NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ಡಿಸಿ!

ತುಮಕೂರು ಸಾರಿಗೆ ಡಿಸಿ ಚಂದ್ರಶೇಖರ್‌.
ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಬಸ್‌ಗಳು ರಸ್ತೆಯಲ್ಲಿ ಚಲಿಸುತ್ತಿವೆ ಎಂದರೆ ಒಮ್ಮೊಮ್ಮೆ ಅಪಘಾತಗಳು ಆಗುವುದು ಸಾಮಾನು. ಆದರೆ ಆದ ಅಪಘಾತಗಳನ್ನೇ KSRTCಯ ಅಧಿಕಾರಿಗಳು ಬಂಡವಾಳವನ್ನಾಗಿ ಮಾಡಿಕೊಂಡು ಚಾಲಕರಿಗೆ ಹಿಂಸೆ ಕೊಡುವುದು ಎಷ್ಟರ ಮಟ್ಟಿಗೆ ಸರಿ. ಇನ್ನು ಅಪಘಾತದಲ್ಲಿ ಯಾವುದೆ ಸಾವು ನೋವು ಸಂಭವಿಸದಿದ್ದರೂ ಚಾಲಕನ ಅಮಾನತು ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

ಇನ್ನು ಅಮಾನಾತ ಚಾಲಕ ಸಿಬ್ಬಂದಿ ಮತ್ತು ಜಾಗೃತದಳದ ನಿರ್ದೇಶಕರಿಗೆ ನಡೆದ ವಿಷಯವನ್ನು ಲಿಖಿತವಾಗಿ ತಿಳಿಸಿದ ಬಳಿಕ ನಿರ್ದೇಶಕರು ಚಾಲಕನ ಅಮಾನತು ಆದೇಶವನ್ನು ಕೈ ಬಿಟ್ಟು ಆತನಿಗೆ ಅದೇ ಘಕದಲ್ಲಿ ಕೆಲಸ ಕೊಡಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಆದೇಶ ಮಾಡಿದ್ದರೂ ಸಹ ನಿರ್ದೇಶಕರ ಆದೇಶಕ್ಕೆ ಬೆಲೆ ಕೊಡದೆ ಮೂಲೆಗೆ ಹಾಕಿರುವುದು ಇನ್ನಷ್ಟ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.

ಈ ರೀತಿ ಭ್ರಷ್ಟ ಅಧಿಕಾರಿಗಳ ನಡುವೆ ಚಾಲನಾ ಸಿಬ್ಬಂದಿಗಳು ಕೆಲಸ ಮಾಡುವುದು ಹೇಗೆ ಎಂಬುವುದೇ ಗೊತ್ತಾಗದೆ ಚಾಲನಾ ಸಿಬ್ಬಂದಿ ಮಾನಸಿಕ ಒತ್ತಡಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ.

ಚಾಲಕನಿಗೆ ಹಿಂಸೆ ನೀಡುತ್ತಿರುವ ಪೂರ್ಣ ವಿವರ: ಕೆಎಸ್ಸಾರ್ಟಿಸಿ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅನಾವಶ್ಯಕವಾಗಿ ಸಿಬ್ಬಂದಿಗಳಿಗೆ ಕಿರುಕುಳ ನೀಡುವುದು ಮತ್ತು ಅಮಾನತು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಂಸ್ಥೆಯ ಸಿಬ್ಬಂದಿ ಮತ್ತು ಜಾಗೃತದಳದ ನಿರ್ದೇಶಕರಿಗೆ ಲೋಕೇಶ್‌ ಎಂಬುವರು ದೂರು ನೀಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ತುಮಕೂರು ವಿಭಾಗದ ತುರುವೇಕೆರೆ ಘಟಕದ ಕುಮಾರ್ (ಚಾಲಕ ಬಿಲ್ಲೆ ಸಂಖ್ಯೆ 68) ಅವರು ಓಡಿಸುತ್ತಿದ್ದ ಬಸ್‌ 14.6.2024ರಂದು ಬೆಂಗಳೂರಿನ ಮಾದನಾಯಕನಹಳ್ಳಿ ಬಳಿ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಈ ವೇಳೆ ಬಸ್‌ ಕವಚವು ಜಖಂ ಗೊಂಡಿದ್ದು, ಮೂರು ಮಂದಿ ಪ್ರಯಾಣಿಕರಿಗೆ ತರಚು ಗಾಯಗಳಾಗಿತ್ತು. ಗಾಯಗೊಂಡವರು ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗಳಿಗೆ ತೆರಳಿದ್ದರು.

ಬಳಿಕ ಈ ಸಂಬಂಧ ಯಾವುದೇ ಪ್ರಯಾಣಿಕರು ಚಾಲಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿಲ್ಲ. ಆದರೆ, ವಿಭಾಗೀಯ ಅಧಿಕಾರಿಗಳು ಅಂದು ಪ್ರಯಾಣಿಕರು ದೂರು ಸಲ್ಲಿಸದಿದ್ದಕ್ಕೆ ಪ್ರತಿಯಾಗಿ ಬಸ್‌ನ ನಿರ್ವಾಹಕರಿಂದಲೇ ಚಾಲಕರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆ ದೂರಿನಲ್ಲಿ ಸಹ ಯಾವುದೇ ಪ್ರಯಾಣಿಕರಿಗೆ ಗಾಯವಾಗಿರುವ ಬಗ್ಗೆ ಪೊಲೀಸ್ ಪ್ರಥಮ ವರದಿಯಲ್ಲಿ ದಾಖಲಾಗಿಲ್ಲ. ಆದರೆ ವಿಭಾಗದ ಅಧಿಕಾರಿಗಳು ಗಾಯಗೊಂಡವರಿಗೆ ಹತ್ತು ಸಾವಿರ ರೂ.ಗಳನ್ನು ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಚಾಲಕರಿಗೆ ನೀಡಿಲ್ಲ.

ಅದೂ ಅಲ್ಲದೆ ತುರುವೇಕೆರೆ ಘಟಕದ ಜಾಫರ್ ಎಂಬ ಚಾಲಕರು ಬೆಂಗಳೂರಿನಲ್ಲಿರುವ ಜಯದೇವ ಆಸ್ಪತ್ರೆಗೆ ಸಂಸ್ಥೆಯಿಂದ ನೀಡುವ ಸವಲತ್ತಿನ ಕಾರಣ ಚಿಕಿತ್ಸೆ ಪಡೆಯುವುದಕ್ಕೆ ತೆರಳುತ್ತಿದ್ದರು. ಆದರೆ, ಆ ಚಾಲಕರಿಗೆ ನೀಡಿರುವ ವರದಿಯಲ್ಲಿ ಜಾಫರ್ ಅವರು ಅಪಘಾತದಲ್ಲಿ ಗಾಯಗೊಂಡು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ.

ಇನ್ನು ಇದೆಲ್ಲವನ್ನು ಗಮನಿಸಿದರೆ ವಿಭಾಗ ಮಟ್ಟದ ಅಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರು ಸೇರಿದಂತೆ ಇದರಲ್ಲಿ ಭಾಗಿಯಾಗಿರುವ ಎಲ್ಲರೂ ಸಹ ಚಾಲಕ ಕುಮಾರ್‌ ಅವರನ್ನು ಅಮಾನತು ಮಾಡುವ ದುರುದ್ದೇಶದಿಂದಲೇ ಈ ರೀತಿ ದಾಖಲೆಗಳನ್ನು ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಲೋಕೇಶ್‌ ಆರೋಪಿಸಿದ್ದಾರೆ.

ಇನ್ನು ಚಾಲಕರಿಗೆ ನೀಡಿರುವ ಅಮಾನತು ಆದೇಶದಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ ಸಹ ಮಾರಣಾಂತಿಕ ಗಾಯಗಳಾಗಿವೆ ಎಂದು ಸುಳ್ಳು ಅಂಶವನ್ನು ಸೇರಿಸಿ ದುರುದ್ದೇಶದಿಂದ ಅಮಾನತು ಮಾಡಿದ್ದಾರೆ.

ಇದೇ ವಿಭಾಗದಲ್ಲಿ ಹಲವು ವಾಹನಗಳು ಎರಡು ಮೂರು ಲಕ್ಷ ರೂ. ವೆಚ್ಚದ ವರೆಗೂ ಜಖಂಡಿವೆ. ಅಲ್ಲದೆ ಇದೇ ತುರುವೇಕೆರೆ ಘಟಕದಲ್ಲಿ 5 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿರುವ ಬಗ್ಗೆ ವರದಿ ನೀಡಿದರೂ ಸಹ ಅಂಥ ಚಾಲಕರನ್ನು ಅಮಾನತು ಮಾಡಿಲ್ಲ. ಆದರೆ, ಅಷ್ಟು ದೊಡ್ಡ ಪ್ರಮಾಣದಲ್ಲಿ ನಷ್ಟವಾಗದಿದ್ದರೂ ಚಾಲಕ ಕುಮಾರ್ ಅವರನ್ನು ಮಾತ್ರ ಅಮಾನತು ಮಾಡಲಾಗಿದೆ.

ಹೀಗಾಗಿ ಈ ಎಲ್ಲ ಅಂಶಗಳು ಹಾಗೂ ತನಗೆ ಆಗಿರುವ ತೊಂದರೆ ಬಗ್ಗೆ ಈಗಾಲೇ ಭದ್ರತಾ ಮತ್ತು ಜಾಗೃತದಳ ನಿರ್ದೇಶಕರಾದ ತಮಗೆ 29.08.2024 ರಂದು ಲಿಖಿತವಾಗಿ ಚಾಲಕರು ತಿಳಿಸಿದ್ದಾರೆ. ಅದನ್ನು ಪರಿಶೀಲಿಸಿದ ತಾವು ಕೂಡ ಅಮಾನತು ಆದೇಶವನ್ನು ತೆರವುಗೊಳಿಸಿ ಅದೇ ಘಟಕದಲ್ಲಿ ಕರ್ವವ್ಯ ಕೊಡಬೇಕು ಎಂಬ ಆದೇಶವನ್ನು 02.09.2024 ರಂದು ತುಮಕೂರು ವಿಭಾಗೀಯ ಕಚೇರಿಗೆ ಟಪಾಲ್ ಕಳುಹಿಸಿದ್ದೀರಿ. ಆದರೂ ಸಹ ಇಲ್ಲಿಯವರೆಗೂ ಕುಮಾರ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ ಕೆಲಸ ನಿರ್ವಹಿಸಲು ಅನುಮತಿ ಮಾಡಿ ಕೊಟ್ಟಿಲ್ಲ.

ಇದಕ್ಕೆ ಸಂಬಂಧಿಸಿದ ಕೇಸ್ ವರ್ಕರ್ ಅನ್ನೋ ಚಾಲಕರು ವಿಚಾರಿಸಿದಾಗ ಆ ಪತ್ರವನ್ನು ಹಾಗೂ ಅಮಾನತು ಆದೇಶವನ್ನು ತೆರವುಗೊಳಿಸಿ ದಾಖಲೆ ರೆಡಿ ಮಾಡಿ ವಿಭಾಗಿಯ ನಿಯಂತ್ರಣಾಧಿಕಾರಿಗಳಿಗೆ ಈಗಾಗಲೇ ನೀಡಿದ್ದು ಅವರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಮೌಖಿಕವಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಚಾಲಕರು ಹಲವು ಬಾರಿ ವಿಭಾಗಿಯ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದರೂ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಮಾತ್ರ ಅಮಾನತು ಆದೇಶ ತೆರವುಗೊಳಿಸಲು ಮುಂದಾಗಿಲ್ಲ. ಇದನ್ನು ಗಮನಿಸಿದರೆ ಡಿಸಿ ಅವರ ಉದ್ದೇಶ ಏನು ಎಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಯಾವುದಾದರೂ ನಿರೀಕ್ಷೆ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.

ಅಲ್ಲದೆ ಈ ಆದೇಶವನ್ನು ತಡೆಹಿಡಿದು ಚಾಲಕರಿಗೆ ಕಿರುಕುಳ ನೀಡಿದರೆ ನಮ್ಮ ಬಳಿ ಬಂದು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ದುರುದ್ದೇಶದ ಭಾವನೆಯಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ವಿಬಾಗೀಯ ನಿಯಂತ್ರಣಾಧಿಕಾರಿಗಳು ಎಂಬುವುದು ಗೊತ್ತಾಗುತ್ತಿಲ್ಲ. ಆದರೆ ಅಮಾನತು ಆದೇಶ ತಡೆಹಿಡಿದಿದ್ದಾರೆ ಎಂದರೆ ಈ ಡಿಸಿ ಭಾರಿ ಭ್ರಷ್ಟನೆ ಇರಬೇಕು ಎಂಬುವುದು ಮೇಲ್ನೋಕ್ಕೆ ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಲೋಕೇಶ್‌.

ಇನ್ನು ಈ ಎಲ್ಲ ಅಂಶಗಳನ್ನು ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ತಾವು ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ, ಅದೇ ಘಟಕದಲ್ಲಿ ಕೆಲಸ ಮಾಡಲು ಅನುಮತಿ ನೀಡಿ ಮತ್ತು ಈ ಆದೇಶವನ್ನು ನೀಡಲು ತಡ ಮಾಡಿದ ವಿಭಾಗೀಯ ನಿಯಂತ್ರಣಾಧಿಕಾರಿಗಳ ವಿರುದ್ಧ ಸಂಸ್ಥೆಯ ನಿಯಮಗಳ ರೀತಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್