KSRTC: ನೌಕರರ ಬದುಕು ಹಸನು ಮಾಡುವ ಕಡೆ ಗಮನ ಕೇಂದ್ರೀಕರಿಸಿ- ಸಾಕು ಬಿಡಿ ದ್ವೇಷ, ನಾಲ್ಕೂ ನಿಗಮಗಳ ನೌಕರರು ಬೇಸತ್ತಿದ್ದಾರೆ..!

ರಾಜ್ಯ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳ ಚರ್ಚೆಗೆ ಮತ್ತೆ ಸಭೆ ಕರೆಯುವುದಾಗಿ ಹೇಳಿದೆ. ಅದು ಯಾವಾಗ ಕರೆಯುತ್ತೋ ನಮಗೆ ಗೊತ್ತಿಲ್ಲ. ಆದರೆ, ಅಲ್ಲಿಯವರೆಗೆ ಸಾರಿಗೆ ಸಂಘಟನೆಗಳು ಪರಸ್ಪರ ಕೆಸರೆರಚಾಟ, ಪರಸ್ಪರ ಆರೋಪ, ಪ್ರತ್ಯಾರೋಪಗಳು ದಿನ ಬೆಳಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇದು ರಾಜ್ಯ ಸರ್ಕಾರ ಮುಂದಿನ ಸಭೆ ಕರೆಯುವವರೆಗೂ ಮುಂದುವರಿಯುವ ಎಲ್ಲ ಲಕ್ಷಣಗಳು ಇವೆ. ಆದರೆ, ಸಮಸ್ತ ಸಾರಿಗೆ ನೌಕರರ ಒಂದಾಗಿ ಹೋಗಿ ಬೇಡಿಕೆ ಮಂಡಿಸಿರಿ ಎಂಬ ಭಾವನೆಗಳನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ??!!
ರಾಜ್ಯ ಕಳೆದ ಎರಡೂವರೆ ವರ್ಷಗಳಿಂದಲೂ ಸಭೆಗಳನ್ನು ಕರೆಯುತ್ತಿದೆ, ಕರೆದ ಸಭೆಗಳು ಸಾರಿಗೆ ಸಂಘಟನೆಗಳಿಂದ ಭಿನ್ನ ವಿಭಿನ್ನ ಬೇಡಿಕೆಗಳಿಂದ ವಿಫಲವಾಗುತ್ತಲ್ಲೇ ಇವೆ. ಇದರಿಂದ ಸಮಸ್ತ ಸಾರಿಗೆ ನೌಕರರು ರಾಜ್ಯ ಸರ್ಕಾರಿ ನೌಕರರಗಿಂತ ಶೇಕಡಾ 45 ರಿಂದ 50 ರಷ್ಟು ಕಡಿಮೆ ಸಂಬಳಕ್ಕೆ ಹೆಚ್ಚಿನ ಶ್ರಮದ ದುಡಿಮೆ ಮಾಡುತ್ತಿದ್ದಾರೆ. ಇದನ್ನು ಯಾರು ಅರ್ಥ ಮಾಡಿಕೊಳ್ಳುತ್ತಿಲ್ಲ??!!
ರಾಜ್ಯ ಸರ್ಕಾರದ ಇದ್ದುದ್ದನ್ನು ಹೇಳಿ ಆಗಿದೆ. ಆದರೆ ಯಾರಿಗೂ ಅದು ಒಪ್ಪಿಗೆ ಆಗಿಲಕ್ಲ. ಒಪ್ಪಿದರೆ ಬಹು ಲಕ್ಷ ರೂಪಾಯಿಗಳ ಹೊಡೆತ ಬೀಳುತ್ತೆ. ರಾಜ್ಯ ಸರ್ಕಾರ ಏಪ್ರಿಲ್ 2026ರಲ್ಲಿ ವೇತನ ಒಪ್ಪಂದ ಮಾಡುವದಾಗಿ ಹೇಳಿದರೆ, ಒಪ್ಪಂದದ ಅವಧಿ 6 ವರ್ಷಕ್ಕೆ ಆಗುತ್ತದೆ.
ಇದಾದರೆ ಮತ್ತೆ ಮುಂದೆ ಬರುವ ಸರ್ಕಾರಗಳು ಮತ್ತೆ ಒಪ್ಪಂದದ ಅವಧಿಯನ್ನು ಹೆಚ್ಚಳ ಮಾಡುವ ಅಪಾಯವಿದೆ. ಸಾರಿಗೆ ಸಂಘಟನೆಗಳ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡು ಒಮ್ಮತದಿಂದ ಒಂದೇ ಧ್ವನಿಯಿಂದ ಮುಂದಿನ ಸಭೆಯಲ್ಲಿ ಮಂಡಿಸಬೇಕಾಗಿದೆ. ಇಲ್ಲದಿದ್ದರೆ ರಾಜ್ಯ ಸರ್ಕಾರೇನು ಮಾಡುತ್ತದೋ ಗೊತ್ತಿಲ್ಲ.
ಏಕೆಂದರೆ 1992 ರಿಂದ 2020ರವರಿಗೆ ದ್ವಿಪಕ್ಷೀಯ ಒಪ್ಪಂದಗಳು ಆಗಿಯೇ ಇಲ್ಲ. ಎಲ್ಲವನ್ನೂ ಸರ್ಕಾರ ಏಕಪಕ್ಷೀಯವಾಗಿ ಮಾಡಿಕೊಂಡು ಬಂದಿದೆ. ಈಗ ಭಿನ್ನ ವಿಭಿನ್ನ ಬೇಡಿಕೆಗಳನ್ನು ಮಂಡಿಸತೊಡಗಿದರೆ ಸರ್ಕಾರಕ್ಕೆ ಪರಮಾಧಿಕಾರ ಇದ್ದು ಮತ್ತೆ ಏಕಪಕ್ಷೀಯ ಆದೇಶ ಹೊರಡಿಸುವ ಅಪಾಯವೂ ಇದೆ.
ಒಂದೊಮ್ಮೆ ಏಕಪಕ್ಷೀಯ ಆದೇಶ ಮಾಡಿದರೆ ಯಾರೂ ಏನು ಮಾಡುವ ಹಾಗಿಲ್ಲ. ಇದು ಕೂಡಾ ಆಗಿ ಹೋಗಿದೆ. ಹಿಂದೆಲ್ಲ ಬರಿ ಶೇಕಡಾ 4, ಶೇಕಡಾ 5 ಶೇಕಡಾ 6ರಷ್ಟು ವೇತನ ಪರಿಷ್ಕರಣೆ ಆದೇಶ ಏಕಪಕ್ಷೀಯವಾಗಿ ಹೊರಡಿಸಿದ್ದ ಇತಿಹಾಸ ಯಾರೂ ಮರೆಯುವ ಹಾಗಿಲ್ಲ. ಆಗ ಕಡಿಮೆ, ಕನಿಷ್ಠ ಶೇಕಡಾ ವೇತನ ಹೆಚ್ಚಳ ಆಗಿದ್ದಕ್ಕೆ ಇಂದು ಅತಿ ಕಡಿಮೆ ಸಂಬಳಕ್ಕೆ ಸಾರಿಗೆ ನೌಕರರು ಹೆಚ್ಚಿನ ಶ್ರಮದ ದುಡಿಮೆ ಮಾಡುತ್ತಿದ್ದಾರೆ.
ಅಂತು ತಮ್ಮತಮ್ಮ ಭಿನಾಭಿಪ್ರಾಯಗಳನ್ನೆ ಹೋಗೆಯೇ ಮುಂದುವರಿಸಿಕೊಂಡು ಹೋಗುತ್ತಿದ್ದರೆ ಸರ್ಕಾರದ ನಿರ್ಧಾರಕ್ಕೆ ಕಾಯುವ ಅನಿವಾರ್ಯತೆಗೆ ಸಮಸ್ತ ಸಾರಿಗೆ ನೌಕರರು ಈಗಗಲೇ ಬಂದಿದ್ದೇವೆ. ಆದರೂ ಎಲ್ಲೋ ಈ ಸಂಘಟನೆಗಳು ನಮಗೆ ಒಳ್ಳೇದು ಮಾಡುತ್ತೇವೆ ಎಂದು ಮುಂದಿನ ಬೆಳವಣಿಗೆಗಳನ್ನು ಕಾದು ನೋಡುತ್ತಿದ್ದೇವೆ.
ಕಾರಣ ಇನ್ನು ಎಷ್ಟು ಕಾಲ ನೌಕರರನ್ನು ಹೀಗೆ ಬಲಿ ತೆಗೆದುಕೊಳ್ಳುತಾ ಇರುವಿರಿ. ಸಾಧ್ಯವಾದಷ್ಟು ನೌಕರರಿಗೆ ಒಳ್ಳೇದು ಮಾಡಿ, ಅವರ ಬದುಕು ಹಸನು ಮಾಡುವ ಕಡೆ ನಿಮ್ಮ ಗಮನ ಕೇಂದ್ರೀಕರಿಸಿ. ಸಾಕು ಮಾಡಿ ದ್ವೇಷವನ್ನು, 4 ನಿಗಮದ ನೌಕರರು ಬೇಸತ್ತಿದ್ದಾರೆ.
ಕಡಿಮೆ ಸಂಬಳದಲ್ಲಿ ಹೆಚ್ಚಿಗೆ ಕೆಲಸ ಮಾಡುತ್ತಿದ್ದಾರೆ ಅದರಲ್ಲೂ ಈ ಶಕ್ತಿ ಯೋಜನೆಯಿಂದ ಸಾಕಷ್ಟು ಬಳಲಿದ್ದಾರೆ ನಮ್ಮ ನೌಕರರು, ಅದನ್ನು ಮನಗಂಡು ಸರ್ಕಾರ ಕೊಟ್ಟಿರುವ ಪ್ರಣಾಳಿಕೆ ಭರವಸೆಯಂತೆ ಬೇಡಿಕೆಯನ್ನು ನೀವು ಒತ್ತಾಯ ಮಾಡಿ ಕೇಳಿ.
ನೌಕರರು ನಿಮ್ಮನ್ನು ದಿನಾಲು ಹಾಡಿ ಹೊಗಳುತ್ತಾರೆ ಅದನ್ನು ಬಿಟ್ಟು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸರ್ಕಾರದ ಜತೆ ಹಗ್ಗ ಜಗ್ಗಾಟ ಮಾಡುವುದು ಕೊಟ್ಟಷ್ಟು ತೆಗೆದುಕೊಳ್ಳೂವುದು ಈಗಿನ ಬೆಲೆ ಏರಿಕೆ ದಿನದಲ್ಲಿ ಕಷ್ಟವಾಗುತ್ತದೆ. ದಯವಿಟ್ಟು ಈಗಲಾದರೂ ನಿಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ನೌಕರರ ಭವಿಷ್ಯವನ್ನು ರೂಪಿಸಲು ಪ್ರಯತ್ನಿಸಿ ಎಂದು ಸಮಸ್ತ ನೌಕರರು ಮನವಿ ಮಾಡಿದ್ದಾರೆ.
Related









