂದಿದ್ದು, ಆತನನ್ನು ತಳ್ಳಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಕೈಗೆ ಸಿಕ್ಕ ಚಿನ್ನವನ್ನು ದೋಚಿ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ.

ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Advertisement
Megha
the authorMegha

Leave a Reply

error: Content is protected !!