NEWSನಮ್ಮರಾಜ್ಯಲೇಖನಗಳು

KSRTC: ನಿರಂತರ ಕಿರುಕುಳದಿಂದ ಕುಗ್ಗಿ ಹೋಗುತ್ತಿರುವ  ನೌಕರರು- ಹೋರಾಟದ ಹಾದಿ ತುಳಿಯುವುದಕ್ಕೆ ಹಿಂದೆ ಸರಿಯುತ್ತಿದ್ದಾರೆ..!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ನೌಕರರ ಹೋರಾಟದ ಶಕ್ತಿಯನ್ನು ದಮನ ಮಾಡುವ ನಿಟ್ಟಿನಲ್ಲಿ ಕೆಲ ಅಧಿಕಾರಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಇದರಿಂದ ಕುಗ್ಗಿ ಹೋಗುತ್ತಿರುವ  ನೌಕರರು ಹೋರಾಟದ ಹಾದಿ ತುಳಿಯುವುದಕ್ಕೆ ಹಿಂದೆ ಸರಿಯುತ್ತಿದ್ದಾರೆ ಎಂಬ ಮಾತುಗಳು ನಿಷ್ಠಾವಂತ ಅಧಿಕಾರಿಗಳಿಂದಲೇ ಕೇಳಿ ಬರುತ್ತಿವೆ.

ಆದರೆ, ಇನ್ನೊಂದು ಕೂಗು ಅಧಿಕಾರಿಗಳು ಎಷ್ಟೇ ಕಿರುಕುಳ ನೀಡಿದರು ನಾವು ಜಗ್ಗುವುದಿಲ್ಲ. ಆದರೆ ನಮಗೆ ಧೈರ್ಯ ತುಂಬುವ ಒಂದು ಕೈ ಬೇಕಿದೆ. ಆ ಕೈಗಾಗಿ ನಾವು ಹುಡುಕಾಡುತ್ತಿದ್ದೇವೆ. ಆದರೆ ಅದು ಈ ವರೆಗೂ ನಮಗೆ ಸಿಕ್ಕಿಲ್ಲ. ಆ ಕೈ ಹುಡುಕಾಡುವ ವೇಳೆ ಕೆಲ ಕೈಗಳು ನಾ ಮುಂದು ತಾ ಮುಂದು ಎಂದು ಬಂದವು. ಆದರೆ, ಅವು ಹೆಚ್ಚುಹೊತ್ತು ಕೈ ಮೇಲೆತ್ತಿ ನಿಲ್ಲಲು ಆಗದೆ ಹಿಂದೆ ಸರಿಯುತ್ತಿರುವುದನ್ನು ಕಾಣುತ್ತಿದ್ದೇವೆ.

ಹೀಗಾಗಿ ನಮಗೆ ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳ ಮಾದರಿಯಲ್ಲಿ ಹೋರಾಟ ರೂಪಿಸುವ ಒಂದೇ ಒಂದು ಕೈ ಸಿಕ್ಕರೆ ಸಾಕು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂದು ಎದುರು ನೋಡುತ್ತಿರುವುದಾಗಿ ಸಾರಿಗೆ ನೌಕರರು ಅಪಹಪಿಸುತ್ತಿದ್ದಾರೆ.

ನೌಕರರನ್ನು ಅನೇಕ ಸಮಸ್ಯೆಗಳಿಗೆ ದೂಡಿ ಕಾಲ್ಕೀಳುವ ಸಂಸ್ಕೃತಿ: ಈ ನಡುವೆ ನೌಕರರ ಪರ ನಿಲ್ಲುತ್ತೇವೆ ಅವರನ್ನು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ಹೇಳಿಕೊಂಡು ಬರುವವರ ಸಂಖ್ಯೆಗೇನು ಕಡಿಮೆ ಇಲ್ಲ. ಆದರೆ ಬಂದವರು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ನಂತರ ನೌಕರರನ್ನು ಅನೇಕ ಸಮಸ್ಯೆಗಳಿಗೆ ದೂಡಿ ಕಾಲ್ಕೀಳುತ್ತಿದ್ದಾರೆ.

ಹೀಗಾಗಿ ಈವರೆಗೂ ತಮ್ಮ ಸಮಸ್ಯೆ ನೀಗಿಸಲು ಹೋರಾಡುವಂತ ನಿಷ್ಠಾವಂತ ವ್ಯಕ್ತಿ ಇನ್ನೂ ನಮಗೆ ಸಿಕ್ಕಿಲ್ಲ ಇದರಿಂದ ಈ ಹಿಂದೆ ಸಚಿವರು, ಮುಖ್ಯಮಂತ್ರಿಗಳು ಕೊಟ್ಟ ಭರವಸೆ ಈಡೇರಿಸಿಲ್ಲ ಎನ್ನುವ ನೌಕರರು, ಈ ಹಿಂದಿನ ಸರ್ಕಾರ ಮತ್ತು ಪ್ರಸ್ತುತ ಇರುವ ಸರ್ಕಾರ ಎಲ್ಲ ನೌಕರರಿಗೂ ಯಾವುದೇ ತೊಂದರೆ ಆಗದಂತೆ ವಾಪಸ್‌ ಕರೆಸಿಕೊಳ್ಳುತ್ತೇವೆ ಎಂದಷ್ಟೇ ಹೇಳಿಕೊಂಡು ಕುಳಿತಿದೆ. ಆದರೆ ಈಗಲೂ ಹೇಳುತ್ತಿರುವ ಮಾತಿಗೆ ಬದ್ಧರಾಗದೆ ತಮ್ಮ ಜವಾಬ್ದಾರಿಯನ್ನು ಮತ್ತೊಬ್ಬರ ಹೆಗಲಿಗೆ ಹಾಕಿ ಸುಮ್ಮನಾಗುತ್ತಿದ್ದಾರೆ ಸಚಿವರು.

ತಪ್ಪುಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಹೊಸ ಅಸ್ತ್ರ ಪ್ರಯೋಗ: ಕೆಲ ಅಧಿಕಾರಿಗಳು ತಾವು ನಾಡುವ ತಪ್ಪನ್ನು ಮುಚ್ಚಿಹಾಕಿಕೊಳ್ಳಲು ಮತ್ತೆ ಹಳೇ ಚಾಳಿ ಮುಂದುವರಿಸುತ್ತಿದ್ದಾರೆ. ಜತೆಗೆ ನೌಕರರ ಮತ್ತು ಸರ್ಕಾರದ ದಾರಿ ತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡೆ ಬರುವಂಥ ಹೊಸ ಅಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂಬ ಗುಸುಗುಸು ಸಾರಿಗೆ ಕೇಂದ್ರ ಕಚೇರಿಯಲ್ಲೇ ಕೇಳಿಬರುತ್ತಿದೆ.

ಇನ್ನು ಪ್ರಮುಖವಾಗಿ ನೌಕರರ ಬಗ್ಗೆ ಕಾಳಜಿ ಹೊಂದಬೇಕಾಗಿದ್ದ ನೌಕರರ ಸಂಘಟನೆಗಳು ಏನು ಕಾಣದಂತೆ, ನೌಕರರ ಹಂಗಿನಲ್ಲಿದ್ದರೂ ಅವರ ಪರವಾಗಿ ನಿಲ್ಲದೆ ಮೂಲೆ ಸೇರಿಕೊಂಡಿವೆ. ಇದರಿಂದ ನೌಕರರು ದಾರಿ ಕಾಣದೆ ಹಲವು ಸಮಸ್ಯೆಯನ್ನು ಎಳೆದುಕೊಂಡಿದ್ದು, ಅದನ್ನೇ ಅಸ್ತ್ರವಾಗಿ ಉಪಯೋಗಿಸಿಕೊಳ್ಳುತ್ತಿರುವ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರೂ ಹಲ್ಲುಕಚ್ಚಿಕೊಂಡು ದಿನ ದೂಡುತ್ತಿದ್ದಾರೆ.

ಸುಳ್ಳು ವಿಜೃಂಭಿಸುತ್ತಿದೆ: ನಾವು ಏನೋ ಮಾಡೇ ಬಿಡುತ್ತೇವೆ ಎಂದು ನೌಕರರ ಪರವಾಗಿ ಮುಂದೆ ಬಂದ ಸಂಘಟನೆಯೊಂದು ಅಧಿಕಾರಿಗಳು ಬೀಸಿದ ಬಲಿಯಲ್ಲಿ ಸಿಲುಕಿ ಈಗ ವಿಲವಿಲನೆ ಒದ್ದಾಡುತ್ತಿದೆ. ಸದ್ಯ ಆ ಬಲೆಯಿಂದ ಬಿಡಿಸಿಕೊಂಡು ಹೊರಬಂದರೆ ಸಾಕು ಎಂಬ ಹೀನಾಯ ಸ್ಥಿತಿಗೆ ತಲುಪಿದೆ.

ಇತ್ತ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಯುತವಾಗಿ ಹೋರಾಡಿದ ಕಾರ್ಮಿಕರ ಅಂತರಾಳದ ಕೂಗು  ಅಧಿಕಾರಿಗಳು ಅನುಸರಿಸಿದ ವಾಮ ಮಾರ್ಗ, ಸುಳ್ಳಿನ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ. ಇದರಿಂದ ಸತ್ಯ ಸಮಾಧಿಯಾಗಿ ಮಿಥ್ಯ  ಎದ್ದು ಕೇಕೆ ಹಾಕುತ್ತಿದೆ. ಇಲ್ಲಿ ಸತ್ಯ ಸತ್ತಿದ್ದು, ಸುಳ್ಳು ವಿಜೃಂಭಿಸುತ್ತಿದೆ.

ಒಟ್ಟಾರೆ, ನೌಕರರ ಹಂಗಿನಲ್ಲೇ ಇರುವ ಸಂಘಟನೆಗಳು ನೌಕರರಿಗೆ ಮಾಡಿದ ಮಾಡುತ್ತಿರುವ ದ್ರೋಹದಿಂದ ಭ್ರಷ್ಟ ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ಕಾನೂನು ಬಾಹಿರ ಕ್ರಮಗಳೇ ಈಗ ಕಾನೂನಾಗಿ ನೌಕರರ ಕಾಡುತ್ತಿರುವುದು ಮಾತ್ರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆಯೇ ಸರಿ….. !?

ಬಾಯಿ ಬಿಡುವ  ಸಂಘಟನೆಗಳು: ಕೆಲ ಸಾರಿಗೆ ಸಂಘಟನೆಗಳನ್ನು ನಂಬಿ ನೌಕರರು ಅವುಗಳನ್ನು ಸಾಕುವುದಕ್ಕೆ ಕಷ್ಟಪಟ್ಟು ಬೆವರು ಹರಿಸಿ ದುಡಿದ ಹಣವನ್ನು ಕೊಟ್ಟಿದ್ದಾರೆ, ಈಗಲೂ ಕೊಡುತ್ತಿದ್ದಾರೆ. ಇದರ ಬದಲಿಗೆ ಭಿಕ್ಷುಕರಿಗಾದರೂ ಆ ಹಣವನ್ನು ದಾನವಾಗಿ ನೀಡಿದ್ದರೆ ಪುಣ್ಯವಾದರೂ ಬರುತ್ತಿತ್ತೇನೋ? ಇನ್ನಾದರೂ ಈ ಬಗ್ಗೆ ನೌಕರರ ಹಣಕ್ಕಾಗಿ ಬಾಯಿ ಬಿಡುವ ಸಂಘಟನೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.

ಇನ್ನು ನೌಕರರ ಮರ್ಜಿಗೆ ಒಳಗಾಗಿರುವ ಸಂಘಟನೆಗಳು ಈ ಬಗ್ಗೆ ಇನ್ನಾದರೂ ತಮ್ಮ ತಪ್ಪನ್ನು ಅರಿತುಕೊಂಡು  ಅವರ ಕೂಗಿಗೆ ಧ್ವನಿಯಾಗುವ ಮೂಲಕ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಟೊಂಕಕಟ್ಟಿ ನಿಲ್ಲಬೇಕು. ಆ ಕೆಲಸವನ್ನು 2024ರ ಜನವರಿಯಲ್ಲಾದರೂ ತೋರಿಸುತ್ತಾರೆಯೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ