CrimeNEWSನಮ್ಮಜಿಲ್ಲೆನಮ್ಮರಾಜ್ಯ

KKRTC: ವಿಜಯಪುರ ವಿಭಾಗದ ಡಿಸಿ ಲಂಚವತಾರ – ಲೋಕಾಯುಕ್ತಕ್ಕೆ ದೂರು

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜೆ.ಮಹಮದ್ ಫೈಜ್ ವಿಜಯಪುರ ವಿಭಾಗಕ್ಕೆ ಬಂದಾಗಿನಿಂದ ವಿಭಾಗದ ಆಡಳಿತಾಧಿಕಾರಿ ಸುರೇಶ್ ಎನ್. ಹಜೇರಿ ಮತ್ತು ಏಜೆಂಟರ್‌ಗಳ ಮೂಲಕ ವಿಭಾಗದಲ್ಲಿ ಸತತವಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಇವರಿಂದ ಆಡಳಿತ ದುರುಪಯೋಗ, ಸ್ವಜನ ಪಕ್ಷಪಾತ ಮತ್ತು ಲಂಚಾವತಾರ ಹೆಚ್ಚಾಗಿದೆ ಎಂದು ನೌಕರರು ಆರೋಪಿಸಿ ಬೆಂಗಳೂರಿನ ಕೇಂದ್ರ ಕಚೇರಿಗೂ ಸಹ ದೂರು ನೀಡಿದ್ದಾರೆ. ಫೈಜ್ ವಿಭಾಗಕ್ಕೆ ಬಂದಾಗಿನಿಂದ ವಿಭಾಗದ ಆಡಳಿತ ಅಧಿಕಾರಿ ಸುರೇಶ ಹಜೇರಿ ಕೂಡ ಇವರೊಂದಿಗೆ ಶಾಮೀಲಾಗಿ ನೌಕರರಿಂದ ನೇರವಾಗಿ ಲಂಚ ಪಡೆಯುತ್ತಾರೆ ಎಂಬ ಆರೋಪವಿದೆ.

ಅಲ್ಲದೆ ವಿಭಾಗದಲ್ಲಿ ಸಂಸ್ಥೆಯ ನಿಯಮಗಳನ್ನು ಗಾಳಿಗೆ ತೂರಿ ಲಂಚಕೊಟ್ಟವರಿಗೆ ಪದೋನ್ನತಿಗಳನ್ನು ನೀಡಿದ್ದಾರೆ. ಕ್ಷುಲ್ಲಕ ಪ್ರಕರಣಗಳಲ್ಲಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ನೌಕರರನ್ನು ಸೇವೆಯಿಂದ ವಜಾ ಮತ್ತು ಅಮಾನತು ಮಾಡಿದ್ದಾರೆ. ಸಂಸ್ಥೆಯ ವಾಹನವನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದು, ತಮ್ಮ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಾದ ಮಂಡಿಸಲು ಬರುವ ವಕೀಲರಿಗೆ ಕಲಬುರ್ಗಿ ವಿಮಾನ ನಿಲ್ದಾಣದಿಂದ ಉಚ್ಚ ನ್ಯಾಯಾಲಯದವರಿಗೆ ಕರೆದುಕೊಂಡು ಹೋಗುವ ಮೂಲಕ ಸಂಸ್ಥೆ ವಾಹನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ.

ಇನ್ನು ವಿಭಾಗದಲ್ಲಿ ಲಂಚ ನೀಡಿದವರಿಗೆ ಅವರು ಕೆಲಸ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಪದೋನ್ನತಿ ನೀಡಿದ್ದು, ಲಂಚಕೊಡದ ನೌಕರರನ್ನು ಪದೋನ್ನತಿ ನೀಡಿ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಅವರಿಂದ ಮತ್ತೆ ಹಣ ಪಡೆದು ಆದೇಶಗಳನ್ನು ತಿದ್ದುಪಡಿ ಮಾಡಿ ಆ ನೌಕರರು ಕೇಳಿದ ಸ್ಥಳಗಳಿಗೆ ನಿಯೋಜನೆ ಮಾಡಿದ್ದಾರೆ.

ವಿಜಯಪುರ ವಿಭಾಗದಲ್ಲಿ ಸುತ್ತೋಲೆ ಸಂಖ್ಯೆ 1491 ರನ್ವಯ ಪರ್ಯಾಯ ಹುದ್ದೆಯಲ್ಲಿ ಕೆಲಸ ನೀರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅವರು ತಂದುಕೊಟ್ಟ ವೈದ್ಯಕಿಯ ಪ್ರಮಾಣ ಪತ್ರಗಳ ಆಧಾರದ ಮೇಲೆ ಆಡಳಿತ ಅಧಿಕಾರಿಗಳ ಸುರೇಶ ಎನ್.ಹಜೇರಿ ಮತ್ತು ಇನ್ನಿತರ ಏಜೆಂಟರ್‌ಗಳ ಮುಖಾಂತರ ಹಣ ಪಡೆದುಕೊಂಡು ಅವರಿಗೆ ಆದೇಶ ಪತ್ರಗಳನ್ನು ನೀಡಿದ್ದಾರೆ.

ಲಂಚ ನೀಡದೇ ಇರುವ ಸಿಬ್ಬಂದಿಗಳಿಗೆ ಎರಡನೆಯ ಅಭಿಪ್ರಾಯ ತರಲು ಕಳುಹಿಸಿರುತ್ತಾರೆ. ವಿಜಯಪುರ ವಿಭಾಗದ ಆಡಳಿತ ಅಧಿಕಾರಿಗಳ ಹಜೇರಿ ಹಾಗೂ ಇನ್ನೂಳಿದ ಏಜೆಂಟ್ರುಗಳ ಮುಖಾಂತರ ನೌಕರರಿಂದ ಹಣ ಪಡೆದುಕೊಂಡು ರಜೆ ಮಂಜೂರಾತಿ ಆದೇಶ ಮಾಡಿಕೊಟ್ಟಿದ್ದಾರೆ. ಹಣ ನೀಡದೆ ಇರುವ ಸಿಬ್ಬಂದಿಗಳಿಗೆ ದಂಡವನ್ನು ವಿಧಿಸಿದ್ದಾರೆ.ಇನ್ನು ಸ್ತ್ರೀಶಕ್ತಿ ಯೋಜನೆಯ ಪ್ರಕರಣಗಳಲ್ಲಿ ಕಡ್ಡಾಯವಾಗಿ ಅಮಾನತು ಮಾಡಬೇಕೆಂಬ ಆದೇಶವಿದೆ. ಆದರೆ ಇಂಡಿ ಘಟಕದ ನಿರ್ವಾಹಕರನ್ನು ಅಮಾನತು ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಬಿ.ಎನ್. ಬಿರಾದಾರ್ ಚಾಲಕ ಕಂ ನಿರ್ವಾಹಕ ಬಿಲ್ಲೆ ಸಂಖ್ಯೆ 2490 ಮುದ್ದೇಬಿಹಾಳ ಘಟಕ ಇವರ ಗೈರು ಹಾಜರಾತಿ ಪ್ರಕರಣದಲ್ಲಿ ರಜೆ ಮಂಜೂರು ಮಾಡಲು ವಿಭಾಗ ನಿಯಂತ್ರಣಧಿಕಾರಿ ಅವರಿಗೆ 15 ಸಾವಿರ ರೂ.ಗಳನ್ನು ಮತ್ತು ಈ ಪ್ರಕರಣವನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಬಳಿ ಕಡತವನ್ನು ತೆಗೆದುಕೊಂಡು ಹೋಗಿ ಇತ್ಯರ್ಥ ಪಡಿಸಲು 2 ಸಾವಿರ ರೂ.ಗಳನ್ನು ಕೊಡಬೇಕೆಂದು ಆಡಳಿತ ಅಧಿಕಾರಿ ಸುರೇಶ್ ಎನ್ ಹಜೇರಿ ಮಾತನಾಡಿರುವ ಆಡಿಯೋ ರೆಕಾರ್ಡಿಂಗ್ ಕೂಡ ಇದೆ.

ಈ ಆಡಿಯೋ ಸಹಿತ ದೂರು ನೀಡಿದ್ದು, ದೂರಿನೊಂದಿಗೆ ನ್ಯಾಯಾ ಒದಗಿಸಿಕೊಡಲು ಬಿ.ಎನ್. ಬಿರಾದಾರ್ ಚಾಲಕ ಕಂ ನಿರ್ವಾಹಕ ಮುದ್ದೇಬಿಹಾಳ್ ಘಟಕ ಇವರು ನಿಗಮದ ಕೇಂದ್ರ ಕಚೇರಿ ಕಲಬುರ್ಗಿಯ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಆನಂದ ಭದ್ರಕಳ್ಳಿ ಅವರಿಗೆ ದೂರು ಸಲ್ಲಿಸಿದ್ದಾರೆ.

ಈ ಭ್ರಷ್ಟಾಚಾರದ ಪ್ರಕರಣದಲ್ಲಿ ತನಿಖೆ ಮಾಡಿ ಆಡಳಿತ ಅಧಿಕಾರಿ ಸುರೇಶ್ ಎನ್.ಹಜೇರಿ ಅವರು ಧ್ವನಿ ಮುದ್ರಿತ ರೆಕಾರ್ಡಿಂಗ್‌ನಲ್ಲಿ ನಾನು ರಜೆ ಮಂಜೂರು ಮಾಡುವ ಕುರಿತು ಹಣ ಕೇಳಿದ್ದನ್ನು ರೆಕಾರ್ಡಿಂಗ್ ಇದೆ. ಆದರೆ ರೆಕಾರ್ಡಿಂಗ್‌ನಲ್ಲಿ ನಾನು ಸ್ವಲ್ಪ ಮಂಜುರಾತಿ ಬಗ್ಗೆ ಮಾತನಾಡಿದ್ದು ಇದ್ದು, ಆದರೆ ಹಣ ಕೇಳಿದ ಬಗ್ಗೆ ನಾನು ಮಾತನಾಡಿಲ್ಲ. ಬಿ.ಎನ್‌.ಬಿರಾದಾರ ಚಾಲಕ ಅವರು ನನ್ನ ಧ್ವನಿಯನ್ನು ತಿರುಚಿ ಇಲ್ಲಸಲ್ಲದ ಧ್ವನಿಯನ್ನು ಸೃಷ್ಟಿ ಮಾಡಿದ್ದಾರೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ಈ ವಿಜಯಪುರ ವಿಭಾಗದ ಆಡಳಿತ ಅಧಿಕಾರಿ ಸುರೇಶ್ ಎನ್. ಹಜೇರಿ ಅವರನ್ನು ಅವರ ಹೇಳಿಕೆಯ ಆಧಾರದ ಮೇಲೆ ಸೇವೆಯಿಂದ ಅಮಾನತು ಮಾಡಿದ್ದಾರೆ. ಈ ಭ್ರಷ್ಟಾಚಾರದ ಪ್ರಕರಣದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಫೈಜ್ ಅವರನ್ನು ಶತಾಯಗತಾಯ ಪ್ರಯತ್ನ ಮಾಡಿ ಉಳಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಭದ್ರತಾ ಮತ್ತು ಜಾಗೃತಾ ಅಧಿಕಾರಿ ಆನಂದ್ ಭದ್ರಕಳ್ಳಿ ಪ್ರಯತ್ನ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ.

ಇನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿಯಾಗಿರುವ ಆನಂದ್ ಭದ್ರಕಳ್ಳಿ ಈತ ಸುಮಾರು 17 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದೇ ಸ್ಥಳದಲ್ಲಿ 2 ರಿಂದ 3 ಪದೋನ್ನತಿಗಳನ್ನು ಪಡೆದಿದ್ದಾರೆ. ಜತೆಗೆ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಆರೋಪಗಳು ಇವರ ಮೇಲೂ ಸಹ ಇದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ನಡೆದ ಈ ಎಲ್ಲ ಭ್ರಷ್ಟಾಚಾರದ ಬಗ್ಗೆ ಇನ್ನೂ ಕಾನೂನು ಹೋರಾಟ ಮಾಡಲು KPCC ಸಂಘಟಣಾ ಕಾರ್ಯದರ್ಶಿ ಯಾಕುಬ್‌ ಪಟೇಲ್ ನಾಟಿಕಾರ ಇದರ ಬಗ್ಗೆ ಲೋಕಾಯುಕ್ತಕ್ಕೆ ಮತ್ತು  ಮುಖ್ಯಮಂತ್ರಿಗಳು, ಸರ್ಕಾರದ ಕಾರ್ಯದರ್ಶಿ ಮತ್ತು ಸಾರಿಗೆ ಇಲಾಖೆಯ ಕಾರ್ಯದರ್ಶಿ ಹಾಗೂ ಸಾರಿಗೆ ಸಚಿವರಿಗೆ ವಿಚಾರಣಾ ಪೂರ್ವ ಅಮಾನತು ಮಾಡಲು ದೂರನ್ನು ನೀಡಿದ್ದಾರೆ.

ಅಲ್ಲದೇ ವಿಜಯಪುರ ವಿಭಾಗದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ  ಲೋಕಾಯುಕ್ತಕ್ಕೆ ದೂರು ನೀಡುವ ಮೂಲಕ  ಕಾನೂನು ಹೋರಾಟ ಮಾಡಲು ಯಾಕುಬ್‌ ಪಟೇಲ್ ನಾಟಿಕಾರ ಮುಂದಾಗಿದ್ದಾರೆ.

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ