ಮಂಡ್ಯ: ಈ ವರ್ಷದ ವರುಣ ರಾಜ್ಯದಲ್ಲಿ ಅಬ್ಬರಿಸುತ್ತಿದ್ದು, ಕೆರೆ, ಕಟ್ಟೆಗಳು ತುಂಬುತ್ತಿವೆ. ಇದರಿಂದ ಅನ್ನದಾತರಿಗಂತೂ ಸಂತಸ ಮನೆ ಮಾಡಿದ್ದು, ಉತ್ತಮ ಬೆಳೆ ತೆಗೆಯುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಜತೆಗೆ ಈ ಬಾರಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಸರ್ಕಾರಕ್ಕೂ ಖುಷಿಯ ವಿಷಯವಾಗಿದೆ.
ಹೌದು! ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ ಹೀಗಾಗಿ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ನೀರು ಹರಿದು ಬರುತ್ತಿದೆ. ಇದು ರೈತರ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಮುಖದಲ್ಲೂ ಮಂದಹಾಸ ಮೂಡುವಂತೆ ಮಾಡಿದೆ.
ರಾಜ್ಯದಲ್ಲಿ ಕಾವೇರಿ ಒಡಲನ್ನೇ ನಂಬಿಕೊಂಡೇ ಕೋಟ್ಯಂತರ ಕುಟುಂಬಗಳು ಜೀವನ ನಡೆಸುತ್ತಿವೆ. ಕೃಷಿ, ಕುಡಿಯಲು ಕಾವೇರಿಯನ್ನೇ ನಂಬಿರುವ ಕೋಟ್ಯಂತರ ಕುಟುಂಬಗಳಿವೆ. ಆದರೆ ಕಳೆದ ವರ್ಷ ಕಾವೇರಿ ನೀರಿನ ಅಭಾವ ಉಂಟಾಗಿ ಬೆಂಗಳೂರಿನ ಜನತೆಯೂ ತತ್ತರಿಸಿ ಹೋಗಿದ್ದರು. ಈ ವರ್ಷದ ವರುಣನ ಅಬ್ಬರ ನೋಡಿದರೆ ಕೆಆರ್‌ಎಸ್ ಅತೀ ಶೀಘ್ರದಲ್ಲೇ ತುಂಬಲಿದೆ ಎಂಬ ಭರವಸೆ ಮೂಡುತ್ತಿದೆ.
ಇನ್ನು ಇಂದಿನ ಕೆಆರ್‌ಎಸ್ ನೀರಿನ ಮಟ್ಟ ತಿಳಿಯುವುದಾದರೆ:
ಗರಿಷ್ಠ ಮಟ್ಟ – 124.80 ಅಡಿ
ಇಂದಿನ ಮಟ್ಟ – 84.95 ಅಡಿ
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 13.142 ಟಿಎಂಸಿ
ಒಳ ಹರಿವು – 1,423 ಕ್ಯೂಸೆಕ್
ಹೊರ ಹರಿವು – 444 ಕ್ಯೂಸೆಕ್