NEWSನಮ್ಮರಾಜ್ಯಬೆಂಗಳೂರುಸಿನಿಪಥ

ವಿಶ್ವ ಮಹಿಳಾ ದಿನಾಚರಣೆ: ಸಾಧನೆಯ ಸಾಧಕಿಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರದಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಿಬಿಎ ಪಾಲಿಕೆಯಲ್ಲಿ ಪೌರ ಕಾರ್ಮಿಕರಿಂದ ಹಿಡಿದು ಉನ್ನತ ಹುದ್ದೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವ ಮಹಿಳಾ ದಿನಾಚರಣೆಯಂದು ಟಿ20 ವಿಶ್ವ ಕಪ್ ಕ್ರಿಕೆಟ್ ನಲ್ಲಿ ಗೆದ್ದಿರುವುದು ದೇಶವೇ ಸಂತೋಷಪಡುವ ವಿಷಯವಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರರಾವ್ ಹೇಳಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಡಾ. ರಾಜ್ ಕುಮಾರ್ ಗಾಜಿನಮನೆ ಅವರಣದಲ್ಲಿ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ, ಸಾಧನೆ ಮಾಡಿರುವ ಸಾಧಕಿಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆ ತಾಯಿ, ತಂಗಿ, ಅಕ್ಕನಾಗಿ ಕುಟುಂಬದ ಜೊತೆಗೆ ಸಮಾಜದ ಅಭಿವೃದ್ದಿಗೆ ಶ್ರಮಿಸುವಳು. ಪಾಲಿಕೆ ನೌಕರರ ಸಂಘದವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಖ್ಯಾತ ಚಿತ್ರನಟಿ ಜಯಪ್ರದ ಹೇಳಿದರು.

ಮಹಿಳೆಯರು ಸ್ವಾಭಿಯಾನಿ, ಸ್ವಾವಲಂಭಿಯಾಗಿ ಬದುಕುಬೇಕು. ಮಹಿಳೆಯರ ಧ್ವನಿ ಗಟ್ಟಿಯಾಗಿ ಇರಬೇಕು. ಮಹಿಳೆಯರ ಸಾಧನೆಗಳು ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಚಿತ್ರನಟಿ ಮಹಾಲಕ್ಷ್ಮಿ ಹೇಳಿದರು.

ದಿಟ್ಟ ಮಹಿಳಾ ಪ್ರಶಸ್ತಿ ಪುರಸ್ಕೃತರ ವಿವರ:
ದಿಟ್ಟ ಮಹಿಳಾ ಪ್ರಶಸ್ತಿ ಚಿತ್ರ ನಟಿ ಜಯಪ್ರದ, ಊರ್ವಶಿ, ಮಹಾಲಕ್ಷ್ಮಿ, ಪ್ರಮೀಳ ಜೋಷಯ್, ಮಂಜುಳ ಗುರುರಾಜ್, ಡಾ.ಇಂದಿರಾ ಕಬಾಡೆ, ಶ್ರೀಮತಿ ರೇಣುಕಾ, ಶ್ರೀಮತಿ ಶುಭ, ಚೈತ್ರ ಅಂಚನ್, ವೀಣಾ ಪೂಜಾರಿ, ಡಾ.ಪ್ರಿಯದರ್ಶಿನಿ, ಶೈಲಜಾ, ಲಕ್ಷ್ಮಿದೇವಿ, ವಾಣಿಶ್ರೀ, ಸಂಧ್ಯಾ ಪ್ರಭು, ಚೈತ್ರ ಪೂರ್ಣಿಮಾ, ಆರತಿ ಪ್ರಸಾದ್, ಪೂನಂ ಬೆಳ್ಳಯಪ್ಪ, ಶ್ರೀಮತಿ ಲಕ್ಷ್ಮಿ, ದಿವ್ಯ, ವರಲಕ್ಷ್ಮಿ, ವಿಜಯಲಕ್ಷ್ಮಿ, ತನುಜಾ, ಕೃತಿಕ ವರಲಕ್ಷ್ಮಿಎಲ್, ಶಿಲ್ಪಾ, ಪದ್ಮಜಾ ನಾಯಕ್, ಶುಭ ಮಂಗಳ, ಆನಿತಾ ಗ್ರೇಸಿ, ಚಂದ್ರಕಲಾ ಗಂಗಮ್ಮ, ಲತಾ, ತೇಜಾವತಿರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಈ ವೇಳೆ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ ಸಂಗಾ ಮತ್ತಿತರರು ಇದ್ದರು.

Megha
the authorMegha

Leave a Reply

error: Content is protected !!