NEWSನಮ್ಮರಾಜ್ಯವಿಡಿಯೋ

KSRTC: ಮಾರ್ಗ ಮಧ್ಯೆ ಇಳಿಯುತ್ತಿರುವುದಕ್ಕೆ ಕಾರಣ ಕೇಳಿದ ಕಂಡಕ್ಟರ್‌ಗೆ ಅವಾಜ್‌ ಹಾಕಿದ ಮಹಿಳೆ

ವಿಜಯಪಥ ಸಮಗ್ರ ಸುದ್ದಿ
  • ಅಧಿಕಾರಿಗಳ- ಸರ್ಕಾರದ ಇಬ್ಬಗೆ ನೀತಿಯಿಂದ ಸಮಸ್ಯೆಯ ಸುಳಿಯಲ್ಲೇ ಕೆಲಸ ಮಾಡುವ ಚಾಲನಾ ಸಿಬ್ಬಂದಿ

ಬೆಂಗಳೂರು: ಕರ್ನಾಟಕ ರಾಜ್ಯ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ಹತ್ತಿದ ಮಹಿಳೆಯೊಬ್ಬರು ಮಾರ್ಗ ಮಧ್ಯೆ ಇಳಿಯುತ್ತಿರುವುದಕ್ಕೆ ಕಾರಣ ಕೇಳಿದ ನಿರ್ವಾಹಕರಿಗೆ ಅವಾಜ್‌ ಹಾಕಿದ್ದಾರೆ.

ಆ ಮಹಿಳೆ ನಿರ್ವಾಹಕ ನನಗೆ ನೀನು ಎಲ್ಲೆಂದರಲ್ಲಿ ಇಳಿಯ ಬೇಡ ಎಂದು ಹೇಳುತ್ತಿದ್ದಾರೆ ಎಂದು ಕುಪಿತಗೊಂಡು, ಕಂಡಕ್ಟರ್‌ನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಇಲ್ಲಿಳಿಯಬೇಡ ಅಲ್ಲಿಳಿಯಬೇಡ ಎಂದು ಹೇಳುವ ಯಾವುದೇ ಹಕ್ಕು ನಿಮಗಿಲ್ಲ ಟಿಕೆಟ್‌ ಕೊಡುವುದಷ್ಟೆ ನಿಮ್ಮ ಕೆಲಸ ಯಾರಿಗೆ ತೋರ್ಸುತ್ತೀರೋ ತೋರ್ಸಿ. ಇನ್ನು ಹೆಚ್ಚೆಂದರೆ ನನ್ನ ನಂಬರ್‌ ತೆಗೆದುಕೊಳ್ಳಿ ಕಾಲ್‌ ಮಾಡಿ ಎಂದು ಜೋರು ಮಾಡಿದ್ದಾರೆ.

ಅಲ್ಲ ಬಸ್‌ನಲ್ಲಿ ಚೆಕಿಂಗ್‌ ಅಧಿಕಾರಿಗಳು ಬಂದು ಬಸ್‌ನಲ್ಲಿ ಅಷ್ಟು ಜನರನ್ನು ಕೌಂಟ್‌ ಮಾಡಿದರೆ ನಾವೇನು ಮಾಡೋಣ ಎಂದು ನಿರ್ವಾಹಕರು ಕೇಳಿದ್ದಕ್ಕೆ ಎಮರ್ಜೆನ್ಸಿ ಅಂದ್ರೆ ನಾನು ಇಳಿಯಬಾರದ ನಿಮ್ಮದೇನು ರೂಲ್ಸಾ ಎಂದು ಕೋಪದಿಂದಲೇ ಪ್ರಶ್ನಿಸಿದ್ದಾರೆ. ಮಧ್ಯದಲ್ಲಿ ಏಕೆ ಇಳಿಯುತ್ತಿದ್ದೀರಾ ಎಂದು ಕೇಳಿದಕ್ಕೇ ಇಷ್ಟೊಂದು ಮಾತನಾಡುತ್ತಿದ್ದೀರಲ್ಲ ಅಂದಿದಕ್ಕೆ, ನಮಗೆ ಎಮರ್ಜೆನ್ಸಿ ಇದೆ ಅದಕ್ಕೆ ಇಳಿಯುತ್ತಿದ್ದೇನೆ. ಯಾರಾದರೂ ಸತ್ತೋದರೆ ಟಿಕೆಟ್‌ ತೆಗೆದುಕೊಂಡಿರುವ ನಿಲ್ದಾಣದಲ್ಲೇ ಇಳಿದು ಮತ್ತೆ ವಾಪಸ್‌ ಬರಬೇಕಾ? ಏನ್ರಿ ಮಾತಾಡ್ತೀರಾ ಎಂದು ಪ್ರಶ್ನಿಸಿದ್ದಾರೆ.

ಟಿಕೆಟ್‌ ತೆಗೆದುಕೊಳ್ಳುವಾಗ ಯೋಚನೆ ಮಾಡಿ ತಗೋಬೇಕು ಅಲ್ವ ಎಂದು ಹೇಳಿದರೆ ಯಾರಾದರೂ ಸತ್ತು ಹೋದ ಬಗ್ಗೆ ಫೋನ್‌ ಬರುತ್ತೆ ಏನು ಮಾಡೋಣ ತಲೆಯಲ್ಲಿ ಬುದ್ಧಿ ಇಟ್ಟುಕೊಂಡು ಮಾತಾಡ್ತೀರಾ ಎಂದು ಕಂಡಕ್ಟರ್‌ಗೆ ಅವಾಜ್‌ ಹಾಕಿದ್ದಾರೆ.

ಈ ರೀತಿ ಮಹಿಳೆಯರು ಈ ಹಿಂದೆ ಅಂದರೆ ಹಣಕೊಟ್ಟು ಟಿಕೆಟ್‌ ತೆಗೆದುಕೊಳ್ಳುತ್ತಿದ್ದಾಗ ಈ ಸಮಸ್ಯೆ ಇರಲಿಲ್ಲ. ಕಾರಣ ಆ ವೇಳೆ ಯಾವುದೇ ತನಿಖಾಧಿಕಾರಿಗಳು ಮಾರ್ಗ ಮಧ್ಯೆ ಇಳಿದು ಹೋದವರ ಮಾಹಿತಿ ಕೇಳಿ ಮೆಮೋ ಕೊಡುತ್ತಿರಲಿಲ್ಲ. ಆದರೆ, ಈ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಿದ ಮೇಲೆ ನಿರ್ವಾಹಕರು ಕೆಲಸ ಮಾಡಲಾರದ ಪರಿಸ್ಥಿತಿಗೆ ನಿಗಮದ ಅಧಿಕಾರಿಗಳೇ ತಂದು ನಿಲ್ಲಿಸಿದ್ದಾರೆ.

ಇದಕ್ಕೆ ಕಾರಣ ಮಹಿಳೆಯರಿಗೆ ಸರ್ಕಾರ ಏನು ಸ್ಮಾರ್ಟ್‌ ಕಾರ್ಡ್‌ ಕೊಡುತ್ತೇವೆ ಎಂದು ಹೇಳಿತ್ತೋ ಅದನ್ನು ಕೊಡದಿರುವುದು. ಮತ್ತೆ ನಿಗಮದ ಅಧಿಕಾರಿಗಳು ತನಿಖಾ ಸಿಬ್ಬಂದಿಗೆ ನೀವು ತನಿಖೆ ಮಾಡಿದ ವೇಳೆ ಏನು ಸಿಕ್ಕಿಲ್ಲವೇ, ಅಂದರೆ ನೀವು ಡ್ಯೂಟಿ ಮಾಡಿಲ್ಲ ಎಂದು ಅರ್ಥವಾಯಿತು ಎಂದು ಆ ಸಿಬ್ಬಂದಿಗಳನ್ನು ಪ್ರಶ್ನಿಸಿ ವೇತನ ಕಡಿತ ಮಾಡುತ್ತೇವೆ ಎಂದು ಗದರುವುದೂ ಕಾರಣವಾಗಿದೆ.

ಇತ್ತ ಈ ಅಧಿಕಾರಿಗಳ ಈ ನಡೆಯಿಂದ ಮತ್ತು ಸರ್ಕಾರ ತೋರುತ್ತಿರುವ ವಿಳಂಬ ನೀತಿಯಿಂದ ನಿತ್ಯ ಹೈರಾಣಾಗುತ್ತಿರುವುದು ಮಾತ್ರ ನಿರ್ವಾಹಕರು. ಇದಕ್ಕೆ ಮುಕ್ತಿಯಾಡಬೇಕಾದ ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿ ಪರಿಹಾರ ಕಂಡುಕೊಳ್ಳುವ ಬದಲಿಗೆ ಮತ್ತಷ್ಟು ಸಮಸ್ಯೆ ಆಗುವ ರೀತಿಯಲ್ಲಿ ಹೊಸ ಹೊಸ ಸೂಚನೆಗಳನ್ನು ಚಾಲನಾ ಸಿಬ್ಬಂದಿಗೆ ಕೊಡುತ್ತಿದ್ದಾರೆ.

ಇದನ್ನು ಗಮನಿಸಿದರೆ ಈ ಅಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದಾರೋ ಇಲ್ಲ ನಿರ್ವಾಹಕರನ್ನು ಒತ್ತಡಕ್ಕೆ ಸಿಲುಕಿಸಲು ಮುಂದಾಗುತ್ತಿದ್ದಾರೋ ಎಂಬುವುದು ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಸಂಸ್ಥೆಗೆ ಬೆನ್ನೆಲುಬಾಗಿರುವ ಚಾಲನಾ ಸಿಬ್ಬಂದಿಗಳನ್ನು ಹಿಂಸಿಸದರೆ ಹೋದರೆ ಇವರಿಗೆ ತಿಂದಿದ್ದು ಜೀರ್ಣವಾಗುವುದಿಲ್ಲ ಎಂದು ಕಾಣಿಸುತ್ತಿದೆ.

ಇತ್ತ ನಿರ್ವಾಹಕರು ಪ್ರಯಾಣಿಕರು ಕೇಳಿದ ಸ್ಥಳಕ್ಕೆ ಟಿಕೆಟ್‌ ಕೊಟ್ಟರೂ ಕಷ್ಟ ಕೊಡದಿದ್ದರೂ ಕಷ್ಟ ಎಂಬಂತ ವಾತಾವರಣವನ್ನು ನಿಗಮದ ಕೆಲ ಅಧಿಕಾರಗಳೇ ಸೃಷ್ಟಿ ಮಾಡುತ್ತಿದ್ದಾರೆ. ಇನ್ನಾದರೂ ಈ ರೀತಿ ನಿಮಗೆ ತಕ್ಕನಲ್ಲದ ರೋಲ್ಸ್‌ಗಳನ್ನು ಮಾಡುವುದನ್ನು ಬಿಟ್ಟು ಜನರು ಮತ್ತು ಚಾಲನಾ ಸಿಬ್ಬಂದಿ ನಡುವೆ ಉತ್ತಮ ಬಾಂಧವ್ಯ ನಿರ್ಮಾಣವಾಗುವಂಥ ನಿಯಮಗಳನ್ನು ಮಾಡಿ, 8ರಿಂದ 12 ಗಂಟೆಗಳ ಕಾಲ ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಚಾಲನಾ ಸಿಬ್ಬಂದಿಗಳಿಂದಲೇ ನೀವು ಎಸಿ ರೂಮ್‌ನಲ್ಲಿ ಕುಳಿತುಕೊಂಡು ತಿಂಗಳಿಗೆ ವೇತನ ಪಡೆಯುತ್ತಿರವುದು ಎಂಬುದನ್ನು ಮರೆಯಬೇಡಿ.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!