CRIMENEWSನಮ್ಮರಾಜ್ಯ

KRSTC: ಅನ್ಯಮಾರ್ಗದಲ್ಲಿ ಹೋಗಲು ಮಹಿಳಾ ಕಂಡಕ್ಟರನ್ನು ರಾತ್ರಿ ಅರ್ಧದಲ್ಲೇ ಇಳಿಸಿಹೋದ ಸಹೋದ್ಯೋಗಿಗಳು…!

ವಿಜಯಪಥ ಸಮಗ್ರ ಸುದ್ದಿ
  • ಸಾರಿಗೆ ಚಾಲನಾ ಸಿಬ್ಬಂದಿಗಳಲ್ಲಿ ಒಬ್ಬರಿಗೊಬ್ಬರು ಆಗುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಚಾಲನಾ ಸಿಬ್ಬಂದಿಗಳಲ್ಲಿ ಒಗ್ಗಟ್ಟಿಲ್ಲ ಎಂಬುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಅದಕ್ಕೆ ಮತ್ತೊಂದು ತಾಜಾ ನಿದರ್ಶನ ಹಿರಿಯೂರಿಗೆ ರಾತ್ರಿ ಹೋಗುತ್ತಿದ್ದ ಸಂಸ್ಥೆಯ ನಿರ್ವಾಹಕಿ ಅನುಭವಿಸಿದ ಯಾತನೆಯಾಗಿದೆ.

ಹೌದು! ಗುರುವಾರ ರಾತ್ರಿ 9.30ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಿರಾ ಘಟಕದಲ್ಲಿ ನಿರ್ವಾಹಕಿ ಕರ್ತವ್ಯ ನಿರ್ವಹಿಸುತ್ತಿದ್ದು. ಕರ್ತವ್ಯ ಮುಗಿಸಿ ರಾತ್ರಿ ಸುಮಾರು 9:30 ಸಮಯದಲ್ಲಿ ಶಿರಾ ದಿಂದ ಹಿರಿಯೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ತಮ್ಮದೇ ಸಂಸ್ಥೆಯ ಮಹಿಳಾ ಸಿಬ್ಬಂದಿಗೆ ಕಲಬುರ್ಗಿ ಘಟಕ-2ರ ಚಾಲಕ ಮತ್ತು ನಿರ್ವಾಹಕ ಇಬ್ಬರು ಸರಿಯಾಗಿ ತಮ್ಮ ಡ್ಯೂಟಿ ಮಾಡದೆ ರಾತ್ರಿ ಟೋಲ್‌ ಬಳಿ ಇಳಿಸಿ ಉದ್ಧಟತನ ಮೆರೆದಿದ್ದಾರೆ.

ಇನ್ನು ಹಿರಿಯೂರು ಬಸ್ ನಿಲ್ದಾಣಕ್ಕೆ ಹೋಗದೆ ಬೈಪಾಸ್ ನಲ್ಲಿರುವ ಟಿಬಿ ಸರ್ಕಲ್ ಅಲ್ಲಿಯಾದರೂ ನಿಲ್ಲಿಸಿ ಎಂದು ಸಹೋದ್ಯೋಗಿ ನಿರ್ವಾಹಕಿ ಕೇಳಿಕೊಂಡಿದ್ದರು ಸಹ ಚಾಲಕ ಮತ್ತು ನಿರ್ವಾಹಕ ಇಬ್ಬರು ನಾವು ಹಿರಿಯೂರಿಗೆ ಹೋಗುವುದಿಲ್ಲ ಎಂದು ಹಿರಿಯೂರಿನ ಬಳಿ ರಿಂಗ್ ರೋಡ್ ರಸ್ತೆಯ ಮುಖಾಂತರ ಹೋಗಿದ್ದಾರೆ.

ಈ ವೇಳೆ ನಿರ್ವಾಹಕಿ ಎಷ್ಟೇ ಕೇಳಿಕೊಂಡರು ಸಹ ಅವರನ್ನೇ ಹೆದರಿಸಿ ಮೊಬೈಲನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಅಲ್ಲದೆ ಹಿರಿಯೂರಿನಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿರುವ ಅರ್ತಿಕೋಟೆ ಟೋಲ್ ಬಳಿ ತಮ್ಮ ಸಹೋದ್ಯೋಗಿ ಮಹಿಳಾ ಕಂಡಕ್ಟರನ್ನು ಇಳಿಸಿ ಹೋಗಿದ್ದಾರೆ.

ಆ ಸಮಯದಲ್ಲಿ ನಿರ್ವಾಹಕಿ ತಮ್ಮ ಪತಿಗೆ ಫೋನ್‌ ಕರೆ ಮಾಡಿ ವಿಚಾರ ತಿಳಿಸಿದ್ದು, ಬಳಿಕ ಪತಿ ಬಾಡಿಗೆ ಕಾರನ್ನು ಮಾಡಿಕೊಂಡು ಸುಮಾರು ಹನ್ನೊಂದು ಗಂಟೆಗೆ ಹೋಗಿ ಪತ್ನಿಯನ್ನು ಕ್ಷೇಮವಾಗಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಸಾರಿಗೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಅದೂ ಕೂಡ ತಮ್ಮ ಸಹೋದ್ಯೋಗಿಗೆ ಇವರು ಸ್ಟಾಪ್ ಕೊಡಲಿಲ್ಲ. ಜತೆಗೆ ತಾವು ತೆರಳಬೇಕಿರುವ ಮಾರ್ಗಬಿಟ್ಟು ಅನ್ಯ ಮಾರ್ಗದಲ್ಲಿ ಹೋಗಿದ್ದಾರೆ ಎಂದರೆ ಇದು ಎಷ್ಟರ ಮಟ್ಟಿಗೆ ಸರಿ. ಜತೆಗೆ ನೀನು ಬೇಕಾದರೆ ಕಲಬುರ್ಗಿಗೆ ಬಾ, ನಾನು ನಿನ್ನನ್ನು ಹಿಡಿಸುವುದಿಲ್ಲ ಎಂದು ಏಕವಚನದಲ್ಲಿ ಸಹೋದ್ಯೋಗಿ ಮಹಿಳೆ ಅವಾಜ್‌ಕೂಡ ಹಾಕಿದ್ದಾರೆ.

ಇನ್ನು ಇವರು ಒಬ್ಬ ಹೆಣ್ಣು ಮಗಳನ್ನು ರಾತ್ರಿ ಸಮಯದಲ್ಲಿ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿರುವ ಅರ್ತಿಕೋಟೆ ಟೋಲ್ ಬಳಿ ಇಳಿಸಿ ಹೋಗುತ್ತಾರೆ ಎಂದರೆ ಇವರಲ್ಲಿ ಮಾನವೀಯತೆ ಇದೆಯೇ?  ಹೋಗಲಿ ತಮ್ಮ ಸಹೋದ್ಯೋಗಿ ಎಂಬುದನ್ನು ಲೆಕ್ಕಿಸದೆ ಹೀಗೆ ನಡೆದುಕೊಂಡಿರುವುದು ಇವರಲ್ಲಿ ಇರುವ ಒಗ್ಗಟ್ಟು ಏನು ಎಂದು ತೋರಿಸುತ್ತಿದೆ. ಅಲ್ಲದೆ, ಹೀಗೆ ಪದೇಪದೆ ಸಹೋದ್ಯೋಗಿಗಳನ್ನೇ ಕೀಳಾಗಿ ಕಾಣುತ್ತಿರುವುದು ಸರಿಯೇ?

ಹೀಗಾಗಿ ಈ ರೀತಿ ರಾತ್ರಿ ಸಮಯದಲ್ಲಿ ಹದಿನೈದು ಕಿಲೋಮೀಟರ್ ದೂರದ ಅರ್ತಿಕೋಟೆ ಟೋಲ್ ಬಳಿ ಇಳಿಸಿ ಹೋಗಿರುವುದು  ಅಲ್ಲದೆ ಮಾರ್ಗ ಬದಲಿಸಿಕೊಂಡು ಹೋಗಿರುವ ಈ ಇಬ್ಬರು ಚಾಲನಾ ಸಿಬ್ಬಂದಿಗಳನ್ನು ಕೂಡಲೇ ಅಮಾನತು ಮಾಡಬೇಕೆಂದು ಶಿರಾ ಘಟಕದ ನೌಕರರು ಒತ್ತಾಯಿಸಿದ್ದಾರೆ.

Megha
the authorMegha

Leave a Reply

error: Content is protected !!