NEWSನಮ್ಮಜಿಲ್ಲೆನಮ್ಮರಾಜ್ಯ

ಇದು KSRTC ನೌಕರರ ಬೇಡಿಕೆಯೋ ಇಲ್ಲ ಜಂಟಿ ಕ್ರಿಯಾ ಸಮಿತಿ ಬೇಡಿಕೆಯೋ?

ವಿಜಯಪಥ ಸಮಗ್ರ ಸುದ್ದಿ
  • ಜಂಟಿ ಕ್ರಿಯಾ ಸಮಿತಿ ಒಂದು ವೇಳೆ ನಿಗಮದಲ್ಲಿ ಇಲ್ಲದ ಕಾರ್ಮಿಕರ ಪರವಾಗಿ ಈ ಬೇಡಿಕೆಗಳನ್ನು ಇಡುತ್ತಿದೆಯೇ?
  • ನಗದು ರಹಿತ ಬಿಟ್ಟು ಮತ್ತೆ ಅಧಿಕಾರಿಗಳು -ನೌಕರರ ಜೇಬಿಗೆ ಕತ್ತರಿ ಹಾಕುವ  ವೈದ್ಯಕೀಯ ಯೋಜನೆ ಜಾರಿಗೆ ಒತ್ತಾಯವೇಕೆ?

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ವಿವಿಧ ಸೌಲಭ್ಯಗಳನ್ನು ಕೊಡಿಸುವ ಸಲುವಾಗಿ ಸರ್ಕಾರ ಮತ್ತು ನೌಕರರ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿಕೊಂಡು ರಚನೆಯಾಗಿರುವ ಕರಾರಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೌಕರರಿಗೆ ವಿರುದ್ಧವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದೆಯೇ?

ಇದು ಸತ್ಯವೇ ಆಗಿದ್ದರೆ, ಏಕೆ ಈ ರೀತಿ ಅಧಿಕಾರಿಗಳು ಹಾಗೂ ನೌಕರರ ಬೇಡಿಕೆಗಳಿಗೆ ವಿರುದ್ಧವಾದ ತೀರ್ಮಾನ ತೆಗೆದುಕೊಂಡು ಅದನ್ನು ಸರ್ಕಾರ, ಸಾರಿಗೆ ಸಚಿವರು ಮತ್ತು ನಾಲ್ಕೂ ನಿಗಮಗಳ ಆಡಳಿತ ಮಂಡಳಿಗಳ ಮುಂದಿಡುತ್ತಿದೆ?

ಅಂದರೆ ಈ ಜಂಟಿ ಕ್ರಿಯಾ ಸಮಿತಿ ಒಂದು ವೇಳೆ ನಿಗಮದಲ್ಲಿ ಇಲ್ಲದ ಕಾರ್ಮಿಕರ ಪರವಾಗಿ (ಅಂದರೆ ಸಾರಿಗೆ ನಿಗಮಗಳಲ್ಲಿ ಇರುವವರು ನೌಕರರು ಅವರು ಕಾರ್ಮಿಕರಲ್ಲ ಹೀಗಾಗಿ ಇದನ್ನು ಹೇಳಬೇಕಾಗಿದೆ) ಈ ಬೇಡಿಕೆಗಳನ್ನು ಇಡುತ್ತಿದೆಯೇ ಎಂಬ ಪ್ರಶ್ನೆಯನ್ನು ಸಾರಿಗೆಯ 4 ನಿಗಮಗಳ ಅಧಿಕಾರಿಗಳು ಮತ್ತು ನೌಕರರೇ ಕೇಳುತ್ತಿದ್ದಾರೆ.

ಈವರೆಗೂ ನಾಲ್ಕೂ ನಿಗಮಗಳ ಸಮಸ್ತ ಅಧಿಕಾರಿಗಳು ಸೇರಿದಂತೆ ನೌಕರರ ಮನಸ್ಸಿನಲ್ಲಿ ಏನಿದೆ ಎಂಬುವುದನ್ನು ತಿಳಿದುಕೊಳ್ಳದೆ ಜಂಟಿ ಕ್ರಿಯಾ ಸಮಿತಿ ಇಲ್ಲಿ ನಾವು ತೆಗೆದುಕೊಂಡ ತೀರ್ಮಾನವೇ ಅಂತಿಮ. ಇದಕ್ಕೆ ಯಾವುದೇ ಅಧಿಕಾರಿಯಾಗಲಿ ಅಥವಾ ನೌಕರನಾಗಲಿ ಚಕರವೆತ್ತುವಂತಿಲ್ಲ ಎಂಬ ನಿಟ್ಟಿನಲ್ಲಿ, ಅಂದರೆ ಸರ್ವಾಧಿಕಾರಿಯಂತೆ ಈ ನಿರ್ಧಾರಗಳನ್ನು ತೆಗೆದುಕೊಂಡು ಅದನ್ನು ಸರ್ಕಾರದ ಮುಂದೆ ಮುಂಡಿಸುತ್ತಿದೆ. ಹೀಗಾಗಿ ಇದು ನಮ್ಮ ಬೇಟಿಕೆಯಲ್ಲ ಎಂದು ಸ್ವತಃ ಅಧಿಕಾರಿಗಳು ಮತ್ತು ನೌಕರರೇ ಹೇಳುತ್ತಿದ್ದಾರೆ.

ಅಂದರೆ ನಮ್ಮ ಬೇಡಿಕೆ 7ನೇ ವೇತನ ಆಯೋಗದಂತೆ ನಮಗೆ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಸರಿ ಸಮಾನವಾದ ವೇತನ ಕೊಡಬೇಕು ಎಂಬುವುದು ನಾಲ್ಕೂ ನಿಗಮಗಳ ಅಧಿಕಾರಿಗಳು ಹಾಗೂ ನೌಕರರ ಆಗ್ರಹವಾಗಿದೆ. ಅಲ್ಲದೆ ಈ ನಿಟ್ಟಿನಲ್ಲಿ ಈಗಾಗಲೇ ಸಮಸ್ತ ಈ ನಿಗಮಗಳ ಅಧಿಕಾರಿಗಳು ಹಾಗೂ ನೌಕರರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಸಾರಿಗೆ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಾರಿಗೆ ನಿಗಮದ ಎಂಡಿಗಳು ಸೇರಿದಂತೆ ಎಲ್ಲರಿಗೂ ಮನವಿ ಸಲ್ಲಿಸಿದ್ದಾರೆ.

ಆದರೆ, ಅಧಿಕಾರಿಗಳು ಮತ್ತು ನೌಕರರ ಬೇಡಿಕೆ ಏನೆಂದು ಅರ್ಥ ಮಾಡಿಕೊಳ್ಳದೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಅಧಿಕಾರಿಗಳು ಮತ್ತು ನೌಕರರ ಬೇಡಿಕೆಗಳಿಗೆ ವಿರುದ್ಧವಾದ ದಿಕ್ಕಿನಲ್ಲಿ ಸಾಗಿ ನೌಕರರಿಗೆ ಬೇಡವೆನ್ನುತ್ತಿರುವ ಬೇಡಿಕೆಯನ್ನು ಮಂಡಿಸುತ್ತಿದ್ದಾರೆ. ಅಂದರೆ ಇದು ನೌಕರರ ಬೇಡಿಕೆಯೋ ಇಲ್ಲ ಜಂಟಿ ಕ್ರಿಯಾ ಸಮಿತಿ ಬೇಡಿಕೆಯೋ ಎಂಬ ಪ್ರಶ್ನೆ ಇಲ್ಲಿ ಹುಟ್ಟಿಕೊಳ್ಳುತ್ತಿದೆ. ಜತೆಗೆ ಈ ಬಗ್ಗೆ ಸರ್ಕಾರ ಕೂಡ ಗೊಂದಲದಲ್ಲಿ ಸಿಲುಕಿಕೊಂಡಿದೆ.

ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ನಡೆ ಖಂಡನೀಯ: ಮತ್ತೊಂದು ನಿದರ್ಶನವೆಂಬಂತೆ ಜಂಟಿ ಕ್ರಿಯಾ ಸಮಿತಿ ಇಲ್ಲಿ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರ ಜೇಬಿಗೆ ಕತ್ತಿರಿಹಾಕುವಂತ ತೀರ್ಮಾನವೊಂದನ್ನು ತೆಗೆದುಕೊಂಡು ಅದನ್ನು ಸರ್ಕಾರ ಮತ್ತು ಸಾರಿಗೆ ಸಚಿವರ ಮುಂದೆ ಮಂಡಿಸುತ್ತಿದೆ. ಇದು ನಿಜಕ್ಕೂ ಭಾರಿ ನೋವಿನ ಸಂಗತಿ.

ಅದೇನೆಂದರೆ 2025ರ ಜನವರಿ 1ರಿಂದ ಜಾರಿಗೆ ಬರುವಂತೆ ನಿಗಮಗಳ ಆಡಳಿತವರ್ಗ ಹಾಗೂ ನೌಕರರ ಕೊಡುಗೆ (Contribution) ಆಧಾರದ ಮೇಲೆ ಉತ್ತಮವಾದ ವೈದ್ಯಕೀಯ ಸೌಲಭ್ಯವನ್ನು ಜಾರಿ ಮಾಡಬೇಕು ಎಂದು ತಮ್ಮ ಬೇಡಿಕೆಗಳ ಪಟ್ಟಿಯಲ್ಲಿ ಸಲ್ಲಿಸಿದ್ದಾರೆ.

ಅಂದರೆ ಸರ್ಕಾರಿ ನೌಕರರು ನಗದು ರಹಿತ ವೈದ್ಯಕೀಯ ಸೌಲಭ್ಯ ಪಡೆಯುವುದಕ್ಕೆ ಕೊಡುಗೆ (Contribution) ನೀಡುತ್ತಿದ್ದಾರೆಯೇ? ಅಥವಾ ಒಬ್ಬ ಜನಪ್ರತಿನಿಧಿಯಾದವರು ಒಂದು ಸಣ್ಣ ಕೆಮ್ಮು ಕಾಣಿಸಿಕೊಂಡರೂ ಕೂಡಲೇ ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬರುತ್ತಾರೆ. ಆ ಜನಪ್ರತಿನಿಧಿಯೂ ಕೊಡುಗೆ (Contribution) ನೀಡುತ್ತಿದ್ದಾರೆಯೇ?

ಇವರಾರು ಕೊಡುಗೆ (Contribution) ನೀಡದಿದ್ದರೂ ಅವರಿಗೆ ಎಲ್ಲ ರೀತಿಯಲ್ಲೂ ಉಚಿತ ವೈದ್ಯಕೀಯ ಸೌಲಭ್ಯಗಳಿವೆ. ಆದರೆ, ಸಾರಿಗೆ ಅಧಿಕಾರಿಗಳು ಮತ್ತು ನೌಕರರ ವಿಷಯ ಬಂದಾಗ ಮಾತ್ರ ಅವರಿಂದ ಕೊಡುಗೆ (Contribution) ಪಡೆದ ಬಳಿಕ ಉತ್ತಮವಾದ ವೈದ್ಯಕೀಯ ಸೌಲಭ್ಯವನ್ನು ಜಾರಿ ಮಾಡಬೇಕಾ? ಇದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆಯೇ ಸರಿ ಎನಿಸುತ್ತದೆಯೇ ಎಂದು ಬರಿ ನೌಕರರಷ್ಟೇ ಅಲ್ಲ ಅಧಿಕಾರಿಗಳು ಕೂಡ ಕೇಳುತ್ತಿದ್ದಾರೆ. ಅಲ್ಲದೆ ಇದಕ್ಕೆ ನೀವು ಉತ್ತರ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಅಧಿಕಾರಿಗಳಿಂದಾಗಲಿ ಅಥವಾ ನೌಕರರಿಂದಾಗಲಿ ಅವರ ಅಭಿಪ್ರಾಯವನ್ನು ಪಡೆಯದೇ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತಮಗನಿಸಿದ್ದನ್ನು ಬೇಡಿಕೆ ಪಟ್ಟಿಯಲ್ಲಿ ಸೇರಿಸಿಕೊಂಡು ಸರ್ಕಾರದ ಮುಂದೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದರೆ ಇಲ್ಲಿ ನಿಮ್ಮ ಸರ್ವಾಧಿಕಾರದ ಧೋರಣೆ ಎಷ್ಟಿದೆ ಎಂಬುವುದನ್ನು ತಿಳಿದುಕೊಳ್ಳಲಾರದಷ್ಟು ದಡ್ಡ ನೌಕರರು ನಾವಲ್ಲ.

ಇನ್ನಾದರೂ ನಮ್ಮ ನಿಜವಾದ ಬೇಡಿಕೆಗಳನ್ನು ಸರ್ಕಾರದ ಮುಂದಿಡಿ. ಇಲ್ಲ ನಮ್ಮ ಬೇಡಿಕೆಗಳನ್ನು ನಾವು ಈಡೇರಿಸಿಕೊಳ್ಳಲು ನಾವೇ ಸರ್ಕಾರ, ಸಾರಿಗೆ ಸಚಿವರು ಹಾಗೂ ಆಡಳಿತ ಮಂಡಳಿ ಮುಂದೆ ಹೋಗುತ್ತೇವೆ ನೀವು ಸುಮ್ಮನಿದ್ದುಬಿಡಿ. ನಿಮ್ಮ ನಡೆಯನ್ನು ನಾವು ಖಂಡಿಸುತ್ತ ಬೇಸರತ್ತಾಗಿ ತಾವು ಸೈಡಿನಲ್ಲಿದ್ದು ಬಿಡಿ ಎಂದು ಬೇಡಿಕೊಳ್ಳುತ್ತಿದ್ದೇವೆ. ಇದನ್ನು ಅರ್ಥಮಾಡಿಕೊಳ್ಳಿ ಎನ್ನುತ್ತಿದ್ದಾರೆ ಸಾಮಾನ್ಯ ನೌಕರರು.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!