NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಕೂಟದಿಂದ ಏ.8ರಿಂದ ಪಾದಯಾತ್ರೆ, 21ರಿಂದ ಆಮರಣಾಂತ ಉಪವಾಸ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸರ್ಕಾರ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7ನೇ ವೇತನ ಆಯೋಗದ ಮಾದರಿಯಲ್ಲಿ) 01/01/2024 ರಿಂದ ಜಾರಿಗೆ ಬರುವಂತೆ ಕೂಡಲೇ ನೀಡಬೇಕು ಎಂದುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಏಪ್ರಿಲ್‌ 21ರಿಂದ ಅನಿರ್ದಿಷ್ಟಾವಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ತಿಳಿಸಿದ್ದಾರೆ.

ಈ ಸಂಬಂಧ ಮಾ.31ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ಮನವಿ ಪತ್ರ ಸಲ್ಲಿಸಿದ್ದು ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ನಡುವೆ ಕಳೆದ ಮಾರ್ಚ್‌ 29ರಂದು ಹಾವೇರಿಯಲ್ಲಿ ನಡೆದ ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಸರ್ವಾನುಮತದಿಂದ ತೆಗೆದುಕೊಂಡಿರುವ ನಿರ್ಣಾಯಗಳನ್ನು ಕೂಡ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದಿದ್ದು ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದ್ದಾರೆ.

ಮಾ.29ರ ಸಭೆಗೆ ಆಗಮಿಸಿದ ಕೂಟದ ಎಲ್ಲ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು 06.04.2026 ರಂದು ನಡೆಯುವ ಸಭೆಯಲ್ಲಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ  ಸಾರಿಗೆ ನೌಕರರು ಮತ್ತು ಅವರ ಕುಟುಂಬ ಸದಸ್ಯರು 08.04.2026 ರಿಂದ ಚಿತ್ರದುರ್ಗದ ಡಿಸಿ ಕಚೇರಿಯಿಂದ ಪಾದಯಾತ್ರೆ ಹೊರಟು 21.04.2026 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ ತಲುಪಿ, ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಅನಿರ್ದಿಷ್ಟಾವಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ವಿವರಿಸಿದ್ದಾರೆ.

ನಮ್ಮ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಹಲವು ಸುತ್ತುಗಳ ಚರ್ಚೆಗಳನ್ನು ಮಾಡಿ ಅಂತಿಮವಾಗಿ 29.03.2026 ರಂದು ಹಾವೇರಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳ ಕಾರ್ಯಕಾರಿಣಿ ಹಾಗೂ ಸರ್ವಸದಸ್ಯರ ಸಭೆ ಕರೆದು ಚರ್ಚಿ ಸರ್ವಾನುಮತದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಬೇಡಿಕೆಗಳು: ಸರ್ಕಾರ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7ನೇ ವೇತನ ಆಯೋಗದ ಮಾದರಿಯಲ್ಲಿ) 01/01/2024 ರಿಂದ ಜಾರಿಗೆ ಬರುವಂತೆ ಕೂಡಲೇ ನೀಡುವುದು.

01.01.2020 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಈ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ನೀಡುವುದು. (ಈಗಾಗಲೇ ಸರ್ಕಾರ 26 ತಿಂಗಳ ವೇತನ ಹಿಂಬಾಕಿ ನೀಡುವ ಸುತ್ತೋಲೆ ಹೊರಡಿಸಿದ್ದು ಬಾಕಿ 12 ತಿಂಗಳ ವೇತನ ಹಿಂಬಾಕಿಯನ್ನು ಸರ್ಕಾರ ಅಥವಾ ಸಂಸ್ಥೆ ಭರಿಸುವುದು.)

ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ, ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ಈ ಕೂಡಲೆ ನಡೆಸುವುದು. ಈ ಎಲ್ಲ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ 06.04.2026 ರಂದು ನಡೆಯಲ್ಲಿರುವ ಸಭೆಯಲ್ಲಿ ಸೂಕ್ತ ನಿರ್ಣಾಯಗಳನ್ನು ಕೈಗೊಂಡು ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವೆಂದರೆ ಮುಂದೆ ನಡೆಯುವ ಹೋರಾಟಗಳು ತೀವ್ರಗೊಂಡು ಬೇರೆ ರೀತಿಯ ಯಾವುದೇ ತಿರುವು ಪಡೆದರೆ ಅದಕ್ಕೆ ಸರ್ಕಾರ ಮತ್ತು ಆಡಳಿತ ಮಂಡಳಿಯೇ ನೇರೆ ಹೊಣೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC ಎಂಡಿ ಅಧ್ಯಕ್ಷತೇಲಿ ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಇಂದು ಸಂಜೆ ಸಭೆ ಲಾಲ್‌ಬಾಗ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿದ ಇಪಿಎಸ್ ಪಿಂಚಿಣಿದಾರರ 99ನೇ ಮಾಸಿಕ ಸಭೆ- ಕೇಂದ್ರದ ಬಗ್ಗೆ ಅಸಮಾಧಾನ ಆರ್‌.ಆರ್‌.ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯ ಮುಖ್ಯ ಕಾನೂನು ಸಲಹೆಗಾರ ವಕೀಲ H.B.ಶಿವರಾಜು ತಮಿಳುನಾಡಿಗೆ ವರ್ಗಾವಣೆ NWKRTC -ಖಾಸಗಿ ಬಸ್ ನಡುವೆ ಡಿಕ್ಕಿ: ಇಬ್ಬರು ಪ್ರಯಾಣಿಕರು ಮೃತ, 20 ಮಂದಿಗೆ ಗಾಯ KSRTC: ಪ್ರಣಾಳಿಕೆ ಭರವಸೆ ಈಡೇರಿಸದ ಸರ್ಕಾರದ ವಿರುದ್ಧ ಸಮರ ಸಾರಲು ಸಜ್ಜಾದ ಸಾರಿಗೆ ನೌಕರರಿಂದ ನಾಳೆ ಸುದ್ದಿಗೋಷ್ಠಿ KKRTC: ಏ.14ರಂದು ಡಾ.ಅಂಬೇಡ್ಕ‌ರ್‌ ಜಯಂತಿ-ತಲಾ 20 ಸಾವಿರ ರೂ. ಮಂಜೂರು 12ನೇ ತರಗತಿವರೆಗೆ ಗಂಡು ಮಕ್ಕಳಿಗೂ ಉಚಿತ ಸರ್ಕಾರಿ ಬಸ್‌ ಪ್ರಯಾಣಕ್ಕೆ ಶಿಫಾರಸು NWKRTC ಬಸ್‌ಗೆ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಬೆಂಗಾವಲು ವಾಹ‌ನ ಡಿಕ್ಕಿ ಎಲ್ಲ ಕಚೇರಿಗಳು, ನಿಗಮಗಳಲ್ಲೂ ಲೋಕಾ ಯುಕ್ತರ ಸಹಾಯವಾಣಿ ಸಂಖ್ಯೆ ಒಳಗೊಂಡ ಪ್ರದರ್ಶನ ಫಲಕ ಅಳವಡಿಸಲು ಸಿಎಸ್‌ ಡಾ. ಶಾಲಿನಿ... KSRTC ಕೂಟದಿಂದ ಏ.8ರಿಂದ ಪಾದಯಾತ್ರೆ, 21ರಿಂದ ಆಮರಣಾಂತ ಉಪವಾಸ