
- ರ್ಕಾರದ ಮುಖ್ಯ ಕಾರ್ಯದರ್ಶಿ, ಸಾರಿಗೆ ಇಲಾಖೆಯ ಪ್ರಧಾನ ರ್ಯದರ್ಶಿಗಳಿಗೆ ಪತ್ರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ಸಂಸ್ಥೆಗಳ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರಂತೆ ಪುರುಷರಿಗೂ ಉಚಿತವಾಗಿ ಓಡಾಡುವ ಶಕ್ತಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಾರಿಗೆ ಇಲಾಖೆಯ ಪ್ರಧಾನ ರ್ಯದರ್ಶಿ ಅವರಿಗೆ ಸಾಗರದ ವಕೀಲರೊಬ್ಬರು ಮನವಿ ಸಲ್ಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ನಗರದ ಚಾಮರಾಜ ಪೇಟೆ ನಿವಾಸಿ ವಕೀಲ ಕೆ.ವಿ. ಪ್ರವೀಣ ಎಂಬುವರೆ ಮಾ.12ರಂದು ಅಧಿಕಾರಿಗಳಿಗೆ ರಿಜಿಸ್ಟ್ರಾರ್ ಪೋಸ್ಟ್ ಮಾಡುವ ಮೂಲಕ ಮನವಿ ಪತ್ರ ಸಲ್ಲಿಸಿದ್ದು, ಸಾರಿಗೆ ಸಂಸ್ಥೆಗಳ ಸಾಮಾನ್ಯ ಬಸ್‌ಗಳಲ್ಲಿ ಪುರುಷರಿಗೂ ಉಚಿತವಾಗಿ ಓಡಾಡುವ ಶಕ್ತಿ ಯೋಜನೆಯನ್ನು ಜಾರಿಗೊಳಿಸುವಂತೆ ಕೋರಿದ್ದಾರೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಸರ್ಕಾರವು ಸರ್ಕಾರಿ ಸ್ವಾಮ್ಯದ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಸಾಮಾನ್ಯ ಬಸ್ಸುಗಳಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆ ಎಂಬ ಯೋಜನಡೆಯಡಿ ರಾಜ್ಯಾದಂತ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿರುತ್ತೀರಿ, ಇದು ಸ್ವಾಗತರ್ಹ.
ಆದರೆ ಇದು ಭಾರತ ಸಂವಿಧಾನದ 14ನೇ ವಿಧಿಯ ಪ್ರಕಾರ ಲಿಂಗ ತಾರತಮ್ಯವಾಗಿದೆ. ಇದು ಯಾವ ಮಾನದಂಡವು ಇಲ್ಲದೆ ಮಹಿಳೆ ಎಂಬ ಮಾತ್ರಕ್ಕೆ ಯೋಜನೆಯನ್ನು ನೀಡಿ ಪುರಷರನ್ನು ಕಡೆಗಣಿಸಲಾಗಿದೆ ಎಂದು ವಿವರಿಸಿದ್ದಾರೆ.
ಅಲ್ಲದೆ ಈಗಾಗಲೇ ರಾಜ್ಯ ಸರ್ಕಾರವು ತನ್ನ ಎಲ್ಲ ಸಾರಿಗೆ ನಿಗಮಗಳ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದು, ಆದರೆ ಹಣ ಕೊಟ್ಟ ಪುರುಷರು ನಿಂತುಕೊಂಡು ಪ್ರಯಾಣಿಸುವಂತಾಗಿದೆ. ಇದು ನನಗೂ ಕೂಡಾ ಆಗುತ್ತಿರುವ ಅನುಭವವಾಗಿದ್ದು, ಈ ಮೂಲಕ ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ.
ಆದ್ದರಿಂದ ತಾವುಗಳು ಕೂಡಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರಂತೆ ಪುರುಷರಿಗೂ ಉಚಿತವಾಗಿ ಓಡಾಡುವ ಶಕ್ತಿ ಯೋಜನೆಯನ್ನು ಜಾರಿಗೊಳಿಸುವಂತೆ ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಒಂದೊಮ್ಮೆ ಇದು ಸರ್ಕಾರದಿಂದ ಸಾಧ್ಯವಾಗದಿದ್ದಲ್ಲಿ ಸೂಕ್ತ ನ್ಯಾಯಾಲಯದಲ್ಲಿ ನಿಮ್ಮನ್ನು ಪಾರ್ಟಿಯನ್ನಾಗಿ ಮಾಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ಈ ಮೂಲಕ ತಿಳಿಯಪಡಿಸುತ್ತೇವೆ ಎಂದು ತಿಳಿಸಿದ್ದಾರೆ.