
ಚಿಕ್ಕಬಳ್ಳಾಪುರ: ಕಳೆದ ವಾರ ಜರುಗಿದ ನಂದಿ ಜಾತ್ರಾ ಕಾರ್ಯಚರಣೆಯಲ್ಲಿ ಚಿಕ್ಕಬಳ್ಳಾಪುರ ವಿಭಾಗದಿಂದ ಒಟ್ಟು 142 ವಾಹನಗಳನ್ನು ಕಾರ್ಯಚರಣೆ ಮಾಡಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ವಿಭಾಗವು ಒಟ್ಟು 97,44,880 ರೂ. ಆದಾಯ ಗಳಿಸಿದೆ.
Advertisemet
ಈ ಆದಾಯವು ವಿಭಾಗದ ಇತಿಹಾಸದಲ್ಲಿಯೇ ನಂದಿ ಜಾತ್ರಾ ಕಾರ್ಯಾಚರಣೆಯಲ್ಲಿ ಗಳಿಸಿದ ಅತಿ ಹೆಚ್ಚಿನ ಆದಾಯವಾಗಿದೆ ಎಂದು ವಿಭಾಗದ ನಿಯಂತ್ರಣಾಧಿಕಾರಿಗಳು ನೌಕರರ ಶ್ರಮಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
Advertisemet
ಶಿವರಾತ್ರಿ ಹಬ್ಬದ ಪ್ರಯುಕ್ತ ಈಶ ಫೌಂಡೇಶನ್ ಹಾಗೂ ನಂದಿ ಜಾತ್ರೆಗೆ ಆಗಮಿಸಿದ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆ ಕಲ್ಪಿಸಿ ಅತಿ ಹೆಚ್ಚಿನ ಸಾರಿಗೆ ಆದಾಯವನ್ನು ಗಳಿಸಲು ಕಾರಣರಾದ ವಿಭಾಗದ ಎಲ್ಲಾ ನೌಕರರಿಗೂ, ಮೇಲ್ವಿಚಾರಕರಿಗೂ ಹಾಗೂ ಅಧಿಕಾರಿಗಳಿಗೂ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
Advertisemet