ನ್ಯೂಡೆಲ್ಲಿ: ಕೇಂದ್ರ ಸರ್ಕಾರವು ಕಾರ್ಮಿಕರ ಕನಿಷ್ಠ ಕೂಲಿ ದರವನ್ನು ದಿನವೊಂದಕ್ಕೆ 1,035 ರೂಪಾಯಿಗೆ ಹೆಚ್ಚಿಸಿ ಆದೇಶ ಹೊರಡಿಸಿದ್ದು, ಈ ಆದೇಶ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಕಾರ್ಮಿಕರ ಜೀವನ ವೆಚ್ಚ ಆಧಾರದ ಮೇಲೆ ಕೂಲಿ ದರದಲ್ಲಿ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಗುರುವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ಇನ್ನು ಈ ದರ ಪರಿಷ್ಕರಣೆ ಆದೇಶವು ಅಕ್ಟೋಬರ್ 1ರಿಂದ ಜಾರಿಗೆ ಬರಲಿದ್ದು, ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದೆ.
ಕಟ್ಟಡ, ಸ್ವಚ್ಛತೆ ಕೆಲಸಗಾರರು ಸೇರಿ ಕುಶಲರಹಿತ ಕಾರ್ಮಿಕರಿಗೆ 783 ರೂ.ಗಳನ್ನು ನಿಗದಿಪಡಿಸಿದೆ. ಅಂದರೆ ತಿಂಗಳಿಗೆ 20,358 ರೂಪಾಯಿ. ಅದರಂತೆ ಅರೆ ಕುಶಲ ಕಾರ್ಮಿಕರಿಗೆ 868 ರೂ.ಗಳು ಅಂದರೆ ತಿಂಗಳಿಗೆ 22,568 ರೂಪಾಯಿ ನಿಗದಿಪಡಿಸಿದೆ.
ಅದಂತೆ ಕುಶಲ ಹೊಂದಿರುವ ಕಾರ್ಮಿಕರಿಗೆ 954 ರೂ.ಗಳು ಕನಿಷ್ಠ ಕೂಲಿ ದರ ನಿಗದಿಪಡಿಸಿದ್ದು, ತಿಂಗಳಿಗೆ 24,804 ರೂಪಾಯಿ ಹಾಗೂ ಅತಿಹೆಚ್ಚು ಕುಶಲ ಹೊಂದಿರುವ ಕಾರ್ಮಿಕರಿಗೆ 1,035 ರೂ.ಗಳು ಅಂದರೆ ತಿಂಗಳಿಗೆ 26,910 ರೂ.ಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.