NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಶೇ.31ರಷ್ಟು ತುಟ್ಟಿಭತ್ಯೆ 2022 ಜು.1ರ ಮೂಲ ವೇತನಕ್ಕೆ ವಿಲೀನಗೊಂಡ ಬಳಿಕ ನೌಕರರು 4% HRA ಕಳೆದುಕೊಳ್ಳುವರು..!

ವಿಜಯಪಥ ಸಮಗ್ರ ಸುದ್ದಿ
  • ಆದರೂ ಅಲ್ಪ ಮಟ್ಟಿಗೆ ಸಂಬಳದಲ್ಲಿ ಏರಿಕೆ ಕಾಣಬಹುದಾಗಿದೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್ 2024 ರಿಂದ ಜಾರಿಗೆ ಬರುವಂತೆ ಮೂಲ ತುಟ್ಟಿಭತ್ಯೆಯನ್ನಾಗಿ ಪರಿಗಣಿಸುವ ಮತ್ತು ಮಂಜೂರು ಮಾಡಿರುವ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ದರಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುವಂತೆ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಜೂನ್‌ 26 ರಂದು ಆದೇಶ ಹೊರಡಿಸಿದ್ದಾರೆ.

ಇಲ್ಲಿ ಸಾರಿಗೆ ನೌಕರರಿಗೆ ಸರ್ಕಾರದ ಪಿಟ್ ಮೆಂಟ್ ಶೇ.27.50 ಆಗಲಿ, ಏಳನೇ ವೇತನ ಆಯೋಗದ ಪರಿಷ್ಕೃತ ಮುಖ್ಯವೇತನ ಶ್ರೇಣಿಯಾಗಲಿ ಸಂಬಂಧಪಡುವುದಿಲ್ಲ. ಹೀಗಾಗಿ ನೌಕರರಿಗೆ ಪ್ರಸ್ತುತ ಇರುವ ಶೇ.24ರಷ್ಟು ಎಚ್‌ಆರ್‌ಎ ಬದಲಿಗೆ ಈಗ ಶೇ.20ರಷ್ಟು ಎಚ್‌ಆರ್‌ಎ ಈ ಆದೇಶದಿಂದ ಸಿಗಲಿದೆ. ಹೀಗಾಗಿ ವೇತನದಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸವಾಗುವುದಿಲ್ಲ.

ಅದು ಹೇಗೆ ಎಂದರೆ? ನಿರ್ವಾಹಕರ ವೇತನವನ್ನು ಉದಾಹರಣೆಗೆ ತೆಗೆದುಕೊಳ್ಳೋಣ ಪ್ರಸ್ತುತ 24,260 ಮೂಲ ವೇತನ ಇದ್ದರೆ ಅದರ ಡಿಎ ಶೇ.42.50 ಇದೇ. ಅಂದರೆ ಅವರು 10,311 ರೂ. DA ಪಡೆಯುತ್ತಿದ್ದಾರೆ. ಅದಕ್ಕೆ ಶೇ.24 HRA ಇದೆ ಅಂದರೆ 5822 ರೂ.ಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಈ ಮೂಲವೇತನ 24260 + ಡಿಎ 10311+ ಎಚ್‌ಆರ್‌ಎ 5822 = ಪ್ರಸ್ತುತ ಜೂನ್ 2025ರ ವೇತನ 40393 ಇದೆ ಅಂದುಕೊಳ್ಳೋಣ. ಈ ನಡುವೆ ದಿನಾಂಕ 01.07.2022ರಲ್ಲಿ 24260-(500×3=1500 ಇಂಕ್ರಿಮೆಂಟ್ ಕಳೆದರೆ) 24,260-1500 = 22,760 ಆಗಿನ ಮೂಲವೇತನ ಇದೆ.

ಈ 22,760ರ ಮೂಲವೇತನಕ್ಕೆ ಶೇ.31ಡಿಎ 7056 ರೂ.ಗಳನ್ನು ಜತೆಗೆ ಇದೇ ಮೂಲ ವೇತನಕ್ಕೆ ಶೇ.24 HRA 5,823 ರೂ.ಗಳನ್ನು ಸೇರಿಸಿದರೆ. ಈಗ ಒಟ್ಟಾರೆ 22,760 + 7056 + 5823= 35639 ರೂ.ಗಳು 01.07.2022ರ ದಿನಾಂಕದ ಸಂಬಳ ಆಗಿರುತ್ತದೆ.

22,760 ಮೂಲವೇತನ + 7056 ಡಿ ಎ ಶೇ.31 ವಿಲೀನಗೊಳಿಸಿದಾಗ 29,816 ಆಗಿದ್ದು ಸ್ಲಾಬ್ ಪ್ರಕಾರ 29,850 ಮೂಲವೇತನ ಆಗುತ್ತದೆ. ಮುಂದುವರಿದು ದಿನಾಂಕ 01.07.2022 ರಿಂದ ಜುಲೈ ತಿಂಗಳ 2025 ರ ವರೆಗೂ ಡಿಎ ಲೆಕ್ಕ ಮಾಡದೆ ನೇರವಾಗಿ ಸಂಬಳಕ್ಕೆ ಬಂದು ಬಿಡುತ್ತದೆ.

29,850ರ ಮೂಲವೇತನಕ್ಕೆ (ಕಳೆದಿರುವ ಮೂರು ಇಂಕ್ರಿಮೆಂಟ್ 500 ರೂ.ಗಳ ಬದಲಿಗೆ 550 ರೂಪಾಯಿಗಳ ಮೂರು ಇಂಕ್ರಿಮೆಂಟ್ ಹೆಚ್ಚಿಸಿಕೊಳ್ಳಬೇಕು) 550×3= 1650+29850 =31500 ಪ್ರಸ್ತುತ ಜುಲೈ 2025ರ ಮೂಲ ವೇತನವಾಗುತ್ತದೆ. ಜುಲೈ 2025ರ ಮೂಲವೇತನ 31500 ರೂಪಾಯಿ + ಡಿಎ ಶೇ.12.25 ಲೆಕ್ಕಾಚಾರ ಹಾಕಿದಾಗ ಆ ನಿರ್ವಾಹಕನಿಗೆ 3859 HRA ಶೇ.20ರಷ್ಟು ಲೆಕ್ಕಾಚಾರ ಹಾಕಿದಾಗ 6,300 ರೂಪಾಯಿಗಳು. ಒಟ್ಟಾರೆ 31,500+3859+6300= 41659 ರೂ. ವೇತನ ಆಗುತ್ತದೆ.

ಇದನ್ನು ಸಂಸ್ಥೆ ವತಿಯಿಂದ ಬಿಡಿಎ ತೋರಿಸುತ್ತಾರೆ ಈ ಮೇಲೆ ತಿಳಿಸಿದಂತೆ ಜೂನ್ 2025ರ ವೇತನ 40,393 ಸರ್ಕಾರದ ಆದೇಶದಂತೆ ಡಿಎ ವಿಲೀನಗೊಳಿಸಿದಾಗ ಆಗುವಂತಹ ಪೂರ್ಣ ಪ್ರಮಾಣದ ಸಂಬಳ 41,659 ರೂಪಾಯಿಗಳು. ಅಂದರೆ 41,659-40,393=1266 ರೂ.ಗಳು ಮಾತ್ರ ವೇತನದಲ್ಲಿ ಹೆಚ್ಚಾಗಿ ಸಿಗುತ್ತದೆ.

ಹೀಗಾಗಿ ತಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೇನೆಂದರೆ, ಮೂಲವೇತನ ಜಾಸ್ತಿಯಾಗುತ್ತದೆ. ಸದ್ಯಕ್ಕೆ ಶೇ.24ರಷ್ಟಿರುವ HRA ಶೇ.4 ಕಡಿಮೆಯಾಗಿ ಶೇ.20 ಪರ್ಸೆಂಟ್‌ಗೆ ಇಳಿಕೆಯುತ್ತದೆ. ಡಿಎ ಪ್ರಸ್ತುತ ದಿನಾಂಕ 01.01.2025ದಕ್ಕೆ ಶೇ.12.25 ರಷ್ಟು ಡಿಎ ಇರುತ್ತದೆ. ಇದನ್ನು ಗಮನಿಸಿದರೆ ಇಲ್ಲಿ ಯಾವುದೇ ಹೇಳಿಕೊಳ್ಳುವಂತಹ ಸಂಬಳದ ವ್ಯತ್ಯಾಸವಾಗುವುದಿಲ್ಲ. ಕಾರಣ ಸಾರಿಗೆ ನೌಕರರಿಗೆ ಸರ್ಕಾರದ ಪಿಟ್ ಮೆಂಟ್ ಶೇ.27.50 ಆಗಲಿ, ಏಳನೇ ವೇತನ ಆಯೋಗದ ಪರಿಷ್ಕೃತ ಮುಖ್ಯವೇತನ ಶ್ರೇಣಿಯಾಗಲಿ ಅನ್ವಯವಾಗುವುದಿಲ್ಲ. ( ಒಂದು ವೇಳೆ 7ನೇ ವೇತನ ಆಯೋಗ ಸಾರಿಗೆ ನೌಕರರಿಗೂ ಸಿಕ್ಕಿದ್ದರೆ ಸರ್ಕಾರಿ ನೌಕರರ ವೇತನದಷ್ಟೇ ಸಿಗುತ್ತಿತ್ತು.

ಒಟ್ಟಾರೆ ಈ ಬಿಡಿಎ ಮೂಲ ವೇತನಕ್ಕೆ ವಿಲೀನ ಮಾಡಿರುವುದರಿಂದ ಹೇಳಿಕೊಳ್ಳುವ ರೀತಿಯಲ್ಲಿ ವೇತನ ಹೆಚ್ಚಳವಾಗದಿದ್ದರೂ ಕೂಡ ಅಲ್ಪ ಮಟ್ಟಿಗೆ ಹೆಚ್ಚಾಗುತ್ತದೆ. ಆದರೆ HRA ಶೇ.4ರಷ್ಟು ಕೈಬಿಟ್ಟು ಹೋಗುತ್ತದೆ ಎಂಬುದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು.

Megha
the authorMegha

Leave a Reply

error: Content is protected !!