CRIMENEWSVideosನಮ್ಮರಾಜ್ಯ

KSRTC ಚಾಮರಾಜನಗರ ಡಿಸಿ ಭ್ರಷ್ಟಾಚಾರ: ಬಯಲಿಗೆಳೆದ KRS ಪಕ್ಷ- ಅಮಾನತು ಮಾಡದಿದ್ದರೆ ಸನ್ಮಾನ ಮಾಡುವ ಎಚ್ಚರಿಕೆ

youtube placeholder image
ವಿಜಯಪಥ ಸಮಗ್ರ ಸುದ್ದಿ
  • ಮಧ್ಯವರ್ತಿ ಕಚೇರಿ ಸಿಬ್ಬಂದಿಗಳ  ಜತೆಗೂಡಿ ಕರ್ತವ್ಯ ಲೋಪ ಎಸಗಿ, ನಕಲಿ ದಾಖಲೆ ಸೃಷ್ಟಿಸಿ ಭ್ರಷ್ಟಾಚಾರ ಎಸಗಿರುವುದು ಮತ್ತು ಸಾರಿಗೆ ಸಂಸ್ಥೆಗೆ ನಷ್ಟವುಂಟು ಮಾಡಿರುವುದು  ಇಲಾಖಾ ವಿಚಾರಣೆಯಲ್ಲಿ  ದೃಢಪಟ್ಟಿದೆ. ಇನ್ನು ಈ  ಬಗ್ಗೆ ವಿಚಾರಣೆಯನ್ನು ನಿವೃತ್ತ ಜಿಲ್ಲಾ ಸೆಷನ್ಸ್ ನ್ಯಾಯಾಯಧೀಶರಾದ ನಂಜುಂಡಯ್ಯ ಅವರು ಮಾಡಿದ್ದು, ಇವರ ವಿಚಾರಣಾ ವರದಿಯಲ್ಲಿಯೂ ಮಧ್ಯವರ್ತಿಗಳು ಈ ಕೃತ್ಯದಲ್ಲಿ ಭಾಗವಹಿಸಿರುವುದು ದೃಢಪಟ್ಟಿದೆ.

ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಮರಾಜನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾ‌ರ್ ಈ ಹಿಂದೆ ಮೈಸೂರು ಗ್ರಾಮಾಂತರ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಾಗ ಭ್ರಷ್ಟಾಚಾರ ಎಸಗಿದ್ದರು ಏಕೆ ಅಮಾನತು ಮಾಡಿ ಕ್ರಮ ತೆಗೆದುಕೊಂಡಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಪದಾಧಿಕಾರಿಗಳು ಆಡಳಿತ ಮಂಡಳಿವಿರುದ್ಧ ಕಿಡಿಕಾರಿದ್ದಾರೆ.

ಇಂದು ನಗದಲ್ಲಿ ಪ್ರಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿKRS ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಯೂ ಆಗಿರುವ ನ್ಯಾಯವಾದಿ ಎಂ.ರವಿಕುಮಾ‌ರ್ ಮಾತನಾಡಿ, ಡಿಸಿಯ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅಲ್ಲದೆ ಕೆಎಸ್‌ಆರ್‌ಟಿಸಿ ಎಂಡಿ ಅಕ್ರಮ್‌ ಪಾಷ ಅವರು ಹಾಗೂ ಸಾರಿಗೆ ಸಚಿವರು ಈ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದರೆ ನಮ್ಮ ಪಕ್ಷದ ವತಿಯಿಂದ ಈತನಿಗೆ ತಮಟೆ ಚಳವಳಿ ಮಾಡುವ ಮೂಲಕ ಸನ್ಮಾನ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಅಶೋಖ್‌ ಕುಮಾರ್‌ ಇವರ ಸಿಬ್ಬಂದಿ ಶಿಸ್ತು ನಿಯಮ ಉಲ್ಲಂಘಿಸಿದರೆ ಅಥವಾ ಅಪಘಾತ ಎಸಗಿದರೆ ಅಂಥ ಸಿಬ್ಬಂದಿಗಳ ವಿರುದ್ಧ ಕನಿಷ್ಠ 3 ತಿಂಗಳು ವಿಚಾರಣಾ ಪೂರ್ವ ಸೇವೆಯಿಂದ ಅಮಾನತು ಮಾಡಿ, ತದನಂತರ ಅವರಿಗೆ ವರ್ಗಾವಣೆ ಬೇರೆ ಕಡೆ ಮಾಡುತ್ತಾರೆ.

ಉದಾ: ಹುಣಸೂರಿನ ಡಿಪೋ ನಲ್ಲಿರುವ ಚಾಲಕರು ಅಪಘಾತ ಮಾಡಿದರೆ ಆ ಸಿಬ್ಬಂದಿಗಳನ್ನು ಮೈಸೂರು ಘಟಕಕ್ಕೆ ವರ್ಗಾವಣೆ ಮಾಡುವುದು. ನಂತರ ಅವರು ಕನಿಷ್ಠ 12 ತಿಂಗಳು ಕೆಲಸಮಾಡಬೇಕಾಗುತ್ತದೆ. ಆದರೆ ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತಿಯಿಲ್ಲವೆಂದರೆ ಆ ಸಿಬ್ಬಂದಿಗಳನ್ನು ಅಮಾನತುಗೊಂಡ ಹುಣಸೂರು ಘಟಕದಲ್ಲೇ ಮತ್ತೇ ಡ್ಯೂಟಿಗೆ ನಿಯೋಜನೆ ಮಾಡಲು ಅವಕಾಶವಿಲ್ಲ ಮತ್ತು ಆ ಪ್ರಕರಣ ಇಲಾಖೆ ವಿಲೇವಾರಿ ಆಗುವವರೆಗೂ ಅದೇ ಘಟಕಕ್ಕೆ ನಿಯೋಜಿಸುವಂತಿಲ್ಲ.

ಇಂತಹ ಸಂಬಂಧದಲ್ಲಿ ಈ ಅಶೋಕ್ ಕುಮಾರ್ ಅವರು ಮಧ್ಯವರ್ತಿಗಳ ಮೂಲಕ ಈ ಅಮಾನತುಗೊಂಡ ನೌಕರರರನ್ನು ಭೇಟಿಮಾಡಿ ನಿಮಗೆ ಅನುಕೂಲವಾಗುವ ಸ್ಮಳಕ್ಕೆ ನಿಯೋಜಿಸಿಕೊಡುತ್ತೇವೆಂದು ಲಂಚಕ್ಕೆ ಬೇಡಿಕೆ ಇಟ್ಟುಕೊಂಡು, ತದನಂತರ ಆ ನೌಕರರನ್ನು ಅವರು ಹೇಳಿದಂತಹ ಘಟಕಕ್ಕೇ ನಿಯೋಜಿಸಲು ಮತ್ತೊಂದು ಗೈರು ಹಾಜರಾತಿ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಹೊಸ ಪ್ರಕರಣವೊಂದನ್ನು ಸೃಷ್ಟಿಸುತ್ತಾರೆ.

ಆ ನೌಕರರು ಈ ಕರ್ತವ್ಯದಿಂದ ಉದ್ದೇಶಪೂರ್ವಕವಾಗಿಯೇ ಕನಿಷ್ಠ 2 ರಿಂದ 3 ವಾರ ಕೆಲಸ ಮಾಡದಂತೆ ಅನಧಿಕೃತ ಗೈರು ಹಾಜರು ಮಾಡಿಸುತ್ತ, ತದನಂತರ 3 ವಾರದ ಅಮಾನತು ಗೊಂಡ ನೌಕರನ ಕೋರಿಕೆ ಸ್ಥಳಕ್ಕೆ ನಿಯೋಜನೆ ಮಾಡುತ್ತಾರೆ.

ಈ ರೀತಿ ಮಧ್ಯವರ್ತಿ ಕಚೇರಿ ಸಿಬ್ಬಂದಿಗಳ  ಜತೆಗೂಡಿ ಕರ್ತವ್ಯ ಲೋಪ ಎಸಗಿ, ನಕಲಿ ದಾಖಲೆ ಸೃಷ್ಟಿಸಿ ಭ್ರಷ್ಟಾಚಾರ ಎಸಗಿರುವುದು ಮತ್ತು ಸಾರಿಗೆ ಸಂಸ್ಥೆಗೆ ನಷ್ಟವಾಗಿರುವುದು ಇಲಾಖಾ ವಿಚಾರಣೆಯಲ್ಲಿ ದಾಖಲಾತಿಗಳಿಂದ ದೃಢಪಟ್ಟಿರುತ್ತದೆ.

ಇನ್ನು ಈ ವಿಷಯದ ಬಗ್ಗೆ ವಿಚಾರಣೆಯನ್ನು ನಿವೃತ್ತ ಜಿಲ್ಲಾ ಸೆಷನ್ಸ್ ನ್ಯಾಯಾಯಧೀಶರಾದ ನಂಜುಂಡಯ್ಯ ಅವರು ಮಾಡಿದ್ದು, ಈ ವಿಚಾರಣಾ ವರದಿಯಲ್ಲಿ ಮಧ್ಯವರ್ತಿಗಳು ಈ ಕೃತ್ಯದಲ್ಲಿ ಭಾಗವಹಿಸಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಆದ್ದರಿಂದ ಇಂತ ಭ್ರಷ್ಟ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕೆಂದು ಕೆಆರ್‌ಎಸ್‌ ಪಕ್ಷದ ಚಾಮರಾಜನಗರ ಘಟಕ ಆಗ್ರಹಿಸುತ್ತದೆ ಎಂದು ರವಿಕುಮಾರ್‌ ತಿಳಿಸಿದರು.

Megha
the authorMegha

Leave a Reply

error: Content is protected !!