Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ವೇತನ ಹಿಂಬಾಕಿಗೆ 220 ಕೋಟಿ ಕೊಟ್ಟ ಸರ್ಕಾರ – ಮಾರ್ಚ್‌ನಲ್ಲಿ ನಿವೃತ್ತ ನೌಕರರ ಖಾತೆಗೆ ಹಣ ಜಮೆ ಎಂದ ಅನ್ಬುಕುಮಾರ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 1.1.2020 ರಿಂದ 28.02.2023 ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನೌಕರರಿಗೆ ಶೇ. 15 ವೆತನ ಹೆಚ್ಚಳ, ಶೇ. 45.25 BDA ಮರ್ಜ್, ಇಂಕ್ರಿಮೆಂಟ್ ಹೆಚ್ಚಳ ಸೇರಿಸಿ ಪೇ ಪಿಕ್ಸೇಷನ್ ಮಾಡಿ ಮಾರ್ಚ್‌ನಲ್ಲಿ ನಿಮ್ಮ ಎಲ್ಲ ಬಾಕಿ ಹಣವನ್ನು ಪಾವತಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ತಿಳಿಸಿದ್ದಾರೆ.

ಇಂದು ನಿವೃತ್ತ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‌ಗಳಲ್ಲಿ ಸಾರಿಗೆ ನಿಗಮಗಳ ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಖುದ್ದು ಭೇಟಿನೀಡಿ ಮಾತನಾಡಿದರು.

ನಿವೃತ್ತ ನೌಕರರಿಗೆ ಕೊಡಬೇಕಿರುವ ಸುಮಾರು 220 ಕೋಟಿ ರೂಪಾಯಿ ಹಿಂಬಾಕಿ ಹಣವನ್ನು ಸರ್ಕಾರ ಈಗಾಗಲೇ ಮಂಜೂರು ಮಾಡಿದೆ. ಆದರೆ ನಾವು ಬೋರ್ಡ್‌ನಲ್ಲಿ ಇನ್ನು ಅನುಮತಿ ಪಡೆಯದಿರುವುದರಿಂದ ಅದು ವಿಳಂಬವಾಗಿದೆ ಅಷ್ಟೆ ಎಂದು ತಿಳಿಸಿದರು.

ಇನ್ನು ಮಾರ್ಚ್‌ನಲ್ಲಿ ಕೆಎಸ್‌ಆರ್‌ಟಿಸಿ ಮಂಡಳಿ ಮತ್ತು ಸರ್ಕಾರದಿಂದ ಅಧಿಕೃತ ಅನುಮತಿ ಪಡೆದು ಮಾರ್ಚ್‌ ತಿಂಗಳಿನಲ್ಲಿ ನಿಮ್ಮ ವೇತನ ಪರಿಷ್ಕರಣೆ ಮಾಡಿಕೊಡುತ್ತೇವೆ. ಯಾರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಭರವಸೆಕೊಟ್ಟ ಹಿನ್ನೆಲೆಯಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನು ಕೈಬಿಡಲಾಗಿದೆ ಎಂದು ಸಾರಿಗೆ ನಿಗಮಗಳ ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ತಿಳಿಸಿದರು.

ನಿವೃತ್ತ ನೌಕರರ ಬೇಡಿಕೆಗಳೇನು: 1.1.2020 ರಿಂದ ಸಾರಿಗೆ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುವ 4 ನಿಗಮಗಳ ನೌಕರರು ಹಾಗೂ ಅಧಿಕಾರಿಗಳಿಗೆ 31.12.2019 ರಲ್ಲಿ ಇದ್ದ ಬೇಸಿಕ್‌ಗೆ ಶೇ. 15 ಹೆಚ್ಚಳ, ಅಂದು ಇದ್ದ ಶೇ. 45.25 BDA ಮರ್ಜ್ ಮಾಡಿ ಹಾಗೂ ಇಂಕ್ರಿಮೆಂಟ್ ಹೆಚ್ಚಳವನ್ನು ಸೇರಿಸಿ 1.1.2020 ರಿಂದ ಕೆಲಸ ಮಾಡುತ್ತಿರುವ ಎಲ್ಲ ಸಿಬ್ಬಂದಿಗಳಿಗೂ ವೇತನ ಹೆಚ್ಚಳ ಮಾಡಿ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಆಡಳಿತ ವರ್ಗ ಆದೇಶ ಮಾಡಿದೆ.

ಅದರಂತೆ ಕರ್ತವ್ಯ ನಿರತ ಎಲ್ಲ ನೌಕರರಿಗೂ ವೇತನ ನೀಡಲಾಗುತ್ತಿದೆ. ಆದರೆ 1.1.2020 ರಿಂದ 28.02.2023 ರ ನಡುವೆ 4 ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ, ಅಧಿಕಾರಿಗಳು ಮತ್ತು ನೌಕರರಿಗೆ ಶೇ. 15 ವೇತನ ಹೆಚ್ಚಳ, ಶೇ. 45.25 BDA ಮರ್ಜ್, ಇಂಕ್ರಿಮೆಂಟ್ ಹೆಚ್ಚಳ ಸೇರಿಸಿ ಪೇ ಪಿಕ್ಸೇಷನ್ ಮಾಡಿ ಕೊಟ್ಟಿಲ್ಲ. ಮಾರ್ಚಿ ಬಂದರೆ ಒಂದು ವರ್ಷವಾಗುತ್ತದೆ.

ಇದು 1.1.2020 ರಿಂದ 28.02.2023 ರವರೆಗೆ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದವರಿಗೆ ಕೊಡುವ ಸ್ಟ್ಯಾಚುಟರಿ ಸೌಲಭ್ಯವಾಗಿದೆ. ಈ ಸೌಲಭ್ಯವನ್ನು ನಿವೃತ್ತ ನೌಕರರು ಕೇಳಬೇಕಾಗಿಯೇ ಇಲ್ಲ. ಆಡಳಿತ ವರ್ಗವೇ ಎಲ್ಲರೊಟ್ಟಿಗೆ ಆದೇಶ ಮಾಡಿ ನೀಡಬೇಕಿತ್ತು.

ಆದರೆ ಈ ಬಗ್ಗೆ ಆದೇಶ ನೀಡದೆ ಇದ್ದ ಬಗ್ಗೆ ನಿವೃತ್ತ ನೌಕರರು ಸಭೆ ನಡೆಸಿ ಆಡಳಿತ ವರ್ಗಕ್ಕೆ 17.09.2023 ರಂದು ಬೆಂಗಳೂರಿನ KSRTC ಕೇಂದ್ರ ಕಚೇರಿ ಮುಂದೆ ಸೇರಿ ಅಂದು ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ಕೂಡಲೇ ಆದೇಶ ಮಾಡಿ ಆರ್ಥಿಕ ಸೌಲಭ್ಯಗಳನ್ನು ಜಾರಿಗೆ ಕೊಡುವಂತೆ ಒತ್ತಾಯಿಸಲಾಗಿತ್ತು. ಆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

ನಂತರವೂ ಆದೇಶ ಬರದ ಕಾರಣ 19.10.2023 ರಂದು ಸ್ವಾತಂತ್ರ್ಯ ಯೋಧರ ಪಾರ್ಕ್‌ನಲ್ಲಿ ಒಂದು ದಿನ ಧರಣಿ ನಡೆಸಲಾಯಿತು. ಅಂದು ಇದೇ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಧರಣಿ ಸ್ಥಳಕ್ಕೆ ಬಂದು ಕೂಡಲೇ ಆದೇಶ ನೀಡುವುದಾಗಿ ಭರವಸೆ ನೀಡಿದ್ದರು. ಆನಂತರ ಹಲವು ಬಾರಿ ಈ ಬಗ್ಗೆ ಸಾರಿಗೆ ಸಚಿವರು ಮತ್ತು ಇದೇ ವ್ಯವಸ್ಥಾಪಕರ ಬಳಿ ಸಭೆ ನಡೆಸಿ ಆದೇಶ ಜಾರಿ ಮಾಡಲು ಒತ್ತಾಯಿಸಿದೆವು. ಆದರೂ ಪ್ರಯೋಜನವಾಗಿಲ್ಲ.

ಇನ್ನು ಆದೇಶ ಹೊರಡಿಸುವುದಾಗಿ ಸಕಾರಾತ್ಮವಾಗಿ ಮಾತನಾಡಿದರೂ ಸಹ ಈವರೆಗೂ ಆದೇಶ ಮಾಡದಿರುವುದು ನಿವೃತ್ತ ನೌಕರರಿಗೆ ತೋರುತ್ತಿರುವ ಅಗೌರವವಾಗಿದೆ. ಆದ್ದರಿಂದ ಜ.17ರಂದು ಸಭೆ ನಡೆಸಲಾಗಿತ್ತು ಅಂದು ಈ ಬಗ್ಗೆ ನಿವೃತ್ತ ನೌಕರರಲ್ಲಿ ಅತೃಪ್ತಿ ಹೆಚ್ಚಳವಾಗಿರುವುದನ್ನು ಮನಗಂಡು ಬೇಡಿಕೆ ಈಡೇರುವವರೆಗೂ ಫೆಬ್ರವರಿ 20ರಿಂದ ಅನಿರ್ದಿಷ್ಠಾವಧಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ ಇಂದು ಬೇಡಿಕೆಗಳ ಈಡೇರಿಕೆಗಾಗಿ 4 ನಿಗಮಗಳಲ್ಲಿ ನಿವೃತ್ತ ಅಧಿಕಾರಿಗಳು/ ನೌಕರರು ಹಮ್ಮಿಕೊಂಡಿದ್ದರು.

ಧರಣಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಯದೆವರಾಜೇ ಅರಸು, ಕೆ.ಎಲ್‌.ಮಂಜುನಾಥ್, ಎಚ್‌.ಎಸ್‌. ಮಂಜುನಾಥ್, ವೆಂಕಟರವಣಪ್ಪ, ಕೇಂದ್ರ ಕಚೇರಿಯ ಉನ್ನತ ಅಧಿಕಾರಿಗಳು ಸೇರಿದಂತೆ ನಾಲ್ಕೂ ನಿಗಮಗಳ ನೂರಾರು  ನಿವೃತ್ತ ನೌಕರರು ಇದ್ದರು.

Leave a Reply

error: Content is protected !!
LATEST
Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತೆಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ KSRTC: ಗೊಂದಲದ ನಡುವೆಯೂ 1280 ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ