Vijayapatha – ವಿಜಯಪಥ
Saturday, November 2, 2024
NEWSನಮ್ಮಜಿಲ್ಲೆನಮ್ಮರಾಜ್ಯ

KKRTC: 15-26 ವರ್ಷಗಳಿಂದ ಒಂದೆಡೆಯೇ ಬೇರುಬಿಟ್ಟ ಸಿಬ್ಬಂದಿಗಳು – ಮೇಲಧಿಕಾರಿಗಳ ಆದೇಶಕ್ಕೂ ಕ್ಯಾರೆ ಎನ್ನದ ವಿಭಾಗೀಯ ನಿಯಂತ್ರಣಾಧಿಕಾರಿಗಳು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಮೂರು ವರ್ಷ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಡಳಿತ ಸಿಬ್ಬಂದಿಗಳ ಬದಲಾವಣೆ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಆದೇಶಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಆದರೆ, ಸುಮಾರು 1998 ರಿಂದ ಇಲ್ಲಿಯವರೆಗೆ ವಿಭಾಗೀಯ ಕಚೇರಿ ವಿಜಯಪುರದಲ್ಲಿ ಕೆಲವೊಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ ಅವರಿಗೆ ಅಲ್ಲೇ ಪದೋನ್ನತಿ ಆಗಿದೆ. 15-26 ವರ್ಷಗಳಿಂದ ಒಂದೇ ಶಾಖೆಯಲ್ಲಿ ಕೆಲಸ ನಿರವಹಿಸುತ್ತಿದ್ದರು ಅವರನ್ನು ಈವರೆಗೂ ಬೇರೆಡೆಗೆ ವರ್ಗಾವಣೆ ಮಾಡುವುದಕ್ಕೆ ಈ ಹಿಂದೆ ಇದ್ದಂತಹ ಯಾವೊಬ್ಬ ವಿಭಾಗೀಯ ನಿಯಂತ್ರಣಾಧಿಕಾರಿಯೂ ಕ್ರಮ ಜರುಗಿಸಿಲ್ಲ.

ಇನ್ನು ಇದೆಲ್ಲವನ್ನು ಗಮನಿಸಿರುವ ಪ್ರಸ್ತುತ ಇರುವ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಏನು ಕ್ರಮ ಜರರುಗಿಸುತ್ತಾರೆ ಎಂದು ನೌಕರರು ಕಾದು ಕುಳಿತಿದ್ದಾರೆ. ಈ ಸಂಬಂಧ ಕೆಕೆಆರ್‌ಟಿಸಿ ನಿಗಮದ ಎಲ್ಲ ವಿಭಾಗೀಯ ಕಚೇರಿ, ಘಟಕಗಳು ಹಾಗೂ ಯುನಿಟ್‌ಗಳಲ್ಲಿ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿ ಒಂದೇ ಶಾಖೆ/ ಒಂದೇ ವಿಷಯ ಸಂಕಲನವನ್ನು ನಿರ್ವಹಿಸುತ್ತಿರುವ ವಿಷಯ ನಿರ್ವಾನಕರನ್ನು ಹಾಗೂ ಇತರೇ ಸಿಬ್ಬಂದಿಯನ್ನು ಮೂರು ವರ್ಷಗಳಿಗೊಮ್ಮೆ ಬದಲಾವಣೆ ಮಾಡುವಂತೆ ನಿರ್ದೇಶನ ವಿದೆ.

ಈ ನಿರ್ದೇಶನವಿದ್ದರೂ ಸಹ ಕೆಲವೊಂದು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಷಯ ನಿರ್ವಾಹಕರು ಹಲವಾರು ವರ್ಷಗಳಿಂದ ಒಂದೇ ಕಡೆ ಕೆಲಸ ನಿರ್ವಹಿಸುತ್ತಿರುವುದಾಗಿ ಇತರ ಸಿಬ್ಬಂದಿಗಳಿಂದ/ ಸಂಘಟನೆಗಳಿಂದ ಹಲವಾರು ದೂರುಗಳು ಕೇಂದ್ರ ಕಚೇರಿಗೆ ಬಂದಿವೆ.

ಮುಂದುವರೆದು ಈ ಕುರಿತು ಪರಿಶೀಲಿಸಿದ ಸೂಕ್ತಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ವಿಭಾಗೀಯ ಕಚೇರಿ/ ಶಾಖೆ/ ಘಟಕ/ ಯುನಿಟ್‌ಗಳಲ್ಲಿ 03 ವರ್ಷಗಳಗಿಂತ ಹೆಚ್ಚಿನ ಅವಧಿಯಲ್ಲಿ ಒಂದೇ ಶಾಖೆ/ ಒಂದೇ ವಿಷಯ ಸಂಕಲನವನ್ನು ನಿರ್ವಹಿಸುತ್ತಿರುವ ವಿಷಯ ನಿರ್ವಾಹಕರನ್ನು ಹಾಗೂ ಇತರೇ ಸಿಬ್ಬಂದಿಯನ್ನು ಬದಲಾಯಿಸುವಂತೆ ಆದೇಶ ಹೊರಡಿಸಿದ್ದಾರೆ.

ಸೂಕ್ತಾಧಿಕಾರಿಗಳ ಆದೇಶದಂತೆ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ವಿಷಯ ನಿರ್ವಾಹಕರನ್ನು ಹಾಗೂ ಇತರೇ ಸಿಬ್ಬಂದಿಯನ್ನು ಕೂಡಲೇ ಬದಲಾಯಿಸಲು ಕ್ರಮವಹಿಸಿ, ಅನುಸರಣಾ ವರದಿಯನ್ನು ಈ ಕಚೇರಿಗೆ ಕೊಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಫೆ. 7ರಂದೆ ತಿಳಿಸಿದ್ದಾರೆ.

ಆದರೆ, ವಿಜಯಪುರ ವಿಭಾಗ ಸೇರಿದಂತೆ ಕೆಕೆಆರ್‌ಟಿಸಿ ನಿಗಮದ ಬಹುತೇಕ ಎಲ್ಲ ವಿಭಾಗಗಳಲ್ಲೂ ಈ ಬಗ್ಗೆ ಇನ್ನೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ. ಡಿಸಿಗಳು ಹೀಗೆ ನಡೆದುಕೊಳ್ಳುವುದಕ್ಕೆ ಏನಾದರೂ ಲಂಚದ ವಾಸನೆ ಬೀರುತ್ತಿದೆಯೇ ಎಂಬ ಅನುಮಾನವನ್ನು ನೌಕರರು ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಚಪ್ಪ ಅವರು ಸೂಕ್ತ ಕ್ರಮ ತೆಗೆದುಕೊಂಡು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಹೊರಡಿಸಿರುವ ಆದೇಶವನ್ನೇ ಕಡೆಗಣಿಸಿರುವ ಅಧಿಕಾರಿಗಳಿಗೆ ಕಾನೂನು ರೀತಿಯಲ್ಲಿ ಪಾಠ ಕಲಿಸಬೇಕು ಎಂಬುವುದು ನೌಕರರ ಮನವಿಯಾಗಿದೆ.

ಫೆಬ್ರವರಿ 07ರಂದೆ ಆದೇಶ ಮಾಡಿರುವ ಪ್ರತಿ.

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ