ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು-ನೌಕರರಿಗೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಕೊಡುವ ಸಂಬಂಧ 2020ಕ್ಕೂ ಹಿಂದೆಯೇ ಅಂದಿನ ಸರ್ಕಾರ ನಿರ್ಧರಿಸಿತ್ತು.
ಆದರೆ, ಆ ಸರ್ಕಾರದ ಮತ್ತು ನಿಗಮ ಮಂಡಳಿಗಳ ದಾರಿ ತಪ್ಪಿಸಿ ಇಲ್ಲ ಅಗ್ರಿಮೆಂಟ್ ಮಾಡಿದರೆ ನಿಮಗೆ ಈ ರೀತಿ ಲಾಭವಾಗುತ್ತದೆ ಎಂದು ಕಿವಿವೂದಿ ಅಂದಿನ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರ ದಾರಿ ತಪ್ಪಿಸಿದವರು ಯಾರು?
ಹೋಗಲಿ, ಸರ್ಕಾರದ ಪ್ರತಿನಿಧಿಯಾಗಿ ಸಾರಿಗೆ ಸಚಿವರೇ ನಿಮ್ಮನ್ನು ಸರ್ಕಾರಿ ನೌಕರರಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಆರನೇ ವೇತನ ಆಯೋಗ ಅಂದರೆ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡುವ ಮೂಲಕ ನಿಮಗೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದರು.
ಆದರೆ, ಸರ್ಕಾರ ಅಥವಾ ಸಾರಿಗೆ ಸಚಿವರು ಕೊಟ್ಟ ಭರವಸೆಯ ಬಗ್ಗೆ ಅದು ಈಡೇರಬಾರದು ಎಂಬ ನಿಟ್ಟಿನಲ್ಲಿ ಸರ್ಕಾರ ಭರವಸೆ ಕೊಟ್ಟಕೂಡಲೇ ನಿಮಗೆ ಸರಿ ಸಮಾನ ವೇತನ ಆಗಿಬಿಡುತ್ತದಾ? ಎಂದು ಸರಿ ಸಮಾನ ವೇತನ ಆಗದಂತೆ ತಡೆದವರು ಯಾರು?
ಈಗ ವೇತನ ಆಯೋಗ ಮಾದರಿಯನ್ನು ಸಾರಿಗೆ ಅಧಿಕಾರಿಗಳು- ನೌಕರರಿಗೆ ಅಳವಡಿಸುವುದಕ್ಕೆ ಅಡ್ಡಗಾಲು ಹಾಕುತ್ತಿರುವವರು ಯಾರು? ಹೀಗೆ ಕೇಳುತ್ತಾ ಹೋದರೆ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಲೇ ಹೋಗುತ್ತವೆ. ಆದರೆ, ಈ ಅಡ್ಡಗಾಲು ಹಾಕಿದವರು ಯಾರು ಎಂಬುವುದು ಸಾರಿಗೆ ಅಧಿಕಾರಿಗಳು- ನೌಕರರಿಗೆ ಗೊತ್ತಿಲ್ಲದ ವಿಷಯವೇನು ಅಲ್ಲ.
ಹೋಗಲಿ ವೇತನ ಆಯೋಗ ಮಾದರಿ ಬೇಡ ಅಗ್ರಿಮೆಟ್ ಮೂಲಕವಾದರೂ ಸರ್ಕಾರಿ ನೌಕರರಿಗೆ ಸರಿ ಸಮಾನವಾಗುವಂತ ವೇತನವನ್ನು ಸಾರಿಗೆ ನೌಕರರಿಗೆ ಕೊಡಿಸಿಯೇ ತೀರುತ್ತೇವೆ ಇದಕ್ಕೆ ನಾವು ಬದ್ಧ ಎಂದು ಹೇಳುವ ಸಂಘಟನೆಯ ಮುಖಂಡರು ಯಾರಾದರೂ ಇದ್ದಾರೆಯೇ?

ಕೆಲ ಸಂಘಟನೆಗಳ ಮುಖಂಡರಿಗೆ ನೌಕರರು ಹಿಂದೆ ಇದ್ದ ಜಮೀನ್ದಾರಿ ಪದ್ಧತಿಯಲ್ಲಿನ ಯಜಮಾನನ ಮುಂದೆ ಜೀತದಾಳುಗಳಂತೆ ಈ ಸಂಘಟನೆಗಳ ಮುಖಂಡರ ಮುಂದೆ ಹೋಗಿ ಕೈಕಟ್ಟಿಕೊಂಡು ತಲೆಬಗ್ಗಿಸಿ ನೀವು ಹೇಳಿದಂತೆ ನಾವು ಮಾಡುತ್ತೇವೆ ಎಂದು ಕೋಲೆಬಸವನಂತೆ ತಲೆ ಅಲ್ಲಾಡಿಸಿಕೊಂಡು ನೌಕರರು ಹೋಗಬೇಕು ಎಂಬ ನೀಚ ಆಲೋಚನೆಗಳಿವೆ.
ಈ ಆಲೋಚನೆಗಳನ್ನು ಬಿಟ್ಟು ನಾಲ್ಕೂ ಸಾರಿಗೆಯ ಅಧಿಕಾರಿಗಳು ಮತ್ತು ನೌಕರರ ಭಿಕ್ಷೆಯಲ್ಲಿ ನಾವು ಅದ್ದೂರಿ ಜೀವನ ನಡೆಸುತ್ತಿದ್ದೇವೆ ಅವರಿಗೆ ಮೋಸವಾಗಲು ಬಿಡಬಾರದು ಎಂಬುವುದು ಬಂದಿದ್ದರೆ ಈಗಲೂ ನೌಕರರು ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಪಡೆಯುತ್ತಿದ್ದರು. ಆದರೆ, ಕೆಲ ಸಂಘಟನೆಗಳ ಮುಖಂಡರಿಗೆ ನೌಕರರು ಒಳ್ಳೆ ವೇತನ ಪಡೆಯುವುದು ಸ್ವಲ್ಪವೂ ಇಷ್ಟವಿಲ್ಲ. ಏಕೆಂದರೆ ನೌಕರರು ಒಳ್ಳೆ ವೇತನ ಪಡೆದರೆ ನಮ್ಮ ಸಂಘಟನೆಗಳ ಜತೆ ಸೇರುವುದಿಲ್ಲ ಜತೆಗೆ ಅಧಿಕಾರಿಗಳು – ನೌಕರರಲ್ಲಿ ಒಳ್ಳೆಯ ಬಾಂಧವ್ಯ ವೃದ್ಧಿಯಾಗಿ ಸರ್ಕಾರದ ಮಟ್ಟದಲ್ಲಿ ಅವರೇ ಮಾತನಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬಿಡುತ್ತಾರೆ.
ಇನ್ನು ಹೀಗಾದರೆ ನಮ್ಮ ಈ ಅದ್ದೂರಿ ಜೀವನಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಎಂದು ತಂತ್ರ ಕುತಂತ್ರದ ನರಿ ಬುದ್ಧಿ ಉಪಯೋಗಿಸಿಕೊಂಡು ಅಧಿಕಾರಿಗಳು ಮತ್ತು ನೌಕರರ ನಡುವೇ ದ್ವೇಷದ ವಿಷ ಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇಂಥವರ ಮಾತಿನಲ್ಲಿರುವ ವಿಷವನ್ನು ಅರಿಯದ ಮುಗ್ದ ಸಾರಿಗೆ ನೌಕರರು ಇವರನ್ನು ನಂಬಿ ಈಗ ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಪಡೆಯುತ್ತಿದ್ದವರು ಅವರಿಗಿಂತ ಶೇ.25-40ರಷ್ಟು ಕಡಿಮೆ ಪಡೆಯುವ ಹಂತಕ್ಕೆ ಬಂದು ನಿಂತಿದ್ದಾರೆ.
ಇಷ್ಟೆಲ್ಲ ನೌಕರರಿಗೆ ಮೋಸ ಮಾಡಿರುವುದು ಗೊತ್ತಿದ್ದರೂ ಕೂಡ ಈಗಲೂ ನಾವು ನೌಕರರ (ಅಲ್ಲ ಅಲ್ಲ ಅವರು ಕರೆಯುವುದು ಕಾರ್ಮಿಕರು ಅಂಥ ಅಲ್ಲವೇ) ಪರ ಇದ್ದೇವೆ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಈಗಲೂ ನಂಬಿಸುವ ನಾಟಕವಾಡುತ್ತಿದ್ದಾರೆ.
ಅಲ್ಲದೆ 2023ರ ಮಾರ್ಚ್‌ನಲ್ಲಿ ಅಂದಿನ ಸಿಎಂ ಶೇ.15ರಷ್ಟು ವೇತನ ಹೆಚ್ಚಳ ಮಾಡಿದ್ದನ್ನು ನಾವೆ ಮಾಡಿಸಿಕೊಂಡು ಬಂದಿದ್ದು ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ವಿಧಾನಸಭೆ ಚುನಾವಣೆ ಎದುರಾಗುತ್ತಿದ್ದರಿಂದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ವೇತನ ಪರಿಷ್ಕರಣೆ ಮಾಡಿ ಹಿಂಬಾಕಿ ಬಗ್ಗೆ ಮಾತನಾಡದೆ ಹೋದರು.
ಅಂದು ಸಿಎಂಗೆ ಹೊಟ್ಟೆನೋವು ಬಂದಿದ್ದರಿಂದ ಶೇ.15ರಷ್ಟು ವೇತನ ಪರಿಷ್ಕರಣೆ ಮಾಡಿದ್ದರೇ ಹೊರತು ನಿಮ್ಮ ಹೋರಾಟದಿಂದಲ್ಲ ಎಂಬುವುದು ಪ್ರತಿಯೊಬ್ಬ ನೌಕರರಿಗೂ ಗೊತ್ತಿದೆ. ಅದು ಬಿಡಿ ಮುಗಿದು ಹೋದ ಕತೆ. ಈಗ ಬರಬೇಕಿರುವ 38 ತಿಂಗಳ ವೇತನ ಹಿಂಬಾಕಿಯನ್ನು ಕೊಡಿಸುವುದಕ್ಕೆ ಏಕೆ ನಿಮ್ಮ ಕೈಯಲ್ಲಿ ಆಗುತ್ತಿಲ್ಲ. ಅದನ್ನು ಮೊದಲು ಕೊಡಿಸಿ ಆ ಮೇಲೆ ಮಾತನಾಡಿ ಅಲ್ವ.
ಮಾತೆತ್ತಿದರೆ ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ನಿಮ್ಮ ಸಾರಿಗೆ ಸಂಸ್ಥೆಗಳು ಲಾಸ್‌ನಲ್ಲಿ ಇವೆ. ಹೀಗಿರುವಾಗ ನಿಮಗೆ ಹಿಂಬಾಕಿ ಎಲ್ಲಿ ಕೊಡುತ್ತಾರೆ, ವೇತನ ಪರಿಷ್ಕರಣೆ ಮಾಡಲು ಹೇಗೆ ಸಾಧ್ಯ ಎಂದು ಒಂದು ಸಂಘಟನೆಯ ಮುಖಂಡನಾಗಿ ನೀನೆ ಹೇಳಿದರೆ ಸರ್ಕಾರ ಎಲ್ಲಿ ನೌಕರರ ಪರವಾದ ನಿರ್ಧಾರ ತೆಗೆದುಕೊಳ್ಳುತ್ತದೆ.
ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡುವುದಕ್ಕೆ ಸರ್ಕಾರದ ಬಳಿ ದುಡ್ಡಿಲ್ಲ. ಆದರೆ ಸರ್ಕಾರಿ ನೌಕರರಿಗೆ ವೇತನ ಮಾಡುವುದಕ್ಕೆ ದುಡ್ಡಿತ್ತಾ? ನೀವೆ ಸರ್ಕಾರ ನಡೆಸುತ್ತಿರುವವರಂತೆ ಮಾತನಾಡುವುದನ್ನು ಬಿಟ್ಟು ನಿಮಗೆ ನೌಕರರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಮನಸ್ಸಿದ್ದರೆ ಅಗ್ರಿಮೆಂಟ್ ಮಾಡಿಸುತ್ತೀರೊ ಇಲ್ಲ ವೇತನ ಆಯೋಗ ಮಾದರಿಯಲ್ಲಿ ಮಾಡಿಸುತ್ತೀರೊ ಒಟ್ಟಾರೆ ಸರಿ ಸಮಾನ ವೇತನ ಕೊಡಿಸುವುದಕ್ಕೆ ಮುಂದಾಗಿ.
ಇದನ್ನು ಬಿಟ್ಟು ಆ ಸಂಘಟನೆ ಮುಂದೆ ಬರದಿದ್ದರೆ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು ಎಂದು ನೌಕರರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ನೀವು ನೌಕರರ ಸಮಸ್ಯೆಯನ್ನು ಆಲಿಸಿ ಕಾಲ ಕಾಲಕ್ಕೆ ನೌಕರರಿಗೆ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಕೊಡಿಸಿದ್ದರೆ ಬೇರೆ ಸಂಘಟನೆಯ ಅಗತ್ಯ ಯಾರಿಗಿತ್ತು. ನಿಮ್ಮ ಕುತಂತ್ರದ ಬುದ್ಧಿಯಿಂದ ಇನ್ನೊಂದು ಸಂಘಟನೆ ಹುಟ್ಟಿಕೊಂಡಿದೆ. ಅದಕ್ಕೆ ನೌಕರರೋ ಅಥವಾ ಇನ್ಯಾರೋ ಕಾರಣರಲ್ಲ ನಿಮ್ಮ ನೀಚ ಬುದ್ಧಿಯೇ ಕಾರಣ ಇನ್ನಾದರು ಇದನ್ನು ಅರಿತು ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಿಸಿ.
ಇಲ್ಲ ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದಾದರೆ ಮಧ್ಯೆಮಧ್ಯೆ ಮೂಗುತೂರಿಸುವುದನ್ನು ಬಿಟ್ಟು ತಟಸ್ಥವಾಗಿರಿ. ಈಗ ಬಹುತೇಕ ಅಧಿಕಾರಿಗಳಿಗೂ ಕೂಡ ಅವರು ಮಾಡಿದ ತಪ್ಪಿನ ಅರಿವಾಗಿದೆ. ಈ ನಡುವೆ ಅಧಿಕಾರಿಗಳು ಬರದಿದ್ದರೆ ನಾವು ಯಾವುದೇ ಕಾರಣಕ್ಕೂ ಹೋರಾಟಕ್ಕೆ ಇಳಿಯಬಾರದು ಎಂಬ ತಿಳಿವಳಿಕೆಯೂ ಬಹುತೇಕ ನೌಕರರಿಗೆ ಬಂದಿದೆ.
Related


You Might Also Like
ತಿ.ನರಸೀಪುರ: ಸಚಿವ ಮಹದೇವಪ್ಪ ಹೆಸರಲ್ಲಿ 27 ಲಕ್ಷ ರೂ. ವಂಚನೆ: ಮಹಿಳೆ ವಿರುದ್ಧ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ
ತಿ.ನರಸೀಪುರ : ಸಚಿವ ಎಚ್.ಸಿ.ಮಹದೇವಪ್ಪ ಅವರ ಹೆಸರಿನಲ್ಲಿ ಖತರ್ನಾಕ್ ಮಹಿಳೆಯೊಬ್ಬಳು 27 ಲಕ್ಷ ರೂ. ವಂಚಿಸಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ನಡೆದಿದೆ....
KSRTC-ಪ್ರಯಾಣಿಕರು ಟಿಕೆಟ್ ಕಳೆದುಕೊಂಡರೆ ಕಂಡಕ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು: ಎಂಡಿ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಟಿಕೆಟ್ ಕಳೆದುಕೊಂಡಿರುವುದು ತನಿಖಾ ಸಿಬ್ಬಂದಿಗೆ ತಪಾಸಣೆ ವೇಳೆ ತಿಳಿದು ಬಂದರೆ ಅಂಥವರಿಗೆ ಮತ್ತೆ ಟಿಕೆಟ್ಕೊಡಬೇಕು....
8ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 34,500 ರೂ.ಗೆ ಏರಿಕೆ!
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ವೇತನ ಆಯೋಗದಲ್ಲಿ (8th Pay Commission) ತಮ್ಮ ಬೇಸಿಕ್ ಸಂಬಳದ ಭಾರಿ ಏರಿಕೆಯ ನಿರೀಕ್ಷೆಯಲ್ಲಿದ್ದಾರೆ. 8ನೇ ವೇತನ ಆಯೋಗದಲ್ಲಿ...
BMTC: 7ತಿಂಗಳಾದರೂ ಇನ್ನೂ ಜಾರಿಗೆ ಬರದ ಎಂಡಿ ಹೊರಡಿಸಿದ 1ರಂದೇ ವೇತನ ಪಾವತಿ ಆದೇಶ- ರಬ್ಬರ್ ಸ್ಟ್ಯಾಂಪಾದ ರಾಮಚಂದ್ರನ್!
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ/ನೌಕರರಿಗೆ ಪ್ರತಿ ತಿಂಗಳು 1ನೇ ತಾರೀಖಿನಂದು ವೇತನ ಪಾತಿಸಬೇಕು ಎಂದು ಫೆಬ್ರವರಿ ತಿಂಗಳ ವೇತನ ಮಾರ್ಚ್1ರಂದೆ ಜಮಾ ಮಾಡುವುದಾಗಿ ಹೇಳಿದ...
NWKRTC ಬಸ್-ಲಾರಿ ನಡುವೆ ಭೀಕರ ಡಿಕ್ಕಿ: ಇಬ್ಬರೂ ಚಾಲಕರಿಗೂ ಗಂಭೀರ ಗಾಯ
ಕಬ್ಬೂರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರೂ ಚಾಲಕರು ಸೇರಿದಂತೆ ಪ್ರಯಾಣಿಕರಿಗೂ ಗಂಭೀರ ಗಾಯಗಳಾಗಿರುವ ಘಟನೆ ಕಬ್ಬೂರ...
ವಿಮಾನದ ಮೂಲಕ ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಮೈಸೂರು: ಎರಡು ದಿನಗಳ ಮೈಸೂರು ಭೇಟಿಗಾಗಿ ಸೋಮವಾರ (ಸೆ.1) ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ರಾಷ್ಟ್ರಪತಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್...
ಕನಿಷ್ಠ 7500 ರೂ. ಪಿಂಚಣಿಗೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ
ಬೆಂಗಳೂರು: "ನಿಧಿ ಅಪ್ಕೆನಿಕಟ್" ಕಾರ್ಯಕ್ರಮದಂದು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಇಪಿಎಸ್ ಪಿಂಚಣಿದಾರರ 29ನೇ ಬೃಹತ್ ಪ್ರತಿಭಟನಾ ಸಭೆ ಜರುಗಿತು. ಕನಿಷ್ಠ...
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ನಟಿ ರಾಧಿಕಾ ವಿಚಾರಣೆ
ಬೆಂಗಳೂರು: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಎರಡು...