- ನಮ್ಮ ಸಾರಿಗೆ ನಿಗಮದಲ್ಲಿ ಎಂಡಿ, ಡಿಪಿಯವರನ್ನು ಹೊರೆತುಪಡಿಸಿದರೆ ಉಳಿದ ನಾವೆಲ್ಲರೂ ಕೂಡ ಸಾರಿಗೆ ಸಿಬ್ಬಂದಿಗಳೇ ಅಲ್ಲವೇ?
ಹೋರಾಟ ಅನ್ನೋದು ಅನ್ಯಾಯಕ್ಕೆ ಒಳಗಾದ ಪ್ರತಿಯೊಬ್ಬ ಪ್ರಜೆಯ ಹಾಗೂ ನೌಕರರ ಜನ್ಮಸಿದ್ದ ಹಕ್ಕು ಎನ್ನುವುದರಲ್ಲಿ ಯಾವುದೇ ಸಂಶಯಬೇಡ. ವಾಸ್ತವ ಹೀಗಿರುವಾಗ ನಮ್ಮ ಬೇಡಿಕೆ ಈಡೇರಿಕೆಗಾಗಿ ಚಾಲಕರು, ನಿರ್ವಾಹಕರು, ತಾಂತ್ರಿಕಸಿಬ್ಬಂದಿಗಳು ರಸ್ತೆಗಿಳಿದು ಎಲ್ಲ ನಮ್ಮ ಸಾರಿಗೆಯ ಸಿಬ್ಬಂದಿಗಳ ಪರವಾಗಿ ಹೋರಾಟಕ್ಕೆ ನಿಂತರೆ ಅಧಿಕಾರಿ ವರ್ಗದವರು ಕೂಡ ಸರದಿಸಾಲಿನಲ್ಲಿ ನಿಂತು ಹೋರಾಡಬೇಕಾ..?. ಇಲ್ಲ ಎಲ್ಲರ ಪರವಾಗಿ ನ್ಯಾಯಕೇಳಲು ನಿಂತವರ ಬೆನ್ನುಮೂಳೆ ಮುರಿಯಬೇಕಾ..? ಇಂತಹ ಹೀನ ಕೃತ್ಯ ನಡೆಯುವುದು ನಮ್ಮ ಸಾರಿಗೆ ಸಂಸ್ಥೆಯಲ್ಲಿ ಮಾತ್ರ.
ಇದು ಅವಾಗಿನಿಂದ ನಡೆದುಕೊಂಡು ಬಂದಿರುವ ಪದ್ಧತಿ ಅಂತ ಸುಮ್ಮನಾಗುವ ವಿಷಯವಂತು ಅಲ್ಲವೇ ಅಲ್ಲ. ಈ ಪದ್ಧತಿಯಿಂದಲೇ ನಮ್ಮ ಸಾರಿಗೆ ನೌಕರರಿಗೆ ನ್ಯಾಯಸಿಗದೇ ನಮ್ಮ ಹೋರಾಟಗಳು ಅರೆಬರೆ ಬೆಂದ ಮಡಿಕೆಯಂತೆ ಆಗುತ್ತಿರುವುದು ಸತ್ಯಸಂಗತಿ.
ನಾವೆಲ್ಲರೂ ಕೂಡ ಸಾರಿಗೆ ಸಂಸ್ಥೆಯ ನೌಕರರೇ ಹೊರತು ಬೇರೆ ಯಾರು ಅಲ್ಲ ಅಲ್ಲವೇ? ನಮ್ಮಲ್ಲಿಯೇ ನಾವು ಮೇಲಧಿಕಾರಿಗಳು, ಅಧಿಕಾರಿಗಳು, ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು, ತನಿಖಾದಳದವರು ಅಂತೆಲ್ಲ ಭಿನ್ನಾಭಿಪ್ರಾಯವೇಕೆ ಎಂಬುದು ನನ್ನ ಯಕ್ಷಪ್ರಶ್ನೆ ಸತ್ಯವೂ ಕೂಡ ಹೌದು..
ಕೇವಲ ಚಾಲಕ, ನಿರ್ವಾಹಕ, ತಾಂತ್ರಿಕಸಿಬ್ಬಂದಿಗಳಿಗಷ್ಟೇ ವೇತನ ಹೆಚ್ಚಳ ಆಗೋದ ಇಲ್ಲ ಎಲ್ಲ ವರ್ಗದವರಿಗೂ ವೇತನ ಹೆಚ್ಚಳ ಆಗೋದ ಅನ್ನೋದು ನನ್ನ ಇನ್ನೊಂದು ಪ್ರಶ್ನೆ.
ಅದೇನೇ ಇರಲಿ ನ್ಯಾಯಕ್ಕಾಗಿ ನಮ್ಮ ಅಧಿಕಾರಿಗಳು ಮತ್ತು ಇನ್ನಿತರೇ ಸಿಬ್ಬಂದಿ ವರ್ಗದವರು ಹೋರಾಟ ಮಾಡೋದು ಬೇಡ. ಏಕೆಂದರೆ ಅದರ ಅವಶ್ಯಕತೆ ಅವರಿಗಿಲ್ಲ ಬಿಡಿ ಅಂತಹ ಜಂಜಾಟದಲ್ಲಿ ಅವರು ಕೆಲಸ ಮಾಡುವುದೇ ಇಲ್ಲ. ಆದರೇ, ವೇತನ ಹೆಚ್ಚಳಕ್ಕಾಗಿಯಾದರೂ ಅವರು ಹೋರಾಟ ಮಾಡಬೇಕಲ್ಲವೇ? ಇದು ಕೂಡ ನನ್ನ ಯಕ್ಷಪ್ರಶ್ನೆಯೇ ಆಗಿದೆ.
ಬೇರೆ ಬೇರೆ ಇಲಾಖೆಗಳಲ್ಲಿ, ನಿಗಮಗಳಲ್ಲಿ, ಬ್ಯಾಂಕ್ ನೌಕರರಲ್ಲಿ ಏಕೆ ಇಂತಹ ಭಿನ್ನಾಭಿಪ್ರಾಯವಿಲ್ಲ ಎನ್ನುವುದೂ ಕೂಡ ನನ್ನ ಇನ್ನೊಂದು ದೊಡ್ಡಪ್ರಶ್ನೆ. ನಮ್ಮ ಸಾರಿಗೆ ನಿಗಮದಲ್ಲಿ ಎಂಡಿ, ಡಿಪಿಯವರನ್ನು ಹೊರೆತುಪಡಿಸಿದರೆ ಉಳಿದ ನಾವೆಲ್ಲರೂ ಕೂಡ ಸಾರಿಗೆ ಸಿಬ್ಬಂದಿಗಳೇ ಅಲ್ಲವೇ? ಇದರಲ್ಲೇನಾದರೂ ತಾರತಮ್ಯವಿದೆಯೇ ಅನ್ನೋದು ಕೂಡ ನನ್ನ ಮತ್ತೊಂದು ಪ್ರಶ್ನೆ.
ಒಂದು ಮನೆಯಲ್ಲಿ ಐದು ಜನ ಕುಟುಂಬ ಸದಸ್ಯರಿದ್ದು ಅವರೆಲ್ಲರೂ ಕೂಡ ಬೇರೆ ಬೇರೆ ವೃತ್ತಿಯಲ್ಲಿದ್ದರೂ ಸಹ ಅವರು ಒಂದೇ ಮನೆಯ ಕುಟುಂಬ ಸದಸ್ಯರಲ್ಲದೇ ಬೇರೆಯವರಗಲು ಸಾಧ್ಯವೇ ಇದು ಮತ್ತೊಂದು ಪ್ರಶ್ನೆ.

ಹೀಗೆ ಪಟ್ಟಿಮಾಡುತ್ತ ಹೋದರೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಇರಲಿ ಮುಖ್ಯವಾದ ವಿಷಯಕ್ಕೆ ಬರೋಣ ಸರ್ಕಾರದ ತಾರತಮ್ಯ ಧೋರಣೆಯ ವಿರುದ್ಧ ನಮ್ಮ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಮಗೆ ನ್ಯಾಯಬದ್ಧವಾಗಿ ನೀಡಬೇಕಾದ ವೇತನ ಹಾಗೂ ಇನ್ನಿತರ ನಿಯಮಬದ್ದ ಸಂವಿಧಾನಬದ್ದ ಸವಲತ್ತುಗಳನ್ನು ನೀಡುವುದರಲ್ಲಿ ಸರ್ಕಾರ ವಿಫಲವಾದರೆ ಅದನ್ನು ಕಾನೂನುಬದ್ದ ಹೋರಾಟದ ಮುಖಾಂತರ ಪಡೆದುಕೊಳ್ಳುವ ಹಕ್ಕನ್ನು ನಮ್ಮ ಭಾರತ ದೇಶದ ಪವಿತ್ರ ಸಂವಿಧಾನದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರೇ ನೀಡಿರುವಾಗ ಇದರಲ್ಲಿ ನಮ್ಮ ನಮ್ಮಲ್ಲೇ ತಾರತಮ್ಯವೇಕೆ?
ಹೋರಾಟ ಅನ್ನೋದು ಅನ್ಯಾಯಕ್ಕೆ ಒಳಗಾದ ಪ್ರತಿಯೊಬ್ಬ ಪ್ರಜೆಯ ಹಾಗೂ ನೌಕರರ ಜನ್ಮಸಿದ್ದ ಹಕ್ಕು ಎನ್ನುವುದರಲ್ಲಿ ಯಾವುದೇ ಸಂಶಯಬೇಡ. ವಾಸ್ತವ ಹೀಗಿರುವಾಗ ನಮ್ಮ ಬೇಡಿಕೆ ಈಡೇರಿಕೆಗಾಗಿ ಚಾಲಕರು, ನಿರ್ವಾಹಕರು, ತಾಂತ್ರಿಕಸಿಬ್ಬಂದಿಗಳು ರಸ್ತೆಗಿಳಿದು ಎಲ್ಲ ನಮ್ಮ ಸಾರಿಗೆಯ ಸಿಬ್ಬಂದಿಗಳ ಪರವಾಗಿ ಹೋರಾಟಕ್ಕೆ ನಿಂತರೆ ಅಧಿಕಾರಿ ವರ್ಗದವರು ಕೂಡ ಸರದಿಸಾಲಿನಲ್ಲಿ ನಿಂತು ಹೋರಾಡಬೇಕಾ..?. ಇಲ್ಲ ಎಲ್ಲರ ಪರವಾಗಿ ನ್ಯಾಯಕೇಳಲು ನಿಂತವರ ಬೆನ್ನುಮೂಳೆ ಮುರಿಯಬೇಕಾ..? ಇಂತಹ ಹೀನ ಕೃತ್ಯ ನಡೆಯುವುದು ನಮ್ಮ ಸಾರಿಗೆ ಸಂಸ್ಥೆಯಲ್ಲಿ ಮಾತ್ರ.
ಹೋರಾಟಗಾರರ ಹೆಸರನ್ನು ಗುರುತಿಸಿ ಘಟಕ ಮಟ್ಟದ ಅಧಿಕಾರಿ ವರ್ಗದವರು ಹಾಗೆ ಮುಂದುವರಿದು ವಿಭಾಗಮಟ್ಟದ ಅಧಿಕಾರಿ ವರ್ಗದವರು ಕೇಂದ್ರ ಕಚೇರಿಗೆ ಅಮಾಯಕ ನೌಕರರನ್ನು ಫೋಟೋ ಸಮೇತ ರವಾನೆಮಾಡಿ ಹೋರಾಟಗಾರರ ಭವಿಷ್ಯಕ್ಕೆ ಎಳ್ಳು ನೀರು ಬಿಡುವ ಕೆಲಸವನ್ನು ಅಧಿಕಾರಿ ವರ್ಗದವರು ಮಾಡಿದಾಗ ನಮಗೆ ನ್ಯಾಯಸಿಗುವುದು ಕನಸಿನ ಮಾತಲ್ಲವೇ?
ಇಂತಹ ದೌರ್ಭಾಗ್ಯ ನಮಗೆ ಬೇಕೆ ಎನ್ನುವುದು ಚಾಲಕ ನಿರ್ವಾಹಕ ತಾಂತ್ರಿಕ ಸಿಬ್ಬಂದಿಗಲ್ಲಿ ಎದ್ದಿರುವ ಕೂಗು ಸಹಜವಾದದ್ದೇ ಎನ್ನುವುದು ನನ್ನ ಅಭಿಪ್ರಾಯ ಮತ್ತು ಆಲೋಚನೆ ಕೂಡ. ಯಶಸ್ಸು ಸಿಗುವುದಾದರೆ ಇಡೀ ಕುಟುಂಬ ಸದಸ್ಯರಿಗೆ ಸಿಗಲಿ. ಕೇಡು ಆಗುವುದಾದರೆ ಎಲ್ಲರಿಗೂ ಆಗಲಿ ಅಣ್ಣಂದಿರನ್ನು ಕಾಪಾಡಲು ಹೋಗಿ ತಮ್ಮ ನೀರುಪಾಲಾಗಿ ಸಾಯುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ನನ್ನ ಅಂತರಾಳದ ನೋವಿನ ಮಾತು ತಪ್ಪಿದ್ದರೆ ಕ್ಷಮೆ ಇರಲಿ..
ಇಂತಿ ನಿಮ್ಮ ನೊಂದಿರುವ ಸಹೋದ್ಯೋಗಿ ಬಿಳಿಗಿರಯ್ಯ, ಚಾಲಕ, ನಂಜನಗೂಡು ಘಟಕ.
Related


You Might Also Like
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...
ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ ಅಧಿಕೃತವಾಗಿ ಆಹ್ವಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ HCM
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅಧಿಕೃತವಾಗಿ ಆಹ್ವಾನಿಸಿದರು. ಇದೇ ಸೆ.22 ರಂದು ಪ್ರಾರಂಭವಾಗಲಿರುವ...
ಮೊಸಳೆಹೊಸಳ್ಳಿ ದುರಂತ: ಮೃತರ ಮನೆಗಳಿಗೆ ವ್ಹೀಲ್ ಚೇರ್ನಲ್ಲೇ ತೆರಳಿ ಸಾಂತ್ವನ ಹೇಳಿದ ಮಾಜಿ ಪ್ರಧಾನಿ ಎಚ್‌ಡಿಡಿ
ಹಾಸನ: ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಮೊನ್ನೆ ನಡೆದ ಅಪಘಾತ ಪ್ರಕರಣ ನಿಜಕ್ಕೂ ಘನಘೋರ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಂದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ...
ಸಾಲಬಾಧೆ-ಗಂಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆಗೆ ಯತ್ನ ಮೂವರು ಮೃತ: ಸಾವು ಬದುಕಿನ ನಡುವೆ ತಾಯಿ ಸೆಣಸಾಟ
ಹೊಸಕೋಟೆ: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಗಂಡ, ಇಬ್ಬರು ಮಕ್ಕಳನ್ನು...
KSRTC ಹಾಸನ: ಸತ್ಯ ಮರೆಮಾಚಿದ ತನಿಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ತನಿಖಾ ಸಿಬ್ಬಂದಿ ಸತ್ಯ ಮರೆಮಾಚಲು ಬಾಡಿ ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್...
KSRTC ಹಾಸನ: ತನಿಖಾಧಿಕಾರಿಗಳ ಬಾಡಿ ಕ್ಯಾಮೆರಾದ ವಿಡಿಯೋ ರೆಕಾರ್ಡಿಂಗ್ ಕೊಡಲು ವಿಫಲ- ಆರೋಪ ಪತ್ರ ಜಾರಿ ಮಾಡಿದ ಡಿಸಿ
ಹಾಸನ: ಸಾರಿಗೆ ಸಂಸ್ಥೆಯ ಮಾರ್ಗ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಹಾಕಿಕೊಂಡು ತನಿಖೆ ಮಾಡದ ಪರಿಣಾಮ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ ನೌಕರನಿಗೆ ವಿಡಿಯೋ ರೆಕಾರ್ಡಿಂಗ್ ಕೊಡಲು...
ಮೆಜೆಸ್ಟಿಕ್ BMTC: ಟೀ ಚೆನ್ನಾಗಿರುವುದಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ- ಆರೋಪಿ ಬಂಧನ
ಬೆಂಗಳೂರು: ಈ ಅಂಗಡಿಯಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಸಹೋದ್ಯೋಗಿಗೆ ಹೇಳಿದ್ದಕ್ಕೆ ಕುಪಿತನಾದ ಟೀ ಮಾರುವ...
KRSTC: ಅನ್ಯಮಾರ್ಗದಲ್ಲಿ ಹೋಗಲು ಮಹಿಳಾ ಕಂಡಕ್ಟರನ್ನು ರಾತ್ರಿ ಅರ್ಧದಲ್ಲೇ ಇಳಿಸಿಹೋದ ಸಹೋದ್ಯೋಗಿಗಳು…!
ಸಾರಿಗೆ ಚಾಲನಾ ಸಿಬ್ಬಂದಿಗಳಲ್ಲಿ ಒಬ್ಬರಿಗೊಬ್ಬರು ಆಗುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಚಾಲನಾ ಸಿಬ್ಬಂದಿಗಳಲ್ಲಿ...
ಸೆ.22ರಿಂದ ಅ.7ರವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ...