ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರಲ್ಲಿ ಕೆಎಸ್‌ಆರ್‌ಟಿಸಿಯ ಕಂಡಕ್ಟರ್ ಮುನಿಮಾದಯ್ಯ (Munimadaiah) ಎಂಬುವರು ಒಂದು ವಿನಂತಿ ಮಾಡಿದ್ದಾರೆ.
ಅವರೇ ಹೇಳಿಕೆಯ ಯಥಾಪ್ರತಿ: ಇದುವರೆಗೂ ಸಾರಿಗೆ ನಿಗಮಗಳಲ್ಲಿರುವ ಎಲ್ಲ ಯೂನಿಯನ್ ಅವರ ನಾಟಕವನ್ನು ನೋಡಿದ್ದೀರಿ. ಯೂನಿಫಾರಂ ಭಾಗ್ಯ ಇಲ್ಲ, ಎಂಪ್ಲಾಯಿಗಳಿಗೆ ಆರೋಗ್ಯ ಭಾಗ್ಯ ಇಲ್ಲ, ಅರಿಯರ್ಸ್ ಭಾಗ್ಯ ಇಲ್ಲ, ಗಳಿಕೆ ರಜೆ, ನಗದೀಕರಣ ಇಲ್ಲ. ನಿವೃತ್ತರಾದವರಿಗೆ ಅರಿಯರ್ಸ್ ಇಲ್ಲ, ಸರಿಯಾದ ಪೆನ್ಷನ್ ಕೂಡ ಇಲ್ಲ.
ಮೊದಲು ಜಾತಿಗೊಂದು ಯೂನಿಯನ್ ಆಗಿರುವುದು ತೊಲಗಬೇಕು. ಏಕ ಮಾತ್ರ ಯೂನಿಯನ್ ಇರಬೇಕು. ಆವಾಗ ನೌಕರರಿಗೆ ಬೆಲೆ, ಇಲ್ಲಾಂದ್ರೆ ನೌಕರರ ತಿಥಿ. ಯಾವ ಯೂನಿಯನ್ ಲೀಡರ್ ಆಗಲಿ ನೌಕರರ ಸಮಸ್ಯೆ, ಕೆಲಸದ ಒತ್ತಡದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದೀರಾ ಇಲ್ಲ.
ನೌಕರರನ್ನು ಒಂದು ಕಡೆ ಸಂಸ್ಥೆಯ ಕೆಲವು ಅಧಿಕಾರಿಗಳು ಲೂಟಿ ಮಾಡುತ್ತಾರೆ, ಮತ್ತೊಂದು ಕಡೆ ಯೂನಿಯನ್ ಅವರ ಲೂಟಿ. ಇದರಲ್ಲಿ ಬಲಿ ಪಶು ಆಗುತ್ತಿರುವುದು ನೌಕರ. ಶಕ್ತಿ ಯೋಜನೆ ಜಾರಿ ಮಾಡಿ ಕಂಡಕ್ಟರ್, ಡ್ರೈವರ್‌ಗಳಿಗೆ ಎಷ್ಟು ತೊಂದರೆ ಆಗುತ್ತಿದೆ. ಈ ಬಗ್ಗೆ ಏಕೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತಿಲ್ಲ?
ಇನ್ನು ನೌಕರರಿಗೆ ಬಹಳ ಮುಖ್ಯವಾಗಿ ಸಿಗಬೇಕಿರುವ ಉಚಿತ ಆರೋಗ್ಯದ ಬಗ್ಗೆ ಯಾರಾದರೂ, ಯಾವ ಯೂನಿಯನ್‌ಗಳಾದರೂ ತಲೆಯೆತ್ತಿದ್ದೀರಾ. ರಿ ಬುಕ್ ಓಟಿ ಅಂತ ಬಿಎಂಟಿಸಿಯಲ್ಲಿ ನಾಲ್ಕು ಗಂಟೆಗಳು, ಕೆಎಸ್‌ಆರ್‌ಟಿಸಿಯಲ್ಲಿ 3 ಗಂಟೆಗಳು ಹೆಚ್ಚುವರಿ ಕೆಲಸ ಮಾಡಬೇಕು. ಈ ಬಗ್ಗೆ ಯಾರಾದರೂ ಕೇಳಿದ್ದೀರಾ?
ಸಮವಸ್ತ್ರ ಹೊಲಿಸಲು ಬಟ್ಟೆ ಹೊಲಿಗೆ ಅಂತ ಒಂದು ಜೊತೆಗೆ ಒಂದೂವರೆ ಸಾವಿರ ಕೊಟ್ಟು ಹೊಲಿಸಿಕೊಳ್ಳಬೇಕು. ಆದರೆ, ನಿಗಮದಿಂದ ಕೊಡುವುದು 300 ರೂಪಾಯಿ. ಇದರ ಬಗ್ಗೆ ಯಾರು ಕೇಳಲಿಲ್ಲ. ಇಲ್ಲೇ ಗೊತ್ತಾಗುತ್ತೆ ಯೂನಿಯನ್ ನವರ ಬಂಡವಾಳ ಎಷ್ಟು ಅಂತ.
ಇನ್ನು ರೈಲ್ವೆ ಇಲಾಖೆಯಲ್ಲಿ ದಸರಾ ಹಬ್ಬದಲ್ಲಿ ಪ್ರತಿಯೊಬ್ಬ ನೌಕರರಿಗೂ ಒಂದು ಬಾಕ್ಸ್ ಸಿಹಿ ಹಂಚುತ್ತಾರೆ. ಅಲ್ಲದೆ ಎರಡೂವರೆ ತಿಂಗಳ ಬೋನಸ್ ಕೊಡುತ್ತಾರೆ. ಯಾವ ತುಕಾಲಿ ನನ್ ಮಕ್ಕಳಾದ್ರೂ ಇದರ ವಿಚಾರವಾಗಿ ಮಾತಾಡಿದ್ದೀರಾ? ಹೇಳ್ಕೊಳ್ಳೋಕೆ ನೂರಾರು ಯೂನಿಯನ್. ಎಲ್ಲ ಲುಚ್ಛ ಯೂನಿಯನ್‌ಗಳು.
ಮುಷ್ಕರವೇಳೆ ಸಾವಿರದ ಜನ ಡಿಸ್ಮಿಸ್, ಎಸ್‌ಪಿ ಆದ್ರು ಅವರ ಹೆಂಡತಿ ಮಕ್ಕಳ ಗತಿ ಏನು ಪ್ರತಿಯೊಬ್ಬ ನೌಕರರ ವೇತನದಲ್ಲಿ ಪ್ರತಿ ತಿಂಗಳು ನೂರಾರಂತೆ ಕಡಿತ ಮಾಡಿ ಅವರಿಗೆ ಕೊಡಿ. ನಿಮ್ಮ ಹೋರಾಟ ನೌಕರರ ಪರ ಎಂದು ಹೇಳಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಗೆಗೇಡಿನ ಸಂಗತಿ. ಇನ್ನಾದರೂ ನೌಕರರ ಪರ ನಿಲ್ಲುವುದಕ್ಕೆ ಕಂಕಣ ಬದ್ದರಾಗಿ ಎಂದು ನಿರ್ವಾಹಕ ಮುನಿಮಾದಯ್ಯ ಮನವಿ ಮಾಡಿದ್ದಾರೆ.