NEWSನಮ್ಮರಾಜ್ಯರಾಜಕೀಯ

ಕಾಂಗ್ರೆಸ್‌ ಕೈ ಬಿಡದ ಸಾರಿಗೆ ನೌಕರರು- ಈಗ ಕೊಟ್ಟ ಭರವಸೆ ಈಡೇರಿಸುವುದು ಸರ್ಕಾರದ ಸರದಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯದ 16ನೇ ವಿಧಾನಸಭಾ ಚುನಾವಣೆ ಇದೇ ಮೇ 10ರಂದು ನಡೆದು ಮೇ 13ರಂದು ಹೊರಬಿದ್ದ ಫಲಿತಾಂಶದಲ್ಲಿ ಕಾಂಗ್ರೆಸ್‌ ಪಕ್ಷ ಅತ್ಯಂತ ಬಲಿಷ್ಟಪಕ್ಷವಾಗಿ ಹೊರಹೊಮ್ಮಿದ್ದು, ರಾಜ್ಯದ ಚುಕ್ಕಾಣಿ ಹಿಡಿಯುವುದಕ್ಕೆ ಸಿದ್ಧವಾಗಿದೆ.

ಇನ್ನು ಆಡಳಿತ ರೂಢ ಪಕ್ಷವಾಗಿದ್ದ ಬಿಜೆಪಿ ತನ್ನ ನಡೆಯಿಂದಲೇ ಹೀನಾಯ ಸೋಲುಕಂಡಿದ್ದು, ಇದಕ್ಕೆ ಹಲವಾರು ನಿದರ್ಶನಗಳನ್ನು ಕೊಡಬಹುದಾಗಿದೆ. ಅದರಲ್ಲಿ ಪ್ರಮುಖವಾಗಿ, ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರಕ್ಕೆ ಬೆಲೆ ಕೊಡದ ಬಿಜೆಪಿ ಅವರನ್ನು ಭಾರಿ ಕೀಳಾಗಿ ನಡೆಸಿಕೊಂಡಿತ್ತು.

ಇದರಿಂದ ಬಿಜೆಪಿ ಮತ್ತು ಅದರ ಮುಖಂಡರ ವಿರುದ್ಧ ಆಕ್ರೋಶಗೊಂಡ ಸಾರಿಗೆ ನೌಕರರು ಮತ್ತವರ ಕುಟುಂಬ ವರ್ಗದವರು ಶತಾಯಗತಾಯ ಬಿಜೆಪಿಯನ್ನು ಬಗ್ಗು ಬಡಿಯಲೇ ಬೇಕು ಎಂಬ ನಿಟ್ಟಿನಲ್ಲಿ ಹೆಜ್ಜೆಯಿಟ್ಟರು. ಅದರ ಫಲವಾಗಿ ಇಂದು ಬಿಜೆಪಿ ರಾಜ್ಯದಲ್ಲಿ ಧೂಳಿಪಟವಾಗಿರುವುದನ್ನು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ.

ಹೌದು! ಸಾರಿಗೆಯ 1.25 ಲಕ್ಷ ಸಾರಿಗೆ ಅಧಿಕಾರಿಗಳು ಮತ್ತು ನೌಕರರ ಮನವಿಗೆ ಸ್ಪಂದಿಸದ ಬಿಜೆಪಿಗೆ ತಕ್ಕ ಪಾಠಕಲಿಸಿ ತಮ್ಮ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿರುವ ಕಾಂಗ್ರೆಸ್‌ ಪಕ್ಷದ ಕೈ ಹಿಡಿದಿದ್ದಾರೆ ರಾಜ್ಯದ ಸಾರಿಗೆ ನೌಕರರು.

ಇದನ್ನು ಒಂದು ವಿಮರ್ಶಾತ್ಮಕವಾಗಿ ನೋಡುವುದಾದರೆ ಹಲವಾರು ಕ್ಷೇತ್ರಗಳಲ್ಲಿ ಕೇವಲ 5ಸಾವಿರ ಮತಗಳ ಅಂತರದೊಳಗೆ ಗೆದ್ದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಅಂದರೆ, ಒಂದೊಂದು ಕ್ಷೇತ್ರದಲ್ಲೂ 10ಸಾವಿರದಿಂದ 15 ಸಾವಿರ ಸಾರಿಗೆ ನೌಕರರು ಮತ್ತವರ ಕುಟುಂಬ ಸದಸ್ಯರ ಮತಗಳಿವೆ. ಅವು ಯಾರ ಪಾಲಿಗೆ ಎಂಬುದು ಇದರಿಂದಲೇ ತಿಳಿಯುತ್ತದೆ.

ಇನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಕೂಡ ಸಾರಿಗೆ ನೌಕರರಿಗೆ ಭರವಸೆ ಕೊಟ್ಟು ಕಾಗೆ ಹಾರಿಸಿದ್ದೆ ಹೆಚ್ಚು. ಅದಕ್ಕೆ ತಕ್ಕ ಉತ್ತರವನ್ನು ಸೋಲಿಸುವ ಮೂಲಕ ಸಾರಿಗೆ ನೌಕರರು ಕೊಟ್ಟಿದ್ದಾರೆ. ಇತ್ತ ಲಕ್ಷ್ಮಣ ಸವದಿ ಅವರು ಕೂಡ ಬಿಜೆಪಿಯಲ್ಲಿ ಇದ್ದಿದ್ದರೆ ಖಂಡಿತವಾಗಿಯೂ ಸೋಲುತಿದ್ದರು. ಆದರೆ, ಬಿಜೆಪಿ ಅವರು ಸೋಲುತ್ತಾರೆ ಎಂದು ಅರಿತು ಅವರನ್ನು ದೂರ ಸರಿಸಿತು. ಬಳಿಕ ಅವರು ಕಾಂಗ್ರೆಸ್‌ಗೆ ಬಂದು ಸಾರಿಗೆ ನೌಕರರ ಬಳಿ ಕ್ಷಮೆ ಕೇಳಿ ತಾನು ಮಾಡಿದ ಮೋಸಕ್ಕೆ ಕಾರಣ ಯಾರು ಎಂದು ಹೇಳಿದರು.

ಅಲ್ಲದೆ ಈ ಒಂದು ಬಾರಿ ನನ್ನನ್ನು ಕ್ಷೆಮಿಸಿಬಿಡಿ ನಿಮ್ಮ ಪ್ರಮುಖ ಬೇಡಿಕೆಯಾದ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನವನ್ನು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೊಡಿಸುವುದು ನನ್ನ ಜವಾಬ್ದಾರಿ. ಹೀಗಾಗಿ ಈ ಒಂದು ಬಾರಿ ನಮ್ಮನ್ನು ಕೈ ಬಿಡಬೇಡಿ ಎಂದು ಮನವಿ ಮಾಡಿದರು. ಅವರ ಮನವಿಯನ್ನು ಸ್ವೀಕರಿಸಿದ ಸಾರಿಗೆ ನೌಕರರು ಅವರಿಗೆ ಮತ್ತು ಕಾಂಗ್ರೆಸ್‌ ಪಕ್ಷ ಗೆಲುವಿಗೆ ಕಾರಣರಾಗಿರುವುದು ನಮಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ.

ಈಗ ಸಾರಿಗೆ ನೌಕರರ ಬೇಡಿಕೆಯನ್ನು ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿ ಕೊಂಡಿರುವಂತೆ ಈಡೇರಿಸುವ ಜವಾಬ್ದಾರಿ ಹೊಂದಿದ್ದು ಅದರಂತೆ ನಡೆದುಕೊಳ್ಳಬೇಕಿದೆ. ಅಲ್ಲದೆ ಸಾರಿಗೆ ನೌಕರರು ಮತ್ತು ಅವರ ಕುಟುಂಬದವರು ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ.

ಒಟ್ಟಾರೆ ಸಾರಿಗೆ ನೌಕರರನ್ನು ಅತ್ಯಂತ ಕೀಳಾಗಿ ನಡೆಸಿಕೊಂಡ ಬಿಜೆಪಿ ಈಗ ರಾಜ್ಯದಲ್ಲಿ ಕೇವಲ 66 ಸ್ಥಾನಗಳನ್ನು ಪಡೆದುಕೊಂಡು ಹೀನಾಯವಾಗಿ ಸೋತುಹೋಗಿದೆ. ಅದರಲ್ಲೂ ಸೋಲೆ ಕಾಣದ ಶ್ರೀರಾಮುಲು ಸೋಲು ಅನುಭವಿಸಿದ್ದಾರೆ. ಇದಕ್ಕೆ ಕಾರಣ ಸಾರಿಗೆ ನೌಕರರ ಶಾಪ, ಅಲ್ಲದೆ ಯಡಿಯೂರಪ್ಪ ಇದೇ ಲಕ್ಷ್ಮಣ ಸವದಿ ಅವರು ತಮ್ಮ ಪದವಿ ಕಳೆದುಕೊಂಡಿದ್ದು ಇದೇ ಸಾರಿಗೆ ನೌಕರರ ಶಾಪದಿಂದಲೇ ಎಂಬುದನ್ನು ಮರೆಯಬಾರದು.

ಇನ್ನು ಈಗ ಕಾಂಗ್ರೆಸ್‌ ಪಕ್ಷ ಕೊಟ್ಟಿರುವ ಭರವಸೆಯನ್ನು ಈಡೇರಿಸುವ ಮೂಲಕ ಸಾರಿಗೆ ನೌಕರರ ಅಭಿಮಾನವನ್ನು ಉಳಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಪಕ್ಷ ನಡೆದುಕೊಳ್ಳುವುದರಲ್ಲಿ ಬೇರೆ ಮಾತಿಲ್ಲ ಎಂದು ಸಾರಿಗೆ ನೌಕರರು ನಂಬಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಹೀಗಾಗಿ 7ನೇ ವೇತನ ಆಯೋಗ ಮಾದರಿಯಲ್ಲಿ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ ಮುಂದಾಗಲಿದೆ ಎಂಬ ಆಶಾಭಾವನೆಯಲ್ಲೇ ನೌಕರರು ತಮ್ಮ ನೋಟ ಬೀರುತ್ತಿದ್ದಾರೆ.

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ