KKSRTC ಸಂಡೂರು ಘಟಕದಲ್ಲಿ ನೀರಿಲ್ಲದೆ ಸಿಬ್ಬಂದಿಗಳ ಪರದಾಟ – ಮಲ ಮೂತ್ರ ವಿಸರ್ಜನೆಗೂ ತೊಳಲಾಟ!
ಸಂಡೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (NWKRTC) ಬಳ್ಳಾರಿ ವಿಭಾಗದ ಸಂಡೂರು ಘಟದಲ್ಲಿ ಕಳೆದ ಒಂದು ತಿಂಗಳಿಂದಲೂ ನೀರಿಲ್ಲದೆ ನೌಕರರು ಮತ್ತು ಘಟಕದ ಸಿಬ್ಬಂದಿ ಪರದಾಡುತ್ತಿದ್ದಾರೆ. ಆದರೂ ಡಿಎಂ ಈ ಬಗ್ಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ಘಟಕದಲ್ಲಿ 20-5ದಿನಗಳಿಂದಲೂ ಕುಡಿಯುವುದಕ್ಕೆ, ಶೌಚ್ಚ ಹೋಗುವುದಕ್ಕೂ ನೀರಿಲ್ಲ. ಇದರಿಂದ ಪುರುಷ ಸಿಬ್ಬಂದಿಗಳು ಹೇಗೂ ಬಯಲಲ್ಲಿ ಮಲ ಮೂತ್ರ ವಿಸರ್ಜನೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳು ಬೆಳಗ್ಗೆಯಿಂದ ಸಂಜೆ ಡ್ಯೂಟಿ ಮುಗಿಸಿ ಹೋಗುವವರೆಗೂ ಶೌಚ್ಚಕ್ಕೆ ಹೋಗಲಾಗದೆ ತುಂಬ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಾವು ಬೆಳಗ್ಗೆ 8 ಗಂಟೆಗೆ ಮನೆ ಬಿಟ್ಟು ಘಟಕಕ್ಕೆ ಬರುತ್ತೇವೆ. ಇನ್ನು ಕೆಲವರು ಮುಂಜಾನೆ 4.30ರಿಂದಲೇ ಘಟಕದಲ್ಲಿ ಇರುತ್ತಾರೆ. ಆದರೆ, ನಮಗೆ ಮೂಲಭೂತವಾಗಿ ಬೇಕಾದ ನೀರಿನ ವ್ಯಸ್ಥೆಯೇ ಇಲ್ಲದೆ ಶೌಚಾಲಯ ಕೂಡ ಮೂಗು ಕೊಡಲಾರದಷ್ಟು ಗಬ್ಬೆದ್ದು ನಾರುತ್ತಿದೆ.
ಇನ್ನೊಂದೆಡೆ ಘಟಕದಲ್ಲಿ ಸ್ವಚ್ಚತ ಸಿಬ್ಬಂದಿಗಳಿಲ್ಲ ಎಲ್ಲ ಕಡೆ ಕಸದಿಂದ ತುಂಬಿಹೋಗಿದೆ. ಈ ರೀತಿ ಆದರೆ ನಾವು ಕೆಲಸ ಮಾಡುವುದಾರರು ಹೇಗೆ? ಇನ್ನಾದರೂ ಈ ಬಗ್ಗೆ ಗಮನಹರಿಸಬೇಕು ಎಂದು ಹೆಸರೇಳಲಿಚ್ಛಿಸದ ಸಿಬ್ಬಂದಿ ಒತ್ತಾಯಿಸಿದ್ದಾರೆ.
ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿ ಬಿಡುತ್ತಿದ್ದಂತೆ ಕೆಟ್ಟು ಹೋಗಿದ್ದ ಬೋರ್‌ವೆಲ್ ಸರಿಪಡಿಸಿದ್ದು, ಸದ್ಯ ಘಟಕದಲ್ಲಿ ಇರುವ ಶೌಚಾಲಯಕ್ಕೆ ಮತ್ತು ಕುಡಿಯುವ ನೀರಿನ ಪೈಪ್‌ಗಳನ್ನು ಹೊಸದಾಗಿ ಅಳವಡಿಸಿ ನೀರಿನ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂದು ಘಟಕ ವ್ಯವಸ್ಥಾಪಕರು ವಿಜಯಪಥಕ್ಕೆ ತಿಳಿಸಿದ್ದಾರೆ.
ಹೀಗಾಗಿ ಕಳೆದ 20-25ದಿನಗಳಿಂದ ನೀರಿಲ್ಲದೆ ಬೇಸತ್ತು ಹೋಗಿದ್ದ ಸಿಬ್ಬಂದಿಗಳು ಸದ್ಯ ನಿರಾಳರಾಗಿದ್ದಾರೆ. ಘಟಕದಲ್ಲಿ ನೀರು ಬಾರದಿದ್ದರಿಂದ ಮಹಿಳಾ ಸಿಬ್ಬಂದಿ ಮತ್ತು ಮಧುಮೇಹದಿಂದ ಬಳಲುತ್ತಿದ್ದ ಸಿಬ್ಬಂದಿಗಳು ಭಾರಿ ಯಾತನೆ ಅನುಭವಿಸುತ್ತಿದ್ದರು ಆದರೆ ಅದಕ್ಕೆ ಸದ್ಯ ಮುಕ್ತಿ ಸಿಕ್ಕಿದೆ ಎಂದು ಡಿಪೋ ವ್ಯವಸ್ಥಾಪಕರು ತಿಳಿಸಿದ್ದಾರೆ.