KKRTC ಬೀದರ್: ಅಧಿಕಾರಿಗಳ ಕಿರುಕುಳಕ್ಕೆ ನೊಂದು ಬಸ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಚಾಲಕ ರಾಜು

ಬೀದರ್: ಅಧಿಕಾರಿಗಳ ಕಿರುಕುಳದಿಂದ ಮನನೊಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಬೀದರ್ ಘಟಕ-1ರ ಚಾಲಕ ಬಸ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಘಟಕದಲ್ಲಿ ರಾತ್ರಿ ನಡೆದಿದೆ.
ಬುಧವಾರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಬಸ್ ಚಾಲಕ ರಾಜು ಆಣದೂರು (59) ಬಸ್ ಒಳಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಮಾಣಿಕವಾಗಿ ಡ್ಯೂಟಿ ಮಾಡುತ್ತಿದ್ದ ಚಾಲಕ ರಾಜು ಅವರು ಡಿಪೋ ವ್ಯವಸ್ಥಾಪಕ ವಿಠಲ್ ಭೋವಿ ಅವರ ಬಳಿ ಹೋಗಿ ನಾಲ್ಕು ದಿನಗಳು ರಜೆ ಬೇಕು ನಮ್ಮ ಮಗಳ ಮನೆಗೆ ಹೋಗಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಡಿಎಂ ರಜೆ ಕೊಡದೆ ಡ್ಯೂಟಿಗೆ ಬರಬೇಕು ಇಲ್ಲದಿದ್ದರೆ ನಿನ್ನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೆದರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಾವು ಪ್ರಾಮಾಣಿಕವಾಗಿ ಡ್ಯೂಟಿ ಮಾಡುತ್ತಿದ್ದರೂ ಕೂಡ ಈ ರೀತಿ ಕಿರುಕುಳ ನೀಡುತ್ತಿದ್ದಾರಲ್ಲ. ನಮ್ಮ ರಜೆ ಕೊಡುವುದಕ್ಕೆ ಕಾಡುತ್ತಾರಲ್ಲ ಎಂದು ಮಾನಸಿಕವಾಗಿ ಮನನೊಂದು ಬಸ್‌ನಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಮೃತ ಚಾಲಕ ರಾಜು ಆಣದೂರು ಅವರು ಪತ್ನಿ, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಇನ್ನು ಮೂವರು ಪುತ್ರಿಯರಿಗೆ ವಿವಾಹವಾಗಿದ್ದು ಓರ್ವ ಪುತ್ರಿಯ ವಿವಾಹ ಆಗಿಲ್ಲ.

ಆತ್ಮಹತ್ಯೆಗೆ ಇಲಾಖೆಯ ನಿರ್ಲಕ್ಷ್ಯವೂ ಕಾರಣ: ಈ ನೌಕರ ಆತ್ಮಹತ್ಯೆಗೆ ಇಲಾಖೆಯ ನಿರ್ಲಕ್ಷ್ಯವೂ ಕಾರಣ ಎಂದು ನೌಕರರು ಆರೋಪಿಸಿದ್ದಾರೆ. ನೌಕರರು ಒತ್ತಡದಲ್ಲಿ ಕೆಲಸಮಾಡುತ್ತಿದ್ದು, ನಮಗೆ ಹಲವು ರೀತಿಯ ಸೇವಾ ಸಮಸ್ಯೆಗಳು ಇವೆ. ಅದನ್ನು ಬಗೆಹರಿಸಬೇಕಾದ ಅಧಿಕಾರಿಗಳು ಲಂಚಕ್ಕೆ ಅಪಾಪಿಸುತ್ತಿರುತ್ತಾರೆ. ಇದರ ನಡುವೆ ನಮ್ಮ ಸಂಸಾರ ಮತ್ತು ಮಕ್ಕಳ ಓದು, ವಯಸ್ಸಾದ ಅಪ್ಪ-ಅಮ್ಮಂದಿರ ಆರೋಗ್ಯ ವೆಚ್ಚವೆಲ್ಲವನ್ನು ಭರಿಸಬೇಕು.
ಕೊಡುತ್ತಿರುವ ವೇತನ ಸಂಸಾರ ಸಾಗಿಸುವುದಕ್ಕೆ ಕಷ್ಟವಾಗುತ್ತಿದೆ. ಇದರ ನಡುವೆ ಲಂಚ ಕೊಟ್ಟು ಉಳಿದವುಗಳಿಗೆ ಹಣಹೊಂದಿಸಬೇಕು ಎಂದರೆ ಹೇಗೆ ಸಾಧ್ಯ? ಇದರಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿರುವ ನೌಕರರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ನೌಕರರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಅಧಿಕಾರಿಗಳ ನಿರಂತರ ನಿರ್ಲಕ್ಷ್ಯ, ಕಿರುಕುಳದಿಂದ ಮಾನಸಿಕ ಹಿಂಸೆ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಸರ್ಕಾರ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಮತ್ತೆ 2024 ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಮಾಡದೆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುತ್ತಿರುವುದು ಕೂಡ ಇಂಥ ದುರಂತಕ್ಕೆ ಕಾರಣವಾಗಿವೆ ಎಂದು ಸಹೋದ್ಯೋಗಿಗಳು ಆರೋಪಿಸಿದ್ದಾರೆ.
Related


You Might Also Like
ಎಂಎಸ್ಪಿ ಬೆಂಬಲ ಬೆಲೆ ಘೋಷಿಸಿ ರೈತರ ಸಂಕಷ್ಟದಿಂದ ಪಾರು ಮಾಡಿ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ಗೆ ಮನವಿ
ಮೈಸೂರು: ಸುತ್ತೂರಿನಿಂದ ವರುಣ ಮೂಲಕ ಮೈಸೂರಿಗೆ ಬರುತ್ತಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ವರುಣ ಬಳಿ ನಿಲ್ಲಿಸಿ ಎಂಎಸ್ಪಿ ಬೆಂಬಲ ಬೆಲೆ ಘೋಷಣೆ...
BMTC ಸಂಸ್ಥೆಯಲ್ಲಿ ಪ್ರಸ್ತುತ 27,595 ನೌಕರರಿಗೆ ಹಲವು ಕಲ್ಯಾಣ ಯೋಜನೆಗಳು ಜಾರಿ: ಎಂಡಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸ್ವತಂತ್ರ ಸಂಸ್ಥೆಯಾಗಿ 27 ವರ್ಷಗಳನ್ನು ಪೂರೈಸಿದ್ದು, ಪ್ರಸ್ತುತ ರಾಷ್ಟ್ರದಲ್ಲಿಯೇ ಒಂದು ಮಾದರಿ ನಗರ ಸಾರಿಗೆ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ ವ್ಯವಸ್ಥಾಪಕ ನಿರ್ದೇಶಕ...
ಯಾವುದೇ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿಲ್ಲ ನಮ್ಮ ಚಾಲಕನ ಅತಿ ವೇಗ, ಅಜಾಗರೂಕತೆಯೇ ಕಾರಣ: ಯಾವುದೇ ತನಿಖೆ ನಡೆಸದೇ ತಪ್ಪೊಪ್ಪಿಕೊಂಡ KSRTC
ಅದೇ ನಿಮ್ಮ ಮೇಲೆ ಯಾವುದೇ ತನಿಖೆ ಮಾಡದೆ ಈ ರೀತಿ ಆರೋಪ ಹೊರಿಸಿದರೆ ಒಪ್ಪಿಕೊಳ್ಳುತ್ತೀರಾ ಎಂಡಿ ಅಕ್ರಮ್ ಪಾಷ ಅವರೆ? ಬೆಂಗಳೂರು: ತಲಪಾಡಿಯಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ...
KSRTC: ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಸಾರಿಗೆ ನೌಕರರ ಸಭೆ ಸ್ನ್ಯಾಕ್ಸ್, ಒಂದು ಕಪ್ಪು ಟೀ ಅಥವಾ ಕಾಫಿಗಷ್ಟೇ ಸೀಮಿತ
ಇಂದು ಜಂಟಿ ಕ್ರಿಯಾ ಸಮಿತಿ- ಸಾರಿಗೆ ಅಧಿಕಾರಿಗಳ ನಡುವೆ ನಡೆದ ರಾಜೀ ಸಂಧಾನ ಸಭೆ ವಿಫಲ ಮತ್ತೆ ಸೆ.26ಕ್ಕೆ ಮುಂದೂಡಿಕೆ ಬೆಂಗಳೂರು: ಕಾರ್ಮಿಕ ಇಲಾಖೆಯ ಆಯುಕ್ತರು ಇಂದು...
ರಾಜಣ್ಣ ಮನೆಯಲ್ಲಿ ಗೌರಿಸುತನ ಸಂಭ್ರಮ – ರಾಜಧಾನಿಯಲ್ಲಿ 2,19,153 ಗಣಪನ ವಿಸರ್ಜನೆ
ಬೆಂಗಳೂರು: ಕುಮಾರಸ್ವಾಮಿ ಬಡಾವಣೆಯ 2ನೇ ಹಂತ 8 ನೇ ಮುಖ್ಯರಸ್ತೆ 12ನೇ ಅಡ್ಡ ರಸ್ತೆಯಲ್ಲಿರುವ ರಾಜಣ್ಣ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಗಣೇಶ ಮೂರ್ತಿಯನ್ನು...
KKRTC: ಲಾರಿಗೆ ಡಿಕ್ಕಿ ಹೊಡೆಯುವುದ ತಪ್ಪಿಸಲು ಹೋಗಿ ರಸ್ತೆಬದಿ ಕಂದಕಕ್ಕೆ ನುಗ್ಗಿದ ಬಸ್- ತಪ್ಪಿದ ಭಾರಿ ಅನಾಹುತ
ವಿಭಾಗೀಯ ನಿಯಂತ್ರಣಾಧಿಕಾರಿಗಳ ಆದೇಶ ಪಾಲಿಸದ ಬೀದರ್ ಘಟಕ-1ರ ಡಿಎಂ ಬೀದರ್: ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ...
BMTC: ಕರ್ತವ್ಯ ನಿರತ ಚಾಲಕರು ಮೊಬೈಲ್ ಬಳಸಿದರೆ ಗಂಭೀರ ಕೆಂಪು ಗುರುತಿನ ಪ್ರಕರಣ ದಾಖಲಿಸಿ- ತನಿಖಾ ಸಿಬ್ಬಂದಿಗೆ ಎಂಡಿ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲನಾ ಸಿಬ್ಬಂದಿಗಳು ಮಾರ್ಗದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೊಬೈಲ್ ಮತ್ತು ಡಿಜಿಟಲ್ ಗ್ಯಾಜೆಟ್ಸ್ (Bluetooth, Earphone ಇತ್ಯಾದಿಗಳನ್ನು ಬಳಸಿದರೆ ಅವರ...
ಕೆಐಎಡಿಬಿ: ಭೂ ಸ್ವಾಧೀನ ಕುರಿತು ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ್ ರೈತರ ನಿಯೋಗದ ಜತೆ ಚರ್ಚೆ- ರಾಮಲಿಂಗಾರೆಡ್ಡಿ
ಆನೇಕಲ್: ತಾಲೂಕಿನ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರ ನಿಯೋಗದ ಜತೆ ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ ಅವರನ್ನು ಭೇಟಿಯಾಗಿ ಪ್ರಸ್ತುತ...
KKRTC ನೌಕರ ನಿಧನ ಪ್ರಕರಣ: ಸಹೋದರನಿಗೆ ಅನುಕಂಪದ ಉದ್ಯೋಗ ಪಡೆಯುವ ಹಕ್ಕಿದೆ- ಹೈಕೋರ್ಟ್ ತೀರ್ಪು
ಬೆಂಗಳೂರು: ಸರ್ಕಾರಿ ನೌಕರನ ಪತ್ನಿ, ಪತಿಗಿಂತ ಮೊದಲೇ ನಿಧನರಾಗಿ ಆಕೆಗೆ ಮಕ್ಕಳಿರಲಿಲ್ಲದಿದ್ದಾಗ ಹಾಗೂ ಆನಂತರದಲ್ಲಿ ಸರ್ಕಾರಿ ನೌಕರನೂ ನಿಧನರಾದಾಗ ಅಂತಹ ಪ್ರಕರಣಗಳಲ್ಲಿ ನೌಕರನ ಸಹೋದರರಿಗೆ ಅನುಕಂಪದ ಆಧಾರದಲ್ಲಿ...