NEWSನಮ್ಮಜಿಲ್ಲೆನಮ್ಮರಾಜ್ಯವಿಡಿಯೋ

KSRTC: 1978ರಲ್ಲಿ ಸಾರಿಗೆ ನೌಕರರು, ಡಿಎಂ ಕಚೇರಿಗೆ ಹೋಗಬೇಕಾದರೆ ಚಪ್ಪಲಿ ಹಾಕುವಂತಿರಲಿಲ್ಲ!!!

ವಿಜಯಪಥ ಸಮಗ್ರ ಸುದ್ದಿ
  • KSRTC ಸಂಘಟನೆ ಚುನಾವಣೆ ನಡೆಸಿ: ನಾಗರಾಜು ಆಗ್ರಹ- ಒಂದೇ ಸಂಘಟನೆ ಪರ ನಿಂತ ನೌಕರರು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಒಂದೇ ಒಂದು ಸಂಘಟನೆ ಮೇಲೆ ಏಕೆ ಒಲವಿದೆ ಎಂದರೆ ಆ ಸಂಘಟನೆಯಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ.

ಹೌದು! ಸಾರಿಗೆ ನಿಗಮಗಳಲ್ಲಿ 10ಕ್ಕೂ ಹೆಚ್ಚು ಪ್ರಮುಖ ಸಂಘಟನೆಗಳು ಇವೆ. ಅವುಗಳಲ್ಲಿ ಒಂದೇ ಒಂದು ಸಂಘಟನೆಗೆ ನೌಕರರ ಒಲವಿದೆ. ಆದರೆ, ಸಾರಿಗೆ ಸಚಿವರಿಗೆ ಮತ್ತು ಕೆಎಸ್‌ಆರ್‌ಟಿಸಿ ಆಡಳಿತವರ್ಗಕ್ಕೆ ಮಾತ್ರ ನೌಕರರ ಬೆಂಬಲವಿಲ್ಲದ ಸಂಘಟನೆಯ ಮೇಲೆ ಏಕೋ ಗೊತ್ತಿಲ್ಲ ಅಪಾರವಾದ ನಂಬಿಕೆ ಇದೆ. ಇದರಿಂದ ಈವರೆಗೂ ನೌಕರರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ.

ಇನ್ನು ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಈ ಹಿಂದೆ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜಿ.ಸತ್ಯವತಿ ಅವರು ಮಾತ್ರ ಆ ಸಂಘಟನೆಯ ನಡೆಗೆ ಕಿವಿಯಾಗದೆ ನೌಕರರ ಪರವಾದ ಹತ್ತಾರು ಕೆಲಸಗಳನ್ನು ಮಾಡಿದ್ದು, ಅವರು ವರ್ಗಾವಣೆ ಆಗಿದ್ದರೂ ಕೂಡ ನೌಕರರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.

ಇಂದ ಕೆಲಸವನ್ನು ಮಾಡಬೇಕಾದ ಕೆಎಸ್‌ಆರ್‌ಟಿಯ ಆಡಳಿತ ವರ್ಗ ನೌಕರರ ಬೆಂಬಲವಿಲ್ಲ ಸಂಘಟನೆಯ ಪರ ನಿಂತು ಮಾಡಬೇಕಿರುವ ಚುನಾವಣೆಯನ್ನು ಮಾಡದೆ ಕಾಲ ಕಳೆಯುತ್ತಿದೆ. ಈ ಬಗ್ಗೆ ಸಾರಿಗೆ ಸಚಿವರು ಕೂಡ ಮೌನವಾಗಿದ್ದಾರೆ. ಕಾರಣ ಅವರಿಗೆ ಸಾರಿಗೆಯ ಎಲ್ಲ ಸಂಘಟನೆಯವರು ಬೇಕು.

ಬೇಡ ಎಂದು ಹೇಳಿದವರು ಯಾರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಆದರೆ, 5 ವರ್ಷಕ್ಕೊಮ್ಮೆ ನಡೆಯುವ ವಿಧಾನಸಭೆ ಚುನಾವಣೆಯಂತೆ ಕಾಲಕಾಲಕ್ಕೆ ಸಾರಿಗೆ ಸಂಘಟನೆಗಳ ಚುನಾವಣೆ ನಡೆಸುವುದಕ್ಕೆ ನೀವು ಅವಕಾಶ ಮಾಡಿಕೊಡಬೇಕಲ್ಲವೇ? ಇಲ್ಲಿ ಯಾರು ನೌಕರರ ಬೆಂಬಲ ಪಡೆದಿರುತ್ತಾರೋ ಅವರು ಗೆಲ್ಲುತ್ತಾರೆ. ಅದರಿಂದ ನಿಗಮಗಳಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತವೆ ಅಲ್ಲವೇ?

ಹೀಗೆ ಮಾಡುವುದನ್ನು ಬಿಟ್ಟು BMTC, NWKRTC, KKRTC ಹೊರತುಪಡಿಸಿ KSRTC ಆಡಳಿತವರ್ಗ ಮಾತ್ರ ಚುನಾವಣೆ ನಡೆಸುವುದಕ್ಕೆ ಏಕೋ ಮೀನಮೇಷ ಎಣಿಸುತ್ತಿದೆ. ಇದರಿಂದ ನೊಂದಿರುವ ನೌಕರರು ಪ್ರಸ್ತುತ ನಿಗಮಗಳ ಸೊಸೈಟಿಗಳಲ್ಲಿ ತಮಗೆ ಬೇಕಾದ ಸಂಘಟನೆಯ ಪರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತಿದ್ದಾರೆ. ಇದು ಇಂದಿನ ಸತ್ಯವೂ ಹೌದು!

ಇನ್ನು ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ನೌಕರರ ಹಿತವನ್ನು ಕಾಯುವುದಕ್ಕೆ ಬದ್ಧವಾಗಿದ್ದರೆ ಮೊದಲು ಸಂಘಟನೆಗಳ ಚುನಾವಣೆ ನಡೆಸುವುದಕ್ಕೆ ಆದೇಶ ಹೊರಡಿಸಬೇಕು. ಇಲ್ಲ ನಾವು ಕೂಡ ಇತರ ಪಕ್ಷಗಳಂತೆ ಹೇಳಿಕೊಂಡು ಮುಂದೂಡುತ್ತೇವೆ ಎಂದರೆ ಅಧಿಕಾರ ನಿಮ್ಮ ಕೈಯಲ್ಲೇ ಇರುವುದರಿಂದ ನೌಕರರ ಕಾದು ನೋಡುವ ತಂತ್ರವನ್ನು ಅನುಸರಿಸದೆ ಬೇರೆ ಮಾರ್ಗವಿಲ್ಲ. ನಿಮ್ಮ ಬಂಡವಾಳವು ಅಷ್ಟೇ ಎಂದು ಸುಮ್ಮನಾಗಿ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸುತ್ತಾರೆ ಅಷ್ಟೇ!

ಸಾರಿಗೆ ನಿಗಮಗಳಲ್ಲಿ ಸಂಘಟನೆಗಳ ಚುನಾವಣೆ ಆದಾಗ ನೌಕರರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುವುದು ನನ್ನ ಅನುಭವ. ಹೀಗಾಗಿ ಚುನಾವಣೆ ಮಾಡಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮನಸ್ಸು ಮಾಡಬೇಕು.

l ಎಸ್‌.ನಾಗರಾಜು, ನಾಲ್ಕೂ ಸಾರಿಗೆ ನಿಗಮಗಳ ವರ್ಕರ್ಸ್‌ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ

Leave a Reply

error: Content is protected !!
LATEST
ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಬಿಜೆಪಿಗೆ ಜೈ ಎಂದ ಪ್ರಜ್ವಲ್ ರೇವಣ್ಣ ವಿರುದ್ಧ ಪಕ್ಷದಿಂದ ನಿರ್ದಾಕ್ಷಿಣ್ಯ ಕ್ರಮ : ಎಚ್‌ಡಿಕೆ ಪ್ರಜ್ವಲ್ ರೇವಣ್ಣನ ಪಕ್ಷದಿಂದ ಅಮಾನತು ಮಾಡಿ: ಎಚ್‌ಡಿಡಿಗೆ ಶಾಸಕ ಶರಣಗೌಡ ಕಂದಕೂರ ಒತ್ತಾಯ ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಮಾಜಿ ಸಿಎಂ ಎಚ್‌ಡಿಕೆ ಖ್ಯಾತ ಭೋಜಪುರಿ ನಟಿ ಅಮೃತಾ ಪಾಂಡೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು ಲೈಂಗಿಕ ಪ್ರಕರಣ: ಶಾಸಕ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್ ವಿರುದ್ಧ ಎಸ್‌ಐಟಿ ತನಿಖೆ ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಇನ್ನಿಲ್ಲ ಕಾಲೇಜು ಸಹಪಾಠಿಗಳ ಮೇಲೆ ಹಲ್ಲೆ ಪ್ರಕರಣ: ಏ.28ರಂದು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ KKRTC: ಎಲ್ಲ ಸಿಬ್ಬಂದಿಗಳು ಸಮವಸ್ತ್ರ ಧರಿಸುವುದು ಕಡ್ಡಾಯ - ವಿಜಯಪುರ ಡಿಸಿ ಸ್ಪಷ್ಟನೆ ಕರ್ತವ್ಯ ನಿರತ ಸರ್ಕಾರಿ ಬಸ್‌ ನಿರ್ವಾಹಕರ ಮೇಲೆ ಹಲ್ಲೆ: ಮೂವರ ವಿರುದ್ಧ ದೂರು ದಾಖಲು