KSRTC: ವೇತನ ಹೆಚ್ಚಳ-55 ತಿಂಗಳ ಹಿಂಬಾಕಿ ಘೋಷಣೆ ಮಾಡದಿದ್ದರೆ ಜೂನ್ ಆರಂಭದಲ್ಲಿ ಸಾರಿಗೆ ಮುಷ್ಕರ ಖಚಿತ!?


- ಸರ್ಕಾರಕ್ಕೆ ಎಚ್ಚರಿಕೆ ಕೊಡಲು ತೆರೆ ಮರೆಯಲ್ಲಿ ಸಮಾಲೋಚನೆ
- ಕೇಂದ್ರ ಸ್ಥಾನದ ಅಧಿಕಾರಿಗಳೇ ನೌಕರರಿಗೆ ಕರೆ ಕೊಡುವ ಬಗ್ಗೆ ಚರ್ಚೆಯಲ್ಲಿ ತಲ್ಲೀನ!
ಬೆಂಗಳೂರು: ಸಾರಿಗೆ ನೌಕರರಿಗೂ ಸರಿ ಸಮಾನ ವೇತನ ಕೊಡುತ್ತೇವೆ ಎಂದು ವೇತನ ಅಗ್ರಿಮೆಂಟ್ ಮಾಡದೆ, ಜತೆಗೆ ಕಳೆದ 2020ರ ಜನವರಿ 1ರಿಂದ ಆಗಿರುವ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಬಿಡುಗಡೆ ಮಾಡದೆ. ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನೂ ಈವರೆಗೂ ಅಂದರೆ 17 ತಿಂಗಳು ಕಳೆಯುತ್ತಾ ಬಂದರೂ ಮಾಡದೆ ಬರಿ ಕಾಲವನ್ನು ದೂಡಿಕೊಂಡೆ ಬರುತ್ತಿದೆ ಸರ್ಕಾರ.
ಈ ನಡುವೆ, ಈವರೆಗೂ ಸಿಎಂ ನೌಕರರ ಸಂಘಟನೆಗಳೊಂದಿಗೆ ಒಂದು ಸಭೆ ಕರೆದಿದ್ದು ಬಿಟ್ಟರೆ ಮತ್ತೆ ವೇತನ ಹೆಚ್ಚಳದ ಬಗ್ಗೆ ಯಾವುದೇ ಚಕಾರವೆತ್ತುತ್ತಿಲ್ಲ. ಜತೆಗೆ ಒಂದು ಬಾರಿ ಸಭೆಯನ್ನು ಮುಂದೂಡಿ ಏ.15-2025ರಂದು ತಮ್ಮ ನಿವಾಸ ಕಾವೇರಿಯಲ್ಲಿ ನಾಮ್ ಕೇ ವಾಸ್ತೆ ಎಂಬಂತೆ ಒಂದು ಸಭೆ ಕರೆದು ಅಷ್ಟಕ್ಕೆ ಸುಮ್ಮನಾಗಿದ್ದಾರೆ.
ಈ ನಡುವೆ ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಆಗಿರುವ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಈವರೆಗೂ ಕೊಡುವ ಬಗ್ಗೆ ಯಾವುದೇ ಒಂದು ಸ್ಪಷ್ಟ ನಿಲುವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿಲ್ಲ. ಇನ್ನು ಮುಷ್ಕರ ಮಾಡುತ್ತೇವೆ ಎಂದು ಸಂಘಟನೆಗಳು ಮುಂದಾದರೆ ಆಗ 38 ತಿಂಗಳ ಹಿಂಬಾಕಿ ಹಾಗೂ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ವೇತನ ಮಾಡುತ್ತೇವೆ ಎಂಬ ಹೇಳಿಕೆ ನೀಡುವ ಮೂಲಕ ಸಂಘಟನೆಗಳ ಮುಖಂಡರ ದಾರಿಯನ್ನು ಈ ಸರ್ಕಾರ ತಪ್ಪಿಸುತ್ತಲೇ ಬಂದಿದೆ.
ಇನ್ನು ಈ ಬಗ್ಗೆ ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆ ನೌಕರರ ಒಕ್ಕೂಟ ಬೇರೆ ಬೇರೆಯಾಗಿಯೇ ಈಗಾಗಲೇ ಹತ್ತಾರು ಮನವಿ ಪತ್ರಗಳನ್ನು ಕೊಟ್ಟು ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸುತ್ತಲೇ ಬಂದಿವೆ. ಆದರೆ ಸರ್ಕಾರ ಮಾತ್ರ ದಪ್ಪ ಚರ್ಮದಂತೆ ನಡೆದುಕೊಳ್ಳುತ್ತಲೆ ಇದೆ.
ಇದರಿಂದ ನೌಕರರು ಹತಾಶೆಗೊಳಗಾಗುತ್ತಿದ್ದಾರೆ. ಅತ್ತ ಅಧಿಕಾರಿಗಳು ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಈ ಸರ್ಕಾರ ಹೋಗಿ ಮತ್ತೊಂದು ಸರ್ಕಾರ ಬಂದರೂ ಸಾರಿಗೆ ನೌಕರರ ವೇತನ ಹೆಚ್ಚಳವಾಗುವುದು ಅನುಮಾನವೆ (Doubt).
ಹೀಗಾಗಿ ಇನ್ನಾದರೂ ಸರ್ಕಾರಕ್ಕೆ ಚಳಿ ಬಿಡಿಸಲು ಇತ್ತ ಅಧಿಕಾರಿಗಳು ಮತ್ತು ನೌಕರರು ಒಗ್ಗಟ್ಟಿನಿಂದ ಮನವಿ ಸಲ್ಲಿಸಿ ಒಂದು ನಿರ್ದಿಷ್ಟ ಗಡುವು ನೀಡಬೇಕು. ಜತೆಗೆ ಆ ಗಡುವಿನಲ್ಲಿ ಸರ್ಕಾರ ಬೇಡಿಕೆ ಈಡೇರಿಸಿಲ್ಲ ಎಂದರೆ ಮಾರನೆ ದಿನದಿಂದಲೇ ಬಸ್‌ಗಳನ್ನು ಸಂಪೂರ್ಣ ನಿಲ್ಲಿಸಿ ಡಿಪೋ ಡಿಪೋಗಳಲ್ಲೇ ಧರಣಿ ಕೂರಬೇಕು ಹೀಗೆ ಆದರೆ ಮಾತ್ರ ಸರ್ಕಾರ ಬೇಡಿಕೆ ಈಡೇರಿಸಲು ಮುಂದಾಗುತ್ತದೆ ಇಲ್ಲ ಅಂದರೆ ಇದೇ ದೊಂಬರಾಟ ಮುಂದುವರಿಯುತ್ತದೆ.

ಅಲ್ಲದೆ ಇದರಿಂದ ಅಧಿಕಾರಿಗಳು ಹಾಗೂ ನೌಕರರು ಇನಷ್ಟು ಕಡಿಮೆ ವೇತನ ಪಡೆದು ಪೇಚಾಡಿಕೊಂಡೆ ಡ್ಯೂಟಿ ಮಾಡಬೇಕಾಗುತ್ತದೆ. ಜತೆಗೆ ಅಧಿಕಾರಿಗಳು ನೌಕರರ ಸುಲಿಗೆ ಮಾಡುವ ದಂದೆ ಕೂಡ ಹೆಚ್ಚಾಗಿ ನೌಕರರು ಇನ್ನಷ್ಟು ಸಮಸ್ಯೆಗೆ ಸಿಲುಕಿಕೊಳ್ಳುವಂತಾಗುತ್ತದೆ. ಹೀಗಾಗಿ ಇದೆಲ್ಲಕ್ಕೂ ಒಂದು ಪೂರ್ಣ ವಿರಾಮ ಬೀಳಬೇಕು ಎಂದರೆ ಅಧಿಕಾರಿಗಳು ತಮ್ಮ ಚಳಿ ಬಿಟ್ಟು ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡಬೇಕಿದೆ.
ಇನ್ನು ಇತ್ತ ಸರ್ಕಾರ ಕೂಡ ಈವರೆಗೂ ಅಂದರೆ 2020ರ ಜನವರಿ 1ರಿಂದ ಹೆಚ್ಚಳವಾಗಿರುವ ವೇತನದ 38 ತಿಂಗಳ ಹಿಂಬಾಕಿ ಜತೆಗೆ ಈ ಮೇ ತಿಂಗಳ ವರೆಗೂ ಅಂದರೆ 17 ತಿಂಗಳ 2024 ಜನವರಿ 1ರಿಂದ ಅನ್ವಯವಾಗುವಂತೆ ಹೆಚ್ಚಳವಾಗುವ ವೇತನದ ಹಿಂಬಾಕಿ ಎಲ್ಲವನ್ನು ಮುಂದಿನ ಈ ತಿಂಗಳಿನಿಂದ ಕೊಡಲಾಗುವುದು ಎಂದು ಘೋಷಣೆ ಮಾಡಬೇಕು.
ಅಲ್ಲದೆ ಸರ್ಕಾರ ನೌಕರರಿಗೆ ಸರಿ ಸಮಾನ ವೇತನವನ್ನು ವೇತನ ಆಯೋಗದಂತೆ ತಾವು ಕೊಟ್ಟ ಭರವಸೆಯಂತೆ ಮಾಡಿದ್ದೇವೆ ಎಂದು ಘೋಷಣೆ ಮಾಡಿ ಸಾರಿಗೆ ನೌಕರರ ಪ್ರಮುಖ ಬೇಡಿಕೆಯನ್ನು ಈಡೇರಿಸುವುದಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಬೇಕು.
ಎಲ್ಲವನ್ನು ಈ ತಿಂಗಳ ಒಳಗೇ ಮಾಡಬೇಕು ಇಲ್ಲದಿದ್ದರೆ ಮೇ ತಿಂಗಳು ಕಳೆದ ಜೂನ್ ಆರಂಭದಲ್ಲೇ ಸಾರಿಗೆ ನೌಕರರ ಮುಷ್ಕರವನ್ನು ಎದುರಿಸಲು ಸಿದ್ಧರಾಗಬೇಕು ಎಂದು ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿಗಳ ಒಂದು ಸಮೂಹ ಗೌಪ್ಯವಾಗಿ ಮುಷ್ಕರಕ್ಕೆ ಬೆಂಬಲ ನೀಡಲು ಸಮಲೋಚನೆಯಲ್ಲಿ ತೊಡಗಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.
ಹೀಗಾಗಿ ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿಯ ನಡೆಯಿಂದ ಬೇಸತ್ತಿರುವ ಬಹುತೇಕ ಎಲ್ಲ ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದು, ನಾವು ಬಸ್ ನಿಲ್ಲಿಸದಿದ್ದರೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವುದಿಲ್ಲ ಎಂಬ ಚರ್ಚೆ ಶುರುವಾಗಿದೆ. ಇದರ ಬಿಸಿ ಜೂನ್ ಆರಂಭದಲ್ಲೇ ಸರ್ಕಾರಕ್ಕೆ ತಟ್ಟಲಿದೆ ಎಂದು ತಿಳಿದು ಬಂದಿದೆ.
Related
