KSRTC ನೌಕರರಿಗೆ 26ರಲ್ಲ 38 ತಿಂಗಳ ಹಿಂಬಾಕಿ ಕೊಡಲೇ ಬೇಕು: ಹೈಕೋರ್ಟ್‌ನಲ್ಲಿ ಇಂದು ವಾದಿಸಿದ ನೌಕರರ ಪರ ವಕೀಲರು

- ಮತ್ತೆ ಮಾರ್ಚ್ 18ಕ್ಕೆ ಪ್ರಕರಣ ಮುಂದೂಡಿದ ಹೈಕೋರ್ಟ್ ನ್ಯಾಯಪೀಠ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ 24ರ ಜ.1ರಿಂದ ಆಗಬೇಕಿರುವ ವೇತನ ಹೆಚ್ಚಳ ಸಂಬಂಧ ಹೈ ಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆಯಿತು. ಈ ವೇಳೆ ನೌಕರರ ಪರ ವಕೀಲರಾದ ಎಚ್.ಬಿ.ಶಿವರಾಜು ಅವರು ಇದೇ ಫೆ.18ರಂದು ಸರ್ಕಾರ ಮಾಡಿರುವ 26 ತಿಂಗಳ ವೇತನ ಹಿಂಬಾಕಿ ಕೊಡುವ ಆದೇಶದ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಈ ವೇಳೆ ಪೀಠವು ಇನ್ನೇನು 26 ತಿಂಗಳ ಹಿಂಬಾಕಿ ಕೊಟ್ಟಿದೆಯಲ್ಲಿ ಪ್ರಕರಣವನ್ನು ವಿಲೇವಾರಿ (Dispose) ಮಾಡಬಹುದೆ ಎಂದು ಕೇಳಿತು. ಆಗ ನೌಕರರ ಪರ ವಕೀಲರು ಇಲ್ಲ ಸ್ವಾಮಿ ನೌಕರರಿಗೆ 38 ತಿಂಗಳ ಹಿಂಬಾಕಿ ಬರಬೇಕು ಸರ್ಕಾರ 26 ತಿಂಗಳ ಹಿಂಬಾಕಿ ಮಾತ್ರ ಕೊಡುವುದಾಗಿ ಆದೇಶ ಮಾಡಿದೆ. ಹೀಗಾಗಿ ಉಳಿದ 12 ತಿಂಗಳ ಹಿಂಬಾಕಿಯನ್ನು ಕೊಟ್ಟರೆ ಪ್ರಕರಣವನ್ನು ಡಿಸ್ಪೋಸ್ ಮಾಡಬಹುದು ಎಂದರು.
ಅಲ್ಲದೆ, ಈ ಸಂಬಂಧ ಸರ್ಕಾರ ಸಾರಿಗೆ ನೌಕರರ ಪರ ಸಂಘಟನೆಗಳ ಸಭೆಯನ್ನು ಮತ್ತೊಮ್ಮೆ ಕರೆಯುವುದಾಗಿ ಹೇಳಿದೆ ಎಂದು ನ್ಯಾಯಫೀಠದ ಗಮನಕ್ಕೆ ತಂದರು. ಈ ವೇಳೆ ಸಾರಿಗೆ ನಿಗಮಗಳ ಪರ ವಕೀಲರು ಹಾಜರಿದ್ದರು ಆದರೆ, ಸರ್ಕಾರದ ಪರ ವಕೀಲರು ಗೈರುಹಾಜರಾಗಿದ್ದರು. ಈ ಎಲ್ಲವನ್ನು ಗಮನಿಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಪ್ರಕರಣವನ್ನು ಮಾರ್ಚ್18ಕ್ಕೆ ಮುಂದೂಡಿತು.
38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡುವಂತೆ ಇಂದು ಕೂಡ ನೌಕರರ ಪರ ವಕೀಲರಾದ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ಅವರು ವಾದ ಮಂಡಿಸಿದ್ದು, ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ 26 ತಿಂಗಳ ಹಿಂಬಾಕಿ ಜತೆಗೆ ಇನ್ನು ಉಳಿದ 12 ತಿಂಗಳ ಹಿಂಬಾಕಿಯನ್ನು ಕೊಡಲೇಬೇಕು ಎಂದು ವಾದಿಸಿದ್ದಾರೆ.
ಒಟ್ಟಾರೆ ಸರ್ಕಾರ ಮತ್ತು ನೌಕರರ ಸಂಘಟನೆಗಳ ಪದಾಧಿಕಾರಿಗಳು ಈಗ ಮತ್ತೊಮ್ಮೆ ನಡೆಯುವ ಸಭೆಯಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದರ ಮೇಲೆಯೂ ಈ ಪ್ರಕರಣ ನಿಂತಿದ್ದು, ಒಂದು ವೇಳೆ ನೌಕರರಿಗೆ ಮಾರಕವಾಗುವ ನಿರ್ಧಾರವನ್ನು ಸಂಘನೆಗಳ ಪದಾಧಿಕಾರಿಗಳು ತೆಗೆದುಕೊಂಡರೆ ಕೋರ್ಟ್‌ನಲ್ಲಿ ಆ ಬಗ್ಗೆಯೂ ವಾದ ಮಂಡಿಸಿ ಉಳಿದ 12 ತಿಂಗಳ ಹಿಂಬಾಕಿಯನ್ನು ಕೊಡುವಂತೆ ಮನವಿ ಮಾಡಲಿದ್ದಾರೆ ವಕೀಲರು.
ಪ್ರಕರಣವೇನು?: 2025ರ ಮಾರ್ಚ್ 10ರಂದು ಹೈ ಕೋರ್ಟ್‌ನಲ್ಲಿ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ, ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಈವರೆಗೂ ಮಾಡಿಲ್ಲ. ಹೀಗಾಗಿ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ನೌಕರರು ವಕೀಲ ಎಚ್.ಬಿ.ಶಿವರಾಜು ಅವರ ಮೂಲಕ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಪ್ರಕರಣದ ವಿಚಾರಣೆ ಇಂದು ನಡೆಯಿತು. ಈ ನಡುವೆ ಅಕ್ಟೋಬರ್ 18-2025ರಂದು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯ 7 ಮಂದಿ ನೌಕರರು ಈ ವೇತನ ಸಂಬಂಧ ಹೈಕೋರ್ಟ್ ಮೆಟ್ಟಿಲ್ಲೇರಿದ್ದು, ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳು ನಮಗೆ ನ್ಯಾಯಯುತವಾಗಿ ಕಾಲಕಾಲಕ್ಕೆ ನೀಡಬೇಕಿರುವ ವೇತನ ಸೌಲಭ್ಯ ನೀಡುತ್ತಿಲ್ಲ ಎಂದು ಅರ್ಜಿ ಸಲ್ಲಿಸಿದ್ದಾರೆ.
ಅದು ಅಂದರೆ WP ನಂ: 31943/2025, 31807/2025 ಮತ್ತು 32181/2025 WP, (LBMTC) ಹಾಗೂ WP, (LKSRTC) ಇದರಡಿ ನೌಕರರು ಸ್ವಯಂಪ್ರೇರಿತವಾಗಿ 38ತಿಂಗಳ ವೇತನ ಹಿಂಬಾಕಿ ಹಾಗೂ 2024ರ ಜ.1ರಿಂದ ವೇತನ ಹೆಚ್ಚಳ ಮಾಡಬೇಕು ಎಂಬ ಬಗ್ಗೆ ಅರ್ಜಿ ಸಲ್ಲಿಸಿದ್ದು ಒಟ್ಟಾರೆ ಮೂರು ಪ್ರಕರಣಗಳು ಈ ವೇತನ ಸಂಬಂಧಿಸಿದ ಪ್ರಕರಣಗಳು ಹೈಕೋರ್ಟ್‌ನಲ್ಲಿ ನಡೆಯುತ್ತಿವೆ.
ಒಟ್ಟಾರೆ, ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಒಳಜಗಳ ಹಾಗೂ ಬಣ ಬಡಿದಾಟದಿಂದ ಕಳೆದ 5 ವರ್ಷದಿಂದ ನೌಕರರಿಗೆ ಲಕ್ಷಾಂತರ ರೂ.ಗಳ ಆರ್ಥಿಕ ನಷ್ಟ ಉಂಟಾಗುತ್ತಿದೆ. ಇದರಿಂದ ಮಾನಸಿಕವಾಗಿ ನೊಂದಿರುವ ನೌಕರರು ಈ ಸಂಘಟನೆಗಳನ್ನು ಬಿಟ್ಟು ಕೋರ್ಟ್ ಮೂಲಕವೇ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಕಾರ್ಯಪ್ರವೃತ್ತರಾಗಿದ್ದಾರೆ.
26 ತಿಂಗಳ ವೇತನ ಹಿಂಬಾಕಿ ಕೊಡುವ ತೀರ್ಮಾನ ತೆಗೆದುಕೊಂಡ ಸರ್ಕಾರ: ಇನ್ನು ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿಯಲ್ಲಿ 26 ತಿಂಗಳ ಹಿಂಬಾಕಿ ಕೊಡಲು ಸರ್ಕಾರ ಘೋಷಣೆ ಮಾಡಿದೆ. ಆದರೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಬೇಕಿರುವುದರ ಬಗ್ಗೆ ಹಾಗೂ ಉಳಿದ 12 ತಿಂಗಳ ವೇತನ ಹಿಂಬಾಕಿ ಕೊಡುವ ಬಗ್ಗೆ ಮಾರ್ಚ್ 2ರೋಳಗೆ ಸಭೆ ಕರೆಯಬಹುದು ಎನ್ನಲಾಗುತ್ತಿದೆ ಆದರೆ, ಇಂದು ಫೆ.25 ಆಗಿದ್ದು ಇನ್ನು ಕೇವಲ ಐದು ದಿನ ಮಾತ್ರ ಬಾಕಿ ಇದೆ.
Related









