NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಸಾರಿಗೆ ಸಂಸ್ಥೆಯಿಂದಾಗಿ ನಿಮಗೆ ಕೆಲಸ ಸಿಕ್ಕಿದೆ, ಸಂಸ್ಥೆಯನ್ನು ಬೆಳೆಸಿ ನೀವು ಬೆಳೆಯಿರಿ – ಸಚಿವ ರಾಮಲಿಂಗಾರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 1,300 ನಿರ್ವಾಹಕ ಹಾಗೂ 504 ಇತರೆ ಸಿಬ್ಬಂದಿ ಸೇರಿ ಒಟ್ಟು 1,804 ಹುದ್ದೆಗಳನ್ನು ಮುಂದಿನ ದಿನಗಳಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಕೆಕೆಆರ್‌ಟಿಸಿ ಮಂಗಳವಾರ ಆಯೋಜಿಸಿದ್ದ ಹೊಸದಾಗಿ ಆಯ್ಕೆಯಾದ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರಿಗೆ ನೇಮಕಾತಿ ಆದೇಶ ಪತ್ರ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸಾರಿಗೆ ನಿಗಮಗಳಿಗೆ ಒಂಬತ್ತು ವರ್ಷಗಳಿಂದ ನೇಮಕಾತಿ ಮಾಡಿಕೊಳ್ಳದ ಹಾಗೂ 4 ವರ್ಷಗಳಿಂದ ಬಸ್ ಖರೀದಿಸದ ಪರಿಣಾಮ ಸಂಸ್ಥೆಯ ಮೇಲೆ ಸಾಕಷ್ಟು ಹೊರೆ ಬಿದಿತ್ತು. ಅಧಿಕಾರಕ್ಕೆ ಬಂದ ಬಳಿಕ ಪ್ರಯಾಣಿಕರಿಗಾಗಿ 644 ಬಸ್‌ಗಳನ್ನು ನೀಡಿ 1,619 ಸಿಬ್ಬಂದಿಯ ನೇಮಕವೂ ಮಾಡಿಕೊಳ್ಳಲಾಗಿದೆ. ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಸಂಸ್ಥೆಗೆ ಹೆಚ್ಚುವರಿಯಾಗಿ 485 ಬಸ್‌ಗಳು ಸೇರ್ಪಡೆಯಾಗಲಿವೆ ಎಂದು ತಿಳಿಸಿದರು.

ಇನ್ನು ಶಕ್ತಿ ಯೋಜನೆಗೂ ಮುನ್ನ ರಾಜ್ಯದಲ್ಲಿ ನಿತ್ಯ ಬಸ್ ಸೇವೆ ಪಡೆಯುತ್ತಿದ್ದವರ ಸಂಖ್ಯೆ ಸರಾಸರಿ 84 ಲಕ್ಷ ಇತ್ತು. ಈಗ 1.10 ಕೋಟಿಗೆ ಏರಿಕೆಯಾಗಿದೆ. ಇದೂವರೆಗೆ 165 ಕೋಟಿ ಟಿಕೆಟ್‌ಗಳನ್ನು ಮಹಿಳೆಯರ ಉಚಿತ ಪ್ರಯಾಣಕ್ಕೆ ವಿತರಿಸಲಾಗಿದೆ. ಇದು ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬಿದ್ದು, ಹೆಚ್ಚಿನ ಬಸ್ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಸಾರಿಗೆ ಸಂಸ್ಥೆಯಿಂದಾಗಿ ನಿಮಗೆ ಕೆಲಸ ಸಿಕ್ಕಿದೆ. ಸಂಸ್ಥೆಯನ್ನು ಬೆಳೆಸಿ ನೀವು ಬೆಳೆಯಿರಿ. ಪ್ರಯಣಿಕರಿಗೆ ಉತ್ತಮ ಸೇವೆಯನ್ನು ಕಲ್ಪಿಸಿ ಎಂದು ಹೊಸ ಸಿಬ್ಬಂದಿಗೆ ಕಿವಿ ಮಾತು ಹೇಳಿದರು.

ಇನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನಾವು ಕೊಟ್ಟಿದ್ದ ಖಾಲಿ ಇರುವ 50 ಸಾವಿರ ಹುದ್ದೆಗಳ ಭರ್ತಿ ಆಶ್ವಾಸನೆಗೆ ಈಗಲೂ ಬದ್ಧರಾಗಿದ್ದೇವೆ. ಮುಂದಿನ ಆರು ತಿಂಗಳಲ್ಲಿ 15,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಆ ಬಳಿಕ ಮತ್ತೆ 15 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ. ಪಾಟೀಲ, ‘ಕಾಡಾ’ ಅಧ್ಯಕ್ಷ ಎಂ.ಎ.ರಶೀದ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ. ಕೆಕೆಆರ್‌ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಆನಂದ ಬಂದರಕಳ್ಳಿ, ಸಿಎಂಇ ಸಂತೋಷ ಕುಮಾರ ಗೊಗೋರೆ, ಉಪ ಸಿಎಂಇ ಮಲಿಕಾರ್ಜುನ ದೇಗಲಮಡಿ. ವಿಭಾಗೀಯ ನಿಯಂತಣಾದಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ