CRIMENEWSನಮ್ಮಜಿಲ್ಲೆನಮ್ಮರಾಜ್ಯ

KSRTC ಚಾಮರಾಜನಗರ: ತನ್ನ ಉಳಿವಿಗಾಗಿ ಸುಳ್ಳುದೂರು ಕೊಡಿಸಿ ಚಾಲಕನ ಅಮಾನತು ಮಾಡಿದ ದುರುಳ ಡಿಸಿ ಅಶೋಕ್‌ ಕುಮಾರ್‌!

ವಿಜಯಪಥ ಸಮಗ್ರ ಸುದ್ದಿ
  • ಅಧಿಕಾರ ದುರ್ಬಳಕೆ ಮಾಡಿಕೊಂಡು ಅಮಾಯಕ ಚಾಲಕನ ವಿರುದ್ಧ ಸುಳ್ಳು ಕೇಸ್‌ ದಾಖಲಿಸಿದ ಕಿಡಿಗೇಡಿ
  • ಅಂದು ಆ ಮಾರ್ಗದಲ್ಲಿ ಬರದಿರುವ ಕಾರು ಬಂದಿದೆ ಎಂದು ಸುಳ್ಳು ಹೇಳಿಸಿ ಕಾರು ಮಾಲೀಕನಿಂದ ಸುಳ್ಳು ಪ್ರಕರಣ ದಾಖಲಿಸಿದ ಕುತಂತ್ರಿ ಡಿಸಿ ಅಮಾನತಿಗೆ ಸಂಘಟನೆಗಳ ಮುಖಂಡರ ಆಗ್ರಹ
  • ಹೇಳೋರಿಲ್ಲ ಕೇಳೋರಿಲ್ಲ ಇಂಥ ಭ್ರಷ್ಟರನ್ನು ಎಂಬುವುದೇ ನೋವಿನ ಸಂಗತಿ

ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ಎರಡು ಬಸ್‌ಗಳು ಸೇರಿದಂತೆ ಮೂರು ಬಸ್‌ಗಳ ನಡುವೆ ಕಳೆದ 2025ರ ಅಕ್ಟೋಬರ್‌ 19ರಂದು ಭೀಕರ ಡಿಕ್ಕಿ ಸಂಭವಿಸಿ, ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು, ಇಬ್ಬರು ಚಾಲಕರು ಸೇರಿದಂತೆ ಹಲವಾರು ಮಂದಿ ಗಂಭೀರ ಗಾಯಗೊಂಡಿದ್ದರು. ಈ ಘಟನೆ ಸಂಬಂಧ KSRTC ಚಾಲಕನನ್ನು ನ.12ರಂದು ಅಮಾನತು ಮಾಡಿ ಅಮಾನವೀಯವಾಗಿ ನಡೆದುಕೊಂಡಿದ್ದಾನೆ ಚಾಮರಾಜನಗರ ಸಾರಿಗೆ ಡಿಸಿ ಅಶೋಕ್‌ ಕುಮಾರ್‌.

ಕಾಲು ಮತ್ತು ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚಾಲಕ ಸಂತೋಷ್‌ ಕುಮಾರ್‌ ಸಂಗಂ ಅವರು ಇದೇ ನ.5ರಂದು ಮನೆಗೆ ಮರಳದ್ದರು. ಆ ಬಳಿಕ ಅಂದರೆ ನ.12ರಂದು ಚಾಲಕನ ಅಮಾನತು ಮಾಡುವ ಮೂಲಕ ತನ್ನ ನರಿಬುದ್ಧಿ ತೋರಿಸಿದ್ದಾನೆ ಈ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ ಕುಮಾರ್‌.

ಅಪಘಾತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಾಲಕನ ಆರೋಗ್ಯ ವಿಚಾರಿಸಲು ಹೋಗದ ಈತ ಸಂಘಟನೆಗಳ ಮುಖಂಡರು ಕ್ಲಾಸ್‌ ತೆಗೆದುಕೊಂಡ ಬಳಿಕ ಈ ದುರುಳ ಡಿಸಿ ಅ.27ರಂದು ಆಸ್ಪತ್ರೆಗೆ ಹೋಗಿ ಚಾಲಕನ ಭೇಟಿ ಮಾಡಿ ಆರೋಗ್ಯ ವಿಚಾರಿದ್ದಾನೆ. ಈ ವೇಳೆ ವೈದ್ಯರು ಇವರಿ 6 ತಿಂಗಳವರೆಗೆ ರೆಸ್ಟ್‌ಬೇಕು ಎಂದು ತಿಳಿಸಿದ್ದರಿಂದ ಆಯಿತು 6 ತಿಂಗಳವರೆಗೆ ಐಒಡಿ ಹಾಕಿಕೊಡುತ್ತೇವೆ ನೀನು ಮೊದಲು ಆರೋಗ್ಯವಾಗಿ ಬಾ ಎಂದು ಹೇಳಿ ಹೋಗಿದ್ದ.

ಆದರೆ ಆ ಬಳಿಕ ರಸ್ತೆಯಲ್ಲಿ ಅಂದು ಬರದ ಕಾರಿನ ಮಾಲೀಕ ರಾಜೇಂದ್ರ ಎಂಬಾತನಿಂದ ನನ್ನ ಕಾರನ್ನು ಓವರ್‌ಟೆಕ್‌ ಮಾಡಲು ಬಂದು ಈ ಅಪಘಾತ ಎಸಗಿದ್ದಾನೆ ಎಂದು ಚಾಲಕ ಸಂತೋಷ್‌ ಕುಮಾರ್‌ ಸಂಗಂ ವಿರುದ್ಧ ದೂರು ದಾಖಲಿಸಿದ್ದಾನೆ ಈ ಕುತಂತ್ರಿ ಡಿಸಿ.

ನಿಜವಾಗಿ ಹೇಳಬೇಕು ಎಂದರೆ ಅಂದು ಬಸ್‌ ಕಾರನ್ನು ಓವರ್‌ಟೆಕ್‌ ಮಾಡಲು ಹೋಗಿದ್ದಲ್ಲ. ಕೆಎಸ್‌ಆರ್‌ಟಿಸಿ ಚಾಲಕನ ಭಾಗದ ಮುಂದಿನ ಬಸ್‌ ಚಕ್ರ ಪೂರ್ತಿ ಸವೆದುಹೋಗಿದ್ದರಿಂದ ಆ ಚಕ್ರ ಬಸ್ಟ್‌ಆಗಿ ಈ ಅಪಘಾತ ಸಂಭವಿಸಿದೆ. ಆದರೆ, ಇದನ್ನು ಮರೆಮಾಚಿ ತನ್ನ ಕೆಲಸಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂದು ಚಾಲಕನನ್ನು ಹರಕೆಯ ಕುರಿ ಮಾಡಿದ್ದಾನೆ ಈ ಭ್ರಷ್ಟ ಡಿಸಿ ಅಶೋಕ್‌ ಕುಮಾರ್‌.

ಇನ್ನು ಈ ಘಟನೆ ನಡೆದಿರುವ ಸತ್ಯಾಸತ್ಯತೆ ಬಗ್ಗೆ ವಿಭಾಗದಲ್ಲಿ ಹಾಗೂ ಘಟಕದ ಎಲ್ಲ ಅಧಿಕಾರಿಗಳಿಗೂ ಗೊತ್ತಿದೆ. ಆದರೂ ಈ ದುರುಳ ಈ ರೀತಿ ಅಂದು ಇಲ್ಲದ ಕಾರು ಬಂದಿದೆ ಎಂದು ಹೇಳಿ ಕಾರು ಮಾಲೀಕನಿಂದ ದೂರು ಕೊಡಿಸಿದ್ದಾನೆ. ಇಲ್ಲೆ ಇವನ ಕುತಂತ್ರ ಬುದ್ದಿ ಬಯಲಿಗೆ ಬರುತ್ತದೆ. ಕಾರಣ ನಿಜವಾಗಿಯು ಕಾರು ಬಂದಿದ್ದರೆ ಅಪಘಾತ ಸಂಭವಿಸಿದ ದಿನವೇ ದೂರನ್ನು ಕಾರು ಮಾಲೀಕ ಕೊಡಬೇಕಿತ್ತು. ಆದರೆ ಏಕೆ ಕೊಡಲಿಲ್ಲ. ಇದು ಸುಳ್ಳು ದೂರು ಅದಕ್ಕೆ ಕೊಟ್ಟಿರಲಿಲ್ಲ. ಈ ರಾಜೇಂದ್ರ ಎಂಬಾತನ ಕರೆದು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದರೆ ಸತ್ಯ ಹೊರಬೀಳಲಿದೆ.

ಇನ್ನು ಇಲ್ಲಿ ಸವೆದು ಹೋಗಿರುವ ಟೈಯರ್‌ ಹಾಕಿ ಬಸ್‌ಅನ್ನು ಮಾರ್ಗಾಚರಣೆಗೆ ಬಿಟ್ಟು ಕೆಲಸಕ್ಕೆ ಬಾರದ ಈ ಡಿಸಿ ಈಗ ತನ್ನ ತಪ್ಪನ್ನು ಮುಚ್ಚಿಹಾಕಲು ಅಮಾಯಕ ಚಾಲಕನ ಮೇಲೆ ಸುಳ್ಳಿ ದೂರು ದಾಖಲಿಸಿ ತಾನು ಬಚಾವ್‌ ಆಗಲು ಹೊರಟಿದ್ದಾನೆ ಎಂಬುವುದು ಕಣ್ಣಮುಂದಿರುವ ಸತ್ಯ.

ಹೀಗಾಗಿ ಕೂಡಲೇ ಈ ಚಾಲಕ ಸಂತೋಷ್‌ ಸಂಗಂ ವಿರುದ್ಧ ಮಾಡಿರುವ ಅಮಾನತು ಆದೇಶವನ್ನು ವಾಪಸ್‌ ಪಡೆದು ಕೂಡಲೇ ಚಾಲಕನಿಗೆ ಐಒಡಿ ನೀಡಬೇಕು ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಜತೆಗೆ ಈ ಡಿಸಿ ಅಶೋಕ್‌ ಕುಮಾರ್‌ ವಿರುದ್ಧ ಸಾರಿಗೆ ಸಚಿವರು ಹಾಗೂ ಎಂಡಿ ವಿಚಾರಣೆ ಪೂರ್ವ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ ಈ ಬಗ್ಗೆ ಒಂದು ತನಿಖಾ ತಂಡವನ್ನು ರಚಿಸಿ ಖುದ್ದು ಎಂಡಿ ಅವರೆ ವಿಚಾರಣೆಗೆ ಆದೇಶ ಹೊರಡಿಸಬೇಕು. ನಿಜವಾಗಿಯೂ ಅಂದು ಅಪಘಾತ ಸಂಭವಿಸಿದ್ದು ಹೇಗೆ ಎಂಬ ಸತ್ಯ ಆಗ ಹೊರಬೀಳಲಿದೆ ಎಂದು ಮುಖಂಡರು ಒತ್ತಾಯಿಸಿದ್ದಾರೆ.

ಘಟನೆ ಏನು?: ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಸಮೀಪ ಅ.19ರ ಸಂಜೆ ಕೊಳ್ಳೇಗಾಲ ಘಟಕದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಘಟಕ-21ರ ವಾಹನಗಳ ಹಾಗೂ ಈ ಬಸ್‌ ಹಿಂದೆ ಬರುತ್ತಿದ್ದ ಮತ್ತೊಂದು ಘಟಕ- 36ರ ಬಿಎಂಟಿಸಿ ಬಸ್‌ ನಡುವೆ ಈ ಭೀಕರ ಅಪಘಾತ ಸಂಭವಿಸಿತ್ತು.

ಈ ಅಪಘಾತದಲ್ಲಿ ಬಿಎಂಟಿಸಿ ಘಟಕ-21ರ ಬಸ್‌ ಚಾಲಕ ಜಾನ್‌ರಾಜ್‌ ಅವರ ಎರಡು ಕಾಲುಗಳು ಮುರಿದಿವೆ. ಅಲ್ಲದೆ ಕೆಎಸ್‌ಆರ್‌ಟಿಸಿ ಚಾಲಕ ಸಂತೋಷ್‌ ಸಂಗಂ ಅವರ ತಲೆ ಮತ್ತು ಕಾಲುಗಳಿಗೆ ಗಂಭೀರಗಾಯವಾಗಿದೆ. ಈ ಚಾಲಕರು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲ ಗಾಯಾಳುಗಳನ್ನು ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇತ್ತ ವಿಷಯ ತಿಳಿಯುತ್ತಿದ್ದಂತೆ ಬಿಎಂಟಿಸಿ ಘಟಕ-21ರ ಡಿಎಂ ಪ್ರದೀಪ್‌ ಕುಮಾರ್‌ ಅವರು ಕೊಳ್ಳೇಗಾಲಕ್ಕೆ ಹೊರಟಿದ್ದು ಅಲ್ಲಿಂದ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕ ಹಾಗೂ ಪ್ರಯಾಣಿಕರ ಭೇಟಿಯಾಗಿದ್ದರು.

ಅಪಘಾತ ಹೇಗಾಯಿತು?: ಬೆಂಗಳೂರಿನಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಿಎಂಟಿಸಿ ಬಸ್‌ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿತ್ತು. ಇನ್ನು ಕೊಳ್ಳೇಗಾಲದಿಂದ ಬೆಂಗಳೂರಿಗೆ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ ಬಾಚನಹಳ್ಳಿ ಸಮೀಪ ಬರುತ್ತಿದಂತೆ ಈ KSRTC ಬಸ್‌ನ ಮುಂದಿನ ಚಕ್ರ ಬಸ್ಟ್‌ (Burst) ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ.

ಈ ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳ ಮುಂದಿನ ಭಾಗ ಸಂಪೂರ್ಣ ಛಿದ್ರಗೊಂಡಿದ್ದವು. ಇದೇ ವೇಳೆ ಬಿಎಂಟಿಸಿ ಬಸ್‌ ಹಿಂದೆ ಮತ್ತೊಂದು ಬಿಎಂಟಿಸಿ ಬಸ್‌ ಬರುತ್ತಿದ್ದು, ಈ ಬಸ್‌ ಹಿಂದಿನಿಂದ ಬಿಎಂಟಿಸಿ ಬಸ್‌ಗೆ ಡಿಕ್ಕಿಹೊಡೆದಿತ್ತು. ಪರಿಣಾಮ ಇದರಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದರು. ಅಲ್ಲದೆ ಎರಡು ಬಸ್‌ಗಳಲ್ಲಿದ್ದ ಪ್ರಯಾಣಿಕರಲ್ಲಿ ನಾಲ್ವರು ಮೃತಪಟ್ಟಿದ್ದರು. ಇದನ್ನೂ ಓದಿ ಮಳವಳ್ಳಿ: KSRTC-BMTC ಬಸ್‌ಗಳ ನಡುವೆ ಭೀಕರ ಅಪಘಾತ- ನಾಲ್ವರು ಮೃತ, ಚಾಲಕರು ಸೇರಿ 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

Megha
the authorMegha

Leave a Reply

error: Content is protected !!