NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 2024ಕ್ಕೆ ಅಗ್ರಿಮೆಂಟ್‌ ಆದರೆ ಬಹುತೇಕ ಅಧಿಕಾರಿಗಳ ಕೆಲಸಕ್ಕೇ ಕುತ್ತು- ಚಾಲಕರಿಗೆ ಭವಿಷ್ಯವೇ ಇಲ್ಲ!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪ್ರಸ್ತುತ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಜಂಟಿ ಸಮಿತಿ ವೇತನ ಪರಿಷ್ಕರಣೆ ಎಂಬ ಭೂತವನ್ನು ಬೆನ್ನಟ್ಟುವ ಕಾರಣ ಏನು? ಎಂಬುವುದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ ನೌಕರರಾದ ತಮಗೇನಾದರು ತಿಳಿದಿದೆಯೇ?

ಇವಾಗ ಒಂದು ಬಾರಿ ಪರಿಷ್ಕರಣೆ ( ಅಗ್ರಿಮೆಂಟ್ ) ಆದರೆ ಮುಂದಿನ ಬಾರಿ ಆಗುವ ಅನಾಹುತಗಳ ಬಗ್ಗೆ ನಮ್ಮ ನಿಗಮಗಳ ಅಧಿಕಾರಿಗಳು/ ನೌಕರರು  ಮತ್ತು ಸಂಘಟನೆಗಳ ನಾಯಕರು ಚಿಂತಿಸಬೇಕು.

ಈ ಬಾರಿ ಅಂದರೆ 2024ರಲ್ಲಿ ಅಗ್ರಿಮೆಂಟ್ ಆದರೆ 2028 ರಲ್ಲಿ ನಾವು ಯಾವುದೇ ರೀತಿ ಹೋರಾಟ ಮಾಡಲು ಸಾಧ್ಯನೇ ಇಲ್ಲ. ಇದು ಕಡಾ ಖಂಡಿತವಾಗಿ ಹೇಳುತ್ತೇನೆ. ನನ್ನ ಅನಿಸಿಕೆ ಪ್ರಕಾರ ಇವಾಗ ಬೆಂಗಳೂರು ಬಿಎಂಟಿಸಿಯಲ್ಲಿ ಕೆಲವೊಂದು ಡಿಪೋಗಳಲ್ಲಿ ಎಲೆಕ್ಟ್ರಿಕಲ್ ಬಸ್‌ಗಳು ಕಾಂಟ್ರಾಕ್ಟ್ ಬೇಸ್ ಮೇಲೆ ಓಡಾಡುತ್ತಿವೆ.

ಅಂತ್ಯೆಯೆ 2028ರ ವೇಳೆಗೆ ಈ ಬಸ್ ಡಿಪೋಗಳ ಸಂಖ್ಯೆ ಸರಿ ಸುಮಾರು 50% ಆಗಿರುತ್ತದೆ. ಆಗ ಯಾವುದೇ ಹೋರಾಟ ಮಾಡಲು ಆಗುವುದಿಲ್ಲ. ನಾವೇನೇ ಹೋರಾಟ ಮಾಡಿದರು ಎಲೆಕ್ಟ್ರಿಕಲ್ ವಾಹನಗಳು ಓಡಾಡುತ್ತಿರುತ್ತವೆ.

ಇನ್ನು ಅಧಿಕಾರಿಗಳು ಇವಾಗ ಹೋರಾಟ ಮಾಡದೇ ಹೋದರೆ ಮುಂದಿನ ಕೆಲವೇ ಕೆಲವು ವರ್ಷಗಳಲ್ಲಿ ತಾವಾಗಿಯೇ ಕೆಲಸವನ್ನು ಬಿಟ್ಟು ಹೋಗುವ ಸಮಯ ಬರುತ್ತದೆ. ಉದಾ: ಎಲೆಕ್ಟ್ರಿಕಲ್ ವಾಹನಗಳ ಪೂರ್ಣ ಮೆಂಟೇನೆನ್ಸ್ ಖಾಸಗಿಯವರ ಹತ್ತಿರ ಇರುವಾಗ ಅವರೇ ವಾಹನದ ಮೆಂಟೇನೆನ್ಸ್ ನೋಡುವಾಗ ಅಲ್ಲಿ ಚಾಲಕರ ತಾಂತ್ರಿಕ ಸಿಬ್ಬಂದಿಗಳ ಇನ್‌ಚಾರ್ಜ್, ಚಾರ್ಜ್‌ಮನ್,  ಡಿಎಂಇ, ಸಿಎಂಇ ಹುದ್ದೆಗಳು ಮಾಯಾ ಆಗಲಿವೆ.

ಇದೆ ರೀತಿ ಮುಂದುವರಿದರೆ ಮುಂದೆ ಎಲ್ಲ ಹುದ್ದೆಗಳು ಹೋಗಿ ಪೂರ್ತಿ ಖಾಸಗಿಕರಣಕ್ಕೆ ಮುನ್ನುಡಿ ಆಗಲಿದೆ. ವೇತನ ಆಯೋಗ ಅಥವಾ ಸರಿಸಮಾನ ವೇತನ ಅಂತಾದರೆ ಮುಂದೆ ನಾವು ಖಾಸಗಿಕರಣ ಬಗ್ಗೆ ಹೋರಾಟ ಮಾಡಲು ಸಮಯ ಸಿಗಲಿದೆ. ಇಲ್ಲಾ ಅಗ್ರಿಮೆಂಟ್ ಮಾಡಲು ಮುಂದಾದರೆ ನಾವು ಬರಿ ಅಗ್ರಿಮೆಂಟ್ ಮಾಡಿಸಲು ಹೋರಾಡಿ ವೇತನ ಪರಿಷ್ಕರಣೆ ಸಲುವಾಗಿಯೇ ಹೋರಾಟ ಮಾಡಿ ಎಲ್ಲ ಹುದ್ದೆಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದೆ ಬರುತ್ತದೆ. ಇದು ಕಟ್ಟಿಟ್ಟ ಬುತ್ತಿ.

ಅಧಿಕಾರಿಗಳು ಇವಾಗ ಯಾವುದೇ ಹೋರಾಟ ಮಾಡದೇ ಹೋದರು ಮುಂದೆ ಹೋರಾಟ ಮಾಡುತ್ತೇವೆ ಅಂದರು ಹೋರಾಟ ಮಾಡುವ ಪರಿಸ್ಥಿತಿ ಕಳೆದುಕೊಂಡಿರುತ್ತೇವೆ. ವಿಚಾರ ಮಾಡಿ ಹೆಜ್ಜೆ ಇಡೀ ಏಕೆಂದರೆ ಈಗಾಗಲೇ ಆಂಧ್ರ ಪ್ರದೇಶದಲ್ಲಿ ಸರ್ಕಾರಿ ಆಯಿತು. ತೆಲಂಗಾಣ ಆಯಿತು. ಮಹಾರಾಷ್ಟ್ರ ಸದ್ಯದಲ್ಲೇ ಆಗಬಹುದು.

ಆದರೆ ಇದರ ಕಿಚ್ಚು ಹುಟ್ಟು ಹಾಕಿದ ನಾವೇ ಹಿಂದೆ ಇರಲು ಕಾರಣ ನಮ್ಮ ಸಂಘಟನೆಗಳ ಪ್ರತಿಷ್ಠೆ ಮತ್ತು ಅಧಿಕಾರಿಗಳು ಈವರೆಗೂ ಯಾವುದೇ ಹೋರಾಟಕ್ಕೆ ಬರದೇ ಇರುವುದು.

ಹಾಗೆ ಕೊನೆಯದಾಗಿ ಇನ್ನೊಂದು ಮಾತು ನಮ್ಮಲ್ಲಿ ಸಿ ಗ್ರೇಡ್ ನೌಕರರು ಸರ್ಕಾರಿ ಡಿ ಗ್ರೇಡ್ ನೌಕರರಕ್ಕಿಂತ ಸಂಬಳ ಎಷ್ಟೋ ಕಡಿಮೆ ಇದೆ. ಹೇಗೆಂದರೆ ನಮ್ಮ ಒಬ್ಬ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ತೆಗೆದುಕೊಳ್ಳುವ ಸಂಬಳವನ್ನು ಒಬ್ಬ ಪ್ರೈಮರಿ ಸ್ಕೂಲ್ ಟೀಚರ್ ತೆಗೆದುಕೊಳ್ಳುತ್ತಿದ್ದಾರೆ.

ಇನ್ನು ಪಿಂಚಣಿಯೋ ವಯಸ್ಸಾದ ಮೇಲೆ ಅವರ ಔಷಧ ಗುಳುಗಿಗಳಿಗೆ ಸಾಲೋಲ್ಲ ಹಾಗಾದ್ರೆ ಮುಂದಿನ ಜೀವನ ಹೇಗೆ? ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಇಲ್ಲದಿದ್ದರೆ ಮುಂದಿನ ಭವಿಷ್ಯ ಅಧಿಕಾರಿಗಳದ್ದು ಸೇರಿದಂತೆ ಬಹುತೇಕ ಎಲ್ಲ ಸಾರಿಗೆ ನೌಕರರದ್ದು ಡೋಲಾಯಮಾನವಾಗಲಿದೆ. – PNS

1 Comment

Leave a Reply

error: Content is protected !!
LATEST
KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌