CRIMENEWSನಮ್ಮಜಿಲ್ಲೆ

ಮುಳಬಾಗಿಲು: ಪಾದಚಾರಿಗೆ ಡಿಕ್ಕಿಹೊಡೆದ KSRTC ಬಸ್‌- ವ್ಯಕ್ತಿ ಸ್ಥಳದಲ್ಲೇ ಸಾವು

ವಿಜಯಪಥ ಸಮಗ್ರ ಸುದ್ದಿ

ಮುಳಬಾಗಿಲು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ತಾಲೂಕಿನ ಬಾಳಸಂದ್ರ ಗ್ರಾಮದ ಶಾಮೇಗೌಡ (34) ಮೃತರು. ಶಾಮೇಗೌಡ  ಬೆಳಗ್ಗೆ ಎಂದಿನಂತೆ ತಮ್ಮ ತೋಟಕ್ಕೆ ಹೋಗಿ ವಾಪಸ್ ಮನೆಗೆ ಹೋಗುವಾಗ ಮುಳಬಾಗಿಲು ಕಡೆಯಿಂದ ಬಾಳಸಂದ್ರಕ್ಕೆ ಹೋಗುತ್ತಿದ್ದ ಬಸ್ ಹಿಂಬಂದಿಯಿಂದ ಬಂದು ಡಿಕ್ಕಿ ಹೊಡೆದಿದೆ.

ಈ ಬಸ್ ಗುದ್ದಿದ ರಭಸಕ್ಕೆ ಕೆಳಗೆ ಬಿದ್ದ ಶಾಮೇಗೌಡ ಬಸ್ ಅಡಿಯಲ್ಲಿ ಸಿಲುಕಿಕೊಂಡಿದ್ದು, ಸುಮಾರು 20 ರಿಂದ 30 ಮೀಟರ್ ದೂರ ಎಳೆದುಕೊಂಡು ಹೋಗಿದೆ. ಅಷ್ಟು ದೂರದ ರಸ್ತೆಯುದ್ದಕ್ಕೂ ರಕ್ತ ಚೆಲ್ಲಿದೆ.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎನ್. ಶ್ರೀನಾಥ್, ವಿಭಾಗೀಯ ಭದ್ರತಾ ಅಧಿಕಾರಿ ಚಂದ್ರೇಗೌಡ, ತಾಂತ್ರಿಕ ಅಧಿಕಾರಿ ಶಾಂತ ಕುಮಾರ್, ಘಟಕ ವ್ಯವಸ್ಥಾಪಕ ಅನ್ನರ್ ಪಾಷ, ಕಾನೂನು ಅಧಿಕಾರಿ ಮಂಜುನಾಥ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Megha
the authorMegha

Leave a Reply

error: Content is protected !!