ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ನಿಗಮಗದ ಬಸ್ಗಳಲ್ಲಿ ನಗದು ರಹಿತ ವಹೀವಾಟನ್ನು ಪ್ರಾಯೋಗಿಕವಾಗಿ ಈಗಾಗಲೇ ಜಾರಿಮಾಡಿದ್ದು, ಮುಂದುವರಿದ ಭಾಗವಾಗಿ ಕ್ಯಾಶ್ಲೆಸ್ ಸೌಲಭ್ಯ, ಹೊಸ ಹ್ಯಾಂಡೆಲ್ಡ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ETM) ಮಷಿನ್ ಬಳಕೆಯನ್ನು ನವೆಂಬರ್ನಿಂದ ಎಲ್ಲ ನಾಲ್ಕೂ ನಿಗಮಗಳ ಬಸ್ಗಳಲ್ಲೂ ಜಾರಿಗೆ ತರಲು ನಿರ್ಧರಿಸಿದೆ.
ಒಂದಷ್ಟು ವಿಳಂಬದ ಬಳಿಕ ಬಸ್ಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ನಗದು ರಹಿತ ಸೌಲಭ್ಯವೊಂದು ಈ ಮುಂದಿನ ತಿಂಗಳು ಅನುಷ್ಠಾನಗೊಳ್ಳಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯುಪಿಐ, ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಬಳಸಿ ನೀವು ಟಿಕೆಟ್ ಹಣ ಪಾವತಿಸಬಹುದಾಗಿದೆ.
ಈ ನಗದು ರಹಿತ ವ್ಯವಸ್ಥೆಯು ನವೆಂಬರ್ನಿಂದ ರಾಜ್ಯದ 8000ಕ್ಕೂ ಅಧಿಕ ಬಸ್ಗಳಲ್ಲಿ ಅಳವಡಿಕೆ ಆಗಲಿದೆ. ಇದರಿಂದ ಚಿಲ್ಲರೆ ಸಮಸ್ಯೆ ಜತೆಗೆ ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
KSRTC ಅಧಿಕಾರಿಗಳು ಹೇಳುವ ಪ್ರಕಾರ, ಉದ್ದೇಶದಂತೆ ಈ ಸೌಲಭ್ಯವನ್ನು ಇದೇ ವರ್ಷ ಜೂನ್ ತಿಂಗಳಿನಲ್ಲಿ ಆರಂಭವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ನವೆಂಬರ್ನಿಂದ ಶುರುವಾಗುತ್ತಿದೆ. ಎಲೆಕ್ಟ್ರಿಕ್ ಸಾಧನ ಮೂಲಕ ಟಿಕೆಟ್ ವಿತರಣೆ ಸಾಧನಗಳ ವಿಚಾರದಲ್ಲಿ ಈಗಾಗಲೇ ಮಾಡಿಕೊಂಡ ಒಪ್ಪಂದ ಇದೇ ವರ್ಷ ಅಕ್ಟೋಬರ್ಗೆ ಅಂತ್ಯಗೊಳ್ಳಲಿದೆ. ಈ ಕಾರಣದಿಂದ ಸೌಲಭ್ಯ ಜನರಿಗೆ ಮುಕ್ತಗೊಳಿಸುವುದು ತಡವಾಗಿದೆ.
ನವೆಂಬರ್ ಹೊತ್ತಿಗೆ ನಗದು ರಹಿತ ಸೇವೆ ನೀಡಲು ಹೊಸ ಹ್ಯಾಂಡೆಲ್ಡ್ ಎಲೆಕ್ಟ್ರಾನಿಕ್ ಮಷಿನ್ ಅನ್ನು ನಾಲ್ಕು ನಿಗಮಗಳಿಗೆ ನೀಡಲಾಗುತ್ತದೆ. ಇದಾದ ಮೇಲೆ ಪ್ರತಿ ಬಸ್ನಲ್ಲಿ ಈ ಸೌಲಭ್ಯ ಲಭ್ಯವಾಗುತ್ತದೆ. ಆಗ ಪ್ರಯಾಣಿಕರು ನಗದು, ಯುಪಿಐ, ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಯಾವುದಾದರು ಒಂದನ್ನು ಬಳಸಿ ಹಣ ನೀಡಿ ಟಿಕೆಟ್ ಪಡೆಯಬಹುದಾಗಿದೆ.
ಜನರಿಗೆ ಇದುವರೆಗೆ ಬಸ್ ಹತ್ತುವಾಗ ಚಿಲ್ಲರೆ ಒಯ್ಯುವುದು, ಟಿಕೆಟ್ ಬೆಲೆಗೆ ತಕ್ಕ ನಗದು ಹಣ ನೀಡಬೇಕೆಂಬ ಆತಂಕ ಇರುತ್ತದೆ. ಕೆಲವೊಮ್ಮೆ ಹೆಚ್ಚಿನ ಹಣ ನೀಡಿರುತ್ತಾರೆ. ಚಿಲ್ಲರೆಯನ್ನು ಟಿಕೆಟ್ ಹಿಂದೆ ನಿರ್ವಾಹಕರು ನಮೂದಿಸಿರುತ್ತಾರೆ. ಆದರೂ ಮರೆತು ಚಿಲ್ಲರೆ ಪಡೆಯದೆ ಮರೆತು ಇಳಿದು ಬಿಡುತ್ತಾರೆ. ಈ ಎಲ್ಲ ತಲೆನೋವುಗಳಿಗೆ KSRTC ಎಲ್ಲ ಬಸ್ಗಳಲ್ಲೂ ಈ ವ್ಯವಸ್ಥೆ ಜಾರಿ ಮಾಡುತ್ತಿದೆ.
ಸದ್ಯ ಈಗಾಗಲೇ ಕೆಎಸ್ಆರ್ಟಿಸಿ, ವಾಯವ್ಯ ಸಂಸ್ಥೆಯ ಕೆಲವು ಬಸ್ಗಳಲ್ಲಿ ನಗದು ರಹಿತ ಟಿಕೆಟ್ ವಿತರಣೆ, ಪಾವತಿ ಈಗಾಗಲೇ ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ಆದರೆ ಇನ್ನೂ ಅಧಿಕೃತವಾಗಿಲ್ಲ ಹೀಗಾಗಿ ಎಲ್ಲ ಬಸ್ಗಳಲ್ಲೂ ಮುಂದಿನ ತಿಂಗಳಿನಿಂದ ನಗದು ರಹಿತ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ.
ಈ ಎಲೆಕ್ಟ್ರಾನಿಕ್ ಟಿಕೆಟ್ ಮಷಿನ್ ಬಳಕೆ ಬಗ್ಗೆ ಈಗಾಗಲೇ ನಿರ್ವಾಹಕರು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪ್ರಯಾಣಿಕರು ನೀವು ತೆರಳಬೇಕಾದ ಸ್ಥಳದ ಹೆಸರು ಹೇಳಬೇಕು. ನಿರ್ವಾಹಕರು ಈ ಮಷಿನ್ನಲ್ಲಿ ನೀವು ಹತ್ತಿದ ಮತ್ತು ಇಳಿಯುವ ಸ್ಥಳ ಸಮೂದಿಸುತ್ತಾರೆ. ಬಳಿಕ ಮಷಿನ್ ಪರದೇ ಮೇಲೆ ದೂರ, ಪ್ರಯಾಣದ ಟಿಕೆಟ್ ಹಣ ಮತ್ತು ಕ್ಯೂಆರ್ ಕೋಡ್ ಪ್ರದರ್ಶನವಾಗುತ್ತದೆ. ನೀವು ಯುಪಿಐ, ಇತರೆ ಯಾವುದಾದರೂ ಟಿಜಿಟಲ್ ವಿಧಾನದ ಮೂಲಕ ಪಾವತಿಸಬೇಕು.
ಹೀಗೆ ಮಾಡುವುದರಿಂದ ಪ್ರಯಾಣಿಕರು ನಗದು ತರುವ ಅಗತ್ಯ ಇರುವುದಿಲ್ಲ. ಜತೆಗೆ ನಮ್ಮ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಆಗುತ್ತಿದ್ದ ಚಿಲ್ಲರೆ ಸಂಬಂಧದ ವಾಗ್ವಾದವು ತಪ್ಪುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.