KSRTC: ಕಾನೂನು ಬಾಹಿರ ಮುಷ್ಕರ ಬೆಂಬಲಿಸಿದ ಆರೋಪದಡಿ ಚಾಲಕ ಕಂ ನಿರ್ವಾಹಕನ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು ಕೇಂದ್ರೀಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯೂ ಆಗಿರುವ ಶಿಸ್ತುಪಾಲನಾಧಿಕಾರಿ ಘಟಕ-5ದ ಚಾಲಕ-ಕಂ- ನಿರ್ವಾಹಕ (ಬಿಲ್ಲೆ ಸಂ.5638) ಹನುಮಪ್ಪ ಎಸ್ ಬಿರಾದಾರ್ ಕಾನೂನು ಬಾಹಿರ ಮುಷ್ಕರಕ್ಕೆ ನಿಮ್ಮ ಬೆಂಬಲ ವ್ಯಕ್ತಪಡಿಸಿದ್ದೀರಿ ಹೀಗಾಗಿ ನಿಮ್ಮ ಮೇಲೆ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದ ಆಪಾದನಾ ಪತ್ರ ಕೊಟ್ಟಿದ್ದಾರೆ.
ವಿಭಾಗೀಯ ನಿಯಂತ್ರಣಾಧಿಕಾರಿ ಕೊಟ್ಟ ಆಪಾದನಾ ಪತ್ರ: ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ/ ಶಿಸ್ತುಪಾಲನಾಧಿಕಾರಿಯೂ ಆದ ನನ್ನ ಸಮಕ್ಷಮದಲ್ಲಿ, ಘಟಕ-5ರ ಘಟಕ ವ್ಯವಸ್ಥಾಪಕರು ಸಲ್ಲಿಸಿರುವ ವರದಿಯ ಅನುಸಾರ ಹಾಗೂ ನನ್ನ ಮುಂದೆ ಹಾಜರುಪಡಿಸಲಾದ ದಾಖಲೆಗಳನುಸಾರ ಹನುಮಪ್ಪ ಎಸ್ ಬಿರಾದಾರ್ ಅವರ ವಿರುದ್ಧ ಮಾಡಲಾಗಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಸಾಕಷ್ಟು ಸಾಕ್ಷ್ಯಾಧಾರಗಳು ಇರುವುದು ದೃಢಪಟ್ಟಿದೆ. ಆದುದರಿಂದ, ಸಂಸ್ಥೆ ನೌಕರರ (ನಡತೆಮತ್ತು ಶಿಸ್ತು) ನಿಯಮಾವಳಿ-1971ರ ನಿಯಮ19(2) ಮತ್ತು ಅದರ ಜತೆ ಓದಲಾಗುವ ನಿಯಮ-23ರಡಿಯಲ್ಲಿ ದತ್ತವಾಗಿರುವ ಅಧಿಕಾರದ ವ್ಯಾಪ್ತಿಯಲ್ಲಿ ಇವರು ಈ ಕೆಳಕಂಡ ದುರ್ನಡತೆಗಳನ್ನು ಎಸಗಿರುವುದಾಗಿ ಆರೋಪಿಸುತ್ತೇನೆ.
ವಿಭಾಗೀಯ ನಿಯಂತ್ರಣಾಧಿಕಾರಿಯ ಆರೋಪಗಳು ಏನು?: 1) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯು 5-08-2025 ರಿಂದ ‘ಅನಿರ್ದಿಷ್ಟಾವಧಿ ಮುಷ್ಕರ’ಕ್ಕೆ ಕರೆ ನೀಡಿದ್ದು, ನೀವು 5-08-2025 ರಂದು ಯಾವುದೇ ರಜೆ ಅರ್ಜಿಯನ್ನು ಸಲ್ಲಿಸದೇ ಈವರೆಗೆ ನಿಮ್ಮ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗುವುದರ ಮೂಲಕ ಕಾನೂನು ಬಾಹಿರ ಮುಷ್ಕರಕ್ಕೆ ನಿಮ್ಮ ಬೆಂಬಲ ವ್ಯಕ್ತಪಡಿಸಿರುತ್ತೀರಿ. ತನ್ಮೂಲಕ ನೀವು ಘಟಕದ ದೈನಂದಿನ ಅನುಸೂಚಿ ಕಾರ್ಯಾಚರಣೆಗೆ ತೊಂದರೆಯುಂಟು ಮಾಡಿರುವುದಲ್ಲದೇ ಕಾನೂನು ಬಾಹಿರ ಮುಷ್ಕರದಲ್ಲಿ ಭಾಗವಹಿಸಿ ಸಂಸ್ಥೆಯ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸಿರುತ್ತೀರಿ.
2) ಕರ್ನಾಟಕ ಸರ್ಕಾರದ ಅಧಿಸೂಚನೆ ಸಂ:ಟಿಡಿ 213 ಟಿಸಿಓ 2024 2:17-07-2025 “ಕರ್ನಾಟಕ ಅಗತ್ಯ ಸೇವಾ ನಿರ್ವಹಣೆ” ಕಾಯಿದೆ 2013ರನ್ವಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಕರಸಾ ಸಂಸ್ಥೆಗಳನ್ನು ‘ಅಗತ್ಯ ಸೇವೆ’ ಎಂದು ಘೋಷಿಸಿ ‘ಮುಷ್ಕರ’ ಹೂಡುವುದನ್ನು ನಿಷೇಧಿಸಿದ್ದರೂ ನೀವು 5-08-2025 ರಂದು ಸಂಸ್ಥೆಯ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗಿ ಕಾನೂನು ಬಾಹಿರ ‘ಅನಿರ್ದಿಷ್ಟಾವಧಿ ಮುಷ್ಕರ’ದಲ್ಲಿ ಭಾಗಿಯಾಗಿ ಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ‘ಅಗತ್ಯ ಸೇವೆ’ ಒದಗಿಸಲು ಅನಾನುಕೂಲತೆಯಾಗಿ ಮತ್ತು ಸಾರ್ವಜನಿಕರಿಂದ ಸಂಸ್ಥೆಯ ಬಗ್ಗೆ ಕೆಟ್ಟ ಅಭಿಪ್ರಾಯ ಉಂಟಾಗಲು ನೀವು ಕಾರಣರಾಗಿರುತ್ತೀರಿ.
3) ಕರ್ನಾಟಕ ಸರ್ಕಾರದ ಅಧಿಸೂಚನೆ ಸಂ:ಕಾಇ 496 ಎಲ್‌ಡಬ್ಲ್ಯೂಎ 2024 ದಿ:14-07-202500 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ಕೈಗಾರಿಕಾ ವಿವಾದ ಕಾಯ್ದೆ ಕಲಂ 2(n)(vi) ಅಡಿಯಲ್ಲಿ ‘ಸಾರ್ವಜನಿಕ ಉಪಯುಕ್ತ ಸೇವೆ’ ಎಂದು ಘೋಷಿಸಿದೆ. ಕೈಗಾರಿಕಾ ವಿವಾದ ಕಾಯ್ದೆಯ ಕಲಂ 22(1)(d)ರಲ್ಲಿ ಕೈಗಾರಿಕಾ ವಿವಾದವು ಸಂಧಾನ ಪ್ರಕ್ರಿಯೆಯಲ್ಲಿ ಬಾಕಿ ಇರುವಾಗ ಕಾರ್ಮಿಕರು ಯಾವುದೇ ಮುಷ್ಕರ ಹೂಡಬಾರದೆಂಬ ನಿಯಮವಿದೆ. ಆದರೆ ನೀವು 5-08-2025 ಮುಂದುವರೆದಂತೆ ನಿಮ್ಮ ಕರ್ತವ್ಯಕ್ಕೆ ಗೈರುಹಾಜರಾಗಿ ಮುಷ್ಕರದಲ್ಲಿ ಭಾಗಿಯಾಗಿ ಸಾರ್ವಜನಿಕ ಪ್ರಯಾಣಿಕರಿಗೆ ಆನಾನುಕೂಲತೆಯನ್ನುಂಟು ಮಾಡಿ ಸಂಸ್ಥೆಯ ಘನತೆಗೆ ಕುಂದುಂಟಾಗುವಂತೆ ವರ್ತಿಸಿರುತ್ತೀರಿ.
4) ನೀವು 5-08-2025 ರಂದು ಸಂಸ್ಥೆಯ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗಿ ‘ಅನಧಿಕೃತ ಮುಷ್ಕರ’ದಲ್ಲಿ ಭಾಗಿಯಾಗಿರುವುದರಿಂದ ಆ ದಿನದಂದು ನಿಮಗೆ ನಿಯೋಜಿತ ಅನುಸೂಚಿ ಸಂಖ್ಯೆ 80/81 ರಲ್ಲಿ ಕಿ.ಮೀ. 1043 ರದ್ದಾಗಲು ಮತ್ತು ಇದರಿಂದಾಗಿ ಸಂಸ್ಥೆಯ ಸಾರಿಗೆ ಆದಾಯ ರೂ.48,719/- ನಷ್ಟವಾಗಲು ನೀವು ನೇರವಾಗಿ ಹೊಣೆಗಾರರಾಗಿರುತ್ತೀರಿ.
5) ಈ ಮೇಲಿನಂತೆ ನೀವು ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗುವ ಮೂಲಕ ಸರ್ಕಾರದ ಮತ್ತು ಸಂಸ್ಥೆಯ ನಿರ್ದೇಶನಗಳನ್ನು ಉಲ್ಲಂಘಿಸಿ 5-08-2025 ರ ಕಾನೂನು ಬಾಹಿರ ಮುಷ್ಕರಕ್ಕೆ ಬೆಂಬಲ ನೀಡಿ ಸಂಸ್ಥೆಯ ನೌಕರನಿಗೆ ತಕ್ಕುದಲ್ಲದ ರೀತಿ ವರ್ತಿಸಿ ಸಂಸ್ಥೆ ನೌಕರರ (ನಡತೆ ಮತ್ತು ಶಿಸ್ತು) ನಿಯಮಾವಳಿಗಳು 1971ರ ನಿಯಮಾವಳಿ (3)(1) ರ (ii) ಮತ್ತು (iii) ನ್ನು ಉಲ್ಲಂಘಿಸಿರುತ್ತೀರಿ.
ಆರೋಪಗಳ ವಿವರ: ಈ ಮೇಲಿನ ಆರೋಪಗಳು ಘಟಕ ವ್ಯವಸ್ಥಾಪಕರು, ಬೆಂ.ಕೇ.ವಿಭಾಗ, ಘಟಕ-5 ಇವರು ಸಲ್ಲಿಸಿರುವ ವರದಿ ಹಾಗೂ ತತ್ಸಂಬಂಧಿತ ದಾಖಲೆಗಳಾಧಾರಿತವಾಗಿವೆ. ಅದರಂತೆ, ಹನುಮಪ್ಪ ಎಸ್ ಬಿರಾದಾರ್, ಚಾಲಕ-ಕಂ- ನಿರ್ವಾಹಕ, ಬಿಲ್ಲೆ ಸಂ.5638, ಘಟಕ-5 ಇವರು ಈ ಮೇಲೆ ಆರೋಪಿಸಿರುವಂತೆ ನ್ಯೂನ್ಯತೆಗಳನ್ನು ಎಸಗಿರುತ್ತಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳು ಮತ್ತು ದಾಖಲೆಗಳ ಪಟ್ಟಿಯೂ ಇದೆ:
ಸಾಕ್ಷಿಗಳು: ಘಟಕ ವ್ಯವಸ್ಥಾಪಕರು, ಬೆಂ.ಕೇ.ವಿಭಾಗ, ಘಟಕ-5 /1272/25-26 ದಿನಾಂಕ:05/08/2025
ಟಿಪ್ಪಣಿ: ಅವಶ್ಯವಾಗಿದ್ದಲ್ಲಿ ಹೆಚ್ಚುವರಿ ಸಾಕ್ಷಿಗಳನ್ನು ಮತ್ತು ದಾಖಲಾತಿಗಳನ್ನು ಹಾಜರುಪಡಿಸಲಾಗುವುದು.
ನೀವು ಈ ಆಪಾದನಾ ಪತ್ರ ಸ್ವೀಕರಿಸಿದ ಕೂಡಲೇ ನಿಮ್ಮ ಸ್ವರಕ್ಷಣಾ ಉತ್ತರವನ್ನು ಸಲ್ಲಿಸುವಂತೆ ನಿರ್ದೆಶಿಸಲಾಗಿದೆ.
ಮುಂದುವರಿದಂತೆ, ಮೇಲೆ ನಿಗದಿಪಡಿಸಿದ ಅವಧಿಯೊಳಗೆ ನಿಮ್ಮ ಉತ್ತರವನ್ನು ಸಲ್ಲಿಸಲು ತಪ್ಪಿದಲ್ಲಿ ನಿಮ್ಮಿಂದ ಸ್ವರಕ್ಷಣಾ ಹೇಳಿಕೆ ಏನೂ ಇಲ್ಲವೆಂದು ಪರಿಗಣಿಸಿ ಯಾವ ಸೂಚನೆಯನ್ನೂ ನೀಡದೆ ಸಂಸ್ಥೆ ನೌಕರರ (ನಡತೆ ಮತ್ತು ಶಿಸ್ತು) ನಿಯಮಾವಳಿ 1971ರ ಅನುಸಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಸೂಚಿಸಿದ್ದಾರೆ.
ನೌಕರರ ಆಗ್ರಹ: ಇಲ್ಲಿ ಯೂನಿಯನ್ ಮಾಡುವ ತಪ್ಪಿಗೆ ನೌಕರರು ಶಿಕ್ಷೆ ಅನುಭವಿಸಬೇಕು ಈಗ ಎಲ್ಲ ದಾರಿಗಳು ಮುಚ್ಚುತ್ತಿವೆ ಇಲ್ಲಿ ಭ್ರಮೆಯಲ್ಲೇ ಬದುಕಬೇಕೇ ಹೊರತು ವಾಸ್ತವ ಸ್ಥಿತಿಯನ್ನು ಅರಿಯಲು ತುಂಬಾ ಕಷ್ಟ. ಹೀಗಾಗಿ 148/2005 ಬಗ್ಗೆ ವಾದಮಡಲು ಒಳ್ಳೆ ಅವಕಾಶ ಬಳಸಿಕೊಂಡು ಸಾರಿಗೆ ನೌಕರರಿಗೆ ಒಳೆಯದು ಮಾಡಲಿ ಎಂದು ನೌಕರರು ಆಗ್ರಹಿಸಿದ್ದಾರೆ.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...