ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಕೊಪ್ಪಳ ವಿಭಾಗದ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 19 ತಾಂತ್ರಿಕ ಸಹಾಯಕರಿಗೆ ಮುಂಬಡ್ತಿ ನೀಡಿ ಸ್ಥಳ ನಿಯೋಜನೆಯೊಂದಿಗೆ ವರ್ಗಾವಣೆ ಮಾಡಿ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇದೇ ಜೂನ್ 24ರಂದು ಆದೇಶ ಹೊರಡಿಸಿರುವ ಡಿಸಿ ಅವರು, ತಾಂತ್ರಿಕ ಸಹಾಯಕರಾಗಿದ್ದ 19 ಮಂದಿಯನ್ನು ಕುಶಲಕರ್ಮಿ (ದರ್ಜೆ-03ರ) ಹುದ್ದೆಗೆ ಸ್ಥಳೀಯ ವೃಂದದಡಿಯಲ್ಲಿ ಮುಂಬಡ್ತಿ ನೀಡಲು ಉಲ್ಲೇಖ-2 ವಿಭಾಗ ಮುಂಬಡ್ತಿ ಸಮಿತಿ ಸಭೆ ಶಿಫಾರಸು ಮಾಡಿತ್ತು.
ಇದರನ್ವಯ ತಾಂತ್ರಿಕ ಸಹಾಯಕರವರಿಗೆ ಸಹಾಯಕ ಕುಶಲಕರ್ಮಿ ಹುದ್ದೆಗೆ ಮುಂಬಡ್ತಿ ನೀಡಲಾಗಿದ್ದು, ಹೀಗಾಗಿ ಕಾರ್ಯನಿರ್ವಹಣೆ (ಅಫಿಷಿಯೇಟಿಂಗ್) ಆಧಾರದ ಮೇಲೆ ಕಾರ್ಯನಿರ್ವಹಿಸಲು ಆದೇಶಿಸಿದ್ದು, ಈ 19 ಮಂದಿಗೂ ವೃತ್ತಿ ನಿಗದಿಪಡಿಸಿ, ಅದರಂತೆ ಸ್ಥಳ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮುಂಬಡ್ತಿ ಪಡೆದವರ ವಿವರ: ಚಂದ್ರಶೇಖರ ಜೋತೆಣ್ಣವರ Auto Mechanic ಯಲಬುರ್ಗಾದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು ಮುಂಬಡ್ತಿ ನೀಡಿ ಅಲ್ಲೇ ಉಳಿಸಿಕೊಳ್ಳಲಾಗಿದೆ. ಇನ್ನು ಮಂಜುನಾಥ ಪತ್ತಾರ್ Auto Mechanic ವಿಭಾಗೀಯ ಕಾರ್ಯಗಾರ. ದಯಾನಂದ ದೇವಾಂಗಮಠ ಮತ್ತು ಈಶಪ್ಪ ದಂಡಮ್ಮನವರ್ Auto Mechanic ಕುಕನೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮುಂಬಡ್ತಿ ನೀಡಿ ಅಲ್ಲೇ ಉಳಿಸಿಕೊಳ್ಳಲಾಗಿದೆ.
ವಿಜಯಕುಮಾರ ಹುದ್ದಾರ್ Auto Mechanic ಗಂಗಾವತಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು ಮುಂಬಡ್ತಿ ನೀಡಿ ಅಲ್ಲೇ ಉಳಿಸಿಕೊಳ್ಳಲಾಗಿದೆ. ಶಿವಕುಮಾರ ನೂಲ್ವಿ Auto Mechanic ಯಲಬುರ್ಗಾದಿಂದ ಗಂಗಾವತಿಗೆ ವರ್ಗಾವಣೆ ಮಾಡಲಾಗಿದೆ. ಸಂಗಪ್ಪ (ಪ.ಪಂ) (ಸ್ವಂತ ಅರ್ಹತೆ) Auto Welder ವಿಭಾಗೀಯ ಕಾರ್ಯಗಾರದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು ಮುಂಬಡ್ತಿ ನೀಡಿ ಅಲ್ಲೇ ಉಳಿಸಿಕೊಳ್ಳಲಾಗಿದೆ.
ಬಾಳನಗೌಡ (ಪ.ಪಂ) (ಸ್ವಂತ ಅರ್ಹತೆ) Auto Mechanic ಕುಷ್ಠಗಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು ಮುಂಬಡ್ತಿ ನೀಡಿ ಅಲ್ಲೇ ಉಳಿಸಿಕೊಳ್ಳಲಾಗಿದೆ. ಶರಣಬಸಪ್ಪ ಹೊಳೆ Auto Mechanic ವಿಭಾಗೀಯ ಕಾರ್ಯಗಾರದಿಂದ ಗಂಗಾವತಿಗೆ ವರ್ಗಾವಣೆ ಮಾಡಲಾಗಿದೆ. ಶರಣಪ್ಪ ಭೀಮಪ್ಪ ಪೂಜಾರ (ಪ.ಪಂ) (ಸ್ವಂತ ಅರ್ಹತೆ) Auto Electrician ವಿಭಾಗೀಯ ಕಾರ್ಯಗಾರದಿಂದ ಯಲಬುರ್ಗಾಕ್ಕೆ ವರ್ಗಾವಣೆ ಮಾಡಲಾಗಿದೆ.
ವೀರಣ್ಣ ಶ್ರೀಶೈಲಪ್ಪ ಅಂಗಡಿ Auto Welder ಯಲಬುರ್ಗಾದಿಂದ ವಿಭಾಗೀಯ ಕಾರ್ಯಗಾರಕ್ಕೂ ಹಾಗೂ ಶ್ರೀನಿಧಿ ಕೆ. Auto Mechanic ವಿಭಾಗೀಯ ಕಾರ್ಯಗಾರದಿಂದ ಗಂಗಾವತಿಗೆ ವರ್ಗಾವಣೆ ಮಾಡಲಾಗಿದೆ. ಅದರಂತೆ ಸಾಲ್ಮನಿ ಲಕ್ಷ್ಮಣ Auto Welder ಅವರನ್ನು ಕೊಪ್ಪಳದಿಂದ ಗಂಗಾವತಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪರಶುರಾಮ (ಪ.ಜಾ) (ಕೆಳಹಂತದಿಂದ) Auto Mechanic ಕುಷ್ಠಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮುಂಬಡ್ತಿ ನೀಡಿ ಅಲ್ಲೇ ಉಳಿಸಿಕೊಳ್ಳಲಾಗಿದೆ. ಗಂಗಾಧರ ನಾಯ್ (ಪ.ಜಾ) (ಕೆಳಹಂತದಿಂದ) Auto Mechanic ಯಲಬುರ್ಗಾದಿಂದ ಗಂಗಾವತಿಗೆ ವರ್ಗಾವಣೆ ಮಾಡಲಾಗಿದೆ.
ನಾಗೇಂದ್ರ ನಾಯ್ಕ್ ಎಲ್.ಎಂ.(ಪ.ಜಾ) (ಕೆಳಹಂತದಿಂದ) Auto Welder ಯಲಬುರ್ಗಾದಿಂದ ಕುಷ್ಠಗಿಗೆ ವರ್ಗಾವಣೆ ಮಾಡಲಾಗಿದ್ದು, ಗೋಪಾಲ (ಪ.ಜಾ) (ಕೆಳಹಂತದಿಂದ) Auto Electrician ಕೊಪ್ಪಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು ಮುಂಬಡ್ತಿ ನೀಡಿ ಅಲ್ಲೇ ಉಳಿಸಿಕೊಳ್ಳಲಾಗಿದೆ.
ಪವಾಡೆಪ್ಪ ದೊಡ್ಡಮನಿ (ಪ.ಜಾ) (ಕೆಳಹಂತದಿಂದ) Auto Mechinist ಕೊಪ್ಪಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು ಮುಂಬಡ್ತಿ ನೀಡಿ ಅಲ್ಲೇ ಉಳಿಸಿಕೊಳ್ಳಲಾಗಿದೆ. ಕೌಶಲ್ಯ ಗಿರಿವಾಳ (ಪ.ಜಾ) (ಕೆಳಹಂತದಿಂದ) Auto Painter ಅವರನ್ನು ಕೊಪ್ಪಳದಿಂದ ಯಲಬುರ್ಗಾಕ್ಕೆ ಮುಂಬಡ್ತಿಯೊಂದಿಗೆ ವರ್ಗಾವಣೆ ಮಾಡಿ ಡಿಸಿ ಆದೇಶ ಹೊರಡಿಸಿದ್ದಾರೆ.