2020 ಜನವರಿ 1ರಿಂದ ಅನ್ವಯವಾಗುವಂತೆ ಅಂದಿನ ಬಿಜೆಪಿ ಸರ್ಕಾರ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿ ಆದೇಶಿಸಿದೆ- ಲಾ ಗೊತ್ತಿದ್ದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ !

- 01.01.2020 ರಂದು ವಾರ್ಷಿಕ ವೇತನ ಬಡ್ತಿ ಲಭ್ಯವಿದ್ದಲ್ಲಿ ವಾರ್ಷಿಕ ವೇತನ ಬಡ್ತಿ (ಪ್ರಸಕ್ತ ವೇತನ ಶ್ರೇಣಿ) ಯಲ್ಲಿ ಶೇ.15ರಷ್ಟು ಹೆಚ್ಚಳವಾಗಿರುವ ಮೊತ್ತವನ್ನು ಕೂಡಿಸುವುದು.
- ದಿನಾಂಕ: 13.08.2018 ರ ಸುತ್ತೋಲೆ ಸಂಖ್ಯೆ: 07/2018 ರನ್ವಯ ನಿಗದಿಪಡಿಸಿರುವ ಮೂಲ ತುಟ್ಟಿಭತ್ಯೆಯ ಮೊತ್ತವನ್ನು ಕೂಡಿಸುವುದು ಹಾಗೂ ವಿಶೇಷ ಸಂದರ್ಭಗಳಲ್ಲಿ ಮೂಲ ತುಟ್ಟಿಭತ್ಯೆ ನಿಗದಿಪಡಿಸುವ ಬಗ್ಗೆ ಸುತ್ತೋಲೆಯಲ್ಲಿನ ಮಾರ್ಗದರ್ಶನ ಪಾಲಿಸುವುದು.
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಉದ್ಯೋಗಿಗಳ ಮತ್ತು ಅಧಿಕಾರಿಗಳ (ಪೂರ್ವ ಕಿಂಕೋ ನೌಕರರು ಸೇರಿದಂತೆ) ಮೂಲವೇತನ ಶೇ.15ರಷ್ಟು ಪರಿಷ್ಕರಿ ಸರ್ಕಾರ 17.03.2023 ರಲ್ಲಿ ಅನುಮೋದನೆ ನೀಡಿ ಆದೇಶಿಸಿದೆ.
ಕರ್ನಾಟಕ ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳು ಅಂದರೆ ಕರಾರಸಾ ನಿಗಮ, ಬೆಂಮಸಾ ವಾಕರಸಾ ಹಾಗೂ ಕಕರಸಾ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಮತ್ತು ನಿಗಮಗಳ ಪುನ ತನಕ್ಕಾಗಿ ರಚಿಸಿರುವ ಏಕಸದಸ್ಯ ಸಮಿತಿ ವರದಿಯನ್ನು ಪರಿಶೀಲಿಸಿ ನೌಕರರ ವೇತನವನ್ನು ಪರಿಷ್ಕರಿಸಲು ಸೂಕ್ತ ನಿರ್ದೇಶನವನ್ನು ನೀಡುವಂತೆ ಕೋರಲಾಗಿತ್ತು.
ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ನೌಕರರ/ಅಧಿಕಾರಿಗಳು (ಪೂರ್ವ ಕಿಂಕೋ ನೌಕರರ/ ಅಧಿಕಾರಿಗಳು ಸೇರಿದಂತೆ) 31.12.2019 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ.15 ರಷ್ಟು ಹೆಚ್ಚಿಸಿ, ಅದರಂತೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಿ, 01.03.2023 ರಿಂದ ಜಾರಿಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರವು ಆದೇಶ ಸಂಖ್ಯೆ ಟಿಡಿ 12 ಟಿಸಿಬಿ 2023, ಬೆಂಗಳೂರು ದಿನಾಂಕ: 17.03.2023 ರಲ್ಲಿ ಅನುಮೋದನೆ ನೀಡಿ ಆದೇಶಿಸಿತ್ತು.
ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ನಿಗದಿ ಮಾಡುವ ವಿಧಾನ:
1. 31-12-2019 ರಲ್ಲಿದ್ದ ಮೂಲ ವೇತನಕ್ಕೆ ಶೇಕಡ 15 (ಹದಿನೈದು) ರಷ್ಟು ಮೊತ್ತವನ್ನು ಕೂಡಿಸುವುದು (ಕುಟುಂಬ ಯೋಜನೆ ವಿಶೇಷ ಭತ್ಯೆ ಹೊರತುಪಡಿಸಿ). 2. ಕರಾಸಾ/ಕೇಕ/ಲೆಪ/ಪಾವತಿ/1918/18-19 ದಿನಾಂಕ: 13.08.2018 ರ ಸುತ್ತೋಲೆ ಸಂಖ್ಯೆ: 07/2018 ರನ್ವಯ ನಿಗದಿಪಡಿಸಿರುವ ಮೂಲ ತುಟ್ಟಿಭತ್ಯೆಯ ಮೊತ್ತವನ್ನು ಕೂಡಿಸುವುದು ಹಾಗೂ ವಿಶೇಷ ಸಂದರ್ಭಗಳಲ್ಲಿ ಮೂಲ ತುಟ್ಟಿಭತ್ಯೆ ನಿಗದಿಪಡಿಸುವ ಬಗ್ಗೆ ಸುತ್ತೋಲೆಯಲ್ಲಿನ ಮಾರ್ಗದರ್ಶನಗಳನ್ನು ಪಾಲಿಸುವುದು.
3. 01.01.2020 ರಂದು ವಾರ್ಷಿಕ ವೇತನ ಬಡ್ತಿ ಲಭ್ಯವಿದ್ದಲ್ಲಿ ವಾರ್ಷಿಕ ವೇತನ ಬಡ್ತಿ (ಪ್ರಸಕ್ತ ವೇತನ ಶ್ರೇಣಿ) ಯಲ್ಲಿ ಮೊತ್ತವನ್ನು ಕೂಡಿಸುವುದು. 4. ಕ್ರಮ ಸಂಖ್ಯೆ 01, 02 ಮತ್ತು 03 ರಲ್ಲಿ ಲೆಕ್ಕ ಹಾಕಲಾದ ಒಟ್ಟು ಮೊತ್ತವು ಸದರಿ ಹುದ್ದೆಯ ಪರಿಷ್ಕೃತ ವೇತನ ಶ್ರೇಣಿಯ ಕನಿಷ್ಠ ಮೂಲ ವೇತನಕ್ಕಿಂತ ಕಡಿಮೆ ಇದ್ದಲ್ಲಿ ಕನಿಷ್ಠ ಮೂಲ ವೇತನ ನಿಗದಿಗೊಳಿಸುವುದು, ಒಟ್ಟು ಮೊತ್ತವು ಹುದ್ದೆಯ ಪರಿಷ್ಕೃತ ವೇತನ ಶ್ರೇಣಿಯ ಹಂತದಲ್ಲಿದ್ದರೆ ಅದೇ ಹಂತದಲ್ಲಿ ಮತ್ತು ಎರಡು ಹಂತಗಳ ಮಧ್ಯದಲ್ಲಿದ್ದರೆ ಪರಿಷ್ಕೃತ ವೇತನ ಶ್ರೇಣಿಯ ಮುಂದಿನ ಹಂತದಲ್ಲಿ ನಿಗದಿಗೊಳಿಸುವುದು.
5. ಉದ್ಯೋಗಿಯ/ಅಧಿಕಾರಿಯ ವಾರ್ಷಿಕ ವೇತನ ಬಡ್ತಿಯು 02.01.2020 ಮತ್ತು ನಂತರದ ಅವಧಿಯಲ್ಲಿ ಲಭ್ಯವಿದ್ದು ಈ ದಿನಾಂಕದಂದು ಚಾಲ್ತಿ ವೇತನ ಶ್ರೇಣಿಯಲ್ಲಿದ್ದ ವಾರ್ಷಿಕ ವೇತನ ಬಡ್ತಿ ಮೊತ್ತವನ್ನು ಕೂಡಿಸಿ ಲಾಭದಾಯಕವಾಗುವಂತಿದ್ದಲ್ಲಿ ಪರಿಷ್ಕೃತ ಶ್ರೇಣಿಯಲ್ಲಿ ಮೂಲ ವೇತನವನ್ನು ಮರು ನಿಗದಿಗೊಳಿಸುವುದು.
6. ಉದ್ಯೋಗಿ/ ಅಧಿಕಾರಿಯ ಮುಂದಿನ ವಾರ್ಷಿಕ ವೇತನ ಬಡ್ತಿಯನ್ನು ಪರಿಷ್ಕೃತ ವೇತನ ಶ್ರೇಣಿಯಲ್ಲಿ 01.01.2021 ರಿಂದ ಅಥವಾ ಕ್ರಮ ಸಂಖ್ಯೆ 5 ರಂತೆ ಮೂಲ ವೇತನ ಮರು ನಿಗದಿಗೊಳಿಸಿದ ದಿನಾಂಕದಿಂದ ಒಂದು ವರ್ಷದ ನಂತರ ನೀಡುವುದು.

7. ಮುಂಬಡ್ತಿ ಅವಕಾಶಗಳಿಲ್ಲದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು ದಿನಾಂಕ: 01.01.2020 ರಂದು ಅಥವಾ ನಂತರದ ದಿನಗಳಲ್ಲಿ 15 ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿ ಉನ್ನತ ವೇತನ ಶ್ರೇಣಿಗೆ ಅರ್ಹರಾಗಿ ಸಿಬ್ಬಂದಿ ಅದೇಶ ಹೊರಡಿಸಿದಲ್ಲಿ ಪರಿಷ್ಕೃತ ಉನ್ನತ ವೇತನ ಶ್ರೇಣಿಯಲ್ಲಿ ಮೂಲ ವೇತನ ನಿಗದಿಪಡಿಸುವುದು. ಈ ಸೌಲಭ್ಯವು ಉದ್ಯೋಗಿಗಳ ಸೇವಾವಧಿಯಲ್ಲಿ ಒಮ್ಮೆ ಮಾತ್ರ ದೊರೆಯುತ್ತದೆ.
8. ಮುಂಬಡ್ತಿ ಅವಕಾಶವಿರುವ ಹುದ್ದೆಯಲ್ಲಿ 15 ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿ ಮುಂಬಡ್ತಿ ದೊರೆಯದೆ ಇದ್ದು ಆಯ್ಕೆ ಶ್ರೇಣಿಗೆ ಅರ್ಹರಾಗಿ ಸಿಬ್ಬಂದಿ ಆದೇಶ ಹೊರಡಿಸಿದಲ್ಲಿ (ಕರಾರಸಾ/ಪೂರ್ವ ಕಿಂಕೋ) ಪರಿಷ್ಕೃತ ಮಧ್ಯವರ್ತಿ ವೇತನ ಶ್ರೇಣಿಯಲ್ಲಿ ಮೂಲ ವೇತನ ನಿಗದಿಪಡಿಸುವುದು. ಈ ಸೌಲಭ್ಯವು ಉದ್ಯೋಗಿಗಳ ಸೇವಾವಧಿಯಲ್ಲಿ ಒಮ್ಮೆ ಮಾತ್ರ ದೊರೆಯುತ್ತದೆ.
9. ಅಧಿಕಾರಿ ವರ್ಗದವರಿಗೆ ಹಾಗೂ ಉದ್ಯೋಗಿಗಳಿಗೆ (ಸದರಿಯವರುಗಳ ನೇಮಕಾತಿ/ ಸೇವಾ ನಿಬಂಧನೆಗಳ ಅನ್ವಯ) ಅವರುಗಳ ಮುಂದಿನ ವೇತನ ಬಡ್ತಿ/ಸ್ಥಗಿತ ವೇತನ ಬಡ್ತಿಯನ್ನು 01.01.2021 ರಿಂದ ಅಥವಾ ಮೂಲ ವೇತನ ಪುನರ್ ನಿಗದಿಗೊಳಿಸಿದ ದಿನಾಂಕದಿಂದ ಒಂದು ವರ್ಷದ ನಂತರ ವಾರ್ಷಿಕ ವೇತನ ಬಡ್ತಿ/ಸ್ಥಗಿತ ವೇತನ ಬಡ್ತಿ ಮಂಜೂರಾತಿ/ಕೆಸಿಎಸ್‌ಆ ನಿಯಮದ ಪ್ರಕಾರ ಅರ್ಹ ಪ್ರಕರಣಗಳಲ್ಲಿ ವಾರ್ಷಿಕ ವೇತನ ಬಡ್ತಿಗಳನ್ನು ನೀಡುವುದು.
10. ಶಿಕ್ಷಾದೇಶಗಳು ಜಾರಿಯಲ್ಲಿರುವ ಪ್ರಕರಣಗಳಲ್ಲಿ ವೇತನ ನಿಗದಿಗೊಳಿಸುವಾಗ ಸುತ್ತೋಲೆ ಸಂಖ್ಯೆ 1586/2016-17 ದಿನಾಂಕ 12.04.2016 ರ ಕಂಡಿಕೆ II (3) ರಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸುವುದು.
11. 01.01.2020 ರಿಂದ ದಿನಾಂಕ 28.02.2023 ರವರೆಗೆ ಈಗಾಗಲೇ ನೀಡಿರುವ ವಾರ್ಷಿಕ ವೇತನ ಬಡ್ತಿ, ಶಿಕ್ಷಾದೇಶಗಳು ಮತ್ತು ಇತರೇಗಳನ್ನು ಪರಿಷ್ಕೃತ ವೇತನ ಶ್ರೇಣಿಯೊಂದಿಗೆ ಕಾಲ್ಪನಿಕವಾಗಿ (Notional) ನಿಗದಿಗೊಳಿಸಿ ಪರಿಷ್ಕರಿಸುವುದು.
12. ಪರಿಷ್ಕೃತ ಮೂಲ ವೇತನವನ್ನು 01.03.2023 ರಿಂದ ಜಾರಿಗೊಳಿಸಿ, ಏಪ್ರಿಲ್ -2023 ರ ಮಾಹೆಯಿಂದ ಮತ್ತು ಮುಂದಕ್ಕೆ ವೇತನದಲ್ಲಿ ಅನುಷ್ಠಾನಗೊಳಿಸಿ ಪಾವತಿಸುವುದು.
13. ಮಾರ್ಚ್-2023 ರ ಮಾಹೆಯ ವೇತನ ವ್ಯತ್ಯಾಸವನ್ನು ಏಪ್ರಿಲ್-2023 ರ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿಸುವುದು.
14. ಮಾರ್ಚ್-2023 ರ ಮಾಹೆಯಲ್ಲಿ ಸೇವಾ ವಿಮುಕ್ತಿ ಹೊಂದಿದ ನೌಕರರಿಗೆ, ಮಾರ್ಚ್-2023 ಮಾಹೆಯ ಪರಿಷ್ಕೃತ ವೇತನ ವ್ಯತ್ಯಾಸವನ್ನು 15.05.2023 ರಂದು ಪಾವತಿಸುವುದು. PDF CIRCULAR 16-03292023110121 KSRTC Salary 15
Related








