CRIMENEWSನಮ್ಮಜಿಲ್ಲೆ

KSRTC ಹಾಸನ: ತನಿಖಾಧಿಕಾರಿಗಳ ಬಾಡಿ ಕ್ಯಾಮೆರಾದ ವಿಡಿಯೋ ರೆಕಾರ್ಡಿಂಗ್ ಕೊಡಲು ವಿಫಲ- ಆರೋಪ ಪತ್ರ ಜಾರಿ ಮಾಡಿದ ಡಿಸಿ

ಸಂಚಾರ ಶಾಖೆಯ ATS ಎಸ್‌.ಸುಮಗೆ ಆರೋಪ ಪತ್ರ ಜಾರಿ
ವಿಜಯಪಥ ಸಮಗ್ರ ಸುದ್ದಿ

ಹಾಸನ: ಸಾರಿಗೆ ಸಂಸ್ಥೆಯ ಮಾರ್ಗ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಹಾಕಿಕೊಂಡು ತನಿಖೆ ಮಾಡದ ಪರಿಣಾಮ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ ನೌಕರನಿಗೆ ವಿಡಿಯೋ ರೆಕಾರ್ಡಿಂಗ್ ಕೊಡಲು ಹಾಸನ ವಿಭಾಗದ ವಿಭಾಗೀಯ ತನಿಖಾಧಿಕಾರಿಗಳು ವಿಫಲರಾಗಿದ್ದರು.

ಅಲ್ಲದೆ ವಿಡಿಯೋ ರೆಕಾರ್ಡಿಂಗ್ ಮಾಡದೆ ಸಂಸ್ಥೆ ನಿಯಮಾವಳಿಯನ್ನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಸಂಚಾರ ಶಾಖೆಯ ಸಹಾಯಕ ಸಂಚಾರ ಅಧೀಕ್ಷಕಿ ಎಸ್‌.ಸುಮ ಎಂಬುವರಿಗೆ ಹಾಸನ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆರೋಪ ಪತ್ರವನ್ನು ಜಾರಿ ಮಾಡಿದ್ದಾರೆ.

ಇನ್ನು ಮುಂದೆ ಎಲ್ಲ ಚಾಲನಾ ಸಿಬ್ಬಂದಿಗಳು ಜಾಗೃತರಾಗಿರಿ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಧರಿಸಲೇಬೇಕು. ಒಂದು ವೇಳೇ ಧರಿಸಿಲ್ಲದಿದ್ದರೆ ಪ್ರಶ್ನೆ ಮಾಡಬೇಕು ಆಗ ಮಾತ್ರ ಸತ್ಯಾಸತ್ಯತೆ ತಿಳಿಯಲು ಸಾಧ್ಯ. ಕೆಎಸ್‌ಆರ್‌ಟಿಸಿ ನೌಕರ ಜಯದೇವ ಎಂಬುವರು ಈ ಪ್ರಕರಣ ಸಂಬಂಧ ಮಾಹಿತಿ ಕೇಳಿದ್ದರು. ಆದರೆ ಡಿಸಿ ಕೊಡಲಿಲ್ಲ ಬಳಿಕ ಏನಾಯಿತು?

ಸಂಚಾರ ಶಾಖೆಯ ಸಹಾಯಕ ಸಂಚಾರ ಅಧೀಕ್ಷಕಿ ಎಸ್‌.ಸುಮಗೆ ಆರೋಪ ಪತ್ರ ಜಾರಿ: ಹಾಸನ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿಯಾದ ದೀಪಕ್‌ ಕುಮಾರ್‌ ಅವರು ಈ ಪ್ರಕರಣದ ಬಗ್ಗೆ ಸತ್ಯಾಸತ್ಯತೆಗಳನ್ನು ವಿಚಾರಿಸಲು ನಿಯಮ 22ರ ಅನ್ವಯ ಹಾಸನ ವಿಭಾಗ ಸಂಚಾರ ಶಾಖೆ ವಿಭಾಗೀಯ ಕಚೇರಿಯ ಸಹಾಯಕ ಸಂಚಾರ ಅಧೀಕ್ಷಕಿ ಎಸ್‌.ಸುಮ ಅವರಿಗೆ ಆರೋಪ ಪತ್ರ ಜಾರಿ ಮಾಡಿದ್ದಾರೆ.

ನೀವು ದಿನಾಂಕ 13-04-2023 ರಂದು ವಿಭಾಗೀಯ ತನಿಖಾ ದಳದ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ವಿಭಾಗೀಯ ತನಿಖಾ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜಣ್ಣ ಸಂಚಾರ ನಿರೀಕ್ಷಕ ಮತ್ತು ಮಲ್ಲೇಶ್ ಎಚ್.ಎಚ್. ಸಂಚಾರ ನಿರೀಕ್ಷಕ ಅವರು ತನಿಖಾ ಸಂದರ್ಭದಲ್ಲಿ ಬೆಂಗಳೂರು ಕೇಂದ್ರೀಯ ವಿಭಾಗದ ಆರನೇ ಘಟಕದ ವಾಹನ ಸಂಖ್ಯೆ ಕೆಎ57 ಎಫ್-2736 ಮಾರ್ಗ ಸಂಖ್ಯೆ 96ಎಬಿ ಸಮಯ 16 ಗಂಟೆ 9 ನಿಮಿಷ ಮಟ್ಟನವಿಲೆ ಹತ್ತಿರ ಜಯದೇವ ಎಂ. ಚಾಲಕ-ಕಂ-ನಿರ್ವಾಹಕ, ಬಿ.ಸಂ:7479 ಮತ್ತು ಸಿದ್ದಗಂಗಯ್ಯ, ಚಾಲಕ ಬಿ.ಸಂ.64ಡಿ ಇವರು ಸರ್ವಿಸ್ ರಸ್ತೆ ಮೂಲಕ ಕಾರ್ಯಾಚರಣೆ ಮಾಡದೆ ಬೈಪಾಸ್ ರಸ್ತೆ ಮೂಲಕ ಕಾರ್ಯಾಚರಣೆ ಮಾಡಿರುವ ಸಂಬಂಧ ಕೆಂಪು ಗುರುತಿನ ಪ್ರಕರಣ ದಾಖಲಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಹಕ್ಕೆ ಧರಿಸುವ ಕ್ಯಾಮರಾದಲ್ಲಿ ಚಿತ್ರೀಕರಣ ಮಾಡಿಲ್ಲ.

ಜಯದೇವ ಅವರು ಮಾಹಿತಿ ಹಕ್ಕು ಆಯೋಗದಲ್ಲಿ ಈ ಪ್ರಕರಣದ ಚಿತ್ರೀಕರಣದ ಪ್ರತಿಯನ್ನು ನೀಡುವಂತೆ 17-04-2025 ರಂದು ಕೋರಿದ್ದು, ವಿಭಾಗೀಯ ತನಿಖಾ ದಳದ ಸಂಯೋಜಕರಾದ ನೀವು ಅರ್ಜಿಗೆ “ಮಾರ್ಗ ತನಿಖಾ ಪ್ರಕ್ರಿಯೆ ಒಂದು ತನಿಖಾ ಕ್ರಮವಾಗಿರುವುದರಿಂದ, ಮಾಹಿತಿ ಹಕ್ಕು ಅಧಿನಿಯಮ-2005ರ ಸಂಖ್ಯೆ 8(1)(ಎಚ್) ಅಡಿ ತನಿಖಾ ಪ್ರಕ್ರಿಯೆ ಅಥವಾ ಪ್ರಾಸಿಕ್ಯೂಷನ್‌ಗೆ ಅಡಚಣೆಯುನ್ನುಂಟು ಮಾಡುವಂತ ಮಾಹಿತಿಗಳನ್ನು ಬಹಿರಂಗ ಪಡಿಸಲು ಅವಕಾಶವಿಲ್ಲದ ಕಾರಣ ವಿಡಿಯೋಗಳನ್ನು ಒದಗಿಸಲು ಅವಕಾಶವಿರುವುದಿಲ್ಲ” ಎಂದು 19-05-2025 ರಂದು ಅರ್ಜಿದಾರರಿಗೆ ಮಾಹಿತಿ ನೀಡಿದ್ದೀರಿ.

Advertisement

ಹೀಗಾಗಿ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಕರ್ನಾಟಕ ಮಾಹಿತಿ ಆಯೋಗವು ಅರ್ಜಿದಾರರು ಕೋರಿರುವ ಮಾಹಿತಿಯನ್ನು ನೀಡುವಂತೆ 01-07-2025 ರಂದು ಆದೇಶಿಸಿಎ. ತನಿಖಾ ಪ್ರಕರಣದ Download ಮಾಡಿರುವ ವಿಡಿಯೋ ಚಿತ್ರೀಕರಣದ ತುಣುಕುಗಳನ್ನು ಪರಿಶೀಲಿಸಿದಾಗ ಚಿತ್ರೀಕರಣದ ತುಣುಕುಗಳು ಇಲ್ಲದಿರುವುದು ಕಂಡುಬಂದಿದೆ. ಇದರಿಂದಾಗಿ ಕರ್ನಾಟಕ ಮಾಹಿತಿ ಆಯೋಗದ ಆದೇಶದಂತೆ ಮಾಹಿತಿ ನೀಡುವುದು ಕಷ್ಟಕರವಾಗಿದೆ. ಈ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡದೆ ಮಾಹಿತಿ ಸಲ್ಲಿಸಿರುವುದರಿಂದ ಅರ್ಜಿದಾರರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಮಾಡಿರುತ್ತೀರಿ.

ಈ ಮೂಲಕ ಓರ್ವ ಜವಾಬ್ದಾರಿಯುತ ಸಂಚಾರ ಅಧೀಕ್ಷಕರಾದ ನೀವು ಸುತ್ತೋಲೆ ಸಂಖ್ಯೆ-1591 ದಿನಾಂಕ-03-02-2021ರ ನಿರ್ದೇಶನಗಳನ್ನು ಉಲ್ಲಂಘಿಸಿ ಕರ್ತವ್ಯ ನಿರ್ಲಕ್ಷ್ಯತನ ತೋರಿ ಕರ್ತವ್ಯಲೋಪವೆಸಗಿರುತ್ತೀರಿ. ಇನ್ನು ಸಾಕ್ಷಿಗಳ ದಾಖಲೆ ಅಷ್ಟೇ ಅಲ್ಲದೆ ಅಗತ್ಯವೆಂದು ಕಂಡು ಬರುವ ಹೆಚ್ಚುವರಿ ಸಾಕ್ಷಿಗಳನ್ನು ಪರೀಕ್ಷಿಸುವ ಹಕ್ಕನ್ನು ಸಹಾ ವಿಚಾರಣಾ ಪ್ರಾಧಿಕಾರವು ಹೊಂದಿದೆ. ಹೀಗಾಗಿ ಈ ಆರೋಪ ಪತ್ರ ತಲುಪಿದ ಹತ್ತು ದಿನಗಳಲ್ಲಿ ತನ್ನ ರಕ್ಷಣಾ ಲಿಖಿತ ಹೇಳಿಕೆಗಳನ್ನು ಹಾಜರು ಪಡಿಸಲು ಈ ಮೂಲಕ ಆದೇಶಿಸಿದೆ.

ಇನ್ನು ನಿಮ್ಮ ರಕ್ಷಣೆಯ ಪರವಾದ ಯಾವುದೇ ದಾಖಲೆಗಳನ್ನು ಪರೀಕ್ಷಿಸ ಬಯಸಿದ್ದಲ್ಲಿ ಈ ದಾಖಲೆಗಳನ್ನು ಈ ಕಚೇರಿಯ ಕೆಲಸದ ವೇಳೆಯಲ್ಲಿ ನನ್ನ ಸಮಕ್ಷಮದಲ್ಲಿ ನಕಲು ಮಾಡಿಕೊಳ್ಳಬಹುದು ಅಥವಾ ಪರಿಶೀಲಿಸಬಹುದು.

ಈ ಆರೋಪಗಳಿಗೆ ನಿಮ್ಮ ಸಮಜಾಯಿಷಿಯು ನಿಗದಿತ ಸಮಯದಲ್ಲಿ ತಲುಪದೇ ಹೋದಲ್ಲಿ ಅವುಗಳಿಗೆ ಯಾವುದೇ ಸಮಜಾಯಿಷಿಯನ್ನು ನೀಡಲು ಇರುವುದಿಲ್ಲವೆಂದು ಭಾವಿಸಿ ಸಂಸ್ಥೆ ಸೇವಾ ನಿಯಮಾವಳಿಗಳ ಮೇರೆಗೆ ಏಕಪಕ್ಷೀಯವಾಗಿ ನಿರ್ಣಯಿಸಲಾಗುವುದು. ಆರೋಪ ಪತ್ರವನ್ನು ದ್ವಿಪ್ರತಿಯಲ್ಲಿ ಕಳುಹಿಸಲಾಗಿದೆ. ಮೂಲ ಪ್ರತಿಯನ್ನು ದಾಖಲೆಗೆ ಇರಿಸಿಕೊಂಡು ನಕಲು ಪ್ರತಿಯನ್ನು ತಮ್ಮ ಸಹಿಯೊಂದಿಗೆ 10ದಿನದೊಳಗೆ ಹಿಂದಿರುಗಿಸಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

 

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!