NEWSನಮ್ಮರಾಜ್ಯನಿಮ್ಮ ಪತ್ರ

KSRTC ಚಾಮರಾಜನಗರ: ನೌಕರರ ಸಂಬಂಧಿಕರು ಸತ್ತರು ಅಂತಿಮ ದರ್ಶನಕ್ಕೂ ಹೋಗಲು ಬಿಡದ ಡಿಎಂ ಕುಮಾರ ನಾಯ್ಕ್‌ !

ವಿಜಯಪಥ ಸಮಗ್ರ ಸುದ್ದಿ

ಚಾಮರಾಜನಗರ: ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಗಳ ಕುಟುಂಬಸ್ಥರು ಅಥವಾ ಸಂಬಂಧಿಕರು ಯಾರಾದರು ನಿಧನರಾದರೆ ಅವರ ಅಂತಿಮ ದರ್ಶನಕ್ಕೆ ಹೋಗುವುದಕ್ಕೂ ಬಿಡದೆ ಕಿರುಕುಳ ಕೊಡುತ್ತಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಚಾಮರಾಜನಗರ ಘಟಕ ವ್ಯವಸ್ಥಾಪಕರ ವಿರುದ್ಧ ನೌಕರರು ಆರೋಪಿಸುತ್ತಿದ್ದಾರೆ.

ಮೊನ್ನೆ ಅಂದರೆ ಇದೇ ಆಗಹಸ್ಟ್‌18ರಂದು ಚಾಮರಾಜನಗರ ಘಟಕದ ನೌಕರರೊಬ್ಬರ ಮಾವ ನಿಧನರಾಗಿದ್ದಾರೆ. ಈ ವೇಳೆ ಚಾಲನಾ ಸಿಬ್ಬಂದಿ ಡ್ಯೂಟಿ ಮೇಲೆ ಇದ್ದಾಗ ವಿಷಯ ತಿಳಿಯುತ್ತಿದೆ. ಕೂಡಲೇ ಅವರು ಘಟಕ ವ್ಯವಸ್ಥಾಪಕ ಟಿ.ಕೆ.ಕುಮಾರ್‌ ನಾಯ್ಕ್‌ ಅವರಿಗೆ ವಿಷಯ ತಿಳಿಸಿ ಬಳಿಕ ಡಿಪೋಗೆ ಬಂದು ಬಸ್‌ ನಿಲ್ಲಿಸಿ ಹೋಗಿದ್ದಾರೆ. ಆದರೆ, ಈ ನಡುವೆ ಅಂದರೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಡ್ಯೂಟಿ ಮಾಡಿದ ಅವರಿಗೆ ಆ.18ರಂದು ರಜೆ ತೋರಿಸಿದ್ದಾರೆ.

ಅದು ಹೋದರೆ ಹೋಗಲಿ ಇನ್ನು ನಿಧನರಾದ ಮೂರನೇ ದಿನಕ್ಕೆ‌ ಅಂದರೆ ಆ.20ರಂದು ಹಾಲುತುಪ್ಪ ಕಾರ್ಯಕ್ರಮವಿದ್ದ ಕಾರಣ ಅವರು ರಜೆ ಬರೆದುಕೊಟ್ಟಿದ್ದಾರೆ. ಆದರೆ, ಅವರ ತುರ್ತು ರಜೆಯನ್ನು ಮಂಜೂರು ಮಾಡದೆ ಗೈರುಹಾಜರಿ ತೋರಿಸಿದ್ದಾರೆ. ಜತೆಗೆ ಆ.20ರಂದು ಕಾರ್ಯ ಮುಗಿಸಿಕೊಂಡು ಆ.21ರಂದು ವಾರದ ರಜೆ ತೆಗೆದುಕೊಂಡು ಆ.22ರಂದು ಬಂದು ಡ್ಯೂಟಿ ಮಾಡಿದ್ದಾರೆ. ಆದರೆ ಇಂದು ಬೆಳಗ್ಗೆ 7 ಗಂಟೆಗೆ ಘಟಕಕ್ಕೆ ಹೋದ ಚಾಲನಾ ಸಿಬ್ಬಂದಿಗೆ ಡ್ಯೂಟಿ ಕೊಡದೆ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ ಕುಮಾರ್‌ ಅವರನ್ನು ಭೇಟಿ ಮಾಡಿ ಬಾ. ಬಳಿಕ ಡ್ಯೂಟಿ ಕೊಡುತ್ತೇನೆ ಎಂದು ದರ್ಪ ಮೆರೆದಿದ್ದಾರೆ.

ಅಲ್ಲದೆ ಕುಟುಂಬಸ್ಥರು ಅಥವಾ ಸಂಬಂಧಿಕರನ್ನು ಕಳೆದುಕೊಂಡ ನೋವಿನಲ್ಲಿರುವ ನೌಕರರು ಅಂತ್ಯಕ್ರಿಯೆ ಮುಗಿಸಿಕೊಂಡು ಮಾರನೇ ದಿನವೇ ದುಃಖದಲ್ಲೇ ಡ್ಯೂಟಿಗೆ ಬಂದರೂಈ ರೀತಿ ಕೀಳಾಗಿ ಕಾಣುವ ಈ ಸಂಸ್ಕೃತಿ ಘಟಕ ವ್ಯವಸ್ಥಾಪಕ ಕುಮಾರ್‌ ನಾಯ್ಕ್‌ಗೆ ಬಂದಿರುವುದು ನೋಡಿದರೆ ಇವರು ಮೃಗವೇ ಇಲ್ಲ ಮನುಷ್ಯರೇ ಎನಿಸುತ್ತದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಈಗಾಗಲೇ ಎಚ್‌ಆರ್‌ಎಂಎಸ್‌ ಅಳವಡಿಸಲಾಗಿದೆ. ಇಲ್ಲಿ 22 ದಿನ ಡ್ಯೂಟಿ ಮಾಡಿದವರು ತಿಂಗಳಿಗೆ ಎಚ್‌ಆರ್‌ಎಂಎಸ್‌ ಮೂಲಕವೇ 2 ರಜೆಗಳನ್ನು ಪಡೆಯಲು ಅವಕಾಶವಿದೆ. ಇದರ ಹೊರತಾಗಿ ತುರ್ತು ರಜೆ ಬೇಕೆಂದರೆ ಡಿಎಂಗಳು ಮಂಜೂರು ಮಾಡಬೇಕು. ಆದರೆ, ಈ ತುರ್ತು ರಜೆಗಳನ್ನು ಮಂಜೂರು ಮಾಡದೆ ಈ ರೀತಿ ನೌಕರರ ಕಾಡುತ್ತಿದ್ದಾರೆ ಚಾಮರಾಜನಗರ ಘಟಕದ ಡಿಎಂ.

ಇನ್ನು ಕಳೆದ ಜುಲೈ 6ರಂದೆ ಇವರನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. ಆದರೆ ಈವರೆಗೂ ಅಲ್ಲಿಗೆ ಹೋಗದೆ ಚಾಮರಾಜನಗರದಲ್ಲೇ ಉಳಿದುಕೊಂಡಿದ್ದಾರೆ. ಅಲ್ಲದೆ ಚಾಮರಾಜನಗರ ಘಟಕಕ್ಕೆ ಬಂದು 5-6 ವರ್ಷ ಕಳೆಯುತ್ತಿದ್ದರು ಇಲ್ಲೇ ಬೇರುಬಿಟ್ಟವರಂತೆ ಇದ್ದು ನೌಕರರಿಗೆ ಸರಿಯಾಗಿ ಡ್ಯೂಟಿ ಕೊಡದೆ, ತುರ್ತು ರಜೆಗಳನ್ನು ಕೊಡದೆ ಹಾಗೂ ಏಕ ವಚನದಲ್ಲೇ ನೌಕರರು ಕರೆಯುವ ಜತೆಗೆ ಅವಾಚ್ಯಪದಗಳಿಂದ ನಿಂದಿಸುವುದೇ ನನ್ನ ನಿತ್ಯದ ಕಾಯಕ ಎಂಬಂತೆ ವರ್ತಿಸುತ್ತಿದ್ದಾರೆ ಡಿಎಂ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಈ ಬಗ್ಗೆ ವಿಜಯಪಥ ನ್ಯೂಸ್‌ ಡೆಸ್ಕ್‌ಯಿಂದ ಫೋನ್‌ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿದ ಡಿಎಂ ಕುಮಾರ್‌ ನಾಯ್ಕ್‌ ಅವರು ಇಲ್ಲಿನ ನೌಕರರು ನಮ್ಮ ಮಾತನ್ನೇ ಕೇಳುವುದಿಲ್ಲ ಏಕಾಏಕಿ ಗೈರುಹಾಜರಾಗುತ್ತಾರೆ ಕೇಳಿದರೆ ನಮ್ಮ ವಿರುದ್ಧವೇ ತಿರುಗಿ ಬೀಳುತ್ತಾರೆ ಎಂದು ತಿಳಿಸಿದ್ದಾರೆ.

ಇನ್ನು ಆ.18ರಂದು ಡ್ಯೂಟಿ ಮಾಡುತ್ತಿದ್ದ ವೇಳೆ ಸಾವಿನ ಸುದ್ದಿ ತಿಳಿದು ಹೋದ ಚಾಲನಾ ಸಿಬ್ಬಂದಿಗೆ ಏಕೆ ರಜೆ ಎಂದು ನಮೂದಿಸಿದ್ದೀರಿ ಈ ರೀತಿ ನೀವು ಮಾಡಬಹುದೆ ಎಂದು ಕೇಳಿದರೆ ಈ ಬಗ್ಗೆ ಡಿಸಿ ಬಳಿ ಮಾತನಾಡಿಕೊಳ್ಳಿ ಎನ್ನುತ್ತಾರೆ. ಅಲ್ಲದೆ ಆ.20ರಂದು ರಜೆ ಚೀಟಿ ಕೊಟ್ಟಿದ್ದರು ಏಕೆ ಒಂದು ದಿನದ ರಜೆ ಮಂಜೂರು ಮಾಡದೆ ಗೈರು ಹಾಜರಿ ತೋರಿಸಿದ್ದೀರಿ ಎಂದು ಕೇಳಿದರೆ ಅದಕ್ಕೆ ಸಮಂಜಸವಾದ ಉತ್ತರವನ್ನು ಕೊಡಲಿಲ್ಲ.

ಡಿಎಂ ಎಂಬ ಒಂದು ಜವಾಬ್ದಾರಿ ಹುದ್ದೆಯಲ್ಲಿರುವ ವ್ಯಕ್ತಿ ಹೀಗೆ ನಡೆದುಕೊಂಡದರೆ ಹೇಗೆ? ಇವರ ಮನೆಯಲ್ಲಿ ಅಥವಾ ಸಂಬಂಧಿಕರಲ್ಲಿ ಯಾರಾದರು ನಿಧನರಾದರೆ ಅವರ ಅಂತಿಮ ದರ್ಶನಕ್ಕೆ ಇವರು ಹೋಗುವುದಿಲ್ಲವೇ? ಅಂದರೆ ನಾನು ನಿಮಗಿಂತ ಮೇಲಧಿಕಾರಿ ಹಾಗಾಗಿ ನನಗೆ ಮಾತ್ರ ಸಂಬಂಧಿಕರ ಒಡನಾಟವಿದೆ. ನೀವು ನನ್ನ ಅಧೀನದಲ್ಲಿರುವ ನೌಕರರು ನೀವು ಯಾರೆ ಸತ್ತರು ಬಂದು ಡ್ಯೂಟಿ ಮಾಡಬೇಕು ಎಂದು ಸರ್ವಾಧಿಕಾರಿಯಂತೆ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ.

ಇಷ್ಟೆಲ್ಲ ನಡೆಯುತ್ತಿದ್ದರೂ ವಿಭಾಗೀಯ ನಿಯಂತ್ರಣಾಧಿಕಾರಿ ಏನು ಮಾಡುತ್ತಿದ್ದಾರೆ. ಇವರು ಕೂಡ ನೌಕರರ ಸಂಬಂಧಿಕರು ನಿಧನರಾದರೆ ಹೋಗಬೇಡಿ ಎಂಬ ಧೋರಣೆಯನ್ನೇ ಮೈಗೂಡಿಸಿಕೊಂಡಿದ್ದಾರೆಯೇ? ಗೊತ್ತಿಲ್ಲ. ಆದರೆ ಡಿಎಂ ನಡೆ ಮಾತ್ರ ಭಾರಿ ಹೇಸಿಗೆಯ ನಡೆಯಾಗಿದೆ ಎಂಬುವುದು ಅವರ ವರ್ತನೆಯಿಂದಲೇ ತಿಳಿಯುತ್ತಿದೆ.

ಹೀಗಾಗಿ ಇದಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳು ಈ ಸರ್ವಾಧಿಕಾರಿ ಡಿಎಂ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ನಾವು ನಿತ್ಯ ಅನುಭವಿಸುತ್ತಿರುವ ಇಂಥ ಕೀಳು ಮಟ್ಟದ ಕಿರುಕುಳಗಳಿಂದ ಮುಕ್ತಿ ಕೊಡಿಸುವತ್ತ ಗಮನಹರಿಸಬೇಕು ಎಂದು ನೊಂದ ಘಟಕದ ನೌಕರರು ಒತ್ತಾಯಪೂರ್ವಕ ಮನವಿ ಮಾಡಿದ್ದಾರೆ.

ಕಳೆದ ಜುಲೈ 6ರಂದೆ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ವರ್ಗಾವಣೆ ಮಾಡಿ ಆದೇಶಿಸಿರುವ  ಪ್ರತಿ

Leave a Reply

error: Content is protected !!
LATEST
KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌