NEWSನಮ್ಮಜಿಲ್ಲೆಬೆಂಗಳೂರು

ನವೆಂಬರ್‌ ಮೊದಲ ವಾರದಲ್ಲೇ ನಿವೃತ್ತ ನೌಕರರ ಹಣ ಕೊಟ್ಟರೆ ಅನುಕೂಲ: ಸಾರಿಗೆ ಸಚಿವರಿಗೆ ಸಮಿತಿ ಮನವಿ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ನಿವೃತ್ತ ಸಾರಿಗೆ ನೌಕರರಿಗೆ ಬರಬೇಕಿರುವ ಎಲ್ಲ ಬಾಕಿ ಹಣವನ್ನು ನವೆಂಬರ್‌ ಮೊದಲವಾರದಲ್ಲೇ ಕೊಟ್ಟರೆ ಅನುಕೂಲವಾಗಲಿದೆ ಎಂದು ಹುಬ್ಬಳ್ಳಿಯ ಸೇವಾ ನಿವೃತ್ತಿ ನೌಕರರ ಬಾಕಿ (ವೇತನ, ಗ್ರಾಚ್ಯುಟಿ, ನಿವೃತ್ತಿ ಗಳಿಕೆ ರಜೆ ನಗಧೀಕರಣ ಹಾಗೂ ಇನ್ನಿತರ ಸೌಲಭ್ಯಗಳು) ಬರುವ ಹೋರಾಟ ಸಮಿತಿ ಮನವಿ ಮಾಡಿದೆ.

ಈ ಕುರಿತು ಸಾರಿಗೆ ಸಚಿವ ರಾಮಲಿಗಾರೆಡ್ಡಿ ಅವರಿಗೆ ಭಾನುವಾರ ಹುಬ್ಬಳ್ಳಿಯಲ್ಲಿ  ಸಮಿತಿಯ ಪದಾಧಿಕಾರಿಗಳು ಹನುಮಂತ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ.

ಆ ಮನವಿ ಪತ್ರದಲ್ಲಿ  ಸೇವಾ ವಿಮುಕ್ತಿ ನಿವೃತ್ತಿ/ ನಿಧನ/ ಸ್ವಯಂ ನಿವೃತ್ತಿ ನೌಕರರಿಗೆ 1-1-2020 ರಿಂದ 28- 2-2023 ರವರೆಗಿನ ಅವಧಿಗೆ ಶೇಕಡಾ 15ರ ವೇತನ ಹೆಚ್ಚಳದ ವ್ಯತ್ಯಾಸದ ಉಪಧನ ಮತ್ತು ನಿವೃತ್ತಿ ಗಳಿಕೆರಜೆ ನಗಧೀಕರಣ ಮೊತ್ತವನ್ನು ನವೆಂಬರ-2024 ರೊಳಗಾಗಿ ಪಾವತಿಸಲಾಗುವುದು ಎಂದು ನೀವೆ ತಿಳಿಸಿದ್ದೀರಿ.

9-10-2024 ರಲ್ಲಿ ವಿಧಾನಸೌಧದಲ್ಲಿ  ನಡೆದ ಸಭೆಯಲ್ಲಿ ಈ ಬಗ್ಗೆ ತಿಳಿಸಿದ್ದು, ಇದರಿಂದಾಗಿ ರಾಜ್ಯದ ನಿವೃತ್ತ ಸಿಬ್ಬಂದಿ ಮತ್ತು ಹಾಲಿ ಸಿಬ್ಬಂದಿಗಳ ಮೇಲೆ ನೀವು ಇಟ್ಟಿರುವ ವಿಶೇಷ ಕಾಳಜಿ ಎದ್ದು ಕಾಣುತ್ತಿದೆ. ಈ ತಮ್ಮ ಕರುಣೆಯ ನಿರ್ಧಾರಕ್ಕೆ ನಾವು ಚಿರರುಣಿ ಎಂದು ತಿಳಿಸಿದ್ದಾರೆ.

ಪ್ರಸ್ತುತ ನಮ್ಮ ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಚಿಕಿತ್ಸೆ, ಜೀವನದ ಜತೆಗೆ ಸದ್ಯ ದೀಪಾವಳಿ ಹಬ್ಬ ಬರುತ್ತಿದೆ. ಹೀಗಾಗಿ ಹಣದ ಅವಶ್ಯಕತೆ ತುಂಬಾ ಇದೆ. ಆದ್ದರಿಂದ ಈ ಹಣವನ್ನು ನಾವು ಹಿಂದೆ ಮನವಿಯಲ್ಲಿ ತಿಳಿಸಿದಂತೆ ನವೆಂಬರ ಮೊದಲನೇ ವಾರದಲ್ಲೇ ಪಾವತಿಸಬೇಕು ಎಂದು ವಿನಂತಿಸಿಕೊಳ್ಳುತ್ತೇವೆ ಎಂದು ಹನುಮಂತ ತಿಳಿಸಿದ್ದಾರೆ.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!