NEWSನಮ್ಮಜಿಲ್ಲೆ

KSRTC ECCS ಚುನಾವಣೆ: ಕೂಟ ಲೀಡಲಿದೆ ಗೆದ್ದಿಲ್ಲ – ಆದರೂ ಗೆದ್ದೇಬಿಟ್ಟಿದ್ದೇವೆಂದು ಬೀಗುವುದು ಸಲ್ಲ- ಪ್ರಜ್ಞಾವಂತ ಸದಸ್ಯರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಇದೇ ಜುಲೈ 7ರಂದು ಬೆಂಗಳೂರಿನಲ್ಲಿ ನಡೆದಿದ್ದು, ಮತದಾರರ ಸಂಬಂಧ ಕೋರ್ಟ್‌ನಲ್ಲಿ ಪ್ರಕರಣವಿರುವುದರಿಂದ ಜುಲೈ 18ರ ನಂತರ ಯಾರುಯಾರು ಜಯಗಳಿಸಿದ್ದಾರೆ ಎಂಬುವುದು ಸ್ಪಷ್ಟವಾಗಲಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈ ನಡುವೆ ಕೋರ್ಟ್ ಆದೇಶ ಪ್ರಕಾರ ಸಹಕಾರ ಸಂಘದ 7091 ಸದಸ್ಯರಿಗೆ ಮತದಾನ ಮಾಡಲು ಅವಕಾಶವಿತ್ತು. ಆದರೆ, ಕೆಲ ತಂತ್ರಕುತಂತ್ರದಿಂದ ಕೋರ್ಟ್‌ ಆದೇಶವನ್ನೆ ಉಲ್ಲಂಘಿಸಿ ಹಲವು ಸದಸ್ಯರಿಗೆ ಮತದಾನ ಮಾಡಲು ಅವಕಾಶ ನೀಡಿರಲಿಲ್ಲ.

ಆದರೆ, ಇದರಿಂದ ಕುಪಿತಗೊಂಡು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ ಪರಿಣಾಮ ಎಲ್ಲರಿಗೂ ಮತದಾನ ಮಾಡಲು ಅವಕಾಶ ಕೊಡಿಸಲಾಯಿತು. ಆದರೂ ಸಹ ಸಾವಿರಾರು ನೌಕರರು ಮತದಾನ ಮಾಡಲು ಮಅವಕಾಶದಿಂದ ವಂಚಿತರಾದರು. ಇದರಿಂದ ದೂರದ ಊರುಗಳಿಂದ ಬಂದಿದ್ದ ನೌಕರರೂ ಮತದಾನ ಮಾಡದೇ ವಾಪಸ್‌ ಹೋದರು.

ಶಾಪ ಮತ್ತು ಕಣ್ಣೀರು ಹಾಕಿ ಹೋದ ಅವರ ಶಾಪ ಮತ್ತು ಕಣ್ಣೀರಿಗೆ ಜಯ ಸಿಕ್ಕಿದೆ ಮತ್ತು ಸತ್ಯಕ್ಕೆ ಜಯವಾಗಿದೆ. ಟೋಟಲ್ 3059 ಮತದಾನ ನಡೆದಿದೆ. ಅದರಲ್ಲಿ 2000 ಮತಗಳ ಎಣಿಕೆ ನಡೆದಿದ್ದು, ಅದರಲ್ಲಿ ಸಾರಿಗೆ ನೌಕರರ ಕೂಟದ ತಂಡದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ ಎಂದು ನೌಕರರ ಕೂಟದ ಅನಿಲ್ ಕುಮಾರ್ ತಿಳಿಸಿದ್ದಾರೆ.

ಇನ್ನು ಉಳಿದ 1059 ಮತಗಳ ಎಣಿಕೆಗೆ ನ್ಯಾಯಾಲಯ ಆದೇಶ ಮಾಡಬೇಕು. ಏಕೆಂದರೆ ಇವು ನ್ಯಾಯಾಲಯ ಆದೇಶದಿಂದ ಬಂದು ಮತ ಚಲಾಯಿಸಿದ ನೌಕರರ ಮತಗಳು. ಹೀಗಾಗಿ ಇದೇ ಜುಲೈ 18 ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದ್ದು ಅಂದು ಮತ ಎಣಿಕೆ ಯಾವಗ ಮಾಡಬೇಕು ಎಂಬ ದಿನಾಂಕವನ್ನು ನ್ಯಾಯಾಲಯವು ನಿಗದಿಪಡಿಸುತ್ತದೆ.

ಆ ಬಳಿಕ 1059 ಮತಗಳ ಎಣಿಕೆ ಕಾಋಯ ನಡೆಯಲಿದ್ದು ಅಂದು ಕೂಡ ಸಾರಿಗೆ ನೌಕರರ ಕೂಟ ಭರ್ಜರಿ ಜಯಭೇರಿ ಬಾರಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಅನಿಲ್‌ ತಿಳಿಸಿದ್ದು, ಈಗಾಗಲೇ ಗೆದ್ದೆ ಬಿಟ್ಟಿದ್ದೇವೆ ಎಂಬ ಹುಮ್ಮಸ್ಸಿನಲ್ಲಿ ಕೂಟದ ಮುಖಂಡರು ಬೀಗುತ್ತಿದ್ದಾರೆ. ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ.

ಕೋರ್ಟ್‌ ಆದೇಶ ಮಾಡಿದ ಬಳಕಿ ಉಳಿತ ಮತ ಎಣಿಕೆ ಆದ ನಂತರ ಸ್ಪಷ್ಟ ಬಹುಮತ ಸಿಗಲಿದ್ದು ಅಂದು ಸಮಾನ ಮನಸ್ಕರ ಟೀಂ ಅಥವಾ ಕೂಟದ ಟೀಂ ಯಾವುದು ಜಯಗಳಿಸಿದೆ ಎಂಬುವುದು ಗೊತ್ತಾಗಲಿದೆ. ಹೀಗಾಗಿ ಮೂರು ಕಾಸಿಗೆ ಮಾನ ಮರ್ಯಾದೆ ಮಾರಿಕೊಂಡವರಂತೆ ಮನಸ್ಸಿಗೆ ಅನಿಸಿದ್ದೆಲ್ಲವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕದೆ ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು ಎಂದು ಪತ್ತಿನ ಸಹಕಾರ ಸಂಘದ ಪ್ರಜ್ಞಾವಂತ ಸದಸ್ಯರು ಸಲಹೆ ನೀಡಿದ್ದಾರೆ.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ