NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಶೇ.15 ವೇತನ ಹೆಚ್ಚಳದ ಹಿಂಬಾಕಿಗಾಗಿ ಜುಲೈ8ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ – ನಿವೃತ್ತ ನೌಕರರು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: 1.1.2020 ರಿಂದ 28.02.2023 ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನೌಕರರಿಗೆ ಶೇ. 15 ವೆತನ ಹೆಚ್ಚಳ, ಶೇ. 45.25 BDA ಮರ್ಜ್, ಇಂಕ್ರಿಮೆಂಟ್ ಹೆಚ್ಚಳ ಸೇರಿಸಿ ಪೇ ಪಿಕ್ಸೇಷನ್ ಮಾಡಿಲ್ಲ. ಈ ವಿಳಂಬಧೋರಣೆ ಖಂಡಿಸಿ ಜುಲೈ 8ರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲು ಸಾರಿಗೆ ನಿಗಮಗಳ ನಿವೃತ್ತ ನೌಕರರು ತೀರ್ಮಾನಿಸಿದ್ದಾರೆ.

ಈ ಸಂಬಂಧ ಮೈಸೂರು ನಗರದಲ್ಲಿ ನಿನ್ನೆ ನಿವೃತ್ತ ನೌಕರರ ಮುಖಂಡರು ಸಭೆ ಸೇರಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ  ವಿಜಯಪಥಕ್ಕೆ ತಿಳಿಸಿದ್ದಾರೆ.

ಜುಲೈ 1ರಿಂದ 6 ತಿಂಗಳ ವರೆಗೂ ಯಾವುದೇ ಮುಷ್ಕರ ಪ್ರತಿಭಟನೆ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಅದು ಹಾಲಿ ಕರ್ತವ್ಯ ನಿರತ ನೌಕರರಿಗೆ ಅನ್ವಯವಾಗುತ್ತದೆ. ಆದರೆ ನಾವು ನಿವೃತ್ತರಾಗಿರುವುದರಿಂದ ನಮಗೆ ಯಾವುದೇ ಭಯವಿಲ್ಲ ಮತ್ತು ಈ ಆದೇಶ ನಮಗೆ ಅನ್ವಯವಾಗುವುದಿಲ್ಲ ಎಂದು ಸಭೆಯಲ್ಲಿ ಚರ್ಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನಾವು ಈವರೆಗೂ ನೌಕರರ ಪರ ಸಂಘಟನೆಗಳು ನಮ್ಮಪರವಾಗಿ ಧ್ವನಿಯಾಗುತ್ತವೆ ಎಂದು ಅಂದುಕೊಂಡಿದ್ದೆವು ಆದರೆ, ಅವುಗಳು ಯಾವುದೇ ದೃಢ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ನಾವೇ ಈ ತೀರ್ಮಾನ ಮಾಡಬೇಕಾಗಿ ಬಂತು ಎಂದ ತಿಳಿಸಿದ್ದಾರೆ.

ಸಭೆಯಲ್ಲಿ ಪ್ರಮುಖವಾಗಿ 1.1.2020 ರಿಂದ ಸಾರಿಗೆ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುವ 4 ನಿಗಮಗಳ ನೌಕರರು ಹಾಗೂ ಅಧಿಕಾರಿಗಳಿಗೆ 31.12.2019 ರಲ್ಲಿ ಇದ್ದ ಬೇಸಿಕ್‌ಗೆ ಶೇ. 15 ಹೆಚ್ಚಳ, ಅಂದು ಇದ್ದ ಶೇ. 45.25 BDA ಮರ್ಜ್ ಮಾಡಿ ಹಾಗೂ ಇಂಕ್ರಿಮೆಂಟ್ ಹೆಚ್ಚಳವನ್ನು ಸೇರಿಸಿ 1.1.2020 ರಿಂದ ಕೆಲಸ ಮಾಡುತ್ತಿರುವ ಎಲ್ಲ ಸಿಬ್ಬಂದಿಗಳಿಗೂ ವೇತನ ಹೆಚ್ಚಳ ಮಾಡಿ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಆಡಳಿತ ವರ್ಗ ಆದೇಶ ಮಾಡಿದೆ.

ಆದರಂತೆ ಕರ್ತವ್ಯ ನಿರತ ಎಲ್ಲ ನೌಕರರಿಗೂ ವೇತನ ನೀಡಲಾಗುತ್ತಿದೆ. ಆದರೆ 1.1.2020 ರಿಂದ 28.02.2023 ರ ನಡುವೆ 4 ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ, ಅಧಿಕಾರಿಗಳು ಮತ್ತು ನೌಕರರಿಗೆ ಶೇ.15 ವೆತನ ಹೆಚ್ಚಳ, ಶೇ. 45.25 BDA ಮರ್ಜ್, ಇಂಕ್ರಿಮೆಂಟ್ ಹೆಚ್ಚಳ ಸೇರಿಸಿ ಪೇ ಪಿಕ್ಸೇಷನ್ ಮಾಡಿ ಕೊಟ್ಟಿಲ್ಲ. ಇದು ಕಳೆದ ಮಾರ್ಚ್‌ಗೆ ಒಂದು ವರ್ಷವಾಗಿದೆ.

ಇನ್ನು 1.1.2020 ರಿಂದ 28.02.2023 ರವರೆಗೆ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದವರಿಗೆ ಕೊಡುವ ಸ್ಟ್ಯಾಚುಟರಿ ಸೌಲಭ್ಯವಾಗಿದೆ. ಈ ಸೌಲಭ್ಯವನ್ನು ನಿವೃತ್ತ ನೌಕರರು ಕೇಳಬೇಕಾಗಿಯೇ ಇಲ್ಲ. ಆಡಳಿತ ವರ್ಗವೇ ಎಲ್ಲರೊಟ್ಟಿಗೆ ಆದೇಶ ಮಾಡಿ ನೀಡಬೇಕಿತ್ತು.

ಆದರೆ ಈ ಬಗ್ಗೆ ಆದೇಶ ನೀಡದೆ ಇದ್ದ ಬಗ್ಗೆ ನಿವೃತ್ತ ನೌಕರರು ಸಭೆ ನಡೆಸಿ ಆಡಳಿತ ವರ್ಗಕ್ಕೆ 17.09.2023 ರಂದು ಬೆಂಗಳೂರಿನ KSRTC ಕೇಂದ್ರ ಕಚೇರಿ ಮುಂದೆ ಸೇರಿ ಅಂದು ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ಕೂಡಲೇ ಆದೇಶ ಮಾಡಿ ಆರ್ಥಿಕ ಸೌಲಭ್ಯಗಳನ್ನು ಜಾರಿಗೆ ಕೊಡುವಂತೆ ಒತ್ತಾಯಿಸಲಾಗಿತ್ತು. ಆ ಬಳಿಕವು ಹಲವಾರು ಬಾರಿ ಮನವಿ ಕೊಟ್ಟರೂ ಅದು ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಇನ್ನು ಆದೇಶ ಬರದ ಕಾರಣ 19.10.2023 ರಂದು ಸ್ವಾತಂತ್ರ್ಯ ಯೋಧರ ಪಾರ್ಕ್‌ನಲ್ಲಿ ಒಂದು ದಿನ ಧರಣಿ ನಡೆಸಲಾಯಿತು. ಅಂದು ಇದೇ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಧರಣಿ ಸ್ಥಳಕ್ಕೆ ಬಂದು ಕೂಡಲೇ ಆದೇಶ ನೀಡುವುದಾಗಿ ಭರವಸೆ ನೀಡಿದ್ದರು. ಆನಂತರ ಹಲವು ಬಾರಿ ಈ ಬಗ್ಗೆ ಸಾರಿಗೆ ಸಚಿವರು ಮತ್ತು ಇದೇ ವ್ಯವಸ್ಥಾಪಕರ ಬಳಿ ಸಭೆ ನಡೆಸಿ ಆದೇಶ ಜಾರಿ ಮಾಡಲು ಒತ್ತಾಯಿಸಿದೆವು. ಆದರೂ ಪ್ರಯೋಜನವಾಗಿಲ್ಲ.

ಇನ್ನು ಆದೇಶ ಹೊರಡಿಸುವುದಾಗಿ ಸಕಾರಾತ್ಮವಾಗಿ ಮಾತನಾಡಿದರೂ ಸಹ ಈವರೆಗೂ ಆದೇಶ ಮಾಡದಿರುವುದು ನಿವೃತ್ತ ನೌಕರರಿಗೆ ತೋರುತ್ತಿರುವ ಅಗೌರವವಾಗಿದೆ. ಇದರಿಂದ ನಿವೃತ್ತ ನೌಕರರಲ್ಲಿ ಅತೃಪ್ತಿ ಹೆಚ್ಚಾಗಿದ್ದು, ನಾವೆಲ್ಲರೂ ಬೇಡಿಕೆ ಈಡೇರುವವರೆಗೂ ಜುಲೈ 8ರಿಂದ ಅನಿರ್ದಿಷ್ಠಾವಧಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.

ಬೇಡಿಕೆಗಳು: * 1.1.2020 ರಿಂದ 28.02.2023 ರವರೆಗೆ ನಿವೃತ್ತಿ ಹೊಂದಿದ ಎಲ್ಲಾ ಅಧಿಕಾರಿಗಳು/ ನೌಕರರಿಗೂ ಶೇ. 15 ಹೆಚ್ಚಳವನ್ನು ಸೇರಸಿ, ಶೇ.45.25 BDA ಮರ್ಜ್ ಮಾಡಿ. ಇಂಕ್ರಿಮೆಂಟ್ ಹೆಚ್ಚಳ ಸೇರಿಸಿ ವೇತನ ಪರಿಷ್ಕರಣೆ ಮಾಡಬೇಕು. * 01.01.2020 ರಿಂದ 28.02.2023 ರವರೆಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು.

ಈ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ 4 ನಿಗಮಗಳಲ್ಲಿ ನಿವೃತ್ತರಾಗಿರುವ ಅಧಿಕಾರಿಗಳು/ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಜು.8 ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂಬ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದ್ದು, ನಮ್ಮ ಸಾಮೂಹಿಕ ಪ್ರಯತ್ನದಿಂದ ಸಾಮೂಹಿಕ ಬೇಡಿಕೆಗಳನ್ನು ಪಡೆಯಲು ಸಾಧ್ಯ ಎಂದು ಈ ನಿರ್ಣಯಕ್ಕೆ ನಿವೃತ್ತ ನೌಕರರು ಬಂದಿದ್ದಾರೆ.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ