NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರಿಗೆ ಸೆಪ್ಟೆಂಬರ್‌ ವೇತನ ನಾಳೆ ಜಮೆ: ವ್ಯವಸ್ಥಾಪಕ ನಿರ್ದೇಶಕರ ಆದೇಶ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ
  • ಆದರೆ, ಆಯುಧ ಪೂಜೆ ಹಬ್ಬಕ್ಕೆ ಇಲ್ಲ ಬಿಎಂಟಿಸಿ ನೌಕರರಿಗೆ ವೇತನ

ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ  ಸಂಪೂರ್ಣ ಮಾಹಿತಿ: https://ksrtcarogya.in/

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರಿಗೆ ಸೆಪ್ಟೆಂಬರ್‌ ತಿಂಗಳ ವೇತನವನ್ನು ಸೆ.30ರಂದೇ ಪಾವತಿಸುವಂತೆ ಇಂದು ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಆದೇಶ ಹೊರಡಿಸಿದ್ದಾರೆ.

ಸಂಸ್ಥೆಯ ಎಲ್ಲ ಅಧಿಕಾರಿ/ ನೌಕರರ ವೇತನವನ್ನು ಪ್ರತಿ ತಿಂಗಳು 01 ರಂದು ಪಾವತಿಸಲಾಗುತ್ತಿತ್ತು. ಆದರೆ, ಅ.1ರಂದು ದಸರಾ ಹಬ್ಬ ಹಾಗೂ 2ರಂದು ಗಾಂಧಿ ಜಯಂತಿ ಪ್ರಯುಕ್ತ ಈ 2 ದಿನಗಳು ಬ್ಯಾಂಕ್ ರಜೆ ಇರುವುದರಿಂದ ಹಾಗೂ ಹಬ್ಬದ ಪ್ರಯುಕ್ತ ನಿಗಮದ ಎಲ್ಲ ಸಿಬ್ಬಂದಿಗಳಿಗೆ ಸೆಪ್ಟೆಂಬರ್ ತಿಂಗಳ ವೇತನವನ್ನು ಸೆ.30 ರಂದು ಪಾವತಿಸಲು ನಿರ್ಧರಿಸಲಾಗಿದೆ.

ಹೀಗಾಗಿ ಸೆ.30ರಂದು ನೌಕರರ ಬ್ಯಾಂಕ್ ಖಾತೆಗೆ ವೇತನ ಜಮೆಗೊಳಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಆದರೆ, ಬಿಎಂಟಿಸಿ ನೌಕರರಿಗೆ ವೇತನ: ಹಗಲಿರುಳು ಎನ್ನದೆ ಡ್ಯೂಟಿ ಮಾಡುತ್ತಿರುವ ಬಿಎಂಟಿಸಿ ನೌಕರರು ಆಯುಧ ಪೂಜೆಗೆ ಸಂಬಳ ಇಲ್ಲದೆ ಹಬ್ಬ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸಾರಿಗೆ ಸಂಸ್ಥೆಗೆ ಹಲವು ಪ್ರಶಸ್ತಿಗಳು ಬರುವುದಕ್ಕೆ ಕಾರಣ ಕರ್ತರಾದ ನೌಕರರು ಹಣವಿಲ್ಲದೆ ಆಯುಧ ಪೂಜೆ ಹಬ್ಬ ಮಾಡುವ ಸ್ಥಿತಿ ಬಂದಿದೆ.

ಈಗಾಗಲೇ KSRTC, NWKRTC ಹಾಗೂ KKRTC ನಿಗಮಗಳ ನೌಕರರಿಗೆ ಸೆಪ್ಟೆಂಬರ್ 30 ರಂದು ವೇತನ ನೀಡಲು ಆದೇಶಿಸಲಾಹೊದೆ. ಆದರೆ BMTC ನೌಕರರಿಗೆ ಇನ್ನೂ ಆದೇಶ ನೀಡಿಲ್ಲ̤

ಬಿಎಂಟಿಸಿ ನೌಕರರಿಗೆ I ತಾರತಮ್ಯ ಯಾಕೆ̤ ದಯವಿಟ್ಟು ನಮಗೂ ಆಯುಧ ಪೂಜೆ ದಸರಾ ಹಬ್ಬ ಮಾಡಲು ಸೆ.30 ರಂದು ವೇತನ ನೀಡಬೇಕೆಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಸಮಸ್ತ ನೌಕರರ ಪರವಾಗಿ ಘಟಕ-21ರ ನಿರ್ವಾಹಕ ಅನಿಲ್ ಕುಮಾರ್ ಮನವಿ ಮಾಡಿದ್ದಾರೆ.

Advertisement

Megha
the authorMegha

Leave a Reply

error: Content is protected !!