NEWSನಮ್ಮಜಿಲ್ಲೆನಮ್ಮರಾಜ್ಯ

KKRTC ರಾಯಚೂರು: ಮುಷ್ಕರ ಬೆಂಬಲಿಸಿದ ಆರೋಪ- ದೇವದುರ್ಗ ಘಟಕ ಚಾಲಕನಿಗೆ ಮೆಮೋ ಕೊಟ್ಟ ಡಿಸಿ

ವಿಜಯಪಥ ಸಮಗ್ರ ಸುದ್ದಿ

ರಾಯಚೂರು: ಕಾನೂನು ಬಾಹಿರ ಮುಷ್ಕರದಲ್ಲಿ ಭಾಗವಹಿಸಿ ಕಾನೂನು ನಿಯಮಗಳು ಹಾಗೂ ನಿಗಮದ ಶಿಸ್ತು ಮತ್ತು ನಡೆತೆ ನಿಯಮಗಳ ಉಲ್ಲಂಘಿಸಿದ್ದೀರಿ ಎಂದು ದೇವದುರ್ಗ ಘಟಕ ಚಾಲಕ ಪ್ರಭು ಎಂಬುವರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಯಚೂರು ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಕಾರಣ ಕೇಳುವ ಸೂಚನಾ ಪತ್ರ ಕೊಟ್ಟಿದ್ದಾರೆ.

ಕರ್ನಾಟಕ ರಸ್ತೆ ಸಾರಿಗೆ ನಿಗಮವನ್ನು ಕೈಗಾರಿಕ ವಿವಾದಗಳ ಅಧಿನಿಯಮ 1947 ರ ಕಲಂ 2(n)(vi) ರ ಮೇರೆಗೆ ಸಾರ್ವಜನಿಕ ಉಪಯುಕ್ತ ಸೇವೆ ಎಂದು ಘೋಷಿಸಲಾಗಿದ್ದು, ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅವರು 16-07-2025 ರಂದು ನೀಡಿದ ಮುಷ್ಕರ ನೋಟಿಸ್ ಕುರಿತಾಗಿ ಕಾರ್ಮಿಕ ಇಲಾಖೆ ಆಯುಕ್ತರ ಸಮಕ್ಷಮ ರಾಜೀ ಸಂಧಾನ ಮಾತುಕತೆ ಚಾಲ್ತಿಯಲ್ಲಿ ಇರುವುದರಿಂದ 5-08-2025 ರಿಂದ ನಡೆಸುತ್ತಿರುವ ಮುಷ್ಕರ ಕಾನೂನುಬಾಹಿರವಾಗಿದೆ.

ಅಲ್ಲದೆ ನಿಗಮವು ಸಲ್ಲಿಸುತ್ತಿರುವ ಸೇವೆಯನ್ನು ಕರ್ನಾಟಕ ಅಗತ್ಯ ವಸ್ತುಗಳ ಸೇವೆಗಳ ನಿರ್ವಹಣೆ ಕಾಯ್ದೆಯ ಕಲಂ 3(1) ರಡಿ ಅಗತ್ಯ ಸೇವೆ ಎಂದು ಘೋಷಿಸಿ ಮುಷ್ಕರವನ್ನು ನಿಷೇಧಿಸಲಾಗಿದೆ.

ಇದರ ಜತೆಗೆ ಆದರಣೀಯ ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಧಾನ ಪೀಠವು WP 23602/2025 ಸುನಿಲ್ ಜೆ & ಇತರರು ಮತ್ತು ಕರ್ನಾಟಕ ಸರ್ಕಾರ ಹಾಗೂ ಇತರರು ಪ್ರಕರಣದಲ್ಲಿ 4-08-2025 ರ ಆದೇಶದಡಿ, ಉದ್ದೇಶಿತ ಮುಷ್ಕರವನ್ನು ಆ.5ರವರೆಗೆ ಪ್ರತಿಬಂಧಿಸಿ ಆದೇಶಿಸಿದೆ.

ಆದಾಗ್ಯೂ, ನೀವು 5-08-2025 ರಂದು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿ, ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟ ಮುಷ್ಕರದಲ್ಲಿ ‘ಕಾನೂನು ಬಾಹಿರ ಮುಷ್ಕರ’ ಎಂದು ತಿಳಿದೂ ಭಾಗವಹಿಸಿ, ಕಾನೂನಿನ ನಿಯಮಗಳು ಹಾಗೂ ನಿಗಮದ ಶಿಸ್ತು ಮತ್ತು ನಡತೆ ನಿಯಮಾವಳಿಗಳನ್ನು ಉಲ್ಲಂಘಿಸಿ, ನಿಗಮದ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡಿರುತ್ತೀರಿ.

ಈ ಕುರಿತಾಗಿ, ನಿಮ್ಮ ಮೇಲೆ ‘ಏಕೆ ಕಾನೂನು ಮತ್ತು ನಿಗಮದ ನಿಯಮಗಳಡಿ ಕ್ರಮ ಜರುಗಿಸಬಾರದು ಎಂಬುದಕ್ಕೆ ನಿಮ್ಮ ಸಮಜಾಯಿಷಿ, ಏನಾದರೂ ಇದ್ದಲ್ಲಿ 24 ಗಂಟೆಗಳೊಳಗೆ ಸಲ್ಲಿಸುವುದು ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನು ಇಲ್ಲವೆಂದು ಪರಿಭಾವಿಸಿ, ಕ್ರಮ ಜರುಗಿಸಲಾಗುವುದು. ಅಲ್ಲದೇ ಈ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ನಿನ್ನೆ ಕೊಟ್ಟಿರುವ ಸೂಚನಾ ಪ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ನೌಕರರಲ್ಲ ಸಂಘಟನೆಗಳು ಕರೆ ನೀಡುವ ಮುಷ್ಕರಕ್ಕೆ ನೌಕರರು ಬೆಂಬಲ ನೀಡುವುದು ಅಧಿಕಾರಿಗಳು ಈ ನೌಕರರಿಗೆ ಈರೀತಿ ಆರೋಪ ಮಾಡಿ ಬಳಿಕ ಸಂಸ್ಥೆಯ ನಿಯಾಮವಳಿ ಹೆಸರಿನಲ್ಲಿ ಅಮಾನತು, ವಜಾ, ವರ್ಗಾವಣೆ ಜತೆಗೆ ಪೊಲೀಸ್‌ ಕೇಸ್‌ ಹಾಕಿ ಅಲೆಸುವುದು. ಇಲ್ಲಿ ಈ ರೀತಿ ನಡೆಯುವ ಮುಷ್ಕರದಿಂದ ಇದೇ ಡಿಸಿ, ಡಿಎಂಗಳಿಗೂ ಆರ್ಥಿಕ ಲಾಭ ಆಗುತ್ತದೆ ಆದರೂ ನೌಕರರ ಮೇಲೆ ಇವರು ಕ್ರಮ ತೆಗೆದುಕೊಳ್ಳುತ್ತಾರೆ.

ಇನ್ನು ಮುಷ್ಕರಕ್ಕೆ ಕರೆ ನೀಡುವ ಈ ಸಂಘಟನೆಗಳು ಡಿಪೋಗಳ ಗೇಟ್‌ನಲ್ಲಿ ನಿಂತು ಚಾಲನಾ ಮತ್ತ ತಾಂತ್ರಿಕ ಸಿಬ್ಬಂದಿಗಳನ್ನು ಮಾತ್ರ ಕರೆಯುತ್ತಾರೆ. ಏಕೆ ಡಿಎಂಗಳಿಗೆ ವೇತನ ಹೆಚ್ಚಳವಾಗುವುದಿಲ್ಲವೇ ಅವರನ್ನು ಏಕೆ ಕರೆಯುವುದಿಲ್ಲ. ಅದಕ್ಕೆ ಇವರ ಬಳಿ ಉತ್ತರವೂ ಇದೆ ಅದೇ ಅಧಿಕಾರಿಗಳು ಕಾರ್ಮಿಕರ ಕಾಯ್ದೆಯಡಿ ಬರುವುದಿಲ್ಲ ಅದಕ್ಕೆ ಅವರನ್ನು ಕರೆಯುವುದಿಲ್ಲ ಎಂದು ಹೇಳುತ್ತಾರೆ.

ಇನ್ನಾದರೂ ಇದನ್ನು ಬಿಟ್ಟು ನಾವು ಸಂಸ್ಥೆಯ ನೌಕರರು ಎಂದು ಪ್ರಯೊಬ್ಬರೂ ಈ ಒಂದು ಹೋರಾಟಕ್ಕೆ ನಿಲ್ಲಬೇಕು. ಆಗ ಮಾತ್ರ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಇಲ್ಲದಿದ್ದರೆ ಈ ರೀತಿಯ ಸರ್ಕಾರ ಕೊಡೊಲ್ಲ ಅನ್ನೋದು ಇತ್ತ ಸಂಸ್ಥೆಯ ನೌಕರರಲ್ಲದ ಸಂಘಟನೆಗಳು ಬಂದು ಬರಿ ಚಾಲನಾ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಹೋರಾಟ ಮಾಡೋದು ತಪ್ಪುವುದಿಲ್ಲ.

Megha
the authorMegha

Leave a Reply

error: Content is protected !!