ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ಘಟಕ 2 ರಲ್ಲಿ ಸೆ.17ರ ಭಾನುವಾರವಾದ ಇಂದು 75 ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ವೇಳೆ ಪ್ರಭಾರಿ ಘಟಕ ವ್ಯವಸ್ಥಾಪಕ ರಾಜೇಂದ್ರ ಚಿಟ್ಟಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಜಾಮನ ಕಪಿಮುಷ್ಠಿಯಿಂದ ಸ್ವತಂತ್ರ ದೊರಕಿಸಿಕೊಡಲು ಹೋರಾಡಿದ ಮಹನಿಯರನ್ನು ಮರೆಯಬಾರದು ಎಂದರು.
ಇನ್ನು ಅವರ ಬಲಿದಾನದ ಫಲವಾಗಿ ಇಂದು ನಾವು ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ 13 ತಿಂಗಳ ನಂತರ ಸ್ವತಂತ್ರವಾಗಿದ್ದೇವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ರಾಜೇಂದ್ರ ಖತಗಾವ್, ಈಶ್ವರ ಪಾಟೀಲ, ಕಾಶಿನಾಥ, ಕಾರ್ಮಿಕ ಮುಖಂಡರಾದ ಬಸವರಾಜ ಚಾಮರೆಡ್ಡಿ, ಸೂರ್ಯಕಾಂತ ಟೈಗರ್, ರಾಹುಲ್ ಕಂಟೆ, ಜಗನ್ನಾಥ ಶಿವಯೋಗಿ, ಕವಿರಾಜ ಮೂಳೆ, ಸೂರ್ಯಕಾಂತ, ಕಿರಣ, ಆತ್ಮರಾಮ ಇತರರು ಇದ್ದರು.