NEWSನಮ್ಮರಾಜ್ಯಲೇಖನಗಳು

KSRTC: ಶಕ್ತಿ ಯೋಜನೆ ನೀಡಿದರೂ 1,800 ಗ್ರಾಮಗಳಿಗಿಲ್ಲ ಸರ್ಕಾರಿ ಬಸ್‌ ಸೇವೆ, ಅತ್ತ ನೌಕರರಿಗೂ ಇಲ್ಲ ಸಮರ್ಪಕ ಸೌಲಭ್ಯ ಅಚ್ಚರಿಯಾದರೂ ಕಟು ಸತ್ಯವಿದು!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನಗಳಲ್ಲೊಂದಾದ ಮಹಿಳೆಯರಿಗೆ ಕರ್ನಾಕಟ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯ ಪ್ರಯೋಜನವನ್ನು ಪ್ರತಿನಿತ್ಯ ಲಕ್ಷಾಂತರ ಹೆಂಗಳೆಯರು ಪಡೆಯುತ್ತಿದ್ದಾರೆ.

ಆದರೆ, ಈ ನಡುವೆಯೂ ಸುಮಾರು 1,800 ಗ್ರಾಮಗಳಲ್ಲಿ ಮಹಿಳೆಯರು ಬಸ್ ಏರಲು ಕನಿಷ್ಠ 2 ಕಿಲೋಮೀಟರ್ ನಡೆದು ಹೋಗುವ ಪರಿಸ್ಥಿತಿ ಇದೆ ಎಂಬ ಮಾಹಿತಿ ಬಹಿರಂಗೊಂಡಿದೆ. ಇದು ಅಚ್ಚರಿ ಎನಿಸಿದರು ರಾಜ್ಯದಲ್ಲಿ ಇರುವುದು ಕಟು ಸತ್ಯ ಎಂಬುವುದು ಮಾತ್ರ ಭಾರಿ ಖೇದಕರ ಸಂಗತಿ.

ಇದರ ನಡುವೆ ಕತ್ತೆಯಂತೆ ಮನೆ ಮಟ ಎಲ್ಲವನ್ನು ವಾರಾನುಗಟ್ಟಲೆ ಬಿಟ್ಟು ಡ್ಯೂಟಿ ಮಾಡುತ್ತಿರುವ ನೌಕರರಿಗಾದರೂ ಸರಿಯಾದ ವೇತನ ಕೊಡುತ್ತಿದ್ದಾರೆ ಅದು ಇಲ್ಲ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ ಇದೆಯೇ ಇಲ್ಲವೇ ಎಂಬುವುದು ಒಮ್ಮೆ ದಿಗಿಲು ಮಡಿಸುತ್ತದೆ.

ಹೌದು ರೀ, ಈಗ ಎನ್ನೆಲ್ಲ ನಡೆಯುತ್ತಿದೆ ಎಂಬ ವಿಷಯಕ್ಕೆ ಬರೋಣ. ಬಹುತೇಕ ಪ್ರದೇಶಗಳಲ್ಲಿ ಬಸ್​​ಗಳ ಲಾಸ್ಟ್​​ ಸ್ಟಾಪ್​​ ಸಂಪರ್ಕವೇ ಇಲ್ಲದ ಕಾರಣ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಪ್ರತಿದಿನ ಕಿಲೋಮೀಟರ್​​ಗಟ್ಟಲೆ ದೂರ ನಡೆಯಬೇಕಾದ ಸ್ಥಿತಿ ಇದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ಗಳ ಸಂಚಾರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

ಇನ್ನು ಮತ್ತೊಂದೆಡೆ ರಸ್ತೆ ದುಃಸ್ಥಿತಿಯ ಕಾರಣ KSRTC, KKRTC ಮತ್ತು NWRTC ಅಧಿಕಾರಿಗಳು ಈ ಪ್ರದೇಶಗಳಲ್ಲಿ ಬಸ್​​ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ ಕೂಡ. ನೋಡಿ ತುಮಕೂರು, ಚಿಕ್ಕಮಗಳೂರು, ಉಡುಪಿ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೊಡಗು, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಾಮರಾಜನಗರ, ಕಲಬುರಗಿ ಮತ್ತು ವಿಜಯನಗರ ಜಿಲ್ಲೆಗಳ ಬಹುತೇಕ ಗ್ರಾಮಗಳಲ್ಲಿ ಸಾರ್ವಕನಿಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ.

ಈ ಬಗ್ಗೆ ವಿಧಾನ ಪರಿಷತ್​​ನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಉತ್ತರಿಸಿದ್ದು, KSRTC 17 ಜಿಲ್ಲೆಗಳಲ್ಲಿ ಬಸ್ ಸೇವೆ ನೀಡುತ್ತಿದೆ. ಒಟ್ಟು 21,748 ಗ್ರಾಮಗಳ ಪೈಕಿ 20,090 ಗ್ರಾಮಗಳಿಗೆ KSRTC ಬಸ್ ಸೇವೆ ಒದಗಿಸುತ್ತಿದೆ. ಉಳಿದ 1,658 ಗ್ರಾಮಗಳಲ್ಲಿ ಬಸ್​​ಗಾಗಿ ಜನರು 2 ಕಿಲೋಮೀಟರ್​​ ನಡೆದೇ ಹೋಗಬೇಕಿದೆ.

ಅದೇ ರೀತಿ, NWRTC ವ್ಯಾಪ್ತಿಯಲ್ಲಿ ಇರುವ 4,610 ಗ್ರಾಮಗಳಲ್ಲಿ 4,565 ಗ್ರಾಮಗಳಿಗೆ ನೇರ ಬಸ್ ಸೇವೆ ಲಭ್ಯವಿದೆ. KKRTC ವ್ಯಾಪ್ತಿಯ 5,283 ಗ್ರಾಮಗಳಲ್ಲಿ 5,237 ಗ್ರಾಮಗಳಿಗೆ ಬಸ್​​ಗಳು ಸಂಪರ್ಕ ಕಲ್ಪಿಸುತ್ತಿವೆ. ಜನರ ಬೇಡಿಕೆಯ ಆಧಾರದಲ್ಲಿ ಸಮೀಕ್ಷೆ ನಡೆಸಿ, ಬಸ್ ಸೇವೆ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​ಪ್ರೆಸ್​​ ವರದಿ ಮಾಡಿದೆ̤

ಈ ನಡುವೆ ಇತ್ತ ಸರ್ಕಾರ ಸಾರಿಗೆ ನೌಕರರನ್ನಾದರೂ ಸರಿಯಾಗಿ ನಡೆಸಿಕೊಳ್ಳುತ್ತಿದೆಯೇ ಎಂದರೆ ಅದೂ ಇಲ್ಲ. ಒಂದು ರೀತಿ ಅಘೋಷಿತ ಜೀತಪದ್ಧತಿಯನ್ನು ನೌಕರರ ಮೇಲೆ ಹೇರುತ್ತಿದ್ದು, ಅವರನ್ನು ಭಾರಿ ಕೀಳಾಗಿ ನೋಡುತ್ತಿದೆ ಪ್ರಸ್ತುತ ಇರುವ ರಾಜ್ಯ ಸರ್ಕಾರ. ಆಗಂತ ಹಿಂದಿನ ಸರ್ಕಾರ ಸಾರಿಗೆ ನೌಕರರನ್ನು ಹೂವಿನ್ನ ಪಲ್ಲಕ್ಕಿ ಮೇಳೆ ಕೂರಿಸಿತು ಅಂತ ಹೇಳುತ್ತಿಲ್ಲ. ಆ ಸರ್ಕಾರವೂ ಇದೇ ಹಾದಿಯಲ್ಲಿ ನೌಕರರ ತುಳಿದಿದ್ದು ಕಟು ಸತ್ಯ.

ಆದರೆ ಅಂದಿನ ಸರ್ಕಾರ ಯಾವುದೇ ಭರವಸೆ ಕೊಟ್ಟಿರಲಿಲ್ಲ. ಇಂದಿನ ಕಾಂಗ್ರೆಸ್‌ ಪಕ್ಷದ ಸರ್ಕಾರ ಸರಿ ಸಮಾನ ವೇತನ ಕೊಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳನ್ಹು ಪೂರೈಸಿದ ಮೇಲು ಈರೀತಿ ನಡೆದುಕೊಳ್ಳುವುದು ನಾಚಿಕೆಗೇಡಿನ ಸಂಗತಿಯಲ್ಲದೇ ಮತ್ತೇನು. ಇತ್ತ ಪ್ರಯಾಣಿಕರಿಗೂ ಸಮರ್ಪಕ ಅನುಕೂಲ ಕಲ್ಪಿಸಿಲ್ಲ ಅತ್ತ ನೌಕರರಿಗೂ ನ್ಯಾಯಯುತ ಸೌಲಭ್ಯ ನೀಡಿಲ್ಲ ಅಂದಮೇಲೆ ಇಂತ ಸರ್ಕಾರಗಳು ಏಕೆ ಬೇಕು ಹೇಳಿ?

Megha
the authorMegha

Leave a Reply

error: Content is protected !!