NEWSನಮ್ಮಜಿಲ್ಲೆನಮ್ಮರಾಜ್ಯ

KSRTC 4 ನಿಗಮಗಳ ನೌಕರರ ವೇತನ ಹೆಚ್ಚಳ, ಹಿಂಬಾಕಿ ಸಂಬಂಧ ಮಾರ್ಗದರ್ಶನ ನೀಡಲು ಮಧ್ಯ ಪ್ರವೇಶಿಸಿ- ರಾಜ್ಯಪಾಲರಿಗೆ ಪತ್ರ ಬರೆದ ಬಿಎಂಟಿಸಿ ನೌಕರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳ ಚಾಲನಾ ಸಿಬ್ಬಂದಿ ನೌಕರರು ಒಳಗೊಂಡಂತೆ 2020ರ ನಂತರದ ಮುಷ್ಕರ ಸಂದರ್ಭದಲ್ಲಿ ವಜಾಗೊಂಡ ನೌಕರರ ಮೇಲಿರುವ ಶಿಸ್ತುಕ್ರಮವನ್ನು ಹಿಂಪಡೆಯುವ ಬಗ್ಗೆ ಹಾಗೂ ವೇತನ ಪರಿಷ್ಕರಣೆಯನ್ನು 01.01.2020ರ ವೇತನ ಪರಿಷ್ಕರಣೆಯ ನಂತರದ 38 ತಿಂಗಳ ಹಿಂಬಾಕಿ ಜತೆಗೆ, 01.01.2024 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆಯ ಜತೆಗೆ ಇದರ ಹಿಂಬಾಕಿ ಕೊಡಿಸಲು ರಾಜ್ಯದ ರಾಜ್ಯಪಾಲರು ಮಧ್ಯ ಪ್ರವೇಶಿಸುವಂತೆ ಸಾರಿಗೆ ನೌಕರನೊಬ್ಬ ಮನವಿ ಮಾಡಿ ಪತ್ರ ಬರೆದಿದ್ದಾರೆ.

ಬಿಎಂಟಿಸಿಯ ಹಿರಿಯ ನಿರ್ವಾಹಕ ಮಂಜುನಾಥ್‌ ಎಂಬುವರು ಡಿ.4ರಂದು ರಾಜ್ಯಪಾಲರಿಗೆ ಪತ್ರ ಬರೆಯುವ ಮೂಲಕ ಸಾರಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಿ ಎಂದು ಮನವಿ ಮಾಡಿದ್ದಾರೆ.

ಬಿಎಂಟಿಸಿಯ ಮಂಜುನಾಥ ವಿ. ಘಟಕ 22ರ ಹಿರಿಯ ನಿರ್ವಾಹಕನಾದ ನಾನು ಚಾಲಕರು, ನಿರ್ವಾಹಕರು, ಚಾಲಕ ಕಂ ನಿರ್ವಾಹಕರು, ಕುಶಲಕರ್ಮಿಗಳು ಶ್ರಮಿಸುವ ನೌಕರರ ಪರವಾಗಿ ಗೌರವಾನ್ವಿತ ರಾಜ್ಯಪಾಲರಿಗೆ ತಿಳಿಸುವುದೇನೆಂದರೆ ವೇತನ ಪರಿಷ್ಕರಣೆಯ 01.01.2024ರಿಂದ ಜಾರಿ ಆಗಬೇಕಾಗಿದ್ದರೂ ಇದುವರೆಗೂ ವೇತನ ಪರಿಷ್ಕರಣೆ ಮಾಡದಿರುವುದು ವಿಷಾದನೀಯ ವಿಷಯ.

ಸಂಸ್ಥೆಯ ನೌಕರ ವೃಂದದವರು ನಮ್ಮ ಸೇವೆಯನ್ನು ಒತ್ತಡದ ಫಾರಂ-4ರ ಮಾರ್ಗ ಆಚರಣೆಯ ಜತೆಗೆ ಪ್ರಾಮಾಣಿಕವಾಗಿ ಶಕ್ತಿ ಯೋಜನೆಯನ್ನು ಯಶಸ್ವಿಗೊಳಿಸಿ ಈ ಸಂಸ್ಥೆಗೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಂದು ಕೊಡುತ್ತಾ ರಾಷ್ಟ್ರೀಯ ಹಬ್ಬಗಳು ಮತ್ತು ನಾಡ ಹಬ್ಬಗಳನ್ನು ತೊರೆದು ರಾತ್ರಿ ಪಾಳಿ ಮತ್ತು ರಾತ್ರಿ ಸೇವೆಗೆ ಸಂಬಂಧಿಸಿದಂತೆ ವಾಹನ ಮತ್ತು ಘಟಕಗಳಲ್ಲಿ ಪೂರ್ಣ ವಿಶ್ರಾಂತಿ ತೊರೆದು ನಿಯಮಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ದು ಚಾಲಕರಿಗೆ ಪ್ರಮೋಷನ್ ಇಲ್ಲದೆ ಹಿರಿಯ ಚಾಲಕರಿಗೆ ಲಘು ಕರ್ತವ್ಯ ಇಲ್ಲದೆ ನಿವೃತ್ತಿಯ ಕೊನೆಯ ದಿನದವರೆಗೂ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಮಹಿಳಾ, ಪುರುಷ ನಿರ್ವಾಹಕರಿಗೆ, ಚಾಲಕ ಕಂ ನಿರ್ವಾಹಕರಿಗೆ, ಕುಶಲಕರ್ಮಿಗಳಿಗೆ 25 ವರ್ಷ 30 ವರ್ಷಗಳಾದರು ಪ್ರಮೋಷನ್ ತೆಗೆದುಕೊಳ್ಳದೆ ಚಾಲಕರಿಗೆ, ನಿರ್ವಾಹಕರಿಗೆ, ಕುಶಲಕರ್ಮಿಗಳಿಗೆ ಹೊಸ ಯೋಜನೆಯ ಅಸಮರ್ಥ ವೈದ್ಯಕೀಯ ಸೌಲಭ್ಯ, ಸಮವಸ್ತ್ರ, ಬ್ಯಾಡ್ಜ್ ನಾಮಫಲಕ, ಬೋನಸ್, ಎಸ್ ಗ್ರೇಶಿಯ, ಆಯುಧ ಪೂಜೆ ಉಡುಗೊರೆ ನೀಡದಿದ್ದರೂ ಸಹಿತ ಹಿರಿತನದ ಸೇವೆಗೆ, ಭಾಷಾ ಗೌರವಕ್ಕೆ ಅಧಿಕಾರಿಗಳು ಮನ್ನಣೆ ನೀಡದೆ ಕುಂದು ಕೊರತೆ ಆಲಿಸದಿದ್ದರೂ ಸಹಿತ ಪ್ರಾಮಾಣಿಕವಾಗಿ ಡ್ಯೂಟಿ ಮಾಡುತ್ತಿದ್ದೇವೆ.

ಆದರೂ ಕೂಡ ಕೋವಿಡ್ ಸಮಯದಲ್ಲಿ ಆಗಿನ ಸರ್ಕಾರ ಮೂರು ತಿಂಗಳು ಸಂಬಳವನ್ನು ನಮ್ಮ ರಜೆ ಕಡಿತ ಮಾಡಿಕೊಂಡು ಕೊಟ್ಟಿರುವುದು ಬಿಟ್ಟರೆ ಮತ್ತೇನು ಮಾಡಿಲ್ಲ. ಇನ್ನು ಕೆಲವರಿಗೆ ವೈಯಕ್ತಿಕ ಖಾತೆಯ ರಜೆಗಳನ್ನು ಹಿಡಿದುಕೊಂಡಿದ್ದು ಇಲ್ಲಿಯವರೆಗೂ ಮರುಪಾವತಿ ನೀಡಲಾಗಿಲ್ಲ. ಕೋವಿಡ್ ಸಮಯದಲ್ಲಿ ಹಲವು ಸಾರಿಗೆ ಸಿಬ್ಬಂದಿಗಳು ಪ್ರಾಣತ್ಯಾಗ ಮಾಡಿದ್ದಾರೆ. ಆದರ ಈವರೆಗೂ ಅವರ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ.

ಇನ್ನು ರಾಜ್ಯ ಸರ್ಕಾರಿ ನೌಕರರು, ಕೇಂದ್ರ ಸರ್ಕಾರಿ ನೌಕರರು ಮತ್ತು ಕರ್ನಾಟಕದ 72 ನಿಗಮ ಮಂಡಳಿಗೆ ಇಲ್ಲದಿರುವ ಕೋವಿಡ್ ಸಮಯದ ಕರ್ತವ್ಯದ ದಿನಗಳ ವೇತನದ ಸಂಬಂಧ ತಾರತಮ್ಯ ಕೆಎಸ್‌ಆರ್ಟಿಸಿಯ 4 ನಿಗಮ ಮಂಡಳಿಗಳ ಮೇಲೆ ಮಾತ್ರ ಗದಪ್ರಹಾರ ಮಾಡುವುದು ಸರಿಯಲ್ಲ. ಹಾಗಾಗಿ 72 ನಿಗಮ ಮಂಡಳಿಗಳ ಪೈಕಿ ಬೆಸ್ಕಾಂ, ಜಲ ಮಂಡಳಿ, ಕೆಎಂಎಫ್ ನಿಗಮ ಮಂಡಳಿಗಳಿಗೆ ಕೋವಿಡ್ ಸಮಯದಲ್ಲಿ ಯಾವುದೇ ಮಾನದಂಡಗಳಿಲ್ಲದೆ ನೀಡಲಾದ ವೇತನದ ರೀತಿಯಲ್ಲಿಯೇ ವೇತನ ಪರಿಷ್ಕರಣೆ ಮಾಡಲೇಬೇಕು.

ಹಾಗಾಗಿ ರಾಜ್ಯಪಾಲರು ಮಧ್ಯಪ್ರವೇಶಿಸಿ ನ್ಯಾಯ ಬದ್ಧವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಯಮಾನುಸಾರ ವೇತನ ಪರಿಷ್ಕರಣೆಯ ಜತೆಗೆ ಹಿಂಬಾಕಿಯನ್ನು ಜಾರಿಗೆ ತರಲು ಸಂಬಂಧಿಸಿ ಮುಖ್ಯಮಂತ್ರಿಗಳಿಗೆ ಮತ್ತು ನಾರಿಗೆ ನಚಿವರಿಗೆ ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳಿಗೆ ಹಾಗೂ ಕೆಎಸ್‌ಆರ್ಟಿಸಿಯ 4 ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಸಮಸ್ತ ಮಂಡಳಿ ನಿರ್ದೇಶಕರುಗಳಿಗೆ ಮಾರ್ಗಸೂಚಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!