NEWSನಮ್ಮಜಿಲ್ಲೆನಮ್ಮರಾಜ್ಯ

KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮಜಾಯಿಷಿ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ- ಅಧಿಕಾರಿಗಳ ನಡೆಗೆ ನೌಕರರ ಬೇಸರ ಎಂಬ ಶೀರ್ಷಿಕೆಯಡಿ “ವಿಜಯಪಥ”ದಲ್ಲಿ ಸೆ.12ರಂದು ಪ್ರಕಟವಾಗಿರುವ ವರದಿಗೆ ಘಟಕ ವ್ಯವಸ್ಥಾಪಕರು ಸಮಜಾಯಿಷಿ ನೀಡಿದ್ದಾರೆ.

ಚಿಕ್ಕಮಗಳೂರು ಘಟಕವು ಕೇಂದ್ರ ಸ್ಥಾನದಲ್ಲಿರುವ ಅತ್ಯಂತ ದೊಡ್ಡದಾದ ಘಟಕವಾಗಿದ್ದು, ಈ ಘಟಕದಲ್ಲಿ ಆಡಳಿತ/ ತಾಂತ್ರಿಕ ಸಿಬ್ಬಂದಿಗಳ ಜೊತೆಗೆ ಚಾಲನಾ ಸಿಬ್ಬಂದಿಗಳು ಒಟ್ಟು 565 ಇದ್ದು, ಈ ಘಟಕದಲ್ಲಿ ಪ್ರತೀ ವರ್ಷವೂ ಗಣೇಶ ಹಬ್ಬದಂದು ಶ್ರೀ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಗಳಿಂದ ಗಣಪತಿಯನ್ನು 5 ದಿನಗಳವರೆಗೆ ಘಟಕದಲ್ಲಿರಿಸಿ ಎಲ್ಲ ಸಿಬ್ಬಂದಿಗಳು ವಿಜೃಂಭಣೆಯಿಂದ ಮೆರವಣಿಗೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿರುವ ಘಟಕವಾಗಿದೆ.

ಪ್ರತೀ ವರ್ಷದಂತೆ ಈ ವರ್ಷವೂ ಸಹ 07.09.2024 ರಂದು ಎಲ್ಲ ನೌಕರರು ಸೇರಿ ಘಟಕದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಅದರಂತೆ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದು, 09.09.2024 ರಂದು ನಮ್ಮ ಘಟಕದ ಚಾಲಕರಾದ ರವಿ ಎಸ್. (ಚಾಲಕ ಬಿಲ್ಲೆ ಸಂಖ್ಯೆ 4921) ಅವರು ಅನುಸೂಚಿ ಸಂಖ್ಯೆ 25/26, ಚಿಕ್ಕಮಗಳೂರು-ಕೊಯಮತ್ತೂರು ಮಾರ್ಗದಲ್ಲಿ ಚಾಲಕರಾಗಿ ಕರ್ತವ್ಯಕ್ಕೆ ತೆರಳಿದ್ದರು.

ಆ ದಿನ ರಾತ್ರಿ ಕೊಯಮತ್ತೂರಿನಲ್ಲಿ ವಾಸ್ತವ್ಯ ಮಾಡಿ, 10.09.2024 ರ ಬೆಳಗ್ಗೆ ನೈಸರ್ಗಿಕ ಕರೆಗೆ ತೆರಳಿದ್ದು, ಬೆಳಗ್ಗೆ 4.30 ರಲ್ಲಿ ವಿಧಿವಶರಾಗಿದ್ದು, ಅವರ ಪಾರ್ಥಿವ ಶರೀರವನ್ನು ಕೊಯಮತ್ತೂರಿನಿಂದ (ಹೊರ ರಾಜ್ಯವಾಗಿದ್ದು) ತರಲು ಘಟಕದ ಚಾಲನಾ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ತಂಡವು ಪತ್ನಿ & ಮಗನನ್ನು ಕರೆದುಕೊಂಡು ಕೊಯಮತ್ತೂರಿಗೆ ತೆರಳಿ, ಪೊಲೀಸ್ ಠಾಣೆಯ ಎಲ್ಲ ನಿಯಮಾವಳಿ & ಶವ ಪರೀಕ್ಷಾ ನಿಯಮಾವಳಿಯನ್ನು ಪೂರೈಸಲಾಯಿತು.

ಬಳಿಕ ಮೃತರ ಪತ್ನಿ ಮತ್ತು ಕುಟುಂಬಸ್ಥರು ಪಾರ್ಥಿವ ಶರೀರವನ್ನು ಕೊಯಮತ್ತೂರಿನಿಂದ ಭದ್ರಾವತಿಗೆ ತೆಗೆದುಕೊಂಡು ಹೋಗಲು ಹಠ ಮಾಡಿದ್ದರು. ಆದರೆ, ಘಟಕದ ನೌಕರರು ಪಾರ್ಥಿವ ಶರೀರವನ್ನು ಘಟಕದ ಸಿಬ್ಬಂದಿಗಳು ವೀಕ್ಷಿಸಲೇಬೇಕು ಎಂದು ತಿಳಿಸಿ, ಈ ಕುರಿತು ನೌಕರರಲ್ಲಿ ಹಿರಿಯ ನೌಕರರು, ಗಣಪತಿ ಸೇವಾ ಸಮಿತಿ ಹಾಗೂ ಗಣಪತಿ ದೇವಾಲಯದ ಭಟ್ಟರು ಸೇರಿ 10.09.2024 ರಂದು ಸಭೆ ನಡೆಸಿ ಗಣಪತಿ ಪ್ರತಿಷ್ಠಾಪನೆ ಮಾಡಿರುವ ಉದ್ದೇಶದಿಂದ ಪಾರ್ಥಿವ ಶರೀರವನ್ನು ಘಟಕದ ಮುಂಭಾಗದಲ್ಲಿರಿಸಲು ತೀರ್ಮಾನ ಕೈಗೊಂಡಿದ್ದರು.

ಮೃತ ರವಿ ಎಸ್. ಅವರ ಮನೆಯಲ್ಲಿ ಇನ್ನೊಂದು ಸಾವಾಗಿದೆ ಎಂದು ತಿಳಿಸಿ ಕುಟುಂಬಸ್ಥರು ಅಂತಿಮ ದರ್ಶನಕ್ಕೆ ಘಟಕಕ್ಕೆ ತರುವುದು ಬೇಡ ಎಂದು ಹಠ ಮಾಡಿದರೂ ಸಹ ಘಟಕದ ನೌಕರರು ಎಲ್ಲರ ಅಂತಿಮ ದರ್ಶನಕ್ಕಾಗಿ ಘಟಕದ ಮುಂಭಾಗದಲ್ಲಿ ಶುಚಿಯಾದ ಸ್ಥಳದಲ್ಲಿಯೇ ಪಾರ್ಥಿವ ಶರೀರವನ್ನು ಇರಿಸಿ, 11.09.2024ರ ಬೆಳಗ್ಗೆ 06.10 ರಿಂದ 7.10 ರ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಪಾರ್ಥಿವ ಶರೀರದ ಅಂತಿಮ ದರ್ಶನ ವೀಕ್ಷಿಸಲು ನಿವೃತ್ತಿ ಹೊಂದಿದ ಇಲಾಖಾ ನೌಕರರು, ಘಟಕದ ಎಲ್ಲ ನೌಕರರು ಹಾಗೂ ಸಾರ್ವಜನಿಕರಾಧಿಯಾಗಿ ದರ್ಶನ ಪಡೆದಿದ್ದು, ಇದರಿಂದ ಮೃತರ ಪತ್ನಿ ಹಾಗೂ ಅವರ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿ ಧನ್ಯತೆ ತಿಳಿಸಿರುತ್ತಾರೆ.

ಆದರೆ, 12.09.2024 ರಂದು ವಿಜಯಪಥ ಪತ್ರಿಕೆಯಲ್ಲಿ ತ್ಯಾಜ್ಯವಿರುವ ಸ್ಥಳದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದೆ ಎಂದು ಪ್ರಕಟವಾಗಿದೆ. ಇದು ಘಟಕದ ಮುಂಭಾಗದ ಆವರಣವಾಗಿದೆ. ಯಾವುದೇ ಕಸ/ ತ್ಯಾಜ್ಯವಿರುವ ಸ್ಥಳದಲ್ಲಿ ಪಾರ್ಥಿವ ಶರೀರಿರವನ್ನು ಇರಿಸಿರಲಿಲ್ಲ. ಆದರೆ ಘಟಕದ ನೌಕರರ ತೀರ್ಮಾನದಂತೆಯೇ ಗಣಪತಿ ಮೂರ್ತಿ ಪ್ರತಿಷ್ಠಾಪನೆಯಿಂದಾಗಿ ಘಟಕದ ಮುಂಭಾಗ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಈ ದಿಸೆಯಲ್ಲಿ ಯಾವುದೇ ಪ್ರಮಾದ ಜರುಗಿಲ್ಲ ಎಂದು ಘಟಕ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.

Leave a Reply

error: Content is protected !!
LATEST
KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತ ಕಟ್ಟುನಿಟ್ಟಿನ ಕಾನೂನು ಜಾರಿಗೆ ರೈತ ಮುಖಂಡರ ಆಗ್ರಹ KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪತ್ನಿ ಪ್ರಾಣಾಪಾಯದಿಂದ ಪಾರು