NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನಮ್ಮ ಎಲ್ಲ ಪ್ರೀತಿಯ ಕಂಡಕ್ಟರ್‌ಗಳ ಮೆಚ್ಚಲೇಬೇಕು.. ಪ್ರಯಾಣಿಕ ಗಂಗಾಧರ

ವಿಜಯಪಥ ಸಮಗ್ರ ಸುದ್ದಿ

ಪುತ್ತೂರು: ಯಾಕೋ ಇವತ್ತು ನಮ್ಮ ಈ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಟಿಕೆಟ್ ಬಗ್ಗೆ ಸ್ವಲ್ಪ ಬರೆಯುವ ಅಂತ ಮನಸ್ಸಾಯಿತು.

ನಾನು ಸುಮಾರು ಸಮಯದಿಂದ ಈ ಬಸ್ ಟಿಕೆಟ್‌ನಲ್ಲಿ ನಮೂದಿಸಿರುವ ಸ್ಥಳಗಳಿಗೆ ದಿನಂಪ್ರತಿ ಬಸ್ಸಿನಲ್ಲಿ ಪ್ರಯಾಣಿಸುತ್ತ ಇರುತ್ತೇನೆ. ವಿಷಯ ಏನೆಂದರೆ ಕುಂಬ್ರದಿಂದ ಈಶ್ವರಮಂಗಲಕ್ಕೆ ಟಿಕೆಟ್ ಬೆಲೆ 18 ರೂಪಾಯಿ. ನಾವು ಹೆಚ್ಚಾಗಿ 20ರೂಪಾಯಿ ಕೊಟ್ಟರೆ ಕಂಡಕ್ಟರ್ ಟಿಕೆಟ್ ಕೊಟ್ಟು, ಚಿಲ್ಲರೆ ಮತ್ತೆ ಕೊಡುತ್ತೇನೆ ಅಂತ ಹೇಳಿ, ಮುಗುಳು ನಗೆ ಬೀರಿ ಮುಂದೆ ಸಾಗುತ್ತಾರೆ.

ಬಾಕಿ ಇದ್ದ ಚಿಲ್ಲರೆ ಕೆಲವು ಕಂಡಕ್ಟರ್ ಕೊಡುತ್ತಾರೆ, ಕೆಲವರು ಕೊಡಲ್ಲ, ನಾನು ಕೇಳಲು ಇಲ್ಲ. ಇದು ಮಾಮೂಲು. ಇದು ಹೆಚ್ಚಾಗಿ ನನಗೆ ಅನುಭವವಾದ ಕಥೆ. ಆದರೆ ಇವತ್ತಿನ ದಿನ ನಾನು ಬಂದ ಬಸ್‌ನಲ್ಲಿ ಜನ ಹೆಚ್ಚಿತ್ತು, ಎಂದಿನಂತೆ 20 ರೂಪಾಯಿ ಕೊಟ್ಟು ಈಶ್ವರಮಂಗಲದಿಂದ ಕುಂಬ್ರಕ್ಕೆ ಟಿಕೆಟ್ ಪಡೆದುಕೊಂಡೆ. ಆಗ ಕಂಡೆಕ್ಟರ್ ಚಿಲ್ಲರೆ ಮತ್ತೆ ಕೊಡುತ್ತೇನೆ ಅಂತ ಹೇಳಿ, ಬಾಕಿ ಪ್ರಯಾಣಿಕರಿಗೆ ಟಿಕೆಟ್ ಹಂಚಲು ಹೋದರು.

ಈ ಮಾತು ನನಗೆ ದಿನಾಲೂ ಕೇಳಿ ಅಭ್ಯಾಸ ಇದ್ದ ಕಾರಣ ಆಯಿತು ಅಂದೆ. ಆದರೆ, ಸ್ವಲ್ಪ ಸಮಯದ ನಂತರ ತುಂಬಿದ್ದ ಬಸ್ ಪ್ರಯಾಣಿಕರ ನಡುವೆ ದಾರಿ ಮಾಡಿಕೊಂಡು ಬಂದು 2 ರೂಪಾಯಿ ಚಿಲ್ಲರೆ ಮತ್ತೆ ಕೊಟ್ಟರು. ಅಷ್ಟು ಜನರ ನಡುವೆ ಬಾಕಿ ಇದ್ದ ಹಣವನ್ನು ನೆನಪಿಟ್ಟುಕೊಂಡಿರುತ್ತಾರೆ, ಅಂದರೆ ನಮ್ಮ ಎಲ್ಲ ಪ್ರೀತಿಯ ಕಂಡಕ್ಟರ್‌ಗಳನ್ನು ಮೆಚ್ಚಲೇಬೇಕು.

ಏಕೋ ಗೊತ್ತಿಲ್ಲ ಆರಂಭದಲ್ಲಿ ಹೇಳಿದಂತೆ ಈ ಒಂದು ಘಟನೆಯು ನನಗೆ ಈ ಪೋಸ್ಟ್ ಮಾಡಲು ಪ್ರೇರೇಪಿಸಿತು. ನಮ್ಮಂತೆಯೇ ಕಂಡಕ್ಟರ್‌ಗಳು ಕೂಡ ಅವರಿಗೆ ಪ್ರಯಾಣಿಕ ಜನರು ಸಹಕರಿಸಬೇಕು. ಕಾರಣ ಈ ಕಂಡಕ್ಟರ್‌ಗಳು ನಮ್ಮನ್ನು ಸುರಕ್ಷಿತವಾಗಿ ಒಂದು ಕಡೆಯಿಂದ ಮತ್ತೊಂದು ಸ್ಥಳಕ್ಕೆ ತಲುಪಲು ನೆರವಾಗುತ್ತಾರೆ. ಇವರಂತೆಯೇ ಚಾಲಕರು ಕೂಡ ಅಷ್ಟೇ ಜಾಗರೂಕರಾಗಿ ನಮ್ಮ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ ಇವರಿಗೆ ನಮ್ಮ ಅನಂತ ಧನ್ಯವಾದಗಳು ಎಂದು ತಮ್ಮ ಸಮಾಜಿಕ ಜಾಲತಾಣದಲ್ಲಿ ಗಂಗಾಧರ ದರ್ಬೆತ್ತಡ್ಕ ಎಂಬುವುದು ಬರೆದುಕೊಂಡಿದ್ದಾರೆ.

ಅಪ್ಪು ಮಶ್ರೂಮ್ ದಮ್ ಬಿರಿಯಾನಿ (Appu Mushroom Dum Biriyani) ಎಂಬುವರು ಇದಕ್ಕೆ ಪ್ರತಿಕ್ರಿಯಿಸಿದ್ದು, ಇನ್ನೊಂದು ನೆನಪಿನಲ್ಲಿರಲಿ. ದಿನವೂ ಪ್ರಯಾಣಿಸುವ ಪ್ರಯಾಣಿಕರಿಗೆ ಟಿಕೆಟ್ ದರ ಎಷ್ಟೆಂದು ಗೊತ್ತಿರುತ್ತದೆ. ಆದರೂ ಅವರು ದಿನಾ ಚಿಲ್ಲರೆ ತರುವುದಿಲ್ಲ.. ಚಿಲ್ಲರೆ ತರುವುದು ಪ್ರಯಾಣಿಕರ ಕರ್ತವ್ಯ.. ಬಸ್‌ಗಳಲ್ಲಿ ದಯವಿಟ್ಟು ಚಿಲ್ಲರೆ ಕೊಟ್ಟು ಸಹಕರಿಸಿ. ಇದನ್ನು ಬಸ್‌ಗಳಲ್ಲಿ ಮೊದಲೇ ಬರೆದಿರುತ್ತಾರೆ ಎಂದು ನೆನಪಿಸಿದ್ದಾರೆ.

Megha
the authorMegha

Leave a Reply

error: Content is protected !!