KSRTC: ಕಳಚಿಬಿದ್ದ ಚಲಿಸುತ್ತಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ನ ಟಯರ್- ತಪ್ಪಿದ ಭಾರಿ ಅನಾಹುತ

ಬೆಂಗಳೂರು: ಮಂತ್ರಾಲಯದಿಂದ ಬೆಂಗಳೂರಿಗೆ ಬರುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಲಿಸುತ್ತಿದ್ದಾಗಲೆ ಟಯರ್ ಕಳಚಿ ಬಿದ್ದಿರುವ ಘಟನೆ ಆಂಧ್ರಪ್ರದೇಶ ಗುತ್ತಿ ಸಮೀಪದ ಜೊನ್ನಗಿರಿ ಬಳಿ ನಡೆದಿದೆ.
ತಡರಾತ್ರಿ ಈ ಘಟನೆ ಸಂಭವಿಸಿದ್ದು, ಸದ್ಯ ಬಸ್ನಲ್ಲಿದ್ದ 40 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮೂಲಕ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಕೆಎಸ್ಅರ್ಟಿಸಿ ನಿಗಮದ ಚಿಕ್ಕಬಳ್ಳಾಪುರ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಚಕ್ರ ಕಳಚಿ ಬೀಳುತ್ತಿದ್ದಂತೆ ಗಡಗಡ ಸೌಂಡ್ ಬಂದಿದೆ, ಇದರಿಂದ ನಿದ್ದೆಯಲ್ಲಿದ್ದ ಪ್ರಯಾಣಿಕರು ಒಮ್ಮೆಲೆ ಗಾಬರಿಯಿಂದ ಎದ್ದಿದ್ದಾರೆ. ಅಷ್ಟರಲ್ಲಿ ಟಯರ್ ಕಳಚಿ ಬಿದ್ದಿದೆ.
ಸಾರಿಗೆ ಸಂಸ್ಥೆಯಲ್ಲಿ ಬಸ್ಗಳನ್ನು ಸರಿಯಾಗಿ ದುರಸ್ತಿ ಮಾಡುವುದಿಲ್ಲ. ರಿಪೇರಿ ಮಾಡುವುದಕ್ಕೆ ಸಂಸ್ಥೆಯ ಮೆಕ್ಯಾನಿಕ್ ವಿಭಾಗದ ಇಂಜಿನಿಯರ್ ಹಾಗೂ ಘಟಕ ವ್ಯವಸ್ಥಾಪಕರು ಬಸ್ಗಳ ಬಿಡಿ ಭಾಗಗಳನ್ನು ಸಪ್ಲೆ ಮಾಡುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಲೆ ಇದೆ. ಆದರೂ ಈ ಬಗ್ಗೆ ಸಂಬಂಧಪಟ್ಟ ಸಚಿವರಾಗಲು ಇಲ್ಲ ಅಧಿಕಾರಿಗಳಾಗಲಿ ಯಾವುದದದದದದದದೇ ಕ್ರಮ ತೆಗೆದುಕೊಳ್ಳೂತ್ತಿಲ್ಲ.
ಇನ್ನು ಬಸ್ಗಳ ಬಿಡಿಭಾಗಗಳು ಹಾಳಾಗಿರುವ ಬಗ್ಗೆ ಚಾಲಕರು ವರದಿ ಮಾಡಿದರೆ ಅಂಥ ಚಾಲಕರನ್ನೇ ಡಿಪೋ ಮಟ್ಟದ ಅಧಿಕಾರಿಗಳು ಟಾರ್ಗೆಟ್ ಮಾಡಿ ಅವರಿಗೆ ಮೆಮೋ ಕೊಟ್ಟು ಅಮಾನತು ಮಾಡುವ ಚಾಳಿ ಬೆಳೆಸಿಕೊಂಡಿದ್ದಾರೆ. ಇದರಿಂದ ಚಾಲಕರು ಬಸ್ನ ಬಿಡಿಭಾಗಗಳ ಹಾಳಾಗಿರುವ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಇದರಿಂದ ಮೆಕ್ಯಾನಿಕ್ಗಳಿಗೆ ಬಸ್ನ ಏನಾಗಿದೆ ಎಂಬುವುದು ತಿಳಿಯುತ್ತಿಲ್ಲ.
ಇಲ್ಲಿ ಅಧಿಕಾರಿಗಳು ಮಾಡುವ ತಪ್ಪಿಗೆ ಚಾಲನಾ ಸಿಬ್ಬಂದಿ ಹಾಗೂ ಪ್ರಯಾಣಿಕರು ಜೀವವನ್ನು ಕೈಯಲ್ಲಿಡಿದುಕೊಂಡು ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇನ್ನು ಮುಂದಾದರೂ ಈ ಬಗ್ಗೆ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

Related








